ಬೆಂಗಳೂರು : ಸಾಧನಾ ಎಜ್ಯುಕೇಷನಲ್ ಸರ್ವೀಸಸ್ ನ ವತಿಯಿಂದ ಮಲ್ಲೇಶ್ವರಂ ಕೋದಂಡರಾಮಪುರ, ಗಾಯತ್ರಿ ಪಾರ್ಕ್ ಬಡಾವಣೆಯಲ್ಲಿರುವ ತೆಲುಗು ವಿಜ್ಞಾನ ಸಮಿತಿ ಸಭಾಂಗಣದಲ್ಲಿ ಯುಸಿಮಾಸ್ 11 ನೇ ರಾಜ್ಯ ಮಟ್ಟದ ಆನ್‌ಲೈನ್ ಅಬಾಕಸ್ ಅಂಡ್ ಮೆಂಟಲ್ ಅರ್ಥ್ಮೇಟಿಕ್ ಕಾಂಪಿಟೇಶನ್ 2022 ರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಲ್ಲೇಶ್ವರಂ ವಿಧಾನ ಸಭಾ ಕ್ಷೇತ್ರದ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಡಾ. ಜಿ.ಎಸ್.ಚೌಧರಿ, ಶಿಕ್ಷಣ ಇಲಾಖೆಯ (ರಿ) ಶಿಕ್ಷಣಾಧಿಕಾರಿ ಜಿ.ಹೆಚ್.ಶಶಿಧರ್, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಕಾರ್ಯನಿರ್ವಾಹಕ ನಿರ್ದೇಶಕರಾದ ಡಿ.ಎಲ್. ಕೃಷ್ಣಮೂರ್ತಿರವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ವ್ಯವಸ್ಥಾಪಕ ನಿರ್ದೇಶಕಿ ಜಯ ಸಂತೋಷಿನಿ ಬಾಯಿ ಪಿ., ವ್ಯವಸ್ಥಾಪಕ ಯಜಿನ್ ಸಲಿಂಖರವರ ಸಮ್ಮುಖದಲ್ಲಿ, ವೇದಿಕೆಯಲ್ಲಿ ಅಬಾಕಸ್ ಕಲಿಕೆಯಲ್ಲಿ ಈಗಾಗಲೇ 4 ನೇ ಹಂತವನ್ನು ತಲುಪಿರುವ ಆರು ವರ್ಷ ವಯಸ್ಸಿನ ಪುಟಾಣಿ ಬಾಲಕಿ ರಿತನ್ಯ ಸಭೆಗೆ ಪ್ರಾತ್ಯಕ್ಷಿಕೆಯ ಮೂಲಕ ತನ್ನ ಪ್ರತಿಭೆಯ ಪರಿಚಯವನ್ನು ನೀಡುವ ಮೂಲಕ ಸಮಾರಂಭದಲ್ಲಿ ಭಾಗವಹಿಸಿದ್ದವರನ್ನು ಬೆರಗುಗೊಳಿಸಿದಳು.
ತದ ನಂತರ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಗಣ್ಯರು ಪ್ರಶಸ್ತಿ ನೀಡಿ ಪುರಸ್ಕರಿಸಿದರು.



0 Comments