Ticker

6/recent/ticker-posts

Ad Code

Responsive Advertisement

ಶಿಡ್ಲಘಟ್ಟ: ಚುನಾವಣಾ ನೀತಿ ಸಂಹಿತೆ ಜಾರಿ ಆದೇಶ : ಉಲ್ಲಘಸಿದರೆ ಕಾನೂನುಕ್ರಮ

ವರದಿ : ಚಿಕ್ಕತೇಕಹಳ್ಳಿ ಡಿ ಶಿವಕುಮಾರ್

ವಾರ್ತಾಜಾಲ,ಶಿಡ್ಲಘಟ್ಟ : ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಫಿಕ್ಸ್‌ ಆಯಿತು. ಮಾದರಿ ನೀತಿ ಸಂಹಿತೆ ಜಾರಿಗೆ ಬಂತು. ಭಾರತದ ಚುನಾವಣಾ ಆಯೋಗ ಇಂದು ಕರ್ನಾಟಕ ವಿಧಾನಸಭೆ ಚುನಾವಣೆ 2023ರ ದಿನಾಂಕವನ್ನು ಪ್ರಕಟಿಸಿದೆ. ಕರ್ನಾಟಕದಲ್ಲಿ ಚುನಾವಣೆ ಮೇ10ರಂದು ಒಂದೇ ಹಂತದಲ್ಲಿ ನಡೆಯಲಿದೆ. ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಚುನಾವಣಾಧಿಕಾರಿ ಜವೀದಾ ನಸೀಮಾ ಖಾನಂ ಮತ್ತು ತಹಶೀಲ್ದಾರ್ ಮತ್ತು ಸಹಾಯಕ ಚುನಾವಣಾಧಿಕಾರಿ ಬಿ.ಎನ್ ಸ್ವಾಮಿ ತಿಳಿಸಿದರು.

ಶಿಡ್ಲಘಟ್ಟ ನಗರದ ತಾಲ್ಲೂಕು ಕಛೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಚುನಾವಣಾ ದಿನಾಂಕಗಳ ಘೋಷಣೆಯೊಂದಿಗೆ, ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ. ಅರ್ಥಾತ್‌ ರಾಜಕೀಯ ನಾಯಕರು, ರಾಜಕೀಯ ಪಕ್ಷಗಳು ಮತ್ತು ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದ ಎಲ್ಲರೂ ಈ ನೀತಿ ಸಂಹಿತೆಗೆ ಚುನಾವಣಾ ಪ್ರಕ್ರಿಯೆ ಮುಗಿಯುವ ತನಕ ಬದ್ಧರಾಗಿರಬೇಕು ಎಂದರು. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾದರೆ ಟೋಲ್ ಫ್ರೀ ನಂಬರ್ 08158256763 ಕಾಲ್ ಮಾಡಿ ತಿಳಿಸಿ. ಅದೇರೀತಿ ಚುನಾವಣೆಗೆ ಸಂಬಂದಿಸಿದಂತೆ ಯಾವುದೇ ಪ್ರಚಾರಗಳು,ಕಾರ್ಯಕ್ರಮಗಳು ಅನುಮತಿ ಇಲ್ಲದೆ ಮಾಡುವಂತಿಲ್ಲ. ಅನುಮತಿಗಾಗಿ ಸುವಿಧ ಆ್ಯಪ್ ನಲ್ಲಿ ತಿಳಿಸಬೇಕಾಗಿದೆ. ಯಾವುದೇ ರೀತಿಯ ಬರವಣಿಗೆಯ ಅನುಮತಿ ಪತ್ರಗಳನ್ನು ಸ್ವೀಕರಿಸುವುದಿಲ್ಲ ಎಂದರು.

ಶಿಡ್ಲಘಟ್ಟ ತಾಲ್ಲೂಕಿನಾದ್ಯಂತ ಮೂರು ಕಡೆ ಟೋಲ್ಗೇಟ್ ರಚನೆ ಮಾಡಿದ್ದೀವಿ ಮೊದಲನೆಯದಾಗಿ ಚಿಲಕಲನೇರ್ಪು,ಎರಡನೇಯದಾಗಿ ಹೆಚ್ ಕ್ರಾಸ್ ಬಳಿ,ಮೂರನೇಯದುಜಂಗಮಕೋಟೆ ಬಳಿ ಇದೆ. ಚುನಾವಣೆಯ ಎಲ್ಲಾ ಪೂರ್ವ ತಯಾರಿ ಮಾಡಿಕೊಂಡಿದ್ದೇವೆ.  ಚುನಾವಣೆಯ ಯಾವುದೇ ರೀತಿಯ ಅಹಿತಕರ ಘಟನೆಗಳು ಆಗದಂತೆ ನಡೆಸೋಣ ಅದಕ್ಕೆ ಸಾರ್ವಜನಿಕರ ಸಹಕಾರ ನಮಗೆ ಬಹಳ ಮುಖ್ಯವಾಗಿದೆ ಎಂದು ತಿಳಿಸಿದರು.

Post a Comment

0 Comments

Ad Code

Responsive Advertisement