Ticker

6/recent/ticker-posts

Ad Code

Responsive Advertisement

ಅಗ್ನಿ ಅವಘಡಗಳಿಂದ ಅರಣ್ಯವನ್ನು ರಕ್ಷಿಸಲು ಅರಣ್ಯ ಇಲಾಖೆ ಸಜ್ಜು

ಕೊಳ್ಳೇಗಾಲ ಕಾವೇರಿ ವನ್ಯಜೀವಿ ವಿಭಾಗ, ಕಾವೇರಿ ವನ್ಯಜೀವಿ ಉಪ ವಿಭಾಗ ಹನೂರು

ಕೊತ್ತನೂರು ವನ್ಯಜೀವಿ ವಲಯಗಳಲ್ಲಿ  ಅಗ್ನಿ ಅವಘಡದಿಂದ ಅರಣ್ಯವನ್ನು ಹಾಗೂ ಅರಣ್ಯ ಜೀವಿಗಳನ್ನು ರಕ್ಷಿಸಲು ಕೊತ್ತನೂರು ಅರಣ್ಯ ವನ್ಯಜೀವಿ ವಲಯ   ಅಧಿಕಾರಿಗಳು ಸಜ್ಜಾಗಿ ಕಾಡಿಗೆ ಬೆಂಕಿ ಹಚ್ಚಿದ್ದ ವ್ಯಕ್ತಿಯೊಬ್ಬನನ್ನ  ಬಂಧಿಸಿ ಶಿಕ್ಷೆಗೆ ಗುರಿ ಪಡಿಸಿದ್ದಾರೆ 

ಕಾಡ್ಗಿಚ್ಚು, ಹಬ್ಬದಂತೆ ತಡೆಗಟ್ಟಲು ಈಗಾಗಲೇ ಕ್ರಮಗಳನ್ನು ಕೈಗೊಳ್ಳಲಾಗಿದ್ದು ಯಾರಾದರೂ ದಾರಿ ಹೋಕರು ಅಥವಾ ದನಗಾಯಿಗಳು ಕಾಡಿಗೆ ಬೆಂಕಿ ಹಚ್ಚುವುದನ್ನ ಪತ್ತೆ ಹಚ್ಚಲು ಡ್ರೋನ್ ಕ್ಯಾಮರಾ ಹಾಗೂ ವೈಜ್ಞಾನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿವುದರ ಮೂಲಕ ಆರೋಪಿಗಳನ್ನು ಪತ್ತೆ ಹಚ್ಚಿ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಜಾಗೃತಿಯನ್ನು ಮೂಡಿಸುತ್ತಿದ್ದಾರೆ, 

ಬೆಂಕಿ ಕೆನ್ನಾಲಿಗೆಯಿಂದ ಅರಣ್ಯವನ್ನು ಹಾಗೂ ಅರಣ್ಯ ಜೀವಿಗಳನ್ನು ರಕ್ಷಿಸುವುದು ನಮ್ಮೆಲ್ಲರ ಹೊಣೆಯಾಗಿರುವುದರಿಂದ ಅರಣ್ಯ ಮತ್ತು ವನ್ಯಜೀವಿಗಳನ್ನು ಅಗ್ನಿ ಅವಘಡದಿಂದ ರಕ್ಷಿಸಲು ಸಾರ್ವಜನಿಕರ ಸಹಕಾರ   ಅಗತ್ಯವಾಗಿದ್ದು  ಅರಣ್ಯಗಳಲ್ಲಿ ಬೆಂಕಿ ಅನಾಹುತ ಸಂಭವಿಸದಂತೆ   ಕಾಡಂಚಿನ ಗ್ರಾಮಗಳ ಸ್ಥಳೀಯರು  ಜಾಗೃತಿ ವಹಿಸಬೇಕು, ಅನಗತ್ಯವಾಗಿ ಕಾಡಿಗೆ ಬೆಂಕಿ ಹಚ್ಚಿದ್ದಾರೆ ಶಿಕ್ಷೆಗೆ ಗುರಿ ಮಾಡಲಾಗುತ್ತದೆ

ಬೇಸಿಗೆ ಸಮೀಪಸುತ್ತಿದ್ದಂತೆ ಅರಣ್ಯ ಇಲಾಖೆ ಅಗ್ನಿ ವಾಚರ್ ಗಳು ಹಾಗೂ ಸಿಬ್ಬಂದಿಗಳು ಅರಣ್ಯದ ಸುತ್ತಮುತ್ತ  ಕ್ಯಾಮರಾಗಳನ್ನು ಅಳವಡಿಸಿದ್ದು ವೈಜ್ಞಾನಿಕ ತಂತ್ರಜ್ಞಾನಗಳ ಮೂಲಕ ತಪಾಸಣೆ ಕೈಗೊಂಡಿದ್ದಾರೆ,

ಯಾರಾದರೂ ವ್ಯಕ್ತಿಗಳು ಅರಣ್ಯ ಭಾಗಗಳಲ್ಲಿ ಬೆಂಕಿ ಹಚ್ಚುವುದು ಕಂಡು ಬಂದರೆ ಅಂತಹವರನ್ನು ಪತ್ತೆ ಹಚ್ಚಿ ಶಿಕ್ಷೆಗೆ ಗುರಿ ಪಡಿಸಲು ಕಠಿಣ ಕ್ರಮಗಳನ್ನು ಕೈಗೊಂಡಿದ್ದಾರೆ,

ಬಂಡೀಪುರ ಅರಣ್ಯಕ್ಕೆ ಬೆಂಕಿ ಬಿದ್ದು ನೂರಾರು ವನ್ಯಜೀವಿಗಳು ಹಾಗೂ ಪ್ರಾಣಿ ಪಕ್ಷಿಗಳು ಅಮಾನುಷವಾಗಿ ಸಾವಿಗೀಡಾಗಿದ್ದ ಹೃದಯವಿದ್ರಾವಕ ದೃಶ್ಯದಿಂದ ಎಚ್ಚತ್ತ ಅರಣ್ಯ ಇಲಾಖೆ  ಅಧಿಕಾರಿಗಳು  ಬೆಂಕಿ ಕೆನ್ನಾಲಿಗೆಯಿಂದ ಅರಣ್ಯ ಹಾಗೂ ವನ್ಯಜೀವಿಗಳನ್ನು ರಕ್ಷಿಸಲು ಕಠಿಣ ಕ್ರಮಗಳನ್ನು ಕೈಗೊಂಡು ಕಾರ್ಯಪ್ರವೃತ್ತರಾಗಿದ್ದಾರೆ 

ಕೊಳ್ಳೇಗಾಲ ಕಾವೇರಿ ವನ್ಯಜೀವಿ ವಿಭಾಗ, ಅಧಿಕಾರಿಗಳು ಮತ್ತು ಹನೂರು ಕಾವೇರಿ ವನ್ಯಜೀವಿ ಉಪ ವಿಭಾಗ  ಅಧಿಕಾರಿಗಳ ಮಾರ್ಗದರ್ಶನದಂತೆ ಕೊತ್ತನೂರು, ವನ್ಯಜೀವಿ ವಲಯ ಅಧಿಕಾರಿಗಳು ಅಕ್ಕಪಕ್ಕದ ಗ್ರಾಮಗಳ ಸುತ್ತಮುತ್ತಲಿನ ಅರಣ್ಯಗಳಲ್ಲಿ ಅಗ್ನಿ ದುರಂತ ಸಂಭವಿಸದಂತೆ ತಡೆಗಟ್ಟಲು ಕ್ರಮ ವಹಿಸಿ ಡ್ರೋನ್ ಕ್ಯಾಮರಾ ಹಾಗೂ ವೈಜ್ಞಾನಿಕ ತಂತ್ರಜ್ಞಾನಗಳ ಮೂಲಕ ಕಾರ್ಯ ಚಟುವಟಿಕೆ ನಡೆಸುತ್ತಿದ್ದಾರೆ, ಸಾರ್ವಜನಿಕರು ಎಚ್ಚರಿಕೆ ವಹಿಸುವುದು ಸೂಕ್ತವಾಗಿದ್ದು, ಅಗ್ನಿ ದುರಂತದಿಂದ ಅರಣ್ಯ ಸಂಪತ್ತನ್ನ ಉಳಿಸಿ ಬೆಳೆಸಲು ಸಾರ್ವಜನಿಕರು ಅಧಿಕಾರಿಗಳ ಜೊತೆ ಸಹಕರಿಸಬೇಕಾಗಿದೆ,

Post a Comment

0 Comments

Ad Code

Responsive Advertisement