Ticker

6/recent/ticker-posts

Ad Code

Responsive Advertisement

ವಿಶೇಷ ಚೇತನರಿಗೆ ಕೃತಕ ಅಂಗಾ0ಗ ವಿತರಣೆ ಮಾಡಿದ ರಾಜ್ಯಪಾಲರು

ಬೆಂಗಳೂರು ಮಾರ್ಚ್ 19, 2023: ದುರ್ಬಲರು, ಬಡವರು, ಅಂಗವಿಕಲರ ಕೈ ಹಿಡಿದು ಅವರನ್ನು ಸಮಾನವಾಗಿ ತರಲು ಪ್ರಯತ್ನಿಸಬೇಕು ಮತ್ತು ಸರ್ವಧರ್ಮ ಸಂಭವದ ದಿಕ್ಕಿನತ್ತ ಸಾಗುವುದೇ ನಮ್ಮ ಪ್ರಯತ್ನವಾಗಬೇಕು ಎಂದು ಕರ್ನಾಟಕದ ರಾಜ್ಯಪಾಲ  ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.








ಬೆಂಗಳೂರಿನಲ್ಲಿ ನಾರಾಯಣ ಸೇವಾ ಸಂಸ್ಥಾನ ಉದಯಪುರ ಆಯೋಜಿಸಿದ್ದ ನಾರಾಯಣ ಅಂಗ ಮತ್ತು ಕ್ಯಾಲಿಪರ್ ಫಿಟ್‌ಮೆಂಟ್ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ವಿಶೇಷ ಚೇತನರು ಮಾನವ ಸಂಪನ್ಮೂಲದ ಅವಿಭಾಜ್ಯ ಅಂಗವಾಗಿದ್ದು, ಅವರನ್ನು ಸಮಾಜದ ಮುಖ್ಯ ವಾಹಿನಿಯೊಂದಿಗೆ ಸಂಪರ್ಕಿಸುವ ಮೂಲಕ ಅವರನ್ನು ದೇಶದ ಅಭಿವೃದ್ಧಿಯಲ್ಲಿ ಪಾಲುದಾರರನ್ನಾಗಿ ಮಾಡುವುದು ನಮ್ಮ ಗುರಿಯಾಗಿದೆ. ನಮ್ಮ ದೇಶದ ಗೌರವಾನ್ವಿತ ಪ್ರಧಾನ ಮಂತ್ರಿಯವರ ದಕ್ಷ ನಾಯಕತ್ವದಲ್ಲಿ “ಸಬ್ಕಾ ಸಾಥ್ ಸಬ್ಕಾ ವಿಕಾಸ್” ಮಂತ್ರವನ್ನು ಅರಿತು, ವಿಶೇಷ ಚೇತನರ ಸಮಗ್ರ ಸಮಾಜದ ಸಬಲೀಕರಣಕ್ಕಾಗಿ ಭಾರತ ಸರ್ಕಾರವು ಅಭೂತಪೂರ್ವ ಮತ್ತು ಶ್ಲಾಘನೀಯ ಕೆಲಸವನ್ನು ಮಾಡುತ್ತಿದೆ ಎಂದರು.

ಭಾರತ ಸರ್ಕಾರದ ವಿಕಲಚೇತನರ ಸಬಲೀಕರಣ ಇಲಾಖೆಯ ಎಡಿಐಪಿ ಯೋಜನೆಯಡಿಯಲ್ಲಿ ಸ್ಮಾರ್ಟ್ ಫೋನ್, ಡಿಜಿಪ್ಲೇಯರ್ ಮತ್ತು ವಾಕಿಂಗ್ ಸ್ಟಿಕ್ ಮತ್ತು ಸ್ಮಾರ್ಟ್ ಕೇನ್ ನಂತಹ ಪರಿಕರಗಳನ್ನು ದೃಷ್ಟಿಹೀನರಿಗೆ ಲಭ್ಯವಾಗುವಂತೆ ಮಾಡಲಾಗುತ್ತಿದೆ. ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ರೂ.171.00 ಕೋಟಿ ವೆಚ್ಚದಲ್ಲಿ ಅಂಗವಿಕಲರ ಕ್ರೀಡಾ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ. ಸೆಹೋರ್ ನಲ್ಲಿ ಮಾನಸಿಕ ಆರೋಗ್ಯ ಪುನರ್ವಸತಿ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ದಿವ್ಯಾಂಗರ ಸಬಲೀಕರಣಕ್ಕಾಗಿ ಸರ್ಕಾರದ ಜೊತೆಗೆ ಕಾರ್ಪೊರೇಟ್ ಜಗತ್ತು ಮತ್ತು ಅನೇಕ ಸ್ವಯಂಸೇವಾ ಸಂಸ್ಥೆಗಳು ಸಹ ಶ್ರಮಿಸುತ್ತಿವೆ. ಅದರಲ್ಲಿ ನಾರಾಯಣ ಸೇವಾ ಸಂಸ್ಥಾನ ಒಂದಾಗಿದೆ. ನಾರಾಯಣ ಸೇವಾ ಸಂಸ್ಥಾನದಂತಹ ಸಂಸ್ಥೆಗಳು ಸರ್ಕಾರದ ಸಾಮಾಜಿಕ ಯೋಜನೆಗಳನ್ನು ನಿರ್ಗತಿಕರಿಗೆ, ಬಡವರಿಗೆ ಮತ್ತು ಅಂಗವಿಕಲರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಹೇಳಿದರು.

ನಾರಾಯಣ ಸೇವಾ ಸಂಸ್ಥಾನ ಉದಯಪುರ ಕರ್ನಾಟಕದ ಒಂದಲ್ಲ 555 ವಿಕಲಚೇತನರ ಸ್ಥಗಿತಗೊಂಡ ಜೀವನಕ್ಕೆ ಕೃತಕ ಕೈ ಕಾಲುಗಳನ್ನು ಅಳವಡಿಸುವ ಮೂಲಕ ಅವರ ಜೀವನಕ್ಕೆ ವೇಗ ನೀಡುವ ಶುಭ ಕಾರ್ಯವನ್ನು ಮಾಡುತ್ತಿದೆ. ಇದಕ್ಕಾಗಿ ಅವರಿಗೆ ಅಭಿನಂದನೆಗಳು ಎಂದ ಅವರು, ನಾರಾಯಣ ಸೇವಾ ಸಂಸ್ಥಾನವು ಅಂಗವಿಕಲರು, ಬಡವರು ಮತ್ತು ಅನಾಥರನ್ನು ಮೇಲೆತ್ತಿ ಸಮಾಜದ ಮುಖ್ಯವಾಹಿನಿಗೆ ತರಲು ಪ್ರಯತ್ನಿಸುತ್ತಿದೆ ಎಂದು ಶ್ಲಾಘಿಸಿದರು.

ಈ ವೇಳೆ ನಾರಾಯಣ ಸೇವಾ ಸಂಸ್ಥಾನದ ಅಧ್ಯಕ್ಷ ಪ್ರಶಾಂತ್ ಅಗರ್ವಾಲ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.

Post a Comment

0 Comments

Ad Code

Responsive Advertisement