*ಸಹೃದಯರಿಗೆ ನಮಸ್ಕಾರ*....

*ಎಲ್ಲರನ್ನೂ ಒಳಗೊಂಡು*

*ಎಲ್ಲವನ್ನೂ ಮೇಳೈಸಿಕೊಂಡು*

*೧೬ನೇ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವೂ ಸೇರಿದಂತೆ ಎಲ್ಲ ರೀತಿಯ ಕನ್ನಡದ ಕಾರ್ಯಚಟುವಟಿಕೆಗಳನ್ನು ನಡೆಸಬೇಕು ಎಂಬುದು ನಮ್ಮ ಹಂಬಲವಾದರೂ,ಕಾಲ-ಸಂದರ್ಭ-ಒತ್ತಡ-ಮನುಷ್ಯ ಸಹಜ ಮರೆವು-ಕೊರತೆಗಳ ನಡುವೆ,ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಎಲ್ಲರನ್ನು ಒಳಗೊಂಡು-ಎಲ್ಲವನ್ನು ಮೇಳೈಸಿಕೊಂಡು ಮುನ್ನಡೆಯುವ ಸಂಕಲ್ಪದೊಂದಿಗೆ ಬಹುಭಾಷಿಕರ ಪ್ರಾಬಲ್ಯವೇ ಹೆಚ್ಚಾಗಿರುವ,ಕನ್ನಡಿಗರು ಅಲ್ಪಸಂಖ್ಯಾತರಂತಾಗಿರುವ ಬೆಂಗಳೂರಿನ ದಂಡು ಪ್ರದೇಶವಾದ ಶಿವಾಜಿನಗರ ವ್ಯಾಪ್ತಿಯ ವಸಂತನಗರದ,ಮಿಲ್ಲರ್ಸ್ ರಸ್ತೆಯ,ಮಹಾವೀರ ಜೈನ ಆಸ್ಪತ್ರೆಯ ಹತ್ತಿರದ,ಕಾವೇರಪ್ಪ ಬಡಾವಣೆಯಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ"ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಉಳಿದರೆ, ಇಡೀ ರಾಜ್ಯದಲ್ಲಿ ಕನ್ನಡ ಉಳಿದೀತು"ಎಂಬ ಆಶಯದೊಂದಿಗೆ ಇದೇ ಮಾರ್ಚ್ ತಿಂಗಳ ೧೧-೧೨,ಎರಡನೇ ಶನಿವಾರ ಭಾನುವಾರ ಸ್ತ್ರೀವಾದಿ ಚಿಂತಕಿ,ಸಂವೇದನಾಶೀಲ ಲೇಖಕಿ,ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು,ಅತ್ತಿಮಬ್ಬೆ ಪ್ರಶಸ್ತಿ ಪುರಸ್ಕೃತರೂ ಆದ ಡಾ.ಎಚ್.ಎಸ್.ಶ್ರೀಮತಿಯವರ ಸರ್ವಾಧ್ಯಕ್ಷತೆಯಲ್ಲಿ'ಹದಿನಾರನೇ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದೆ.

*ಅದರ ಆತ್ಮೀಯ ಆಹ್ವಾನ ಪತ್ರಿಕೆಯನ್ನು ನಿಮ್ಮ ಗಮನಕ್ಕೆ ತರುತ್ತಾ,ಆಮಂತ್ರಣ ಪತ್ರಿಕೆಯ ಪಿಡಿಎಫ್ ರೂಪದಲ್ಲಿ ನಿಮಗೆ ಸ್ವಾಗತ ಕೋರಲಾಗುತ್ತಿದೆ.

*ದಯಮಾಡಿ ನಮ್ಮ ಪ್ರೀತಿಯ ಕರೆಯನ್ನು ಮನ್ನಿಸಿ, ಮಾರ್ಚ್ ೧೧ರ ಶನಿವಾರ ಬೆಳಿಗ್ಗೆ ೮:೦೦ಕ್ಕೆ ನಾಡಿನ ಶಕ್ತಿಕೇಂದ್ರ ವಿಧಾನಸೌಧದ ಮುಂಭಾಗದಿಂದ ಆರಂಭವಾಗುವ ನುಡಿಜಾತ್ರೆಯ ಕನ್ನಡ ಜಾಗೃತಿ ಮೆರವಣಿಗೆಯಿಂದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆಯಲಿರುವ ಸಮ್ಮೇಳನದ ಸಮಾರೋಪದವರೆಗೆ ೨ದಿನಗಳ ಕಾಲದ ಉದ್ಘಾಟನೆ-ಗೋಷ್ಠಿಗಳು-ಉಪನ್ಯಾಸಗಳು-ಪುಸ್ತಕಗಳ ಬಿಡುಗಡೆ-ವಿಚಾರಸಂಕಿರಣಗಳು-ಸಾಧಕರಿಗೆ ಸನ್ಮಾನ-ಸಂವಾದ-ಗಾಯನ-ನಾಟಕ-ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮುಂತಾದ ಕಾರ್ಯಕ್ರಮಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಪಾಲ್ಗೊಳ್ಳುವ ಮೂಲಕ ಸಂಪೂರ್ಣ ಸಹಕಾರ-ನೆರವು ನೀಡಿ ೧೬ನೇ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ಸುಗೊಳಿಸಬೇಕೆಂದು ಪ್ರಾರ್ಥನೆ.*

*ಸರ್ವರಿಗೂ ಸುಸ್ವಾಗತ*

*ಎಂ.ಪ್ರಕಾಶಮೂರ್ತಿ*

*ಅಧ್ಯಕ್ಷ-ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು*

*೯೪೪೮೭೦೯೬೫೧.*