Ticker

6/recent/ticker-posts

Ad Code

Responsive Advertisement

ಮಾ.4ರಂದು ಕು.ಮೇಧಾವಿನಿ ವರಖೇಡಿರವರ ನೃತ್ಯ ಪ್ರದರ್ಶನ ‘ಭಾರತ ನೃತ್ಯಂ’ ದೈವಿಕ ನೃತ್ಯ

ಬೆಂಗಳೂರಿನ ಅಭಿನವ ಡ್ಯಾನ್ಸ್ ಕಂಪನಿಯ ಕಲಾತ್ಮಕ ನಿರ್ದೇಶಕ ದಂಪತಿಗಳು ಗುರು ಶ್ರೀಮತಿ ನಿರುಪಮ ರಾಜೇಂದ್ರ ಮತ್ತು ಶ್ರೀ ಟಿ.ಡಿ.ರಾಜೇಂದ್ರ ರವರ ಶಿಷ್ಯೆ ಕು.ಮೇಧಾವಿನಿ ವರಖೇಡಿರವರ ನೃತ್ಯ ಪ್ರದರ್ಶನ ‘ಭಾರತ ನೃತ್ಯಂ’ ದೈವಿಕ ನೃತ್ಯವನ್ನು ಇದೇ ಮಾರ್ಚ್ 4 ಶನಿವಾರ ಸಂಜೆ 6.00 ಗಂಟೆಗೆ ನಗರದ ಕನಕಪುರ ರಸ್ತೆಯ ಕೋಣನಕುಂಟೆಯ ಪ್ರೆಸ್ಟೀಜ್ ಶ್ರೀಹರಿ ಖೋಡೆ ಸೆಂಟರ್ ಫಾರ್ ರ‍್ಫರ್ಮಿಂಗ್ ರ‍್ಟ್÷್ಸನಲ್ಲಿ ಆಯೋಜಿಸಲಾಗಿದೆ. 

ಖ್ಯಾತ ಸಂಸ್ಕೃತ ವಿದ್ವಾಂಸ ಶತಾವಧಾನಿ ಡಾ.ಆರ್.ಗಣೇಶ್ ಮತ್ತು ಸಂಗೀತ ಚೂಡಾಮಣಿ ಡಾ.ನಾಗವಲ್ಲಿ ನಾಗರಾಜ್ ಉಪಸ್ಥಿತಿಯಲ್ಲಿ ನವದೆಹಲಿಯ ಸಂಗೀತ ನಾಟಕ ಅಕಾಡೆಮಿಯ ಅಧ್ಯಕ್ಷೆ ಡಾ.ಸಂಧ್ಯಾ ಪುರೇಚ ಮುಖ್ಯ ಅತಿಥಿಗಳಾಗಿ ಭಾಗವಹಿಸುವ ಸಮಾರಂಭದಲ್ಲಿ ಖ್ಯಾತ ನೃತ್ಯಗಾರ್ತಿ ಶ್ರೀಮತಿ ರಮಾ ಭಾರಧ್ವಾಜ್ , ಸಂವಿತ್ ಸಂಶೋಧನಾ ಪ್ರತಿಷ್ಠಾನದ ನಿರ್ದೇಶಕ , ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಪ್ರೋ.ಮಲ್ಲೇಪುರಂ ಜಿ.ವೆಂಕಟೇಶ , ಸ್ಪೂರ್ತಿ ಸ್ಕೂಲ್ ಆಫ್ ಡ್ಯಾನ್ಸ್ನ ಗುರು ಶ್ರೀಮತಿ ಸುಮಾ ರಾಜೇಶ್ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ. 

ನಟುವಾಂಗದಲ್ಲಿ ಗುರು ಶ್ರೀಮತಿ ನಿರುಪಮ ರಾಜೇಂದ್ರ, ಗಾಯನದಲ್ಲಿ ವಿ|| ರಘುರಾಮ ಆರ್, ವೇಣುವಾದನದಲ್ಲಿ ವಿ||ಜಯರಾಮ್, ಮೃದಂಗ0ನಲ್ಲಿ ವಿ|| ಗುರುಮೂರ್ತಿ ,ವೀಣೆ: ವಿ|| ಗೋಪಾಲ್ , ಖಂಜಿರ , ವಿ||ಡಿ.ವಿ.ಪ್ರಸನ್ನ ಕುಮಾರ್ ಸಾಥ್ ನೀಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.  

ಭರವಸೆಯ ನೃತ್ಯಪಟು ಕು. ಮೇಧಾವಿನಿ ವರಖೇಡಿ

ಕು. ಮೇಧಾವಿನಿ ವರಖೇಡಿ ಓರ್ವ ಉತ್ತಮ ನೃತ್ಯಪಟು, ಸಂಸ್ಕೃತ ವಿದ್ವಾಂಸರು ಮತ್ತು ಶಿಕ್ಷಣ ತಜ್ಞರ ಕುಟುಂಬದಿAದ ಬಂದವರು, ನವದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಶ್ರೀನಿವಾಸ ವರಖೇಡಿಯವರ ಪುತ್ರಿ. ಬೆಂಗಳೂರಿನ ಅಭಿನವ ಡ್ಯಾನ್ಸ್ ಕಂಪನಿಯಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಗುರುಗಳಾದ ಶ್ರೀಮತಿ ನಿರುಪಮಾ ಮತ್ತು ಶ್ರೀ ಟಿ.ಡಿ.ರಾಜೇಂದ್ರ ಅವರ ಮಾರ್ಗದರ್ಶನದಲ್ಲಿ ಭರತನಾಟ್ಯ ಮತ್ತು ಕಥಕ್ ಕಲಿಯುತ್ತಿದ್ದಾರೆ. 

ಮೇಧಾವಿನಿ ತನ್ನ ಆರಂಭಿಕ ತರಬೇತಿಯನ್ನು ಸ್ಪೂರ್ತಿ ಸ್ಕೂಲ್ ಆಫ್ ಡ್ಯಾನ್ಸ್ನಲ್ಲಿ ಗುರು ಶ್ರೀಮತಿ ಸುಮಾ ರಾಜೇಶ್ ಅವರಲ್ಲಿ ಪಡೆದರು.  ಭರತನಾಟ್ಯದಲ್ಲಿ ಜೂನಿಯರ್ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ಗುರು ಶ್ರೀಮತಿ ನಿರುಪಮಾ ರಾಜೇಂದ್ರ ಅವರ ಸಮರ್ಥ ಮಾರ್ಗದರ್ಶನದಲ್ಲಿ ಮೇಧಾವಿನಿ ಅವರು ಡಾ. ಪದ್ಮಾ ಸುಬ್ರಹ್ಮಣ್ಯಂ ಅವರು ಪುನರುಜ್ಜೀವನಗೊಳಿಸಿದ ಮತ್ತು ಪುನರ್ನಿರ್ಮಿಸಿದ ನಾಟ್ಯಶಾಸ್ತçದ ಕರಣಗಳ ಬಗ್ಗೆ ತರಬೇತಿಯನ್ನು ಪಡೆದಿದ್ದಾರೆ

ಗುರು ಶ್ರೀಮತಿ ನಿರುಪಮಾ ರಾಜೇಂದ್ರ ಅವರು ಸಂಶೋಧಿಸಿ ವಿನ್ಯಾಸಗೊಳಿಸಿದ ದೇಶಿ ಮಾರ್ಗ ಅಡವು, 108 ಸೂಕ್ಷ್ಮವಾಗಿ ರಚಿಸಲಾದ ಹೊಸ ಚಲನೆಯ ಶಬ್ದಕೋಶದಲ್ಲಿ ತರಬೇತಿಯನ್ನೂ ಪಡೆದಿದ್ದಾರೆ. ಮೇಧಾವಿನಿ ಅವರು ಡ್ಯಾನ್ಸ್ ಕೊರಿಯೋಗ್ರಫಿ ಕೋರ್ಸ್ "ಎಮರ್ಜ್" ನಲ್ಲಿ ಭಾಗವಹಿಸಿ, ಇದು ಅವರ ಗುರುಗಳಿಂದ ಕ್ಯುರೇಟ್ ಮಾಡಲ್ಪಟ್ಟು ಅಲ್ಲಿ ಶ್ರೀಮತಿ ಕುಮುದಿನಿ ಲಖಿಯಾ ಮತ್ತು ನಹೀದ್ ಸಿದ್ದಿಕಿ ಅವರಂತಹ ಕಥಕ್ ಮಾಸ್ಟ್ರೋಗಳು ಸೇರಿದಂತೆ ಅನೇಕ ಕಲಾವಿದರೊಂದಿಗೆ ಸಂವಾದ ನಡೆಸಿದ್ದಾರೆ. ಅಭಿನವ ಡ್ಯಾನ್ಸ್ ಕಂಪನಿ ಆಯೋಜಿಸಿದ್ದ ಪಂಡಿತ್ ಬಿರ್ಜು ಮಹಾರಾಜ್, ಡಾ.ಪದ್ಮಾ ಸುಬ್ರಹ್ಮಣ್ಯಂ ಅವರಂತಹ ದಿಗ್ಗಜರ  ಕಾರ್ಯಾಗಾರಗಳಲ್ಲಿಯೂ ಅವರು ಭಾಗವಹಿಸಿದ್ದಾರೆ.

ಮೇಧಾವಿನಿ ಅಭಿನವ ಡ್ಯಾನ್ಸ್ ಕಂಪನಿಯೊAದಿಗೆ ದೇಶಾದ್ಯಂತ ಹಲವಾರು ಉತ್ಸವಗಳಲ್ಲಿ ಪ್ರದರ್ಶನ ನೀಡಿದ್ದಾರೆ.ಮೇಧಾವಿನಿ ಅವರು ನೃತ್ಯಕ್ಷೇತ್ರದಲ್ಲೇ ವೃತ್ತಿಪರವಾಗಿ ತೊಡಗಿಸಿಕೊಳ್ಳಲಿದ್ದಾರೆ. ಕ್ರೆöÊಸ್ಟ್ ವಿಶ್ವವಿದ್ಯಾನಿಲಯದಿಂದ ಪ್ರದರ್ಶನ ಕಲೆಯಲ್ಲಿ ಸ್ನಾತಕ ಪದವಿಯನ್ನು ಪಡೆದು ಇತ್ತೀಚೆಗೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿರುತ್ತಾರೆ. 

Post a Comment

0 Comments

Ad Code

Responsive Advertisement