Ticker

6/recent/ticker-posts

Ad Code

Responsive Advertisement

ಮಧು ಬಂಗಾರಪ್ಪರವರ ಹುಟ್ಟುಹಬ್ಬದ ಸಂಭ್ರಮಾಚರಣೆ

ಕಾಂಗ್ರೆಸ್ ಕಾರ್ಯಕರ್ತರಿಂದ  ಹಿಂದುಳಿದ ವರ್ಗಗಳ ಯುವ ನಾಯಕ ಮಧು ಬಂಗಾರಪ್ಪರವರ ಹುಟ್ಟುಹಬ್ಬದ ಸಂಭ್ರಮಾಚರಣೆ

ಮಾಜಿ ಮುಖ್ಯಮಂತ್ರಿಗಳು, ಹಿರಿಯ ರಾಜಕಾರಣಿ ಶ್ರೀ ಎಸ್.ಬಂಗಾರಪ್ಪರವರ ಸುಪುತ್ರ  ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯಾಧ್ಯಕ್ಷರಾದ ಶ್ರೀಯುತ ಮಧು ಬಂಗಾರಪ್ಪರವರ  ಹುಟ್ಟುಹಬ್ಬದ ಸಂಭ್ರಮಾಚರಣೆಯನ್ನು  ಕಾಂಗ್ರೆಸ್  ಭವನ, ಹಿಂದುಳಿದ ವರ್ಗಗಳ ವಿಭಾಗದ ಕಛೇರಿಯಲ್ಲಿ ಅಚರಿಸಿದರು.


ಕೆ.ಪಿ.ಸಿ.ಸಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಎ.ರಮೇಶ್ ಆದಿತ್ಯರವರು ಮತ್ತು  ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎ.ರಮೇಶ್ ಆದಿತ್ಯರವರು ಮಾತನಾಡಿ ದೇಶದ ಶೇಕಡ 60%ರಷ್ಟು ಜನಸಂಖ್ಯೆ ಹಿಂದುಳಿದ ವರ್ಗ ಸಮುದಾಯವಿದೆ.

ಕಾಂಗ್ರೆಸ್ ಪಕ್ಷದ ಆಡಳಿತ ಅವಧಿಯಲ್ಲಿ ಹಿಂದುಳಿದ ವರ್ಗದ ಸಮುದಾಯದವರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಿದ್ದಾರೆ.

ಹಿಂದುಳಿದ ವರ್ಗದ ಅಭಿವೃದ್ದಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಹಿಂದುಳಿದ ವರ್ಗಗಳ ವಿಭಾಗದ ರಾಜ್ಯಾಧ್ಯಕ್ಷರಾದ ಶ್ರೀಯುತ ಮಧು ಬಂಗಾರಪ್ಪರವರ ನೇತೃತ್ವದಲ್ಲಿ ಸಂಘಟನೆ ಯಶ್ವಸಿಯಾಗಿ ಸಾಗುತ್ತಿದೆ.

ಮಾನ್ಯ ಕೆಪಿಸಿಸಿ ಅಧ್ಯಕ್ಷರಾದ ಶ್ರೀಯುತ ಡಿ.ಕೆ.ಶಿವಕುಮಾರ್ ರವರು ಮತ್ತು ಮಾಜಿ ಮುಖ್ಯಮಂತ್ರಿಗಳು, ವಿರೋಧ ಪಕ್ಷದ ನಾಯಕರಾದ ಶ್ರೀಯುತ ಸಿದ್ದರಾಮಯ್ಯರವರ ನೇತೃತ್ವದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 140ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಲಿದೆ ಎಂದು  ಅಭಿಪ್ರಾಯ ವ್ಯಕ್ತಪಡಿಸಿದರು.

ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಮುಖಂಡರುಗಳಾದ ಶಿವಕುಮಾರ್, ಹನುಮಂತು, ರವೀಂದ್ರ,, ವಿಜಯಕುಮಾರ್, ಭರತ್ ರವರು ಪಾಲ್ಗೊಂಡಿದ್ದರು.

Post a Comment

0 Comments

Ad Code

Responsive Advertisement