ಕೊಳ್ಳೇಗಾಲ ಸುದ್ದಿ
ಮದ್ದೇವಲ ಮಹರ್ಷಿ ಮಹಾದ್ವಾರ ಉದ್ಘಾಟಿಸಿದ ಶಾಸಕ ಎನ್. ಮಹೇಶ್,
ಕೊಳ್ಳೇಗಾಲ ಪಟ್ಟಣದ ದೇವಾಂಗ ಸಮುದಾಯದವರ ಬಹು ವರ್ಷಗಳ ಬೇಡಿಕೆಯಾದ ಶ್ರೀ ಮದ್ದೇವಲ ಮಹರ್ಷಿಗಳ ಮಹಾದ್ವಾರ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು ಇಂದು ಹೋಮ, ಹವನ, ಪೂಜೆ ಕೈಂಕಾರ್ಯಗಳ ಜೊತೆ ಉದ್ಘಾಟನೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.
ಸ್ಥಳೀಯ ಶಾಸಕ ಎನ್.ಮಹೇಶ್ ಸುಮಾರು 20 ಲಕ್ಷ ರೂ.ಗಳಷ್ಟು ತಮ್ಮ ಸ್ವಂತ ಖಚಿ೯ನಲ್ಲಿ ವಿಶಿಷ್ಟ ಶೈಲಿಯ ಮಹಾದ್ವಾರವನ್ನು ನಿಮಿ೯ಸಿ ದೇವಾಂಗ ಸಮುದಾಯದವರ ಅದಿದೇವತೆ ಮದ್ದೇವಲ ಮಹರ್ಷಿ ಹೆಬ್ಬಾಗಿಲು ಮಹಾದ್ವಾರ ಎಂಬ ನಾಮ ಫಲಕವನ್ನು ಹಾಕಿಸಿ ಉದ್ಘಾಟನೆ ಮಾಡಿ ಲೋಕಾರ್ಪಣೆ ಮಾಡಿದ್ದಾರೆ.
ದೇವಾಂಗ ಸಮಾಜದವರ ಬಹು ವರ್ಷಗಳ ಕನಸಾಗಿತ್ತು. ಮಹಾದ್ವಾರದ ನಿರ್ಮಾಣದ ಕನಸನ್ನು ನನಸು ಮಾಡಿದ ಶಾಸಕರಿಗೆ ದೇವಾಂಗ ಸಮುದಾಯ ಅಬಾರಿಯಾಗಿರುತ್ತದೆ ಎಂದು ಸಮಾಜದ ಮುಖಂಡರು ಶಾಸಕ ಎನ್.ಮಹೇಶ್ ರನ್ನು ಸ್ಮರಿಸಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಸಮುದಾಯದ ಸಾವಿರಾರು ಜನ ಹಾಜರಿದ್ದರು. ಈ ವೇಳೆ ದೇವಾಂಗ ಸಮುದಾಯದಿಂದ ಶಾಸಕ ಎನ್.ಮಹೇಶ್. ಹಾಗೂ ವಿಧಾನ ಪರಿಷತ್ ಸದಸ್ಯ ಎಂ. ಡಿ.ಲಕ್ಷ್ಮೀನಾರಾಯಣ್ ರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮಹಾದ್ವಾರವನ್ನು ಉದ್ಘಾಟಿಸಿ ಶಾಸಕರು ಮಾತನಾಡಿ
ದೇವಾಂಗ ಸಮುದಾಯದ ಬಡಾವಣೆಯಲ್ಲಿ ಮುಖ್ಯದ್ವಾರವನ್ನು ನಿರ್ಮಿಸಬೇಕೆಂಬುದು ಬಹು ವರ್ಷಗಳ ಕನಸಾಗಿದ್ದು
ಮಹಾದ್ವಾರ ನಿರ್ಮಾಣದ ಬಗ್ಗೆ ಸಮುದಾಯದ ಮುಖಂಡರು ನಮ್ಮ ಬಳಿ ಬೇಡಿಕೆ ಇಟ್ಟಿದ್ದರು, ಆದ್ದರಿಂದ ಮುಖಂಡರ ಮಾತಿನಂತೆ ನಾನು ಮಹಾದ್ವಾರವನ್ನು ನಿರ್ಮಿಸಿ ಕೊಟ್ಟಿದ್ದೇನೆ, ಪಟ್ಟಣದ ಬಸ್ ನಿಲ್ದಾಣದ ಪಕ್ಕದ ದೇವಾಂಗ ಬಡಾವಣೆಯಲ್ಲಿ ಸುಂದರವಾದ ಮಹಾದ್ವಾರ ನಿರ್ಮಾಣವಾಗಿದೆ,
ಈ ದಿನ ಮಹಾದ್ವಾರದ ಉದ್ಘಾಟನೆಯನ್ನು ಮಾಡಲಾಗಿದೆ,
ಇದು ಕೊಳ್ಳೇಗಾಲ ಪಟ್ಟಣಕ್ಕೆ ಆಕರ್ಷಣೆಯನ್ನು ನೀಡುವಂತ ಮಹಾದ್ವಾರವಾಗಿದೆ, ಜೊತೆಗೆ ದೇವಾಂಗ ಸಮುದಾಯದಲ್ಲಿ ಬಹುಪಾಲು ನೇಕಾರರು ಹೆಚ್ಚು ಇದ್ದಾರೆ, ಇವರ ಕಸುಬು ಬಟ್ಟೆ ನೇಯುವುದು ಆದ್ದರಿಂದ ಈ ಕುಟುಂಬಗಳಿಗೆ ತಮ್ಮ ಕಸುಬನ್ನ ಮಾಡಲು ಪ್ರತ್ಯೇಕ ಜಾಗ ಇಲ್ಲದೆಇರುವಷ್ಟು ಮನೆಯ ಜಾಗದಲ್ಲಿ ಅಲ್ಲಿಯೇ ಕಸುಬನ್ನ ಮಾಡುವುದು ಅದೇ ಜಾಗದಲ್ಲಿಯೇ ಜೀವನ ನಡೆಸುವುದು ಮಾಡುತ್ತಿದ್ದಾರೆ, ಆದ್ದರಿಂದ ದೇವಾಂಗ ನೇಕಾರ ಕುಟುಂಬಗಳಿಗೆ ವಿಶೇಷ ಅನುದಾನವನ್ನು ತಂದು ಅವರವರ ಕಸುಬಿಗೆ ಅನುಕೂಲವಾಗುವಂತೆ ನೇಕಾರ ಘಟಕಗಳನ್ನ ಸ್ಥಾಪಿಸುವುದು ಹಾಗೂ ಇನ್ನಿತರ ಅಭಿವೃದ್ಧಿ ಕೆಲಸಗಳನ್ನು ಮಾಡಲು ವ್ಯವಸ್ಥೆಯನ್ನು ಮಾಡಬೇಕೆಂದು ಕೊಂಡಿದ್ದೇನೆ
ಆದ್ದರಿಂದ ನಿಮ್ಮೆಲರ ಸಹಕಾರ ಇರಲಿ ಮುಂದಿನ ದಿನಗಳಲ್ಲಿ ನೇಕಾರರ, ಕೈಗಾರೀಕೊದ್ಯಮಿಗಳ ಅಭಿವೃದ್ಧಿಗಾಗಿ ದುಡಿಯುತ್ತೇನೆ ಎಂದರು,
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಡಿ. ಲಕ್ಷ್ಮಿನಾರಾಯಣ್, ಕೊಳ್ಳೇಗಾಲ ಮಾಜಿ ಶಾಸಕ ಬಾಲರಾಜ್, ನಗರಸಭೆ ಸದಸ್ಯ ಕೆ. ಪಿ. ಶಂಕರ್,
ಮನೋಹರ್, ರಾಮಕೃಷ್ಣ, ಶಾಸಕರ ಆಪ್ತ ಸಹಾಯಕ ಗಿರೀಶ್ ಬಾಬು, ಬಿಜೆಪಿ ಮಂಡಲ ಅಧ್ಯಕ್ಷ ರಮೇಶ್ ಮುರಾರಿ, ಹಾಗೂ ಇನ್ನಿತರರು ಇದ್ದರು

0 Comments