ಕೊಳ್ಳೇಗಾಲ ಸುದ್ದಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಇಲಾಖೆ ಹಾಗೂ ನಗರೋತ್ತಾನ ಇಲಾಖೆ ವತಿಯಿಂದ ಕೊಳ್ಳೇಗಾಲ ನಗರದಲ್ಲಿ ನಿರ್ಮಾಣಗೊಂಡಿರುವ ಕೆ. ಎಸ್.ಆರ್.ಟಿ. ಸಿ. ಹೈಟಕ್ ಬಸ್ ನಿಲ್ದಾಣವನ್ನು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣರವರು ಉದ್ಘಾಟಸಿ ಲೋಕಾರ್ಪಣೆ ಮಾಡಿದರು,
ಬಸ್ ನಿಲ್ದಾಣ ಉದ್ಘಾಟಿಸಿ ಸಚಿವ ವಿ. ಸೋಮಣ್ಣರವರು ಮಾತನಾಡಿ, ಕೊಳ್ಳೇಗಾಲ ಅತೀ ಹೆಚ್ಚು ಗ್ರಾಮೀಣ ಪ್ರದೇಶಗಳನ್ನು ಹೊಂದಿದೆ, ಪುಣ್ಯ ಕ್ಷೇತ್ರಗಳಾದ ಮಹದೇಶ್ವರ ಬೆಟ್ಟ, ಬಿಳಿಗಿರಿರಂಗನ ಬೆಟ್ಟ ಹಾಗೂ ಇನ್ನು ಹಲವಾರು ಯಾತ್ರಾ ಸ್ಥಳಗಳನ್ನು ಹೊಂದಿದೆ ಇವೆಲ್ಲಕ್ಕೂ
ಕೊಳ್ಳೇಗಾಲ ನಗರ ಕೇಂದ್ರ ಸ್ಥಾನವಾಗಿದ್ದು
ಈ ನಗರಕ್ಕೆ ಬಸ್ ನಿಲ್ದಾಣದ ಅಗತ್ಯ ಇತ್ತು ಗ್ರಾಮೀಣ ಭಾಗಗಳಿಂದ ಬರುವ ಪ್ರಯಾಣಿಕರು ಬಿಸಿಲಲ್ಲಿ ನಿಂತು ಕಷ್ಟ ಪಡುತ್ತಿದ್ದರು, ಈ ಕೆಲಸ ಯಾರಿಂದ ಆಗಿದೆ ಅನ್ನೋದು ಮುಖ್ಯ ಅಲ್ಲ ಯಾರಿಂದಲಾದರು ಆಗಲಿ ಒಳ್ಳೆ ಕೆಲಸ ಆಗಿದೆ, ಜನರಿಗೆ ಒಳ್ಳೇದಾಗುವುದು ನಮಗೆ ಮುಖ್ಯ ಕೊಳ್ಳೇಗಾಲ ನಗರದಲ್ಲಿ ಒಳ್ಳೆಯ ಸುಸಜ್ಜಿತವಾದ ಹೈಟಕ್ ಬಸ್ ನಿಲ್ದಾಣ ನಿರ್ಮಾಣವಾಗಿದೆ,
ಹಾಗೆಯೇ ಖಾಸಗಿ ಬಸ್ ಗಳಿಗೂ ಕೂಡ ಇಲ್ಲೇ ವ್ಯವಸ್ಥೆ ಮಾಡಿಸಿಕೊಡಲಾಗುತ್ತದೆ,
ನಿಲ್ದಾಣ ಮುಂಭಾಗ ಇರುವ ಅಂಗಡಿ ಮಳಿಗೆಗಳು ನಿಲ್ದಾಣಕ್ಕೆ ಸೇರಿದ ಜಾಗವಾಗಿದೆ
ಅಂಗಡಿ ಮಾಲೀಕರು ಅಂಗಡಿಗಳಿಗೆ ಅಡ್ವಾನ್ಸ್ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ, ಅ ಹಣವನ್ನು ಅವರಿಗೆ ವಾಪಾಸ್ ಕೊಡಿಸಲಾಗುವುದು,
ಹಾಗೆಯೆ ಅವರಿಗೆ ತೊಂದರೆ ಆಗದಂತೆ ಅಂಗಡಿಗಳಿಗೆ ಬದಲಿ ವ್ಯವಸ್ಥೆಯನ್ನ ಮಾಡಿಸಿ, ನಿಲ್ದಾಣದ ಮುಂಭಾಗ ಇರುವ ಅಂಗಡಿಗಳನ್ನು ತೆರವುಗೊಳಿಸಿ
ಖಾಸಗಿ ಬಸ್ ನಿಲ್ದಾಣಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು,
ಇದರಿಂದ ಯಾರು ನಿರಾಶೆರಾಗಬೇಕಿಲ್ಲ, ಹಾಗೂ
ಬಸ್ ನಿಲ್ದಾಣ ಒಳ್ಳೆಯ ರೀತಿಯಲ್ಲಿ ಅಗತ್ಯ ಸೌಲಭ್ಯಗಳನ್ನೊಳಗೊಂಡು ನಿರ್ಮಾಣವಾಗಿದೆ ಇದರಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದೆ,
ಮಹೇಶ್ ರವರು ಕೂಡ ಬಹಳ ಮುತುವರ್ಜಿ ವಹಿಸಿ ಕಾಮಗಾರಿ ಕೆಲಸವನ್ನು ಬೇಗ ಮುಗಿಸಿ ಉದ್ಘಾಟನೆ ಮಾಡಿಸಿದ್ದಾರೆ,
ಇನ್ನು 10% ಕೆಲಸ ಬಾಕಿ ಇರಬಹುದು ಮುಂದಿನ ದಿನಗಳಲ್ಲಿ ಗುತ್ತಿಗೆದಾರರು ಅ ಕೆಲಸವನ್ನು ಮುಗಿಸಿಕೊಡುತ್ತಾರೆ,
ನಗರಸಭೆ ಅಧ್ಯಕ್ಷರಾಗಲಿ ಸದಸ್ಯರಾಗಲಿ ಯಾರೇ ಆದರೂ ಯಾವುದೇ ಉಹಾಪೋಹಗಳಿಗೆ ಗಮನ ಕೊಡಬಾರದು ನಗರಕ್ಕೆ ಒಳ್ಳೆಯದಾಗುವುದು ಮುಖ್ಯ ಆ ನಿಟ್ಟಿನಲ್ಲಿ ಎಲ್ಲರು ಯೋಚಿಸಿ, ಎಂದರು,
ಇದೆ ವೇಳೆ ಹೈಟಕ್ ಬಸ್ ನಿಲ್ದಾಣ ಕಾಮಗಾರಿ ಪೂರ್ಣಗೊಳ್ಳದೆ ಇದ್ದರು ಉದ್ಘಾಟನೆ ಮಾಡುವುದು ಸೂಕ್ತವಲ್ಲ, ಹಾಗೂ ಕೊಳ್ಳೇಗಾಲ ಬಸ್ ನಿಲ್ದಾಣ ಕಾಮಗಾರಿಗೆ ಮಾಜಿ ಶಾಸಕರಾದ ಜಯಣ್ಣ, ಮಾಜಿ ಸಂಸದರಾದ ಆರ್. ದೃವನಾರಾಯಣ್ ರವರ ಕೊಡುಗೆ ಅಪಾರವಾಗಿದೆ, ಬಸ್ ನಿಲ್ದಾಣಕ್ಕೆ ಹಾಲಿ ಶಾಸಕ ಎನ್. ಮಹೇಶ್ ರವರ ಕೊಡುಗೆ ಏನು ಇಲ್ಲ, ಇವರು ಸುಮ್ಮನೆ ಎಲ್ಲಾ ಮಾಡಿಸಿದ್ದು ನಾನೆ ಎಂದು ಹೇಳಿಕೊಳ್ಳುತ್ತಾರೆ, ಇದು ಅವರಿಗೆ ಶೋಭೆ ತರುವುದಿಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರುಗಳು ಆರೋಪಿಸಿದರು,
ಬಸ್ ನಿಲ್ದಾಣ ಕಾಮಗಾರಿ ಪೂರ್ಣಗೊಳ್ಳದೆ ಉದ್ಘಾಟನೆ ಮಾಡಿಸುವುದು ಸೂಕ್ತವಲ್ಲ ಎಂದು ಆರೋಪಿಸಿ, ಉದ್ಘಾಟನೆಗೆ ವಿರೋಧ ವ್ಯಕ್ತ ಪಡಿಸಿ ಕಾಂಗ್ರೆಸ್ ಮುಖಂಡರು ಹಾಗೂ ನಗರಸಭೆ ಸದಸ್ಯರುಗಳು ನಿಲ್ದಾಣದ ವಿಜಯಲಕ್ಷ್ಮಿ ಲಾಡ್ಜ್ ಮುಂಭಾಗ ಪ್ರತಿಭಟನೆಯನ್ನು ನಡೆಸಿದರು,
ಪೊಲೀಸ್ ಬಂದಾಬಸ್ತ್ ಹೆಚ್ಚಾಗಿ ಇದ್ದ ಕಾರಣ ಪ್ರತಿಭಟನಾ ನಿರತರನ್ನು ನಿಯಂತ್ರಿಸಿಬಸ್ ನಿಲ್ದಾಣ ಉದ್ಘಾಟನೆಗೆ ಅನುಕೂಲ ಮಾಡಿಕೊಡಲಾಗಿತ್ತು
ನಿಲ್ದಾಣಕ್ಕೆ ಆಗಮಿಸಿದ ಸಚಿವರು ಪಕ್ಕದ ಗಣೇಶ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ ನಂತರ ಬಸ್ ನಿಲ್ದಾಣದ ಉದ್ಘಾಟನೆಯನ್ನು ಮಾಡಿದರು,
ಈ ಸಂದರ್ಭದಲ್ಲಿ ಕೊಳ್ಳೇಗಾಲ ಶಾಸಕ ಎನ್. ಮಹೇಶ್, ಗುಂಡ್ಲುಪೇಟೆ ಶಾಸಕ ನಿರಂಜನ್, ನಗರಸಭೆ ಸದಸ್ಯರಾದ ಕವಿತಾ, ಪವಿತ್ರ, ರಾಮಕೃಷ್ಣ, ಬಿಜೆಪಿ ಮುಖಂಡರಾದ ಮಾಂಬಳ್ಳಿ ನಂಜುಂಡಸ್ವಾಮಿ,
ತಹಸೀಲ್ದಾರ್ ಮಂಜುಳಾ, ತಾಲ್ಲೂಕು ಪಂಚಾಯಿತಿ ಇ ಒ ಮಹೇಶ್, ಕೆ.ಎಸ್. ಆರ್. ಟಿ. ಸಿ. ವ್ಯವಸ್ಥಾಪಕ ಮುತ್ತುರಾಜು ಉಪಸ್ಥಿತರಿದ್ದರು.
ಹಾಗೂ ಇನ್ನಿತರರು ಇದ್ದರು

0 Comments