Ticker

6/recent/ticker-posts

Ad Code

Responsive Advertisement

ಕಾಂಗ್ರೆಸ್ ನಾಯಕ ಡಾ. ರಾಜೇಶ್ ಮನ್ನಾರ್ ಹುಟ್ಟು ಹಬ್ಬ ಸಂಭ್ರಮಾಚರಣೆಯ ವೇಳೆ ಕಾಂಗ್ರೆಸ್‌ ಕಹಳೆ

ಬೆಂಗಳೂರು :  ಮಲೇಶ್ವರಂ ಹಾಗೂ ಯಶವಂತಪುರ ಭಾಗಗಳಲ್ಲಿ 1980-90 ರ ದಶಕದಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖ ಮುಖಂಡರಾಗಿ, ಬೆಂಗಳೂರು ನಗರ ಪಾಲಿಕೆ ಸದಸ್ಯರಾಗಿ ಹೆಸರುವಾಸಿಯಾಗಿದ್ದ ದಿ. ಮನ್ನಾರ್ ನಾಯ್ಡು ರವರ ಪುತ್ರರು ಹಾಗೂ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರೂ ಸಮಾಜ ಸೇವಕರೂ ಆಗಿರುವ ಡಾ.ರಾಜೇಶ್ ಮನ್ನಾರ್ ನಾಯ್ಡುರವರ 52 ನೇ ಹುಟ್ಟು ಹಬ್ಬವನ್ನು ಯಶವಂತಪುರ ತ್ರಿವೇಣಿ ರಸ್ತೆಯಲ್ಲಿರುವ ಶ್ರೀ ಲಕ್ಷ್ಮೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಡಾ. ರಾಜೇಶ್ ಎಂ. ಫೌಂಡೇಷನ್ ಹಾಗೂ ಡಾ. ರಾಜೇಶ್ ಮನ್ನಾರ್ ನಾಯ್ಡು ಅಭಿಮಾನಿಗಳ ಬಳಗ ಮಲ್ಲೇಶ್ವರಂನ ವತಿಯಿಂದ ಅದ್ಧೂರಿಯಾಗಿ   ಆಯೋಜಿಸಲಾಗಿತ್ತು.






  ಮಲ್ಲೇಶ್ವರಂ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್‌ ಪಕ್ಷದ ದಿಗ್ಗಜ ನಾಯಕರುಗಳಾದ ಬಿ.ಕೆ.ಶಿವರಾಂ, ಗಿರೀಶ್ ಲಕ್ಕಣ್ಣ, ಅನೂಪ್ ಅಯ್ಯಂಗಾರ್,   ವಿ. ಹರಿ (ವಿದ್ಯಾರಣ್ಯಪುರ), ರಶ್ಮಿ ರವಿಕಿರಣ್,  ಉಮಾ ಬಾಯಿ, ವಿಮಲ, ಚಂದ್ರಶೇಖರ್ ಮುಂತಾದ ಗಣ್ಯರ ಉಪಸ್ಥಿತಿಯಿದ್ದ ವೇದಿಕೆಯಲ್ಲಿ ಕೇಕ್ ಕತ್ತರಿಸುವ ಮೂಲಕ ರಾಜೇಶ್ ರವರು ಹಿರಿಯರ ಆಶೀರ್ವಾದ, ಕಿರಿಯರ ಅಭಿನಂದನೆಗಳನ್ನು ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಸ್ಥಳೀಯ  ಹಿರಿಯ ನಾಗರೀಕರಾದ ಡಾ.ಜೋಶಿ, ದಾರಿ ಆಂಜನೇಯ ಸ್ವಾಮಿ ದೇವಸ್ಥಾನದ ಧರ್ಮದರ್ಶಿಗಳಾದ ಶ್ರೀ  ಗೋಂಧಾಳ ಅನಂತಮೂರ್ತಿ, ಸಮಾಜ ಸೇವಕರಾದ ಗಿರೀಶ್ ಲಕ್ಕಣ್ಣ,





ಕಲಾವಿದರಾದ ಗಣೇಶರಾವ್ ಕೇಸರ್ಕರ್ ಮುಂತಾದ ಅನೇಕ ಪ್ರಮುಖರಿಗೆ ವೇದಿಕೆಯಲ್ಲಿ ಸನ್ಮಾನಿಸಿ ಗೌರವಾರ್ಪಣೆಯನ್ನು ಸಲ್ಲಿಸಲಾಯಿತು.  ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರಾದ ಬಿ.ಕೆ.ಶಿವರಾಂ ರವರು ಡಾ. ರಾಜೇಶ್ ರವರ ಸಮಾಜ ಸೇವಾ ಕಾಳಜಿ ಹಾಗೂ ಅವರು ಕೋವಿಡ್ ಸಂಕಷ್ಟದ ಸಮಯದಲ್ಲಿ ಮಾಡಿದ ಸೇವೆಯನ್ನು ನೆನೆಸಿ ಪ್ರಶಂಸಿಸಿ ಕಾಂಗ್ರೆಸ್ ಪಕ್ಷದ ಭವಿಷ್ಯದ ಆಶಾಕಿರಣವಾಗಿರುವ ಮುಖಂಡರ ಪೈಕಿ ಇವರು ಪ್ರಮುಖರಾಗಿದ್ದು, ಪಕ್ಷವು ಇವರ ಸೇವೆ ಹಾಗೂ ಸಾಧನೆಯ ಮೂಲಕ ಈ ಕ್ಷೇತ್ರದಲ್ಲಿ ಬಲವನ್ನು ಹೆಚ್ಚಿಸಿಕೊಂಡಿರುವುದರ ಜೊತೆಗೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ವಿಶ್ವಾಸ ಮೂಡಿಸಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಹರಿರವರು ಮಾತನಾಡುತ್ತಾ, ಈ ಹಿಂದೆ ಸತತವಾಗಿ ಎರಡು ಬಾರಿ ಕಾಂಗ್ರಸ್ ಮಲ್ಲೇಶ್ವರಂ ಕ್ಷೇತ್ರದಲ್ಲಿ ಗೆಲ್ಲುವುದಕ್ಕೆ ಕಾರಣರಾದ ಎಂ.ಆರ್.ಸೀತಾರಾಂರವರ ಕ್ಷೇತ್ರದ ಅಭಿವೃದ್ಧಿಗೆ ಬಹಳ ಶ್ರಮಿಸಿದ್ದಾರೆಂಬುದನ್ನು ಕಾಂಗ್ರೆಸ್ ಮರೆತಿಲ್ಲ ಹಾಗೂ ವಿಧಾನ ಸಭಾ ಕ್ಷೇತ್ರಗಳ ಮರುವಿಂಗಡನೆಯ ಸಮಯದಲ್ಲಿ ಆದ ಬದಲಾವಣೆಗಳ ಕಾರಣದಿಂದಾಗಿ ಇಲ್ಲಿ ಬಿಜೆಪಿ ಪಕ್ಷಕ್ಕೆ ಅವಕಾಶ ಒದಗಿಬಂತು. 

ಕಳೆದ ಚುನಾವಣೆಯಲ್ಲಿ ಕೇವಲ ಐವತ್ತು ಸಾವಿರ ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಇಲ್ಲಿ ಪರಾಭವಗೊಂಡರು, ಈ ಬಾರಿ ಎಲ್ಲರೂ ಒಗ್ಗೂಡಿ ಪಕ್ಷ ನಿಷ್ಠೆಯಿಂದ, ಮಾಡಿರುವ ಜನಪರ ಸೇವೆಗಳ  ಆಧಾರದಲ್ಲಿ ಮುಂಬರುವ ದಿನಗಳಲ್ಲಿ ನಡೆಯಲಿರುವ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಸೋಲಿಸುವುದು ಕಷ್ಟವಾಗಲಾರದು ಎಂದು ಕಾಂಗ್ರೆಸ್ ಬೆಂಬಲಿಗರನ್ನು ಹುರಿದುಂಬಿಸಿದರು. ಕಾರ್ಯಕ್ರಮ ನಿರ್ವಹಣೆಯನ್ನು ಕೇಶವಮೂರ್ತಿ ಅಚ್ಚುಕಟ್ಟಾಗಿ ನಿರ್ವಹಿಸಿದರು.   ಈಸ್ಟ್‌ ವೆಸ್ಟ್‌ ವಿದ್ಯಾ ಸಂಸ್ಥೆ ಕಾರ್ಯಕಾರಿ ನಿರ್ದೇಶಕ ಮಂಜುನಾಥ್, ಬಾರ್ ವೆಂಕಟೇಶ್ ಮುಂತಾದ ಅನೇಕರು ಡಾ.ರಾಜೇಶ್ ಮನ್ನಾರ್ ನಾಯ್ಡು ಅವರಿಗೆ ಶುಭ ಹಾರೈಸಿದರು.

   ಆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ರಾಜೇಶ್ ಅವರು, ಕಾಂಗ್ರೆಸ್ ಪಕ್ಷ ಯಾವುದೇ ಸ್ಥಾನಮಾನ ನೀಡಲಿ ಬಿಡಲಿ ಪಕ್ಷಕ್ಕೆ ನಿಷ್ಠಾವಂತ ಕಾರ್ಯಕರ್ತನಾಗಿ ಕಾರ್ಯನಿರ್ವಹಿಸುತ್ತೇನೆ. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಶ್ರಮಿಸಲಾಗುತ್ತದೆ ಹಾಗೂ ತಮ್ಮ ಹೆಸರಿನ ಪೌಂಡೇಶನ್ ಮೂಲಕ ಬಡವರು, ಕೆಳವರ್ಗದವರಿಗೆ ಅನೇಕ ರೀತಿಯ ನೆರವು ನೀಡಲಾಗುತ್ತಿದ್ದು ಇದು ಹೀಗೆ ಮುಂದುವರೆಯುತ್ತದೆ   ಎಂದ ಅವರು ತಮ್ಮ  ಹುಟ್ಟು ಹಬ್ಬದಲ್ಲಿ ಪಾಲ್ಗೊಂಡು ಶುಭ ಹಾರೈಸಿದ ಎಲ್ಲರಿಗೂ ಅಭಿನಂದಿಸಿದರು.

Post a Comment

0 Comments

Ad Code

Responsive Advertisement