ಬೆಂಗಳೂರು : ನಗರದ ವೈಯಾಲಿಕಾವಲ್ ನಲ್ಲಿರುವ ತೆಲುಗು ವಿಜ್ಞಾನ ಸಮಿತಿಯ ವತಿಯಿಂದ 2023 ರ ನೂತನ ಆಂಗ್ಲ ವರ್ಷಾರಂಭದಲ್ಲಿ ಎಪ್ಪತ್ತನೆಯ ವರ್ಷದ ಸಂಕ್ರಾಂತಿ ಉತ್ಸವಾಲು ಸಂಭ್ರಮಾಚರಣೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ತೆಲುಗು ಸಾಂಪ್ರದಾಯದಂತೆ ಹೂವಿನ ರಂಗೋಲಿ ಹಾಸಿನ ಮೇಲೆ ಸಿಂಗರಿಸಲಾಗಿದ್ದ ಕಬ್ಬುಗಳ ಮಂಟಪದ ನಡುವೆ ಬಣ್ಣದ ಚಿತ್ತಾರ ಬಿಡಿಸಿದ ಹೂಜಿಗಳಲ್ಲಿ ಸಾಂಕೇತಿಕವಾಗಿ ದವಸಧಾನ್ಯಗಳಿಗೆ ಪೂಜೆ ಸಲ್ಲಿಸಿ ಸಂಭ್ರಮಿಸುವ ಉತ್ಸವವನ್ನು ಸಮಿತಿಯ ಅಧ್ಯಕ್ಷರಾಗಿರುವ ಡಾ. ಎ.ರಾಧಾಕೃಷ್ಣ ರಾಜುರವರು ಜ್ಯೋತಿಯನ್ನು ಬೆಳಗಿಸುವ ಮೂಲಕ ಉದ್ಘಾಟಿಸಿದ ಸಂದರ್ಭದಲ್ಲಿ, ರಾಧಾಕುಮಾರಿರವರು ಗಂಗಿರೆದ್ದು (ಕೋಲೆ ಬಸವನಿಗೆ) ಪೂಜೆಯನ್ನು ನೆರವೇರಿಸಿದರು.
ಈ ವೇಳೆ ಉಪಾಧ್ಯಕ್ಷರುಗಳಾದ ಆದಿಕೇಶವನಾಯ್ಡು, ಗಂಗರಾಜು, ಕಾರ್ಯದರ್ಶಿ ಲಕ್ಷ್ಮೀ ರೆಡ್ಡಿ, ಜಂಟಿ ಕಾರ್ಯದರ್ಶಿ ಚಂದ್ರಮೋಹನ್, ಖಜಾಂಚಿ ವರದರಾಜು, ಸದಸ್ಯ ಕೃಷ್ಣಯ್ಯ ಮುಂತಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಹಿಳೆಯರು ಆಯೋಜಿಸಲಾಗಿದ್ದ ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿ ಚಿತ್ತಾಕರ್ಷಕ ರಂಗೋಲಿಗಳನ್ನು ಆವರಣದಲ್ಲಿ ಮೂಡಿಸಿದ್ದರು. ಅತ್ಯುತ್ತಮ ವಿನ್ಯಾಸದ ರಂಗೋಲಿಯನ್ನು ಬಿಡಿಸಿದ ಮಹಿಳೆಯರಿಗೆ ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು.



0 Comments