Ticker

6/recent/ticker-posts

Ad Code

Responsive Advertisement

ಬೆಂಗಳೂರು ವಿಶ್ವವಿದ್ಯಾಲಯದ ಬಿ.ಎಸ್.ಡಬ್ಲ್ಯೂ ಪದವಿ ಪಠ್ಯಕ್ಕೆ

ಸಂಸ್ಕೃತಿ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿರವರು ‘ಸಂತ ಶಿಶುನಾಳ ಶರೀಫರ’ ಕುರಿತು ಬರೆದ ಲೇಖನ ಆಯ್ಕೆ

ಬೆಂಗಳೂರು ವಿಶ್ವವಿದ್ಯಾಲಯ ಪ್ರಸಾರಂಗದ ಪ್ರಕಟಣೆಯ ಬಿ.ಎಸ್. ಡಬ್ಲ್ಯೂ ಪದವಿ ಮೂರನೇ ಸೆಮಿಸ್ಟರ್ ಸಮಾಜ ಕಾರ್ಯ ಕನ್ನಡ-೩ ಭಾಷಾ ಪಠ್ಯ ಪುಸ್ತಕದಲ್ಲಿ (ವೆಬ್ ಆವೃತ್ತಿ) ಸೌಹಾರ್ದತೆ ವಿಭಾಗದಡಿ ಸಂಸ್ಕೃತಿ ಚಿಂತಕ , ಅಂಕಣಕಾರ ಡಾ.ಗುರುರಾಜ ಪೋಶೆಟ್ಟಿಹಳ್ಳಿ ರವರ ‘ಶಿಶುನಾಳದ ವಿಶ್ವಸಂತ ಷರೀಫ’ ಲೇಖನವು ಪ್ರಕಟವಾಗಿದೆ.

ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ವಿ. ಮುನಿಯಪ್ಪ ರವರು ಪ್ರಧಾನ ಸಂಪಾದಕರಾಗಿರುವ ಪಠ್ಯ ಪುಸ್ತಕ ರಚನಾ ಸಮಿತಿ ಕಲ್ಪನ್ಯೂಸ್‌ದಲ್ಲಿ ಬರೆದಿದ್ದ 'ಸಾಮರಸ್ಯ ಸಾಮ್ರಾಜ್ಯ ನಿರ್ಮಿಸಿದ ಪ್ರಾತಃಸ್ಮರಣೀಯ ಸಂತ ಶಿಶುನಾಳ ಶರೀಫ' ಇವರ ಲೇಖನವನ್ನು ಆಯ್ಕೆ ಮಾಡಿದೆ.

ಭಾರತ ಸರ್ಕಾರದ ೨೦೨೦ ರ ಹೊಸ ರಾಷ್ಟಿಯ ಶಿಕ್ಷಣ ನೀತಿಯ ಅಡಿಯಲ್ಲಿ ಸಿದ್ದಗೊಂಡಿರುವ ಪಠ್ಯಕ್ರಮದಲ್ಲಿ ಸಾಹಿತ್ಯ ಸಂಸ್ಕೃತಿ ಮತ್ತು  ರಾಷ್ಟಿಯತೆಯ ಮನೋಭಾವ ಇಂದಿನ ಶಿಕ್ಷಣ ವ್ಯವಸ್ಥೆಯು ಕಟ್ಟಿಕೊಡಬೇಕೆಂಬ ನಿಟ್ಟಿನಲ್ಲಿ  ಸಂವಹನ ಕೌಶಲ್ಯದ ಜೊತೆಗೆ ನಿರ್ದಿಷ್ಟ ಫಲಿತಗಳ ಸಮತೋಲನ ಸಾಧಿಸುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ ಎಂದು ಸಂಚಾಲಕರಾದ ಡಾ. ರಾಮಲಿಂಗಪ್ಪ ಟಿ ಬೇಗೂರು ತಿಳಿಸಿದ್ದಾರೆ.

‘ವಿವಿಧ ಧರ್ಮಗಳ ಸಂಗಮ ಕ್ಷೇತ್ರವಾಗಿರುವ ಭಾರತ ದೇಶದಲ್ಲಿ ಪರಸ್ಪರ ಬಾಂಧವ್ಯವೊAದೇ ಪ್ರಗತಿ ಮಂತ್ರ, ಶಿಶುನಾಳ ಷರೀಫರಂತಹ ಸಂತರ ಈ ನಾಡಿಗೆ ಇಂದಿಗೂ ಪ್ರಸ್ತುತವಾಗುವುದು ಅವರು ಸಾರಿದ , ಬೆಳೆಸಿದ, ಬೆಳಗಿದ ಆಶಿಸಿದ ತತ್ವಗಳಿಂದ. 

ಐಕ್ಯತೆ ಹಾಗು ಸೌಹಾರ್ದವನ್ನು ಬೆಳಸಿಕೊಳ್ಳಲು ಅವರ ವೈಚಾರಿಕ ತತ್ವಪದಗಳು ನೀಡುವ ಕರೆ ಮಾರ್ದನಿಗೊಳ್ಳಲು ಶರೀಫಜ್ಜ ನಮಗೆ ಸದಾ ಸ್ಮರಣೀರಾಗುತ್ತಾರೆ’ ಎಂದು ಡಾ. ಗುರುರಾಜ ಪೋಶೆಟ್ಟಿಹಳ್ಳಿರವರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. 

‘ಪರಂಪರೆಯ ಪ್ರವಕ್ತಾರ :  ಡಾ. ಗುರುರಾಜ ಪೋಶೆಟ್ಟಿಹಳ್ಳಿ ’ - ಕಿರು ಪರಿಚಯ 

ಅಂಕಣಕಾರ, ಸಂಘಟಕ, ಪ್ರಕಾಶಕ ಹೀಗೆ ಹಲವು ಆಯಾಮಗಳಿಂದ ಕನ್ನಡ ಸಾಂಸ್ಕೃತಿಕ ವಲಯದಲ್ಲಿ ಇತ್ತೀಚಿನ ದಿನಗಳಲ್ಲಿ ಚಿರಪರಿಚಿತ ಹೆಸರು. ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ರೂವಾರಿ , ಸ್ನೇಹಪರ ಸಜ್ಜನ , ಬೆಂಗಳೂರು ನಿವಾಸಿ .

ಎರಡು ದಶಕಗಳಿಂದ ಬರವಣಿಗೆಯಲ್ಲಿ ತೊಡಗಿಸಿಕೊಂಡು ನಾಡಿನ ಉದ್ದಗಲಕ್ಕೂ ಪ್ರಕಟವಾಗುವ ಪತ್ರಿಕೆಗಳಲ್ಲಿ ಧಾರ್ಮಿಕ -ಆಧ್ಯಾತ್ಮಿಕ ಬರಹಗಳಿಂದ ಜಿಜ್ಞಾಸು ಓದುಗ ವೃಂದಕ್ಕೆ ಸರಳ ಲಲಿತ ಶೈಲಿಯಲ್ಲಿ ಮನಗಾಣಿಸುತ್ತಿರುವ ಸ್ವತಂತ್ರ ಮಾಧ್ಯಮ ವ್ಯಕ್ತಿ.

ವಂದೇ ಗುರು ಪರಂಪರಾಮ್, ಸತ್ಸಂಗ ಸಂಪದ , ದಾಸ ಪಂಥ ಮೊದಲಾದ ಸದಭಿರುಚಿಯ ಸಾಹಿತ್ಯ ಪ್ರಕಟಣೆಯ ಮೂಲಕ ಕ್ರಿಯಾಶೀಲರಾಗಿರುವ ಇವರ ಸಾಂಸ್ಕೃತಿಕ ಪರಿಚಾರಿಕೆಯನ್ನು ಗುರುತಿಸಿ ನೀಡಿದ ಗೌರವಗಳಲ್ಲಿ ಟಿ.ವಿ ಕಪಾಲಿ ಶಾಸ್ತಿç ಪ್ರಶಸ್ತಿ , ಟಿಟಿಡಿಯ ಪುರಂದರ ಅನುಗ್ರಹ ಪ್ರಶಸ್ತಿ ಪ್ರಮುಖವಾದವು.





Post a Comment

0 Comments

Ad Code

Responsive Advertisement