Ticker

6/recent/ticker-posts

Ad Code

Responsive Advertisement

ಭದ್ರಾ ಮೇಲ್ದಂಡೆ ಯೋಜನೆಗೆ ರೂ.5300 ಕೋಟಿ: ಶ್ಲಾಘನೀಯ ಎಂದ ಬೈರತಿ

ಬೆಂಗಳೂರು (01-02-2023):- ಮಧ್ಯ ಕರ್ನಾಟಕದ ಬರಪೀಡಿತ ತಾಲ್ಲೂಕುಗಳಿಗೆ ನೀರಾವರಿ ಸೌಲಭ್ಯವನ್ನು ಸಮರ್ಪಕವಾಗಿ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ ರೂ.5300 ಕೋಟಿಗಳನ್ನು ನೀಡಿರುವುದು ಶ್ಲಾಘನೀಯ ಎಂದು ನಗರಾಭಿವೃದ್ಧಿ ಸಚಿವ  ಬಿ.ಎ. ಬಸವರಾಜ (ಬೈರತಿ) ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ 2023-24ನೇ ಆಯವ್ಯಯದಲ್ಲಿ ಕರ್ನಾಟಕದ ಅಭಿವೃದ್ಧಿಯನ್ನು ದೃಷ್ಠಿಯಲ್ಲಿಟ್ಟುಕೊಂಡಿರುವುದು ನಮ್ಮ ಡಬಲ್ ಇಂಜಿನ್ ಸರ್ಕಾರದ ಕೊಡುಗೆ ಎಂದು ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ (ಬೈರತಿ) ಬಣ್ಣಿಸಿದ್ದಾರೆ.

ನಮ್ಮ ನೆಚ್ಚಿನ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೀ ನೇತೃತ್ವದ ಎನ್.ಡಿ.ಎ. ಸರ್ಕಾರ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಪರಿಕಲ್ಪನೆಯಲ್ಲಿ ಕೇಂದ್ರದ ವಿತ್ತ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಸರ್ವರ ಅಭಿವೃದ್ಧಿಗೆ ಪೂರಕವಾಗಿಯೇ ಬಜೆಟ್ ಮಂಡಿಸಿದ್ದಾರೆ ಎಂದು ಹೇಳಿದ್ದಾರೆ.

ದೇಶದಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗೆ 10 ಲಕ್ಷ ಕೋಟಿ ರೂಪಾಯಿಗಳನ್ನು ಮೀಸಲಿರಿಸಿದ್ದಾರೆ. ದೇಶದಲ್ಲಿ ಉದ್ಯೋಗ ಸೃಷ್ಠಿಗೆ 10 ಲಕ್ಷ ಕೋಟಿ ರೂಪಾಯಿಗಳನ್ನು ಘೋಶಿಸಿರುವುದು ಉದ್ಯೋಗ ಸಮಸ್ಯೆ ನಿವಾರಣೆಗೆ ನಾಂದಿಯಾಗಿದೆ ಎಂದಿದ್ದಾರೆ.

ದೇಶದ ರೈಲ್ವೆ ಯೋಜನೆಗಳಿಗೆ ಮತ್ತಷ್ಟು ವೇಗವನ್ನು ನೀಡಲು ಹಾಗೂ ಉನ್ನತೀಕರಿಸಲು ರೂ. 2.40 ಲಕ್ಷ ಕೋಟಿಗಳನ್ನು ನೀಡಿರುವುದು ದೇಶದಲ್ಲಿ ರೈಲ್ವೆ ಸಾರಿಗೆ, ಸಂಪರ್ಕ ಮತ್ತು ಸೌಲಭ್ಯಗಳು ಹೆಚ್ಚಾಗಿ, ಅದು ಜನರಿಗೆ ಅನುಕೂಲವಾಗುತ್ತದೆ.

ದೇಶದಲ್ಲಿ 2 ವರ್ಷಗಳಿಂದ ಕೋವಿಡ್-19 ಸೋಂಕಿನಿಂದ ಬಡವರು, ಶ್ರಮಿಕರು, ಮಧ್ಯಮ ವರ್ಗದವರು ತತ್ತರಿಸಿ ಹೋಗಿದ್ದರು. ಇವರ ಜೀವನ ಮಟ್ಟದ ಉತ್ತೇಜನಕ್ಕಾಗಿ ಜಾರಿಗೆ ತಂದಿದ್ದ ಉಚಿತ ಆಹಾರ ಧಾನ್ಯ ವಿತರಣೆಯನ್ನು ಮತ್ತೊಂದು ವರ್ಷಕ್ಕೆ  ವಿಸ್ತರಣೆ ಮಾಡಿರುವುದು ಆ ವರ್ಗದ ಜನರಿಗೆ ಆಹಾರದ ಕೊರತೆಯನ್ನು ನೀಗಿಸಿದಂತಾಗುತ್ತದೆ. 


ಆಹಾರ ಧಾನ್ಯಗಳ ಉತ್ಫಾದನೆಯಲ್ಲಿ ಮತ್ತಷ್ಟು ಬಲಿಷ್ಟವಾಗಿ ನಾವುಗಳು ಬೆಳೆಯಬೇಕು ಎಂಬ ಉದ್ದೇಶದಿಂದ ಹಸಿರು ಕ್ರಾಂತಿಗೆ “ಪ್ರಧಾನ ಮಂತ್ರಿ ಪ್ರಣಾಮ್ ಯೋಜನೆ” ಎಂದು ಘೋಷಿಸಿರುವುದು ದೇಶ ಸ್ವಾವಲಂಭಿಯಾಗುವುದಕ್ಕೆ ಅನುಕೂಲವಾಗುತ್ತದೆ.

ಸೇವಾ ಸುಂಕವನ್ನು 37% ನಿಂದ 27% ಗೆ ಕಡಿತ ಮಾಡಿರುವುದರಿಂದ ಉತ್ಫಾಧನೆ ವಲಯದಲ್ಲಿ ಮತ್ತು ಗ್ರಾಹಕ ವಲಯದಲ್ಲಿ ವ್ಯಾಪಾರ ವ್ಯವಹಾರಕ್ಕೆ ಹೆಚ್ಚಿನ ರೀತಿಯಲ್ಲಿ ಉತ್ತೇಜಿಸಿದಂತಾಗುತ್ತದೆ ಎಂದರು.

ದೇಶದಲ್ಲಿ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗಿ ಮಂಡಿಸಿರುವ ಈ ಬಜೆಟ್ ಮಹತ್ತರವಾದ ಬದಲಾವಣೆಗಳನ್ನು ತರಲು ಸಾಧ್ಯವಾಗುತ್ತದೆ ಎನ್ನುವುದು ನನ್ನ ಅನಿಸಿಕೆ.

Post a Comment

0 Comments

Ad Code

Responsive Advertisement