Ticker

6/recent/ticker-posts

Ad Code

Responsive Advertisement

ಮಲ್ಲೇಶ್ವರದಲ್ಲಿ ಜಯಚಾಮರಾಜೇಂದ್ರ ಒಡೆಯರ್ ಕಂಚಿನ ಪುತ್ಥಳಿ ಪ್ರತಿಷ್ಠಾಪನೆಗೆ ಭೂಮಿ ಪೂಜೆ

ಬೆಂಗಳೂರು :  ಮಲ್ಲೇಶ್ವರದ ಕ್ರಾಂತಿವೀರ ಡಾ. ರಾಜಕುಮಾರ್ ಅಭಿಮಾನಿಗಳ ಸಂಘ ಹಾಗೂ ಶ್ರೀಹರಿಹರ ರಾಜು ಕ್ಷತ್ರಿಯ ಸಂಘದ ವತಿಯಿಂದ ಮುಂಬರುವ ಮಾರ್ಚ್‌ ತಿಂಗಳಿನಲ್ಲಿ ಶ್ರೀ ಅಣ್ಣಮ್ಮದೇವಿ ಮತ್ತು ಶ್ರೀ ಮಾರಮ್ಮ ದೇವಿಯರ ಉತ್ಸವವನ್ನು ಆಯೋಜಿಸಲಾಗಿದ್ದು, ಈ ವೇಳೆ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸುವುದರೊಂದಿಗೆ ಇದೇ ಸಂದರ್ಭದಲ್ಲಿ  ಶ್ರೀ ಜಯಚಾಮರಾಜ ಒಡೆಯರ್ ರವರ ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗಿದೆ.  

ಗುರುವಾರದಂದು 1ನೇ ಮುಖ್ಯರಸ್ತೆ, ಮಲ್ಲೇಶ್ವರದ ದೇವಸ್ಥಾನದ ಬೀದಿಯಲ್ಲಿರುವ ಶ್ರೀ ಸಿದ್ಧಿಪ್ರದ ಗಣಪತಿ ಸನ್ನಿಧಿಯ ಪಕ್ಕದಲ್ಲಿರುವ ದೇವಸ್ಥಾನದ ಖಾಲಿ ಜಾಗದಲ್ಲಿ "ಮೈಸೂರು ಮಹಾರಾಜರಾಗಿದ್ದ ಶ್ರೀ ಜಯಚಾಮರಾಜೇಂದ್ರ ಒಡೆಯರ್" ಅವರ ಕಂಚಿನ ಪುತ್ಥಳಿ ಪ್ರತಿಷ್ಠಾಪನೆ ಮಾಡಲು ಭೂಮಿ ಪೂಜೆಯನ್ನು  ನೆರವೇರಿಸಲಾಯಿತು. ಈ ವೇಳೆ ರಾಜು ಕ್ಷತ್ರಿಯ ಸಂಂಘದ ಅಧ್ಯಕ್ಷ ಪ್ರಕಾಶರಾಜುರವರೊಂದಿಗೆ ಪದಾಧಿಕಾರಿಗಳಾದ ದೇವೇಂದ್ರ ರಾಜು, ಸುನೀಲ್ ರಾಜು, ಧನರಾಜು, ಗಿರೀಶ್ ಹಾಗೂ ಉಪಾಧ್ಯಕ್ಷರಾದ ನಾಣಿರಾಜು ಮುಂತಾದವರು ಭಾಗವಹಿಸಿದ್ದರು.

Post a Comment

0 Comments

Ad Code

Responsive Advertisement