ಬೆಂಗಳೂರು, ಮಾರ್ಚ್ 29, (ಕರ್ನಾಟಕ ವಾರ್ತೆ):ಜವಹರ್ ಲಾಲ್ ನೆಹರು ತಾರಾಲಯವು ಬೇಸಿಗೆ ರಜೆಯ ಪ್ರಯುಕ್ತ ಹೆಚ್ಚುವರಿ ಆಕಾಶ ಮಂದಿರದ ಪ್ರದರ್ಶನಗಳನ್ನು ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಪ್ರದರ್ಶಿಸುತ್ತಿದೆ.
ವಿಶ್ವದ ಅನ್ವೇಷಣೆ - ಇಂಗ್ಲೀಷ್‍ನಲ್ಲಿ 12.30 ಗಂಟೆಗೆ, ಕನ್ನಡದಲ್ಲಿ 2.30 ಗಂಟೆಗೆ, ಬಾನಂಗಳದಲ್ಲಿ ಬಾಣಬಿರುಸು - ಇಂಗ್ಲೀಷ್‍ನಲ್ಲಿ 4.30 ಮತ್ತು 5.30 ಗಂಟೆಗೆ ಕನ್ನಡದಲ್ಲಿ 3.30 ಗಂಟೆಗೆ, ಹೆಚ್ಚುವರಿ ಪ್ರದರ್ಶನಗಳು - ಗಗನಯಾನದ ನವೋದಯ ಇಂಗ್ಲೀಷ್‍ನಲ್ಲಿ 10.30 ಗಂಟೆಗೆ ಕನ್ನಡದಲ್ಲಿ 11.30 ಗಂಟೆಗೆ ಪ್ರದರ್ಶನವಾಗಲಿದೆ.
ಆಸನಗಳ ಮಿತಿ 210 ಇದ್ದು, ವಯಸ್ಕರಿಗೆ ಶುಲ್ಕ ತಲಾ 75 ರೂ. ಮತ್ತು ಮಕ್ಕಳಿಗೆ 50 ರೂ. ನಿಗದಿಪಡಿಸಲಾಗಿದೆ. ಬುಕ್‍ಮೈಶೋ ಜಾಲತಾಣದಿಂದ ನೇರವಾಗಿ ಟಿಕೆಟ್‍ಗಳನ್ನು ಕಾಯ್ದಿರಿಸಬಹುದಾಗಿದೆ. ಪ್ರತಿ ಪ್ರದರ್ಶನಕ್ಕೆ ಕೇವಲ 150 ಆಸನಗಳು ಮಾತ್ರ ಮುಂಗಡ ಕಾಯ್ದಿರಿಸುವಿಕೆಗೆ ಲಭ್ಯವಿದೆ. ಉಳಿದ ಟಿಕೆಟ್‍ಗಳನ್ನು ಟಿಕೆಟ್ ಕೌಂಟರ್‍ನಲ್ಲಿ ಖರೀದಿಸಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
0 Comments