Ticker

6/recent/ticker-posts

Ad Code

Responsive Advertisement

*ಸಾಧಕ ಮಹಿಳೆಯರಿಗೆ ಕರುನಾಡ ಹೆಮ್ಮೆಯ ಹೆಗ್ಗಡತಿ ಪ್ರಶಸ್ತಿ ಪ್ರದಾನ*

 *ಮಹಿಳಾ ದಿನಾಚರಣೆಯನ್ನು ಪ್ರೇರಣಾದಾಯಿಯಾಗಿ ಆಚರಿಸೋಣ* 

- *ಶಂಕರ್ ಎಸ್ ಎನ್* 

ಒಂದು ರಾಷ್ಟ್ರ ಸಮಗ್ರವಾಗಿ ಮುಂದುವರೆಯಬೇಕಾದರೇ ಅಲ್ಲಿ ಮಹಿಳೆಯರ ಸರ್ವತೋಮುಖ ಅಭಿವೃದ್ಧಿ ಆಗಲೇ ಬೇಕು. ಮಹಿಳೆಯರ  ಸಾಧನೆಗೆ ಪೂರಕವಾದ ಅವಕಾಶ ಕಲ್ಪಿಸಿದಾಗ ಮತ್ತು ಮಹಿಳೆಯ ಆಸೆ ಆಕಾಂಕ್ಷೆಗಳಿಗೆ ಬೆಂಬಲ ನೀಡಿದಾಗ ಮಾತ್ರ ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತರ ಸಂಪರ್ಕಾಧಿಕಾರಿ ಶ್ರೀ ಶಂಕರ್ ಎಸ್ ಎನ್ ಅವರು ಹೇಳಿದರು.

ದಿ ಎಂಟರ್ ಪ್ರಿನರ್ ಹಬ್ ಆಯೋಜಿಸಿದ್ದ *ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ* ಉದ್ಘಾಟಿಸಿ ಮಾತನಾಡಿದ ಅವರು, ಸ್ತ್ರೀ ಸಮಾನತೆ ಮತ್ತು ಸ್ತ್ರೀ ಸಬಲೀಕರಣದಲ್ಲಿ ಭಾರತ ಮುಂಚೂಣಿಯಲ್ಲಿರುವ ರಾಷ್ಟ್ರವಾಗಿದ್ದು ಪುರುಷ ಪ್ರದಾನವಾದ ಈ ಸಮಾಜದಲ್ಲಿ ಮಹಿಳೆ ಇಂದು ಸಾಕಷ್ಟು ಸಾಧನೆ ಮಾಡಿ ಮಾದರಿಯಾಗಿದ್ದಾಳೆ ಎಂದರು.

ಈ ನಾಡಿನ ಸಾಕ್ಷಿ ಪ್ರಜ್ಞೆಯಾಗಿರುವ ಮತ್ತು ಹತ್ತು ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮಹಿಳೆಯರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದ್ದು, ಸ್ಫೂರ್ತಿಯುತ ಮತ್ತು ಆದರ್ಶಪ್ರಾಯವಾದ ಈ ಮಹಿಳಾ ದಿನಾಚರಣೆಯನ್ನು ಪ್ರೇರಣಾದಾಯಿಯಾಗಿ ಆಚರಿಸೋಣ ಎಂದು ಅವರು ಕರೆ ನೀಡಿದರು.

ಅಂತರ ರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಹಿರಿಯ ಯಕ್ಷಗಾನ ಕಲಾವಿದೆ ಶ್ರೀಮತಿ ಲತಾ ಹೊಳ್ಳ, ಕನ್ನಡದ ಗಗನ ಸಖಿ ಖ್ಯಾತಿಯ ಶ್ರೀಮತಿ ಮಾಲಾ, ಪ್ರತಿಭಾನ್ವಿತ ರೈತಮಹಿಳೆ ಶ್ರೀಮತಿ ಸುಷ್ಮಾ ಸೇರಿದಂತೆ ಅನೇಕ ಪ್ರತಿಭಾವಂತ ಮಹಿಳೆಯರಿಗೆ ಮಾಜಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಶ್ರೀಮತಿ ಮೋಟಮ್ಮ ಅವರು *ಕರುನಾಡ ಹೆಮ್ಮೆಯ ಹೆಗ್ಗಡತಿ* ಪ್ರಶಸ್ತಿಯನ್ನು ನೀಡಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಮಕ್ಕಳ ತಜ್ಞ ಡಾ. ದೇವರಾಜ್, ಮನಶಾಸ್ತ್ರಜ್ಞೆ ಡಾ. ಪದ್ಮಾಕ್ಷಿ, ಸಂಘಟಕಿ ಶ್ರೀಮತಿ ಶಾರದಾ ಅವರು ಉಪಸ್ಥಿತರಿದ್ದರು.

Post a Comment

0 Comments

Ad Code

Responsive Advertisement