Ticker

6/recent/ticker-posts

Ad Code

Responsive Advertisement

ನೆನೆಗುದಿಗೆ ಬಿದ್ದಿದ್ದ ರಸ್ತೆಗೆ ಗುದ್ದಲಿ ಪೂಜೆ : ಶಾಸಕ ವಿ ಮುನಿಯಪ್ಪ

ವಾರ್ತಾಜಾಲ,ಶಿಡ್ಲಘಟ್ಟ : ಸುಮಾರು ವರ್ಷಗಳಿಂದ ನೆನಗುದಿಗೆ ಬಿದ್ದಂತಹ ರಸ್ತೆಯ ಡಾಂಬರೀಕರಣಕ್ಕೆ ಮಂಗಳವಾರ ಶಾಸಕ ವಿ ಮುನಿಯಪ್ಪ ಗುದ್ದಲಿ ಪೂಜೆ ನೆರವೇರಿಸಿದರು.


ಬಶೆಟ್ಟಹಳ್ಳಿ ಹೋಬಳಿಯ ದೊಡ್ಡತೇಕಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಚೌಡರೆಡ್ಡಿಹಳ್ಳಿ ಗ್ರಾಮದಲ್ಲಿ ಸುಮಾರು 3 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಭೂಮಿ  ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಸುಮಾರು ವರ್ಷಗಳಿಂದ ರಸ್ತೆ ಹಾಳಾಗಿ ಸಾರ್ವಜನಿಕರು ಹರಸಾಹಸ ಬಿದ್ದಿದ್ದಾರೆ. ಇನ್ನೂ ಶಾಲೆಗೆ ಹೋಗುವಂತಹ ವಿದ್ಯಾರ್ಥಿಗಳು ರಸ್ತೆಯುದ್ದಕ್ಕೂ ಬೇಸರದಿಂದ ನಡದೇ ಸಾಗುತ್ತಿದ್ದರು. ಇದರ ನಡುವೆ ಬೈಕ್ ಸವಾರರು ರಸ್ತೆಯಲ್ಲಿ ಪ್ರಯಾಣಿಸುವಾಗ ಗುಂಡಿಗಳಲ್ಲಿ ಬಿದ್ದು ವಿಲವಿಲ ಹೊದ್ದಾಡಿದ್ದಾರೆ. ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು ರಸ್ತೆ ಅಭಿವೃದ್ಧಿಗೆ ಕಛೇರಿಗಳಿಗೆ ತಿರುಗಿ ತಿರುಗಿ ಚಪ್ಪಲಿ ಸವಿದು ಹೋಗಿದ್ದವು. ಕೊನೆಗೂ ರಸ್ತೆಗೆ ಶಾಸಕರಿಂದ ಗುದ್ದಲಿ ಪೂಜೆ ಮಾತ್ರ ಜರುಗಿದೆ. ರಸ್ತೆಯ ಕಾಮಗಾರಿ ಮುಗಿಯುವ ವೇಳೆಗೆ ಇನ್ನೆಷ್ಟು ವರ್ಷಗಳು ಕಾಯಬೇಕೋ ಗೊತ್ತಿಲ್ಲ ಎಂದು ಸ್ಥಳೀಯ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮಕ್ಕೆ ಶಿಡ್ಲಘಟ್ಟ ವಿಧಾನ ಸಭಾ ಕ್ಷೇತ್ರದ ಶಾಸಕ ವಿ ಮುನಿಯಪ್ಪ ಹಾಗೂ ವಿಷೇಶ ಆಹ್ವಾನಿತರಾಗಿ ಸಮಾಜಸೇವಕ ಹಾಗೂ ಕಾಂಗ್ರೇಸ್ ಟಿಕೆಟ್ ಆಕಾಂಕ್ಷಿ ಪುಟ್ಟು ಆಂಜಿನಪ್ಪ ರವರು ಆಗಮಿಸಿದರು.

ದೊಡ್ಡತೇಕಹಳ್ಳಿ ಗ್ರಾಮ ಪಂಚಾಯಿತಿಯ ಟಿ ಪೆದ್ದನಹಳ್ಳಿ ಯಿಂದ ಚೌಡರೆಡ್ಡಿಹಳ್ಳಿ ವಯಾ ದಡಂಘಟ್ಟ ರಸ್ತೆಯ ವರೆಗೂ ನಬಾರ್ಡ್ ಯೋಜನೆಯಡಿಯಲ್ಲಿ ಸುಮಾರು 3 ಕೋಟಿ ಅನುದಾನ ಮಂಜೂರಾಗಿದ್ದು, ಚೌಡರೆಡ್ಡಿಹಳ್ಳಿ ಗ್ರಾಮದಲ್ಲಿ ರಸ್ತೆಗೆ ಗುದ್ದಲಿ ಪೂಜೆಯನ್ನು ಶಾಸಕ ವಿ ಮುನಿಯಪ್ಪ ರವರು ನೆರವೇರಿಸಿದರು.

ರಸ್ತೆಗೆ ಗುದ್ದಲಿ ಪೂಜಾ ಕಾರ್ಯಕ್ರಮ ಮುಗಿದ ನಂತರ ಸಮಾಜ ಸೇವಕ ಹಾಗೂ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಪುಟ್ಟು ಆಂಜಿನಪ್ಪ ರವರ ಅಜ್ಜಕದಿರೇನಹಳ್ಳಿ ಗೇಟ್ ಬಳಿ ಇರುವ ತೋಟದ ಮನೆಗೆ ಬೇಟಿ ನೀಡಿದ ಶಾಸಕ ವಿ ಮುನಿಯಪ್ಪ ರವರು ಕಾಂಗ್ರೆಸ್ ಮುಖಂಡರ ಜೊತೆ ಸಮಾಲೋಚನೆ ಮಾಡಿ ಕೂಲಂಕಷವಾಗಿ ಚರ್ಚಿಸಿ, ಮುಂಬರುವ ವಿಧಾನ ಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಜಕೀಯ ವಿದ್ಯುನ್ಮಾನಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಿದರು, ಪುಟ್ಟು ಆಂಜಿನಪ್ಪ ನವರಿಗೆ ಒಳ್ಳೆಯದು ಆಗುತ್ತದೆ ಎಂದು ಶಾಸಕ ವಿ ಮುನಿಯಪ್ಪ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ದೊಡ್ಡತೇಕಹಳ್ಳಿ ಗ್ರಾ.ಪಂ. ಅಧ್ಯಕ್ಷ ಟಿಎಸ್ ಗೋಪಾಲರೆಡ್ಡಿ, ಜಿ.ಪಂ.ಮಾಜಿ ಸದಸ್ಯ ಎನ್ ಮುನಿಯಪ್ಪ, ಗ್ರಾ.ಪಂ. ಸದಸ್ಯರಾದ ಸಿಕೆ ಮಂಜುನಾಥ್, ಎ ಮುನಿಶಾಮಿ, ಡಿ ಸಿ ಮಂಜುನಾಥ್,ಮಾರಪ್ಪ, ಪಿಎಲ್ ಡಿ ಬ್ಯಾಂಕ್ ಸದಸ್ಯ ಮಜ್ಜಿಗೆ ನಾರಾಯಣಸ್ವಾಮಿ, ತಲಕಾಯಲಬೆಟ್ಟ ಗ್ರಾ.ಪಂ. ಉಪಾಧ್ಯಕ್ಷ ಅಶ್ವತ್ಥರೆಡ್ಡಿ, ಎಸ್ ದೇವಗಾನಹಳ್ಳಿ ಗ್ರಾ.ಪಂ. ಅಧ್ಯಕ್ಷ ಅಶ್ವತ್ ನಾರಾಯಣಸ್ವಾಮಿ,ಮುಖಂಡರಾದ ಆನೆಮಡಗು ವೆಂಕಟರೆಡ್ಡಿ, ಬಿಸಿ ನರಸಿಂಹರೆಡ್ಡಿ,ಯರನಾಗೇನಹಳ್ಳಿ ನರಸಿಂಹರೆಡ್ಡಿ, ಕೃಷ್ಣಪ್ಪ, ಗುತ್ತಿಗೆದಾರ ನಟರಾಜ್ ಸೇರಿದಂತೆ ಇನ್ನೂ ಅನೇಕ ಮುಖಂಡರು ಭಾಗವಹಿಸಿದ್ದರು.

ವರದಿ : ಚಿಕ್ಕತೇಕಹಳ್ಳಿ ಡಿ ಶಿವಕುಮಾರ್
8693921404


Post a Comment

0 Comments

Ad Code

Responsive Advertisement