ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಅನುಗ್ರಹ ಆಶೀರ್ವಾದದೊಂದಿಗೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀಯುತ ರಾಜಾ. ಕೆ. ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ಶ್ರೀ ರಾಘವೇಂದ್ರ ಗುರುಸಾರ್ವಭೌಮರ 402ನೇ ಪಟ್ಟಾಭಿಷೇಕೋತ್ಸವ ಹಾಗೂ 428ನೇ ಜನ್ಮದಿನೋತ್ಸವದ ಅಂಗವಾಗಿ ಫೆಬ್ರುವರಿ 22 ರಿಂದ 26 ನೇ ತಾರೀಖಿನವರೆಗೆ ವಿಶೇಷ ಉತ್ಸವ ಪೂಜೆಗಳು ನಡೆಯಲಿದೆ.
22ರಂದು ಶ್ರೀ ರಾಘವೇಂದ್ರ ಸ್ವಾಮಿಗಳ ಪಟ್ಟಾಭಿಷೇಕದ ಮಹೋತ್ಸವದ ಅಂಗವಾಗಿ ಮುಳಬಾಗಿಲು ಶ್ರೀ ಶ್ರೀಪಾದರಾಜ ಮಠಾಧೀಶರಾದ ಪರಮಪೂಜ್ಯ1008 ಶ್ರೀ ಶ್ರೀ ಸುಜಯನಿಧಿ ತೀರ್ಥ ಶ್ರೀಪಾದರ ಅಮೃತ ಹಸ್ತದಿಂದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಸಹಸ್ರ ಕಳಶ ಕ್ಷೀರಾಭಿಷೇಕವು ನೆರವೇರಲಿದೆ. ನಂತರ ಶ್ರೀ ರಾಘವೇಂದ್ರ ಸ್ವಾಮಿಗಳ ಪಾದುಕೆಯನ್ನು ಸ್ವರ್ಣ ಸಿಂಹಾಸನದಲ್ಲಿ ಇರಿಸಿ "ಪುಷ್ಪ-ವೃಷ್ಟಿ"ಯೊಂದಿಗೆ ಪಟ್ಟಾಭಿಷೇಕ ಮಹೋತ್ಸವವೂ ನೆರವೇರಲಿದೆ. ಪ್ರತಿ ನಿತ್ಯ ಸಂಜೆ 5:00 ಗಂಟೆಗೆ ಶ್ರೀಸುಧೀಂದ್ರ ದೇಸಾಯಿಯವರ ಸಹಕಾರದೊಂದಿಗೆ ವಿವಿಧ ಭಜನಾ ಮಂಡಳಿಗಳಿಂದ - ಶ್ರೀ ಹರಿ ಭಜನೆ-ಶ್ರೀರುಕ್ಮಿಣಿಶ ಭಜನಾ ಮಂಡಳಿ, ಶ್ರೀ ಭಕ್ತಿ ಸುಧಾ ಭಜನಾ ಮಂಡಳಿ, ಶ್ರೀ ಗೋವರ್ಧನ ಭಜನಾ ಮಂಡಳಿ, ದೇವಗಿರಿ ಶ್ರೀ ಲಕ್ಷ್ಮಿಕಾಂತ ಭಜನಾ ಮಂಡಳಿ, ಶ್ರೀ ಪೂರ್ಣಪ್ರಜ್ಞ ಭಜನಾ ಮಂಡಳಿ ಸದಸ್ಯರುಗಳಿಂದ ಶ್ರೀ ಹರಿ ಭಜನೆ ನಡೆಯಲಿದೆ. ಪ್ರತಿದಿನ ಸಂಜೆ 6-00 ಗಂಟೆಗೆ ಪಂಡಿತರಾದ ವಿದ್ವಾನ್ ಪ್ರಭಂಜನಾಚಾರ್ಯ ಪುರೋಹಿತ್ ಇವರಿಂದ "ಶ್ರೀ ರಾಘವೇಂದ್ರ ವಿಜಯ"ದ ಬಗ್ಗೆ ಪ್ರವಚನವು ನಡೆಯಲಿದೆ. 22-2-2023 ರಂದು ಸಂಜೆ 7-ಕ್ಕೆ ವಿದ್ವಾನ್ ಶ್ರೀ ಎಂ.ಬಿ. ಹರಿಹರನ್ ಮತ್ತು ವಿದ್ವಾನ್ ಶ್ರೀ ಎಸ್. ಅಶೋಕ್ (ಬೆಂಗಳೂರು ಸಹೋದರರು) ಇವರಿಂದ "ದಾಸವಾಣಿ" ಕಾರ್ಯಕ್ರಮವೂ ನೆರವೇರಲಿದೆ.
23-2-22 ಗುರುವಾರ ಸಂಜೆ ವಿ|| ಶ್ರೀನಿಧಿ ಆಚಾರ್ಯರಿಂದ "ಕರ್ನಾಟಕ ಶಾಸ್ತ್ರೀಯ ಸಂಗೀತ" ಕಾರ್ಯಕ್ರಮವು ನೆರವೇರಲಿದೆ.
ಪ್ರತಿನಿತ್ಯದಲ್ಲಿ- ಬೆಳಗ್ಗೆ 8- ಕ್ಕೆ ಶ್ರೀ ಸರಸ್ವತಿ ಹೋಮ, ಶ್ರೀ ರಾಘವೇಂದ್ರ ಅಷ್ಟಾಕ್ಷರ ಹೋಮ, ಶ್ರೀ ಪವಮಾನ ಹೋಮ , ಶ್ರೀ ಧನ್ವಂತರಿ ಹೋಮ, ಶ್ರೀ ಶ್ರೀಸೂಕ್ತ ಹೋಮಗಳು, ಉತ್ಸವಗಳು , ಶ್ರೀ ಹರಿಭಜನೆ, ಪ್ರವಚನ, ಕಾರ್ಯಕ್ರಮವೂ ಪ್ರತಿನಿತ್ಯ ನೆರವೇರಲಿದೆ, 26-2-2023 ಭಾನುವಾರದಂದು ಶ್ರೀ ರಾಘವೇಂದ್ರ ಸ್ವಾಮಿಗಳ "ಜನ್ಮದಿನೋತ್ಸವ"ದ ಅಂಗವಾಗಿ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಉಡುಪಿಯ ಅಧೋಕ್ಷಜ ಪೇಜಾವರ ಮಠಾಧೀಶರಾದ ಪರಮಪೂಜ್ಯ 1008 ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಅಮೃತ ಹಸ್ತದಿಂದ ಶ್ರೀ ಗುರು ರಾಯರ ಬೃಂದಾವನಕ್ಕೆ ಬೆಳಗ್ಗೆ 11ಕ್ಕೆ "ಲಕ್ಷ ಪುಷ್ಪಾರ್ಚನೆ" ಕಾರ್ಯಕ್ರಮವು ನೆರವೇರಲಿದೆ.
ತದನಂತರ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಇರುತ್ತದೆ. ಸಂಜೆ ಶ್ರೀ ಹರಿ ಭಜನೆ, ಹಾಗೂ ಪ್ರವಚನದ ಮಂಗಳ, ವಿಶೇಷವಾಗಿ 26-2-2023 ಸಂಜೆ 7:00 ಕ್ಕೆ ಸುಮಾರು 60 ಜನರಿಂದ "ಸಮೂಹ ವೀಣಾ ವಾದ್ಯ ಗಾಯನ" ಪೆನಕೊಂಡ ಅಭಿಷ್ಟ ಪಾಂಡುರಂಗಿ - ಶ್ರೀಹರಿ ವೃಂದದಿಂದ ನಡೆಯಲಿದೆ, ಈ ವಿಶೇಷ ದಿನಗಳಲ್ಲಿ ಉತ್ಸವ ಸೇವೆ ನೆರವೇರಲಿದೆ ಎಂದು ಶ್ರೀ ನಂದಕಿಶೋರ್ ಆಚಾರ್ಯರು ತಿಳಿಸಿದ್ದಾರೆ.
ಶ್ರೀ ಗುರು ರಾಯರ ಸೇವೆಯಲ್ಲಿ ಭಾಗವಹಿಸುವ ಭಕ್ತರು ಈ ವಾಟ್ಸಾಪ್ 9449133929 ನಂಬರ್ ಆನ್ಲೈನ್ ಮುಖಾಂತರ ಸೇವೆ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ-08022443962-9945429129-9449133929 -8660349906- ಸಂಪರ್ಕಿಸಬಹುದು.

0 Comments