ವರದಿ : ಚಿಕ್ಕತೇಕಹಳ್ಳಿ ಡಿ ಶಿವಕುಮಾರ್
,ಶಿಡ್ಲಘಟ್ಟ: ಕೊನೆಗೂ ಹೊರಬಿದ್ದ ಕಾಂಗ್ರೇಸ್ ಟಿಕೆಟ್ ಆಕಾಂಕ್ಷಿ. ಈ ಬಾರಿ ಕಾಂಗ್ರೇಸ್ ನಲ್ಲಿ ಗೊಂದಲಗಳಿಂದ ಕೂಡಿದ್ದ ಕಾಂಗ್ರೆಸ್ ಕಾರ್ಯಕರ್ತರಿಗೆ ಶುಭಸುದ್ದಿ. ಹಾಲಿ ಶಾಸಕ ವಿ.ಮುನಿಯಪ್ಪ 2023 ರ ಚುನಾವಣಾ ಅಖಾಡದಿಂದ ಹಿಂದೆ ಸರಿಯುತ್ತಿದ್ದು, ಕ್ಷೇತ್ರದಿಂದ ಡಿ ಸಿ ಸಿ ಬ್ಯಾಂಕ್ ನ ಜಿಲ್ಲಾಧ್ಯಕ್ಷ ಬ್ಯಾಲಹಳ್ಳಿ ಗೋವಿದ ಗೌಡರು ಸ್ಪರ್ದಿಸಲಿದ್ದಾರೆ ಎಂದು ತಿಳಿಸಿದರು. ಕ್ಷೇತ್ರದ ಹೊರಹೊಲಯದ ವಿಜಯಪುರ ಕೋಲಾರ ಬೈಪಾಸ್ ರಸ್ತೆಯ ಖಾಸಗಿ ಸ್ಥಳದಲ್ಲಿ ಕಾರ್ಯಕರ್ತರು ಹಾಗೂ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು. ನಾನು ಈ ಬಾರಿ ಚುನಾವಣೆಗೆ ಸ್ಪರ್ದಿಸುವುದಿಲ್ಲ, ಎಲ್ಲರಿಗೂ ಒಳ್ಳೆಯದಾಗಲಿ ಎಂಬ ಉದ್ದೇಶದಿಂದ ನಿರ್ಧಾರಕ್ಕೆ ಬಂದಿದ್ದೇನೆ. ಮಗ ಶಶಿಧರ್ ಹಾಗು ಹೈಕಾಮಾಂಡ್ ನ್ನು ವಿಶ್ವಾಸಕ್ಕೆ ಪಡೆದುಕೊಂಡು ಗೋವಿಂದ ಗೌಡರ ಹೆಸರನ್ನು ಸೂಚಿಸುತ್ತಿದ್ದೇನೆ ಎಂದರು.
ಹಿಂದಿನ ಚುನಾವಣೆಯಲ್ಲಿ ಕಷ್ಟದಲ್ಲಿ ಇದ್ದಂತಹ ಪರಿಸ್ಥಿತಿಯಲ್ಲಿ ಕ್ಷೇತ್ರದಾದ್ಯಂತ ಶಶಿಧರ್ ಪ್ರವಾಸ ಮಾಡಿ ನನ್ನ ಗೆಲುವಿಗೆ ಹಗಲಿರುಳು ಶ್ರಮಿಸಿದ್ದರಿಂದ ಗೆಲುವು ಸಾಧ್ಯವಾಯಿತು. ಈಗಲೂ ಕೂಡ ನಾನು ಹಾಗು ಶಶಿಧರ್ ಕ್ಷೇತ್ರದ ಕಾರ್ಯಕರ್ತರೊಂದಿಗೆ ಅಭ್ಯರ್ಥಿಯ ಗೆಲುವಿಗಾಗಿ ಕೆಲಸ ಮಾಡುತ್ತೇವೆ ಎಂದು ಹೇಳುವ ಮೂಲಕ ಟಿಕೆಟ್ ಗೊಂದಲಕ್ಕೆ ತೆರೆ ಎಳೆದರು.
ರಾಜ್ಯದ ವರಿಷ್ಠರು ಹಾಗೂ ನನ್ನ ತಂದೆ ಸಮಾನರಾದ ವಿ. ಮುನಿಯಪ್ಪ ಅವರು ಚುನಾವಣೆಯಿಂದ ಹಿಂದೆ ಸರಿಯುವ ನಿರ್ಧಾರ ಮಾಡಿದಾಗ ಅವರ ಮಗ ಶಶಿಧರ್ ಸ್ಪರ್ದಿಸಬೇಕು ಎಂದು ಕೋರಿದ್ದರು. ಅವರು ಅಭ್ಯರ್ಥಿ ಸ್ಥಾನವನ್ನು ನಿರಾಕರಿಸಿ ನನ್ನನ್ನು ಅಭ್ಯರ್ಥಿಯಾಗಿ ಸ್ಪರ್ಧಿಸಲು ಸೂಚಿಸಿದರು. ನಾನು ಮುಖಂಡನೂ ಅಲ್ಲ, ನಾಯಕನು ಅಲ್ಲ, ಒಬ್ಬ ಸಾಮಾನ್ಯ ಕಾರ್ಯಕರ್ತ ವಿ. ಮುನಿಯಪ್ಪನವರ ಹೆಸರು ಉಳಿಸುವುದಷ್ಟೇ ನನ್ನ ಕರ್ತವ್ಯ, ಜವಾಬ್ದಾರಿ ಎಂದು ಬ್ಯಾಲಹಳ್ಳಿ ಗೋವಿಂದೇಗೌಡ ತಿಳಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು, ಚುನಾಯಿತ ಪ್ರತಿನಿಧಿಗಳು, ಮುಖಂಡರು ಮತ್ತಿತರಿದ್ದರು.


0 Comments