ತ್ಯಾಗರಾಜನಗರದ 'ವಜ್ರಕ್ಷೇತ್ರ' ಶ್ರೀ ಅಭಯ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ಫೆಬ್ರವರಿ 12, ಭಾನುವಾರದಂದು ಸ್ವಾತಿ ನಕ್ಷತ್ರ ದಿನದ ಪ್ರಯುಕ್ತ ಅಂದು ಬೆಳಗ್ಗೆ ಸ್ವಾಮಿಗೆ 108 ಲೀಟರ್ ಕ್ಷೀರಾಭಿಷೇಕ, ವಿಶೇಷ ಅಲಂಕಾರ, ಚಾಮರಾಜಪೇಟೆಯ ಶ್ರೀ ರಾಮ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ಮಹಾಮಂಗಳಾರತಿ, ತೀರ್ಥ-ಪ್ರಸಾದ ವಿತರಣೆಯಾಯಿತು.
ಸಂಜೆಯ ಗಾಯನ ಕಾರ್ಯಕ್ರಮದಲ್ಲಿ ಪ್ರಸಿದ್ಧ ಹರಿದಾಸರುಗಳು ಶ್ರೀ ನರಸಿಂಹಸ್ವಾಮಿಯ ಮೇಲೆ ರಚಿಸಿದ ಹಲವು ಕೃತಿಗಳನ್ನು ಕು|| ಸುಶ್ರಾವ್ಯ ಆಚಾರ್ಯ ಅವರು ಹೆಸರಿಗೆ ತಕ್ಕಂತೆ ಬಹಳ ಸುಶ್ರಾವ್ಯವಾಗಿ ಹಾಡಿದರು. ನಂತರ ಅಷ್ಟಾವಧಾನ, ಮಹಾಮಂಗಳಾರತಿ, ತೀರ್ಥ-ಪ್ರಸಾದ ವಿತರಣೆಯಾಯಿತು. ಇಂದು ಜರುಗಿದ ವಿಶೇಷ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಸ್ವಾಮಿ ಕೃಪೆಗೆ ಪಾತ್ರರಾದರು ಎಂದು ದೇವಸ್ಥಾನದ ಗೌರವ ಕಾರ್ಯದರ್ಶಿಗಳಾದ ಶ್ರೀ ನರಹರಿ ಆಚಾರ್ ಅವರು ತಿಳಿಸಿದರು.

0 Comments