Ticker

6/recent/ticker-posts

Ad Code

Responsive Advertisement

ಹಿಂದೂ ಗಳ ಪ್ರಮುಖ ಹಬ್ಬ.ಶ್ರೀರಾಮನವಮಿ

ರಾಮನವಮಿ ಹಬ್ಬ ಹಿಂದೂ ಗಳ ಪ್ರಮುಖ ಹಬ್ಬ.ಶ್ರೀರಾಮ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿ ಇದ್ದಾನೆ.ಹಬ್ಬದ ವಿಷಯಕ್ಕೆ ಬಂದರೆ ಅವನ ಜನ್ಮ ದಿನ ಫಲಾಹಾರ ತೆಗೆದು ಕೊಳ್ಳುತ್ತಾರೆ.ಕೆಲವರು ಹಬ್ಬದ ಅಡಿಗೆ ಮಾಡುತ್ತಾರೆ.ಎಲ್ಲರಿಗೂ ಪ್ರಸಾದ ಹಂಚುವ ಪದ್ಧತಿ ಇದೆ. ಬೀದಿಗಳಲ್ಲಿ ಕೂಡ ಕೋಸಂಬರಿ ಪಾನಕ ಹಂಚುವ ರೂಡಿ ಇದೆ.ವರುಷ ಇಡೀ ರಾಮ ಭಜನೆ, ಬೀದಿ ಭಜನೆ ಮಾಡುವ ರೂಡಿ ಇದೆ.ಯುಗಾದಿಯಲ್ಲಿ ಸಿಗುವ ದಾನ ರಾಮನವಮಿ ಯಲ್ಲಿ ಬಳಸುವ ರೂಡಿ ಕೂಡ ಇದೆ.

ನನಗೆ ತಿಳಿದಂತೆ ಬಹಳ ಹಿಂದಿನಿಂದಲೂ ಮದುವೆ ಸಮಯದಲ್ಲಿ ವಧುವಿನ ಮನೆಯವರು ಪಟ್ಟಾಭಿರಾಮ ನ ಫೋಟೋ ಕೊಡುವ ಪದ್ಧತಿ ಇದೆ.ನವ ದಂಪತಿಗಳು ರಾಮಸೀತೆಯರಂತೆ ಇರಲಿ ಎನ್ನುವ ಉದ್ದೇಶ ಇರಬಹುದು. ಕೋದಂಡ ರಾಮನನ್ನು ಆಲಯಗಳಲ್ಲಿ ಕಾಣಬಹುದು.ರಾಮರಾಜ್ಯ ಎಂಬ ಪದದ ಬಳಕೆಯು ಹಳೆಯದೇ.ಒಟ್ಟಿನಲ್ಲಿ ಸುಭಿಕ್ಷಕ್ಕೆ ರಾಮನೆ ನಾಂದಿ.ಇಂತಹ ರಾಮ ನನ್ನು ನಿತ್ಯವೂ ಸ್ಮರಿಸೋಣ.

ರಾಧಿಕಾ ಜಿ.ಎನ್.

೭೦೧೯೯೯೦೪೯೨

Post a Comment

0 Comments

Ad Code

Responsive Advertisement