Ticker

6/recent/ticker-posts

Ad Code

Responsive Advertisement

‘60ರ ನಂತರದ ಜೀವನ’ ಕಾರ್ಯಗಾರದ ಉದ್ಘಾಟನಾ ಸಮಾರಂಭ

ಬೆಂಗಳೂರು, ಮಾರ್ಚ್ 29, (ಕರ್ನಾಟಕ ವಾರ್ತೆ): ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಮತ್ತು ರಾಷ್ಟ್ರೀಯ ಸಾಮಾಜಿಕ ರಕ್ಷಣಾ ಸಂಸ್ಥೆ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಭಾರತ ಸರ್ಕಾರರವರ ಸಂಯುಕ್ತಾಶ್ರಯದಲ್ಲಿ “60ರ ನಂತರದ ಜೀವನ–ಒಂದು ದಿನದ ಕಾರ್ಯಗಾರ” ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಜರುಗಿತು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಆರ್.ಪಿ.ಡಬೂ.್ಲಡಿ ಕಾಯಿದೆಯ ರಾಜ್ಯ ಆಯುಕ್ತರು ಮತ್ತು ವಿಕಲಚೇತನÀ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ನಿರ್ದೇಶಕರಾದ ಡಾ: ಕೆ.ಎಸ್. ಲತಾಕುಮಾರಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಿರಿಯ ನಾಗರೀಕರ ಸಬಲೀಕರಣಕ್ಕೆ ಹಿರಿಯ ನಾಗರೀಕರ ನಿರ್ವಾಹಣಾ ಕಾಯಿದೆಯನ್ನು 2008ರಲ್ಲಿ ಜಾರಿಗೊಳಿಸಿದೆ. ಈ ಕಾಯಿದೆಯು ಹಿರಿಯ ನಾಗರೀಕರ ಹಕ್ಕು ಮತ್ತು ಬಾಧÀ್ಯತೆಗಳನ್ನು ಒಳಗೊಂಡಿರುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಶುಲ್ಕ ರಹಿತ ದೂರವಾಣಿ ಸಂಖ್ಯೆ: 14567 ಹಾಗೂ ರಾಜ್ಯ ಸರ್ಕಾರದ ಶುಲ್ಕ ರಹಿತ ದೂರವಾಣಿ 1098 ಸಂಖ್ಯೆಗೆ ಹಿರಿಯ ನಾಗರಿಕರು ಕರೆಮಾಡಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಿದರು.


ಮಹಿಳಾ ಮತ್ತು ಮಕ್ಕಳ ಸಬಲೀಕರಣ ಇಲಾಖೆಯಲ್ಲಿ ಹಿರಿಯ ನಾಗರೀಕ ಕೋಶವನ್ನು ಹಾಗೂ ಹಗಲು ಆರೋಗ್ಯ ಕೇಂದ್ರಗಳನ್ನು ಸಹ ಪ್ರಾರಂಭಿಸಿದ್ದು ಈ ಕೇಂದ್ರದಲ್ಲಿ ಮಧ್ಯಾಹ್ನದ ಊಟ, ಸಾಯಂಕಾಲದ ಕಾಫಿ /ಟೀ ಮತ್ತು ಆಟವಾಡುವುದರ ಜೊತೆಗೆ ಇತರÀ ಹಿರಿಯ ನಾಗರಿಕರ ಜೊತೆ ವಿಚಾರ ವಿನಿಮಯವನ್ನು ಸಹ ಮಾಡಿಕೊಳ್ಳಬಹುದು. 60 ವರ್ಷಗಳ ನಂತರ ದೇಹಕ್ಕೆ ವಯಸ್ಸಾಗುತ್ತೆದೆಯೋ ವಿನಹ ಮನಸ್ಸಿಗೆ ವಯಸ್ಸಾಗುವುದಿಲ್ಲ. ಆದುದರಿಂದ ಹಿರಿಯ ನಾಗರಿಕರು ನಿವೃತ್ತಿಯ ನಂತರ ಎರಡನೇ ಅಧ್ಯಾಯವನ್ನು ಒಂದು ಹಣ ನೀಡುವ ವೃತ್ತಿಯಲ್ಲಿ ತೊಡಗಿಸಿಕೊಂಡು ಆರೋಗ್ಯದ ಜೊತೆಗೆ ಆರ್ಥಿಕವಾಗಿ ಸಧೃಡವಾಗಿರುವುದು ಒಳಿತು ಎಂದು ತಿಳಿಸಿದರು.


ಮುಖ್ಯ ಅಥಿತಿಗಳಾಗಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಮೈಸೂರು ಎಎಮ್‍ಸಿಎಡಿ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಮತ್ತು ಮುಖ್ಯ ತರಬೇತುದಾರರಾದ ಆರ್.ಎ.ಚೇತನ್‍ರಾವ್ ಮಾತನಾಡಿ, ಹಿರಿಯ ನಾಗರಿಕರು ದೇಶದ ಪ್ರಮುಖ ಆಸ್ತಿ, ಇಂದು ಹಿರಿಯ ನಾಗರಿಕರೇ ನಮ್ಮ ದೇಶವನ್ನು ಮುನ್ನಡೆಸುತ್ತಿದ್ದಾರೆ. 2015 ರಲ್ಲಿ ಹಿರಿಯ ನಾಗರಿಕರ ಸಂಖ್ಯೆ ಶೇ.8 ರಷ್ಟಿದ್ದು, 2050ಕ್ಕೆ ಶೇ.50 ರಷ್ಟಾಗಲಿದೆ. 2020-21 ಪ್ರಕಾರ ಮಾನವನ  ಸರಾಸರಿ ಜೀವತಾವಧಿ ವಿಶ್ವದಲ್ಲಿ 79 ವರ್ಷಗಳಾದರೆ ಭಾರತೀಯರ ಜೀವಿತಾವಧಿ ಸರಾಸರಿ 69 ವರ್ಷಗಳು. ಹಿರಿಯ ನಾಗರೀಕರು ಸದಾಗೊಂದಲ ಮತ್ತು ತೊಂದರೆಗಳಲ್ಲಿ ಸಿಲುಕಿಕೊಳ್ಳದೆ ಪ್ರತಿಕ್ಷಣ ಉಲ್ಲಾಸದಿಂದಿರಲು ಪ್ರಯತ್ನಿಸಬೇಕು, ಸ್ವಾವಲಂಬಿ ಜೀವನ, ಆರೋಗ್ಯದ ಬಗ್ಗೆ ಕಾಳಜಿ ಮತ್ತು ವಾಸ್ತವಸ್ಥಿತಿಯನ್ನು ಅರ್ಥಮಾಡಿಕೊಂಡು ಜೀವನ ರೂಪಿಸಿದಾಗ ಮಾತ್ರ ಬದುಕಿಗೊಂದು ಅರ್ಥ ಬರುತ್ತದೆ ಎಂದು ಅಭಿಪ್ರಾಯಪಟ್ಟರು.

ಬದಲಾವಣೆ ನಮ್ಮನ್ನು ಬದಲಾಯಿಸುವ ಮೊದಲು ನಾವು ಬದಲಾಗಬೇಕು, ಏಕೆಂದರೆ ಬದಲಾವಣೆ ಜಗದ ನಿಯಮ. ಹಿರಿಯ ನಾಗರೀಕರು ಅನುಭವಗಳ ಸಾಗರ ಮತ್ತು ನಮ್ಮ ಸಂಸ್ಕøತಿಯ ಪ್ರತಿಬಿಂಬ. ಇವುಗಳನ್ನು ಮುಂದಿನ ಜನಾಂಗಕ್ಕೆ ರವಾನಿಸುವುದು ಅವರ ಆದ್ಯ ಕರ್ತವ್ಯ. ಸೋತವನಿಗೆ ಮಾತ್ರ ಗೆಲ್ಲುವ ಆಟ ಗೊತ್ತು ಹಾಗಾಗಿ ಸೋತು ಗೆದ್ದ ಹಿರಿಯ ನಾಗರಿಕರು ಯುವಕರಿಗೆ ಇದನ್ನು ಮನದಟ್ಟು ಮಾಡಿಕೊಂಡರೆ ಯುವಕರು ಸದಾ ಗೆಲ್ಲುವಂತಾಗುತ್ತದೆ. ವ್ಯಕ್ತಿಯ ವ್ಯಕ್ತಿತ್ವ ಬೆಳೆದರೆ ಯಾವುದೇ ಸಮಸ್ಯೆ ಸಮಸ್ಯೆಯಾಗುವುದಿಲ್ಲ. ಹಿರಿಯ ನಾಗರಿಕರು ಟ್ಯೂಬ್‍ಲೈಟ್‍ಗಳಾಗದೆ ದೀಪದಿಂದ ದೀಪ ಹಚ್ಚುವ ಎಣ್ಣೆ ದೀಪಗಳಾಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬೆಂಗಳೂರಿನ ಕೃಷಿ ವಿಶ್ವಿದ್ಯಾನಿಲಯದ ಕುಲಪತಿಗಳಾದ ಡಾ: ಎಸ್.ವಿ. ಸುರೇಶ,  ಕೃಷಿ ವಿಶ್ವವಿದ್ಯಾನಿಲಯ ಕೃಷಿ ಕಾಲೇಜಿನ ಡೀನ್ ಡಾ: ಎನ್.ಬಿ. ಪ್ರಕಾಶ್,  ಆಹಾರ ವಿಜ್ಞಾನ ಮತ್ತು ಪೌಷ್ಠಿಕತೆ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ: ಕೆ.ಜಿ. ವಿಜಯಲಕ್ಷ್ಮಿ, ಮತ್ತು ಕೃಷಿ ವಿಶ್ವವಿದ್ಯಾನಿಲಯದ ಅಧಿಕಾರಿಗಳು, ನಿವೃತ್ತ ಅಧಿಕಾರಿಗಳು, ಪ್ರಾಧ್ಯಾಪಕರು ಮತ್ತು ಸಿಬ್ಬಂದಿ, ಸಹಕಾರನಗರ, ತಿಂಡ್ಲು, ಕೊಡಿಗೇಹಳ್ಳಿ, ವಿದ್ಯಾರಣ್ಯಪುರ, ನ್ಯಾಯಾಂಗ ಬಡಾವಣೆ ಮತ್ತು ಸುತ್ತಮುತ್ತಲಿನ ಬಡಾವಣೆಯ ಹಿರಿಯ ನಾಗರಿಕರು ಭಾಗವಹಿಸಿದ್ದರು.

Post a Comment

0 Comments

Ad Code

Responsive Advertisement