Ticker

6/recent/ticker-posts

Ad Code

Responsive Advertisement

ಪೌರಕಾರ್ಮಿಕರಿಗೆ 2 ಮದುವೆಯಾಗಿದ್ದರೆ ಕೆಲಸ ಸಿಗಲ್ಲ: ಬಿಬಿಎಂಪಿ ಆದೇಶ

ಬೆಂಗಳೂರು: ಪೌರಕಾರ್ಮಿಕರ ಹುದ್ದೆಗೆ ಬಿಬಿಎಂಪಿಯು ಅರ್ಜಿ ಆಹ್ವಾನಿಸಿದ್ದು, ಆದರೆ ಅರ್ಜಿದಾರರು ಎರಡು ಮದುವೆಯಾಗಿದ್ದರೆ ಪೌರಕಾರ್ಮಿಕರಿಗೆ ಕೆಲಸ ಇಲ್ಲ ಎಂದು ಬಿಬಿಎಂಪಿ ಆದೇಶಿಸಿದೆ.


ಬಿಬಿಎಂಪಿಯಲ್ಲಿ ಖಾಲಿ ಇರುವ 3673 ಪೌರ ಕಾರ್ಮಿಕ ಹುದ್ದೆಗೆ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು ಪೌರ ಕಾರ್ಮಿಕರು ಎರಡು ಮದುವೆಯಾಗಿದ್ದರೆ ಅಂತವರು ಅನರ್ಹರಾಗುತ್ತಾರೆ ಎಂದು ತಿಳಿಸಿದೆ. ಬಿಬಿಎಂಪಿ ಪೌರ ಕಾರ್ಮಿಕರ ಪೈಕಿ 2600 ಕಾಯಂ ಪೌರಕಾರ್ಮಿಕರಿದ್ದು ಉಳಿದ 18 ಸಾವಿರ ಪೌರಕಾರ್ಮಿಕರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೀಗ 3673 ಪೌರಕಾರ್ಮಿಕ ಹುದ್ದೆಗೆ ನೇಮಕ ಮಾಡಿಕೊಳ್ಳಲು ಮುಂದಾಗಿದ್ದು ಅದರಲ್ಲಿ ಈಗಾಗಲೇ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರನ್ನು ನೇಮಕಕ್ಕೆ ಪರಿಗಣಿಸಲಾಗಿದೆ. ಅದರ ಜೊತೆಗೆ 3673 ಪೌರಕಾರ್ಮಿಕ ಹುದ್ದೆಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದವರೆಗೆ 430 ಹುದ್ದೆಗಳನ್ನು ಮತ್ತು ಉಳಿದ ಹುದ್ದೆಗಳನ್ನು ರಾಜ್ಯದ ಇತರ ಜಿಲ್ಲೆಗಳ ವರೆಗೆ ನಿಗದಿಪಡಿಸಲಾಗಿದೆ.

ಈ ಅರ್ಜಿ ಸಲ್ಲಿಕೆಗೆ ಹಲವು ಷರತ್ತುಗಳನ್ನು ಬಿಬಿಎಂಪಿಯು ವಿಧಿಸಿದ್ದು ಅರ್ಜಿ ಸಲ್ಲಿಸುವವರು ಗುತ್ತಿಗೆ ಆಧಾರದಲ್ಲಿ ಕನಿಷ್ಠ ಎರಡು ವರ್ಷಗಳ ಕಾಲ ಪೌರಕಾರ್ಮಿಕರಾಗಿ ಕೆಲಸ ಮಾಡಿರಬೇಕಿದ್ದು ಅಭ್ಯರ್ಥಿಯ ವಯಸ್ಸು 23ರಿಂದ 55 ವರ್ಷಗಳಿಗಿಂತ ಹೆಚ್ಚಿರಬಾರದು. ಕನ್ನಡ ಮಾತನಾಡಲು ಬಲ್ಲವರು ಮಾತ್ರ ಅರ್ಜಿ ಸಲ್ಲಿಸಬೇಕಿದ್ದು ಹಾಗೆಯೇ ಅರ್ಜಿ ಸಲ್ಲಿಸುವ ಪುರುಷ ಪೌರಕಾರ್ಮಿಕರಿಗೆ ಇಬ್ಬರು ಪತ್ನಿಯರಿರಬಾರದು ಹಾಗೂ ಮಹಿಳಾ ಪೌರಕಾರ್ಮಿಕರು ಈಗಾಗಲೇ ಮದುವೆಯಾಗಿರುವವರನ್ನು ವಿವಾಹವಾಗಿರಬಾರದು. ಅಲ್ಲದೆ ಕ್ರಿಮಿನಲ್ ಪ್ರಕರಣ ಇರುವವರು, ಈ ಹಿಂದೆ ಸೇವೆಯಿಂದ ವಜಾಗೊಂಡವರು ಅರ್ಜಿ ಸಲ್ಲಿಸಲು ಅನಹರ್ಹರು. ಜೊತೆಗೆ ಪ್ರತಿ ಅಭ್ಯರ್ಥಿಯು ಸಂಬಂಧ ಪಟ್ಟ ಆಸ್ಪತ್ರೆ ಅಥವಾ ಪ್ರಾಧಿಕಾರದಿಂದ ದೈಹಿಕ ದೃಢತೆ ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯವಾಗಿದೆ ಎಂದು ಬಿಬಿಎಂಪಿ ಆಯುಕ್ತರು ತಿಳಿಸಿದ್ದಾರೆ.

Post a Comment

0 Comments

Ad Code

Responsive Advertisement