Ticker

6/recent/ticker-posts

Ad Code

Responsive Advertisement

ಅಂಬೇಡ್ಕರ್ ಸಮುದಾಯ ಭವನದ ಕಾಮಗಾರಿ ತೀರ ಕಳಪೆ ಗುಣಮಟ್ಟದಲ್ಲಿ ಅವೈಜ್ಞಾನಿಕ

ಕೊಳ್ಳೇಗಾಲ ಸುದ್ದಿ : ತರಾತುರಿಯಲ್ಲಿ ನಡೆದ ಸಮುದಾಯ ಭವನದ ಉದ್ಘಾಟನೆ, ತಾಲ್ಲೂಕಿನ ಸತ್ತೇಗಾಲ ಗ್ರಾಮದಲ್ಲಿ 68 ಲಕ್ಷ ಅನುದಾನದಲ್ಲಿ ನಿರ್ಮಾಣವಾಗಿರುವ ಡಾ. ಅಂಬೇಡ್ಕರ್ ಸಮುದಾಯ ಭವನದ ಕಾಮಗಾರಿ ತೀರ ಕಳಪೆ ಗುಣಮಟ್ಟದಲ್ಲಿ ಅವೈಜ್ಞಾನಿಕವಾಗಿ ನಡೆದಿದೆ ಎನ್ನಲಾಗಿದೆ,

ಸತ್ತೇಗಾಲ ಗ್ರಾಮದಲ್ಲಿ ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರದಿಂದ 68 ಲಕ್ಷ ಅನುದಾನ ಬಿಡುಗಡೆಯಾಗಿದ್ದು

ಇದೆ ಗ್ರಾಮದ ಗುತ್ತಿಗೆದಾರ ಸಿದ್ದರಾಜು ಎಂಬುವವರು ಸಮುದಾಯ ಭವನ ನಿರ್ಮಾಣದ ಕಾಮಗಾರಿಯನ್ನು ವಹಿಸಿಕೊಂಡಿದ್ದು

ಗ್ರಾಮದ ಹೊರಗೆ ಇರುವ ಕೊಳಚೆ  ನೀರು ತುಂಬುಕೊಳ್ಳುವ  ಕೆರೆಯಲ್ಲಿ ಅವೈಜ್ಞಾನಿಕವಾಗಿ ಸಮುದಾಯ ಭವನ ನಿರ್ಮಾಣ ಮಾಡಿದ್ದು

ಕಾಮಗಾರಿ ತೀರ ಕಳಪೆಯಾಗಿದೆ ಅಲ್ಲದೆ ಚಿಕ್ಕದಾದರೂ ಸಮುದಾಯ ಭವನವನ್ನು ಕಟ್ಟಿಸಿ ಸಮುದಾಯ ಭವನದ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ,

ಸಮುದಾಯ ಭವನ ಉದ್ಘಾಟನೆಗೆ ಶಾಸಕರು ಆಗಮಿಸುತ್ತಿದ್ದಂತೆ ಗ್ರಾಮದ ಕೆಲವು ಮುಖಂಡರು ಯುವಕರು ಸಮುದಾಯ ಭವನ ನಿರ್ಮಾಣವನ್ನು ಕಳಪೆಯಾಗಿ ನಡೆಸಲಾಗಿದೆ, ಹಾಗೂ ಮಲೆ ಬಂದಾಗ ಕೊಳಚೆ ನೀರು ತುಂಬಿಕೊಂಡು ಕಲುಷಿತ ವಾತಾವರಣ ನಿರ್ಮಾಣವಾಗುವಂತ ಕೆರೆಯ ಒಳಗೆ ಡಾ. ಅಂಬೇಡ್ಕರ್ ಸಮುದಾಯ ಭವನವನ್ನು ಒಂದು ವ್ಯವಸ್ಥೆ ಇಲ್ಲದೆ ಬೇಕಾಬಿಟ್ಟಿಯಾಗಿ ನಿರ್ಮಾಣ ಮಾಡಲಾಗಿದೆ,

ಸಮುದಾಯಭವನದಲ್ಲಿ ಇಂದು ಶೌಚಾಲಯ ಇಲ್ಲ, ಅಥವಾ ಯಾವುದೆ ಮೂಲಭೂತ ಸೌಲಭ್ಯಗಳು ಇಲ್ಲದಂತೆ ಕಳಪೆಯಾಗಿ ನಿರ್ಮಾಣ ಮಾಡಿ ಸಮುದಾಯ ಭವನದ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಸಾರ್ವಜನಿಕರು ಹಾಗೂ ಗ್ರಾಮದ ಕಾಂಗ್ರೆಸ್ ಮುಖಂಡರೊಬ್ಬರೂ ಆಕ್ರೋಶ ವ್ಯಕ್ತಪಡಿಸಿದ್ದಾರೆ,

ಸಮುದಾಯ ಭವನ ತೀರ ಕಳಪೆಯಾಗಿ ನಿರ್ಮಾಣಗೊಂಡಿದ್ದು ಶಾಸಕರು ಇದರ ಬಗ್ಗೆ ಯಾವುದೇ ರೀತಿ ಪರಿಶೀಲನೆ ನಡೆಸದೆ ಚುನಾವಣೆ ಹತ್ತಿರವಾಗುತ್ತಿರು ಕಾರಣ ತರಾತುರಿಯಲ್ಲಿ ಸಮುದಾಯ ಭವನವನ್ನು ಉದ್ಘಾಟನೆ ಮಾಡುತ್ತಿದ್ದಾರೆ, ಇದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ,

ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸಮುದಾಯ ಭವನದ ಕಳಪೆ ಕಾಮಗಾರಿಯನ್ನು ಪರಿಶೀಲನೆ ನಡೆಸಿ ಕಾಮಗಾರಿ ನಿರ್ಮಿಸಿದ ಗುತ್ತಿಗೆದಾರರು ಹಾಗೂ ಇಲಾಖೆಯ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕು,

ಒಬ್ಬ ಮಹಾನಾಯಕ ವಿಶ್ವಜ್ಞಾನಿ ಅಂಬೇಡ್ಕರ್ ರವರ ಸಮುದಾಯ ಭವನ ಕಾಮಗಾರಿ ಕಳಪೆಯಾಗಿದ್ದು ಮಳೆ ಬಂದ ಸಂದರ್ಭದಲ್ಲಿ ಕೊಳಚೆ ನೀರು ತುಂಬಿಕೊಂಡು ಅಪಹಾಸ್ಯಕ್ಕೀಡು  ಮಾಡುವ ಸನ್ನಿವೇಶಗಳು ಬರಬಹುದು,

ಆದ್ದರಿಂದ ಸಮುದಾಯ ಭವನ ಕಾಮಗಾರಿಯನ್ನು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಗ್ರಾಮದ ಹಿರಿಯ ಮುಖಂಡರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ,

Post a Comment

0 Comments

Ad Code

Responsive Advertisement