ದಾಸರಹಳ್ಳಿ ಯಲ್ಲಿ ಬರೀ ಸುಳ್ಳು ಹೇಳಿಕೊಂಡು ಕಾಲ ಕಳೆಯುವ ಶಾಸಕ ಯಾರಾದರೂ ಇದ್ದರೆ ಅವರು ದಾಸರಹಳ್ಳಿ ಹಾಲಿ ಶಾಸಕ ಎಂದು ನಿಕಟಪೂರ್ವ ಶಾಸಕ ಏಸ್ ಮುನಿರಾಜು ಗಂಭೀರ ಆರೋಪ ಮಾಡಿದ್ದಾರೆ.
ಕ್ಷೇತ್ರದ ಸಿದ್ದೇಶ್ವರ ಬಡಾವಣೆಯಲ್ಲಿ ನಡೆದ ಬಿಜೆಪಿ ಸೇರ್ಪಡೆ ಕಾರ್ಯಕ್ರಮ ದಲ್ಲಿ ಮಾತನಾಡಿದ ಅವರು, ಮುನಿರಾಜು ಕಂಡ ಕಂಡಲ್ಲಿ ಜೆಡಿಎಸ್ ನ ಹಾಲಿ ಶಾಸಕ ಬಿಜೆಪಿ ಸರ್ಕಾರ ನನಗೆ ಬಂದಿರುವ ಅನುದಾನ ಕಿತ್ತು ಕೊಂಡಿದೆ ಎಂದು ಪದೇ ಪದೇ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಅನುದಾನ ಬಂದಿಲ್ಲ ಅಂತ ಹೇಳುವ ಇವರು ಕೆಲವು ಕಡೆ ಕಳಪೆ ಡಾಂಬರಿಕರಣ ಯಾವ ದುಡ್ಡಿನಲ್ಲಿ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿ ದ್ದಾರೆ
ಬಿಲ್ಲುಗಳನ್ನು ಬಿಜೆಪಿ ತಡೆ ಹಿಡಿದು ಕಿರುಕುಳ ಕೊಡುತ್ತಿದ್ದಾರೆ ಎಂದು ಹಾಲಿ ಶಾಸಕರು ಹೇಳುತ್ತಿದ್ದಾರೆ... ಬಿಜೆಪಿ ಸರ್ಕಾರ ಸುಮಾರು 450ಕ್ಕೂ ಹೆಚ್ಚು ಹಣ ಬಿಡುಗಡೆಮಾಡಿದೆ ಈ ಹಣದಿಂದ ತುಂಬಾ ಕಡೆ ಕಳಪೆ ಕಾಮಗಾರಿ ಆಗಿದ್ದು ಎಲ್ಲರಿಗೂ ತಿಳಿದ ವಿಚಾರ.
ದಾಸರಹಳ್ಳಿ ಯ ಹೆಸರಘ ಟ್ಟ ರಸ್ತೆ ಅಭಿವೃದ್ಧಿಗಾಗಿ ಬಿಜೆಪಿ ಸರ್ಕಾರ 15 ಕೋಟಿ ಅನುದಾನ ಕೊಟ್ಟಿದೆ ಅದರಲ್ಲಿ ಮೂರು ಕೋಟಿ ಖರ್ಚಾಗಿಲ್ಲ ಅನ್ನೋದು ಆರ್ ಟಿ ಐ ನಿಂದ ತಿಳಿದು ತಡೆಹಿಡಿಯಲು ಪ್ರಯತ್ನ ಮಾಡಿದ್ದು ನಿಜ...
ಪೂರ್ಣ ಕಾಮಗಾರಿ ಆಗಿಲ್ಲ ಆದರೆ ಪೂರ್ತಿ ಹಣ ಮಂಜೂರು ಮಾಡಿಸಿ ಕೊಳ್ಳಲು ಈಗಲೂ ಹಾಲಿ ಶಾಸಕ ಪ್ರಯತ್ನ ಪಡುತ್ತಿ ದ್ದಾರೆ ಬರೀ ಸುಳ್ಳು ಹೇಳಿಕೊಂಡು ಕಳಪೆ ಕಾಮಗಾರಿ ಮಾಡಿದ್ದರ ಬಗ್ಗೆ ಮುಂದಿನ ದಿನಗಳಲ್ಲಿ ಧಾಖಲೆ ಸಮೇತ ಜನರಿಗೆ ತಿಳಿಸಲಾಗುವುದು ಎಂದು ಮುನಿರಾಜು ಹೇಳಿದ್ದಾರೆ ಜೆಡಿಎಸ್ ಕಾಂಗ್ರೆಸ್ ನ ಸ್ಥಳೀಯ ಯುವಕರು ಹಾಗೂ ಮಹಿಳೆಯರು ಬಿಜೆಪಿ ಸೇರ್ಪಡೆ ಯಾದ ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಕೃಷ್ಣಮೂರ್ತಿ ಗುರುಪ್ರಸಾದ್ ವಿನೋದ್ ಗೌಡ ಹಾಗೂ ಇತರರು ಹಾಜರಿದ್ದರು



0 Comments