Ticker

6/recent/ticker-posts

Ad Code

Responsive Advertisement

*ಶರಣ ತ್ವತ್ವದ ಆಧಾರದಲ್ಲಿ ಆಡಳಿತ ನಡೆಸುತ್ತಿದ್ದೇನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

ಹಾವೇರಿ: (ಶಿಗ್ಗಾವಿ) ಶರಣರ ತತ್ವದಡಿ ಆಡಳಿತ ನಡೆಸುತ್ತಿದ್ದು, ಎಲ್ಲರಿಗೂ ನ್ಯಾಯ ಕೊಡಿಸುವ ಪ್ರಾಮಾಣಿಕ ಕೆಲಸ ಮಾಡುತ್ತಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.‌

ಶಿಗ್ಗಾವಿಯ ವಿರಕ್ತ ಮಠದಲ್ಲಿ ನಡೆದ ಶರಣ ಸಂಸ್ಕೃತಿ ಉತ್ಸವದಲ್ಲಿ ಮಠದ ನೂತನ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಶಿಗ್ಗಾವಿ ವಿರಕ್ತ ಮಠ ಶಿಗ್ಗಾವಿಯ ಆಗುಹೋಗುಗಳಲ್ಲಿ ಪ್ರಮುಖ ಪಾತ್ರ ವಹಿಸಿದೆ.‌ ಇಲ್ಲಿನ ಶಿಕ್ಚಣ ಕ್ಚೇತ್ರ ಅಭಿವೃದ್ಧಿ ಯಲ್ಲಿ ಸಂಗನಬಸವನ ಸ್ವಾಮೀಜಿ ಮಹತ್ವದ ಪಾತ್ರ ವಹಿಸಿದ್ದಾರೆ. 

ನಮ್ಮ ಕೆರೆಯ ಅಭಿವೃದ್ದಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಅದೇ ರೀತಿ ಪ್ರತಿ ವರ್ಷ ಹಳ್ಳಿಗಳಲ್ಲಿ ಗಿಡಗಳನ್ನು ನೆಡುವ ಕಾರ್ಯ ಮೆಚ್ಚುವಂತದ್ದು, ಅವರು ಗಿಡಗಳಿಗೆ ಮಕ್ಕಳ ಹೆಸರಿಡುವಂತೆ ಸಲಹೆ ನೀಡಿದ್ದಾರೆ ಅದನ್ನು ಎಲ್ಲರೂ ಪಾಲನೆ ಮಾಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ವಿರಕ್ತ ಮಠಕ್ಕೆ ಎಲ್ಲ ಪಕ್ಷಗಳು ಇಲ್ಲಿ ಬಂದ ಸಂಗಮ ಆಗುತ್ತವೆ. ಯಾರೇ ಬಂದರೂ ಅವರಿಗೆ ಸ್ವಾಮೀಜಿಗಳು ನಮ್ಮ ಪರವಾಗಿಯೇ ಇದ್ದಾರೆ ಎನ್ನುವ ಭಾವನೆ ಮೂಡಿಸುತ್ತಾರೆ.

ಅವರು ಯಾರಿಗೂ ಆಶೀರ್ವಾದ ಮಾಡುವುದಿಲ್ಲ. ನನಗೂ ಅವರು ಆಶೀರ್ವಾದ ಮಾಡಿಲ್ಲ. ಅವರು ಬೊಧನೆ ಮಾಡುತ್ತಾರೆ. ಅದನ್ನು ಪಾಲಿಸಿದರೆ ಯಶಸ್ಸು ಸಿಗುತ್ತದೆ. ನಾನು ಅವರ ಬೊಧನೆ ಪಾಲಿಸಿದ್ದೇನೆ ಅದಕ್ಕೆ ಯಶಸ್ಸು ಸಿಕ್ಕಿದೆ.

ನಾನು ಈಗ ಸಿಎಂ ಆಗಿದ್ದೇನೆ ಅದು ನಿಮ್ಮ ಆಶೀರ್ವಾದ, ನೀವು ಅದರ ಮಾಲಕರು ಎಂದು ಹೇಳಿದರು.

ಬಿಜಾಪುರದಲ್ಲಿ ನಲವತ್ತು ವರ್ಷದ ಸಮಸ್ಯೆಗೆ ಪರಿಹಾರ ನೀಡಿದ್ದೇನೆ ಅದರಿಂದ ಅಲ್ಲಿನ ಜನರು ಖುಷಿಯಿಂದ ಸನ್ಮಾನ ಮಾಡಿದರು. ಅದಕ್ಕೆ ನಮ್ಮ ಕ್ಷೇತ್ರದ ಜನರೇ ಕಾರಣ. ನಾನು ಗ್ರಾಮಗಳ ಅಭಿವೃದ್ದಿಗೆ ಆದ್ಯತೆ ನೀಡಿದ್ದೇನೆ. ಪ್ರತಿದಿನ ಒಂದು ಹೊಸ ಸವಾಲು ಬಂದರೂ ಅದನ್ನು ಎದುರಿಸಿದ್ದೇನೆ. ಜಯ ಸಾಧಿಸಿದ್ದೇನೆ. 

ನಾನು ಸಿಎಂ ಆದ ನಾಲ್ಕು ಗಂಟೆಯಲ್ಲಿ  ರೈತ ವಿದ್ಯಾನಿಧಿ ಯೋಜನೆ ಜಾರಿಗೆ ತಂದೆ, ನಾನು ಹಳ್ಳಿಗಳಿಗೆ ಹೋದಾಗ ಅಲ್ಲಿನ ಕೆಲವು ಮನೆಗಳು ಆರ್ ಸಿಸಿ ಮನೆಗಳಿರುವುದನ್ನು ನೋಡಿ ಕೇಳಿದೆ. ಸರ್ಕಾರಿ, ಖಾಸಗಿ ನೌಕರಿ ಮಾಡುವುದರಿಂದ ಅವರು ಆರ್ ಸಿಸಿ ಮನೆ ಹಾಕಿಕೊಂಡಿದ್ದಾರೆ. ರೈತರ ಮಕ್ಕಳು ವಿದ್ಯೆ ಕಲಿತರೆ ಅವರೂ ಬೇರೆ ಬೇರೆ ಉದ್ಯೋಗ ಮಾಡಿದರೆ ಅವರು ಅಭಿವೃದ್ಧಿ ಆಗುತ್ತಾರೆ ಹೀಗಾಗಿ ರೈತ ವಿದ್ಯಾನಿಧಿ ಯೋಜನೆ ಜಾರಿಗೊಳಿಸಿದ್ದೇನೆ ಎಂದರು.

ದುಡಿಯುವ ಮಹಿಳೆಯರಿಗೆ ಪ್ರತಿ ತಿಂಗಳು ಒಂದು ಸಾವಿರ ರೂ. ಕೊಡುವ ಯೋಜನೆ ರೂಪಿಸಿದ್ದೇನೆ. ವಿದ್ಯಾರ್ಥಿನಿಯರಿಗೆ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡಿದ್ದೇನೆ. ಪಿಯುಸಿ ನಂತರ  ಎಲ್ಲರಿಗೂ ಉಚಿತ ಶಿಕ್ಷಣ ನೀಡಲಾಗುತ್ತಿದೆ. 

ಪಿಯುಸಿ ಫೇಲ್ ಆದವರಿಗೂ ತರಬೇತಿ ನೀಡಿ ಸ್ಡೈಪೆಂಡ್ ನೀಡುವ ಕೆಲಸ ಮಾಡಿದ್ದೇನೆ. ರೈತರಿಗೆ ವಿಮೆ ಮಾಡಿದ್ದೇನೆ. ಯಾರೆ ಸಹಜ ಸಾವು ಹೊಂದಿದರೂ ಅವರ ಕುಟುಂಬಕ್ಕೆ ಎರಡು ಲಕ್ಷ ರೂ.‌ವಿಮೆ ಹಣ ಸಿಗುವಂತೆ ಮಾಡಿದ್ದೇನೆ.

ಗ್ರಾಮೀಣ ಪ್ರದೇಶದಲ್ಲಿ ಸಮಸ್ಯೆಗಳ ಜೊತೆಗೆ ಬದುಕುತ್ತಾರೆ. ಅಂತಹ ಸಮಸ್ಯೆಗಳಿಗೆ ಪರಿಹಾರ ನೀಡುವ ಕೆಲಸ ಮಾಡಿದ್ದೇನೆ. ಪ್ರತಿಯೊಂದು ಸಮಸ್ಯೆಗೆ ಶರಣರ ತತ್ವಗಳ ಪಾಲನೆ ಮಾಡಿ ಆಡಳಿತ ನಡೆಸುತ್ತಿದ್ದೇನೆ ಎಂದು ಹೇಳಿದರು. 

ಈ ದೇಶಕ್ಕೆ ದೊಡ್ಡ ಚರಿತ್ರೆ ಇದೆ. ಚಾರಿತ್ಯ ಬೇಕಿದೆ. ಯಾವ ದೇಶದಲ್ಲಿ ಚಾರಿತ್ರ್ಯ ಇಲ್ಲವೊ ಆ ದೇಶ ಅಧೊಗತಿಗೆ ಇಳಿಯಲಿದೆ. ನಮ್ಮಲ್ಲಿ ಸಣ್ಣ ಸಣ್ಣ ವಿಚಾರಕ್ಕೆ ಸಾಕಷ್ಟು ಸಂಘರ್ಷ ಇದೆ. ಅದನ್ನು ಸಮನ್ವತೆಯಿಂದ ಬಗೆ ಹರಿಸಬೇಕು. ನಾವು ಅಸ್ತಿತ್ವಕ್ಕಾಗಿ ಬಡಿದಾಡುತ್ತಿದ್ದೇವೆ. ಇಡೀ ಜೀವನದ ಹೋರಾಟ ಅಸ್ತಿತ್ವ ಕಳೆದುಕೊಳ್ಳುವುದು. ಅದನ್ನು ಶರಣರು ನಮಗೆ ಹೇಳಿದ್ದಾರೆ ಎಂದರು.

ನಮ್ಮ ಗುರುಗಳು ಕಿಂಚಿತ್ತಾದರೂ ಬದಲಾವಣೆ ತರಲು ಪ್ರತಿವರ್ಷ ಶರಣ ಸಂಸ್ಕೃತಿ ಮೂಲಕ ಬದಲಾವಣೆ ತರುವ ಕೆಲಸ ಮಾಡಿದ್ದಾರೆ. ಅವರ ಆಶೀರ್ವಾದದಿಂದ ಉತ್ತಮ ಕೆಲಸ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಇದರ ಎರಡು ಪಟ್ಡು ಕೆಲಸ ಮಾಡುತ್ತೇನೆ ನಿಮ್ಮ ಆಶೀರ್ವಾದ ಇರಲಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿರಕ್ತ ಮಠದ ಸಂಗನಬಸವನ ಸ್ವಾಮೀಜಿ, ಹೆಬ್ಬಾಳದ ಸ್ವಾಮೀಜಿ, ಮಹಾಂತ ಸ್ವಾಮೀಜಿ, ಅಗಡಿ ಸ್ವಾಮೀಜಿ ಹಾಜರಿದ್ದರು.

Post a Comment

0 Comments

Ad Code

Responsive Advertisement