Ticker

6/recent/ticker-posts

Ad Code

Responsive Advertisement

ದೇಶ ಅಭಿವೃದ್ದಿ, ಉತ್ತಮ ಸಮಾಜ ನಿರ್ಮಾಣಕ್ಕೆ ಉಚಿತ ಶಿಕ್ಷಣ ಮುಖ್ಯ-ಸ್ವಾಮಿ ರಾಕುಂಜೀ

ಬೆಂಗಳೂರುಗ್ರಾಮಾಂತರ ದೇವನಹಳ್ಳಿ, ತರಹುಣಸೆಯಲ್ಲಿ ಆಚಾರ್ಯ ಶ್ರೀ ರಾಕುಂ ಶಾಲೆಯ 20ನೇ ಶಾಲೆಯ ವಾರ್ಷಿಕೋತ್ಸವ ಮತ್ತು ಮಕ್ಕಳ ಸಾಂಸ್ಕೃತಿಕ ಕಲಾ ಉತ್ಸವ ಸಮಾರಂಭ.


ದೀಪಾ ಬೆಳಗಿಸಿ ಕಾರ್ಯಕ್ರಮವನ್ನು ಶಾಲೆಯ ಸಂಸ್ಥಾಪಕರಾದ ಸ್ವಾಮಿ ರಾಕುಂಜೀರವರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಕಂಠಯ್ಯರವರು, ಸಮಾಜ ಸೇವಕರಾದ ವರುಣ್ ರವರು ಉದ್ಘಾಟನೆ ಮಾಡಿದರು.

ಮಕ್ಕಳ ಸಾಂಸ್ಕೃತಿಕ ಉತ್ಸವದಲ್ಲಿ ಭರತನಾಟ್ಯ, ಯಕ್ಷಗಾನ, ಕರಾಟೆ, ಯೋಗ ಮತ್ತು ರಾಕ್ ಡ್ಯಾನ್ಸ್, ಪಂಜಾಬಿ ನೃತ್ಯ, ನಾಟಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಿದ್ದರು.

*ಸ್ವಾಮಿ ರಾಕುಂಜೀರವರು ಮಾತನಾಡಿ ಮಕ್ಕಳಿಗೆ ಮೊದಲು ಹಸಿವು ನೀಗಿಸಬೇಕು ನಂತರ ಉಡಲು ಬಟ್ಟೆ, ಶಿಕ್ಷಣ ಮೂರು ಏಕಾ ಕಾಲದಲ್ಲಿ ಸಮಾನವಾಗಿದ್ದಾರೆ ಮಾತ್ರ ಶಿಕ್ಷಣದಲ್ಲಿ ಬದಲಾವಣೆ ತರಲು ಸಾಧ್ಯ ಈ ನಿಟ್ಟಿನಲ್ಲಿ ಕಳೆದ 20ವರ್ಷಗಳಿಂದ ಆಚಾರ್ಯ ಶ್ರೀ ರಾಕುಂ ಶಾಲೆ ದಿಟ್ಟ ಹೆಜ್ಜೆ ಇಟ್ಟಿದೆ.

ಸರ್ಕಾರದ ಯಾವುದೇ ಸಹಾಯವಿಲ್ಲದೇ ಸಾರ್ವಜನಿಕರ ಸಹಕಾರದಿಂದ ಉಚಿತ ಶಾಲೆ ಬಹಳ ಯಶ್ವಸಿಯಾಗಿ ಸಾಗುತ್ತಿದೆ.

ನಮ್ಮ ಶಾಲೆಯಲ್ಲಿ  ರಾಜಾನುಕುಂಟೆ  ಸುತ್ತಮುತ್ತಲ ಗ್ರಾಮೀಣ ಮಕ್ಕಳಿಗೆ ಉಚಿತ ಶಿಕ್ಷಣ, ಬಸ್ ವ್ಯವಸ್ಥೆ, ಸಮವಸ್ತ್ರ, ಪಠ್ಯಪುಸ್ತಕವನ್ನು ನೀಡುತ್ತಿದೆ.

ವಿದ್ಯಾವಂತರಾದರೆ ಸಮಾಜದಲ್ಲಿ ಗೌರವ ಸಿಗುತ್ತದೆ ಮತ್ತು ದೇಶದ ಉತ್ತಮ ಅಭಿವೃದ್ದಿ ಜೊತೆಯಲ್ಲಿ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಅದರಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಉಚಿತ ಶಿಕ್ಷಣ ಶಾಲೆ ಆರಂಭಿಸಲಾಗಿದೆ.

ಕಳೆದ 20ವರ್ಷದ ನಮ್ಮ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಮಕ್ಕಳು ಕೇಂದ್ರ, ರಾಜ್ಯ ಸರ್ಕಾರದ ಮತ್ತು ಪ್ರಮುಖ ಖಾಸಗಿ ಕಂಪನಿಗಳಲ್ಲಿ  ಡೊಡ್ಡ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಗ್ರಾಮೀಣ ಭಾಗದ ಮಕ್ಕಳು ಪ್ರತಿಭಾವಂತರು ಅವರ ಪ್ರತಿಭೆಗೆ ಅವಕಾಶ ಸಿಗಬೇಕು ಎಂದು ಹೇಳಿದರು.

ಶಾಲಾ ಮಕ್ಕಳ ಸಾಂಸ್ಕೃತಿಕ ಕಲಾ ಉತ್ಸವದಲ್ಲಿ ಶಿಕ್ಷಣ ಮತ್ತು ತಂದೆ,ತಾಯಿ ಮತ್ತು ಗುರುಗಳ ಕುರಿತು ನಾಟಕ, ನೃತ್ಯ ಪ್ರದರ್ಶನ ಮಕ್ಕಳು ನಡೆಸಿದರು.

ದೇವನಹಳ್ಳಿಯ ಗ್ರಾಮ ಪಂಚಾಯಿತಿ ಸದಸ್ಯರು, ಮಾಜಿ ಸದಸ್ಯರು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.

Post a Comment

0 Comments

Ad Code

Responsive Advertisement