ಕೊಳ್ಳೇಗಾಲ : ಮಾರ್ಚ್ 1 ರಂದು ಬಿಜೆಪಿ ಜನಸಂಕಲ್ಪ ಯಾತ್ರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡ ರವರು ಕ್ಷೇತ್ರಕ್ಕೆ ಆಗಮಿಸುತ್ತಿರುವ ಕುರಿತು
ಕೊಳ್ಳೇಗಾಲ ಶಾಸಕ ಎನ್. ಮಹೇಶ್ ರವರು ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರನ್ನುದ್ದೇಶಿಸಿ ಶಾಸಕರು ಮಾತನಾಡಿ ರಾಜ್ಯಾಧ್ಯಂತ ಮುಖ್ಯಮಂತ್ರಿಗಳಾದ ಬಸವರಾಜು ಬೊಮ್ಮಾಯಿಯವರ ನೇತೃತ್ವದಲ್ಲಿ ಬಿಜೆಪಿಯ ಜನಸಂಕಲ್ಪ ರಥಯಾತ್ರೆ ನಾಲ್ಕು ಭಾಗಗಳಾಗಿ ನಡೆಯುತ್ತಿದೆ, ನಾಲ್ಕು ರಥ ಯಾತ್ರೆಗಳು ರಾಜ್ಯದ ಮೂಲ ಮೂಲೆಗೂ ಸಂಚರಿಸಿಕಾರ್ಯಕ್ರಮ ಯಶಸ್ವಿಯಾಗಿ ನಡೆಸಲಿದೆ, ಅದರಂತೆ ಮಾರ್ಚ್ 1 ರಂದು ಚಾಮರಾಜನಗರ ಜಿಲ್ಲೆಯ ಗಡಿ ಹನೂರು ಕ್ಷೇತ್ರದ ಮಲೆ ಮಹದೇಶ್ವರ ಬೆಟ್ಟದಲ್ಲಿ ಜನ ಸಂಕಲ್ಪ ರಥಯಾತ್ರೆಯನ್ನು ಉದ್ಘಾಟಿಸಿ ಚಾಲನೆ ನೀಡಲಾಗುವುದು,
ಈ ಕಾರ್ಯಕ್ರಮಕ್ಕೆ ರಾಷ್ಟ್ರೀಯ ಅಧ್ಯಕ್ಷರಾದ ಜೆ. ಪಿ ನಡ್ಡ ರವರು ಹಾಗೂ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ರವರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನವರು ಹಾಗೂ ಸಾರಿಗೆ ಸಚಿವರಾದ ಶ್ರೀರಾಮುಲು, ಲೋಕೋಪಯೋಗಿ ಸಚಿವರಾದ ಬಿ.ಸಿ. ಪಾಟೀಲ್ ರವರುಗಳು ಆಗಮಿಸಿ ಬಿಜೆಪಿ ಜನಸಂಕಲ್ಪ ರಥ ಯಾತ್ರೆಗೆ ಚಾಲನೆ ಕೊಡಲಿದ್ದಾರೆ, ರಾಷ್ಟ್ರೀಯ ಅಧ್ಯಕ್ಷರಾದ ಜೆ. ಪಿ. ನಡ್ಡ ಹಾಗೂ ಎಲ್ಲಾ ಗಣ್ಯರು ಮಹದೇಶ್ವರ ಬೆಟ್ಟದ ಸೋಲಿಗ ಸಮುದಾಯದ ಮುಖಂಡರೊಡನೆ ಸಂವಾದ ಕಾರ್ಯಕ್ರಮವನ್ನು ನಡೆಸಿ, ನಂತರ ಮಹದೇಶ್ವರ ಬೆಟ್ಟದಿಂದ ಹೊರಟು ಹನೂರಿಗೆ ಆಗಮಿಸಿ ಹನೂರಿನಲ್ಲಿ ಬಹಿರಂಗ ವೇದಿಕೆ ಕಾರ್ಯಕ್ರಮವನ್ನು ಮುಗಿಸಿಕೊಂಡು ಹನೂರಿನಿಂದ ಬೈಕ್ ರ್ಯಲಿ ಮುಖಾಂತರ
ಮದ್ಯಾಹ್ನ 3:30 ಗಂಟೆಗೆ ಕೊಳ್ಳೇಗಾಲಕ್ಕೆ ಆಗಮಿಸುತ್ತಾರೆ,
ಪಟ್ಟಣದ ಎಂ.ಜಿ.ಎಸ್. ವಿ. ಕಾಲೇಜು ಮೈದಾನದಲ್ಲಿ ವೇದಿಕ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ, ಈ ಕಾರ್ಯಕ್ರಮಕ್ಕೆ ಸುಮಾರು 25 ಸಾವಿರ ಜನ ಸಂಖ್ಯೆಯನ್ನು ಸೇರಿಸಿ ದೊಡ್ಡ ಮಟ್ಟದ್ದಲ್ಲಿ ಕಾರ್ಯಕ್ರಮವನ್ನು ನಡೆಸಬೇಕು ಎಂದು ತೀರ್ಮಾನಿಸಲಾಗಿದೆ, ಬಿಜೆಪಿ ಜನಸಂಕಲ್ಪ ಯಾತ್ರೆ ಉದ್ದೇಶ
ಬಿಜೆಪಿ ಸರ್ಕಾರ ರಾಜ್ಯದ ಜನತೆಗೆ ಕೊಟ್ಟಿರುವ ಯೋಜನೆಗಳ ಬಗ್ಗೆ ಸವಲತ್ತುಗಳ ಬಗ್ಗೆ ಜನರಿಗೆ ಮನದಟ್ಟು ಮಾಡಿ,ಬಿಜೆಪಿಯ ಮುಂದಿನ ಜನಪರ ಯೋಜನೆಗಳನ್ನ ಮತದಾರರಿಗೆ ತಿಳಿಸಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರುವುದಕ್ಕೆ ಜನಸಂಕಲ್ಪ ಯಾತ್ರೆಯನ್ನು ನಡೆಸಲಾಗುತ್ತಿದೆ, ಎಂದರು,
ಈ ಸಂದರ್ಭದಲ್ಲಿ ಚಾಮರಾಜನಗರ ನಗರ ಜಿಲ್ಲಾ ವಕ್ತಾರರಾದ ಬಸರಾಜಪ್ಪ, ಮಂಡಲ ಅಧ್ಯಕ್ಷರಾದ ರಮೇಶ್ ಮುರಾರಿ, ನಗರಸಭೆ ಸದಸ್ಯ ಕವಿತಾ, ಕಿನಕಳ್ಳಿ ರಾಚಯ್ಯ ಹಾಗೂ ಇನ್ನಿತರರು ಇದ್ದರು,

0 Comments