Ticker

6/recent/ticker-posts

Ad Code

Responsive Advertisement

ಕೊಳ್ಳೇಗಾಲ: ವಿಜೃಂಭಣೆಯ ಐತಿಹಾಸಿಕ ಪರಂಪರೆ ಸಾರುವ ಚಿಕ್ಕಲ್ಲೂರು ಜಾತ್ರೆ

ಕೊಳ್ಳೇಗಾಲ ಸುದ್ದಿ : ಐತಿಹಾಸಿಕ ಪರಂಪರೆ ಸಾರುವ ಚಿಕ್ಕಲ್ಲೂರು ಜಾತ್ರೆ ಲಕ್ಷಾಂತರ ಭಕ್ತರ ನಡುವೇ ವಿಜೃಂಭಣೆಯಿಂದ ನಡೆಯಿತು,

ಬೊಪ್ಪೆಗೌಡನಪುರದ ಪೀಠಾಧಿಕಾರಿಗಳಾದ ಬಿ. ಎಸ್. ಜ್ಞಾನನಂದ ಚನ್ನರಾಜೇಅರಸ್ ರವರ ಅಗ್ನಿ ಸ್ಪರ್ಶದ  ಮೊದಲ ದಿನದ ಚಂದ್ರಮಂಡಲೋತ್ಸವದಿಂದ ಪ್ರಾರಂಭವಾಗಿ,  ಎರಡನೇ ದಿನ ಹುಲಿವಾಹನೋತ್ಸವ, ಮೂರನೇ ದಿನ ಗಜವಾಹನೋತ್ಸವ ನಾಲ್ಕನೇ ದಿನ ರುದ್ರಾಕ್ಷಿ ಮಂಟಪೋತ್ಸವ,( ಪಂಕ್ತಿ ಸೇವೆ ) ಐದನೇ ದಿನ ಮುತ್ತುರಾಯನ ಸೇವೆ, ಚಿಕ್ಕಲ್ಲೂರು ಸಮೀಪದ ಕಾವೇರಿ ನದಿಯ ಎಡ ಭಾಗದಲ್ಲಿರುವ ಮುತ್ತತ್ತಿಯಲ್ಲಿ ನೆಲೆಸಿರುವ ಮುತ್ತೆತ್ತರಾಯನಿಗೆ ನಡೆಯುವ ಕೊನೆಯ ಸೇವೆ,

ಚಿಕ್ಕಲ್ಲೂರು ಮಠದ ಆಡಳಿತಾಧಿಕಾರಿಯಾದ ಸನ್ಮತಿ ಚನ್ನರಾಜೇ ಅರಸ್ ರವರ ಉಸ್ತುವಾರಿಯಲ್ಲಿ  ನಡೆದ ಜಾತ್ರೆ ಉತ್ಸವಗಳು, ಸೇವಾ ಕಾರ್ಯಗಳು ಯಾವುದೆ ರೀತಿಯ ಅಡ್ಡಿ ಇಲ್ಲದೆ ನಿರ್ವಿಜ್ಞಾವಾಗಿ ಜರುಗಿದೆ,

ಜಾತ್ರೆಗೆ ಆಗಮಿಸುವ ಲಕ್ಷಾಂತರ ಭಕ್ತರಿಗೆ ನೀರಿನ ಸೌಲಭ್ಯ , ಸ್ನಾನ ಗೃಹಗಳ ಸೌಲಭ್ಯ , ವಿದ್ಯುತ್ ಸೌಲಭ್ಯ, ಹಾಗೂ ಭಕ್ತರಿಗಾಗಿ ಮಠದ ದಾಸೋಹದಲ್ಲಿ ಊಟದ ವ್ಯವಸ್ಥೆಗಳನ್ನು ಮಾಡಲಾಗಿತ್ತು,

ನೂರಾರು ಊರುಗಳಿಂದ ಬರವ ಭಕ್ತರು ದೇವರ ದರ್ಶನ ಪಡೆದು   ಪಾರಂಪರಿಕ ಧಾರ್ಮಿಕ ಸೇವಾ ಕಾರ್ಯಗಳನ್ನು ನಡೆಸಿದರು, 

ನಾಲ್ಕನೇ ದಿನ ನಡೆಯುವ ಪಂಕ್ತಿ ಸೇವೆಗೆ ಹಲವು ಅಡ್ಡಿ ಆತಂಕಗಳು ಇದ್ದರು ಕೂಡ ಯಾರೋ ಒಬ್ಬ ಧಾರ್ಮಿಕ ವಿರೋಧಿ ಸನ್ಯಾಸಿಯ ಕುತಂತ್ರ ದಿಂದ ಸಾವಿರಾರು ವರ್ಷಗಳ ಪಂಕ್ತಿಸೇವೆಗೆ ತೊಡಕಾಗಿತ್ತು ಆದರೂ ಸಹ ಭಕ್ತರು ದೇವರಿಗೆ ತಮ್ಮ ಹರಕೆಯನ್ನು ಸಮಾರ್ಪಿಸಲೇ ಬೇಕು ಎಂಬ ದೃಢ ನಿರ್ಧಾರ ಮಾಡಿ ಪೊಲೀಸ್ ರ ಕಣ್ಣು ತಪ್ಪಿಸಿ ಮೇಕೆ, ಕುರಿ, ಕೋಳಿಗಳನ್ನ ಕಡಿದು ತಮ್ಮ ಹರಕೆಯನ್ನು ಅರ್ಪಿಸಿ ಪಂಕ್ತಿ ಸೇವೆ ಭೋಜನವನ್ನು ಸವಿದು, ದೇವರ ಸಹಕಾರದಿಂದ ಸಾವಿರಾರು ವರ್ಷಗಳಿಂದ ನಡೆದು ಕೊಂಡು ಬಂದಿರುವ ಧಾರ್ಮಿಕ ಆಚರಣೆಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂಬುದನ್ನ ಭಕ್ತರು ಸಾಬೀತು ಪಡಿಸಿದ್ದಾರೆ ಎನ್ನಲಾಗಿದೆ,

ಸುಮಾರು 12 ನೇ ಶತಮಾನದಿಂದಲು ಆದಿವಾಸಿ ಸಮುದಾಯಗಳ ಮೂಲ ದೇಶಿಯ ಧಾರ್ಮಿಕ ಆಚರಣೆ ಹಬ್ಬ ಇದಾಗಿದ್ದು, ನೂರಾರು ವರ್ಷಗಳಿಂದ ಯಾವುದೇ ಅಡ್ಡಿ ಆತಂಕಗಳು ಇಲ್ಲದೆ, ಜಾತ್ರೆ ಮಹೋತ್ಸವ ಪಂಕ್ತಿ ಸೇವೆಗಳು ನಡೆದುಕೊಂಡು ಬಂದಿರುತ್ತದೆ, ಇದು ಲಕ್ಷಾಂತರ ಭಕ್ತರ ನಂಬಿಕೆಯಾಗಿದೆ,

ಶ್ರೀ ಸಿದ್ದಪ್ಪಾಜಿ ಮತ್ತು ಮಂಟೀಸ್ವಾಮಿಯವರಿಗೆ ಪ್ರಿಯವಾದ  ಪಂಕ್ತಿ ಸೇವೆ, ಅಂದರೆ ಬಂಗಿಸೇವೆ ಅಂತಾನೂ ಕರೆಯಲಾಗುತ್ತದೆ,

ಐದು ದಿನಗಳು ನಡೆದ ಜಾತ್ರೆಯಲ್ಲಿ ನೂರಾರು ಊರುಗಳಿಂದ ಆಗಮಿಸಿದ್ದ ಭಕ್ತರು ನೀಲಗಾರರು ಕ್ಷೇತ್ರದ ದೇವಾಲಯದ ಸುತ್ತಮುತ್ತಲಿನ ಸ್ಥಳಗಳಲ್ಲಿ ಬಿಡಾರಗಳನ್ನು ಹೂಡಿ ತಂಗಿದ್ದು ದೇವರ ಉತ್ಸವಗಳಲ್ಲಿ ಭಾಗಿಯಾಗಿ ಉತ್ಸವಗಳನ್ನು ಕಣ್ತುಂಬಿಕೊಂಡರು.

ಅಲ್ಲದೆ ದೈವ ಸ್ವರೂಪಿಗಳೆಂದೆ ನಂಬಿರುವ ಮಠದ ಬುದ್ದಿಯವರನ್ನು ದರ್ಶನ ಮಾಡಿ ಆಶೀರ್ವಾದಗಳನ್ನು ಪಡೆದರು,

ಹರಕೆ ಹೊತ್ತು ಬರುವ ಭಕ್ತರು ಮುಡಿ ಮಾಡಿಸುವುದು ವಾಡಿಕೆಯಾಗಿದ್ದು, ಕ್ಷೇತ್ರದ ಹಳೆ ಮಠದ ಸಮೀಪ ಮುಡಿ ಕಟ್ಟೆಯನ್ನು ನಿರ್ಮಿಸಲಾಗಿದ್ದು ಹರಕೆ ಹೊತ್ತ ಭಕ್ತರು ಮುಡಿಯನ್ನು ತೆಗೆಸಿ ಹರಕೆಯನ್ನು ಒಪ್ಪಿಸಿದರು,

ಹಲವಾರು ಜಾನಪದ ತಂಬೂರು ಕಲಾವಿದರು ಜಾತ್ರೆಗೆ ಆಗಮಿಸಿದ್ದು ನೀಲಗಾರರ ಪರಂಪರೆಯ ಕಥೆಗಳನ್ನು ಹಾಡಿ ಭಕ್ತರಿಗೆ ಮನರಂಜನೆಯನ್ನು ನೀಡಿದರು,

ಕೋವಿಡ್ 19 ಬಿಕ್ಕಟ್ಟಿ ನಿಂದಲೊ ಅಥವಾ ಕೆಲವರ ಸ್ವಾರ್ಥದ ಕುತಂತ್ರದಿಂದಲೋ ಮೂರು ವರ್ಷಗಳ ನಂತರ ವಿಜೃಂಭಣೆಯಿಂದ ಜಾತ್ರ ಮಹೋತ್ಸವವನ್ನು ಕಣ್ತುಂಬಿಕೊಂಡ ಭಕ್ತರು ದೇವರ ಆಶೀರ್ವಾದವನ್ನು ಇನ್ನು ಮುಂದೆ ಯಾವುದೇ ಅಡ್ಡಿ ಆತಂಕಗಳು ಇಲ್ಲದೆ ಚಿಕ್ಕಲ್ಲೂರು ಜಾತ್ರೆ ಪ್ರತಿ ವರ್ಷವೂ ನಡೆಯಲಿ ನಾವೆಲ್ಲರೂ ಸಂಪ್ರದಾಯಿಕ ಆಚರಣೆಗಳನ್ನ ನಿರಾಳವಾಗಿ ಆಚರಿಸುವಂತಾಗಲಿ ಎಂದು ದೇವರಲ್ಲಿ ಬೇಡಿಕೊಂಡರು,

Post a Comment

0 Comments

Ad Code

Responsive Advertisement