Ticker

6/recent/ticker-posts

Ad Code

Responsive Advertisement

ರಾಷ್ಟ್ರಮಟ್ಟಕ್ಕೆ ಪ್ರಣವ ಆಚಾರ್ಯ ಆಯ್ಕೆ

 ರಾಷ್ಟ್ರಮಟ್ಟಕ್ಕೆ ಪ್ರಣವ ಆಚಾರ್ಯ ಆಯ್ಕೆ

ವ್ಯಾಸತೀರ್ಥ ವಿದ್ಯಾಪೀಠಕ್ಕೆ ಹಲವು ಬಹುಮಾನ

ಸಂಸ್ಕೃತ ವಿವಿಯಿಂದ ರಾಜ್ಯಮಟ್ಟದ ಸ್ಪರ್ಧೆ

 ಮೈಸೂರು: ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ   ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಮೈಸೂರಿನ ಸೋಸಲೆ ವ್ಯಾಸರಾಜರ ಮಠದ ಶ್ರೀ ವ್ಯಾಸತೀರ್ಥ ವಿದ್ಯಾಪೀಠದ ವಿದ್ಯಾರ್ಥಿ ಪ್ರಣವ ಆಚಾರ್ಯ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ನ್ಯಾಯಶಾಸ್ತ್ರ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಪ್ರಣವ ಆಚಾರ್ಯ, ವಾರಾಣಸಿಯ ಬನಾರಸ್ ಹಿಂದು ವಿವಿಯಲ್ಲಿ ನಡೆಯಲಿರುವ ‘ಅಖಿಲ ಭಾರತೀಯ ಶಾಸ್ತ್ರೀಯ ಸ್ಪರ್ಧಾ’ದಲ್ಲಿ ಭಾಗವಹಿಸುವ ಅರ್ಹತೆ ಪಡೆದಿದ್ದಾರೆ ಎಂದು ಎಂದು ವಿದ್ಯಾಪೀಠದ ಗೌರವ ಕಾರ್ಯದರ್ಶಿ ಡಾ. ಡಿ.ಪಿ. ಮಧುಸೂದನಾಚಾರ್ಯ ತಿಳಿಸಿದ್ದಾರೆ.

  ಬಹುಮಾನ ವಿಜೇತರು:

ರಾಜ್ಯಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಮೈಸೂರಿನ ವ್ಯಾಸತೀರ್ಥ ವಿದ್ಯಾಪೀಠದ ಮಕ್ಕಳು ಹಲವು ಬಹುಮಾನ ಗಳಿಸಿದ್ದಾರೆ. ಸಾಂಖ್ಯ-ಯೋಗಶಾಸ್ತ್ರ ಭಾಷಣ ಸ್ಪರ್ಧೆಯಲ್ಲಿ ವಿ.ಸೌಮಿತ್ರಿ ಆಚಾರ್ಯ (ದ್ವಿ), ವ್ಯಾಕರಣ ಭಾಷಣ ಸ್ಪರ್ಧೆಯಲ್ಲಿ ಸರ್ವಜ್ಞ (ತೃ), ಕಾವ್ಯ ಶಲಾಕಾ ಸ್ಪರ್ಧೆಯಲ್ಲಿ ವಿಶ್ವಜ್ಞ (ತೃ) ಸ್ಥಾನ ಪಡೆದಿದ್ದಾರೆ. ವಿಜೇತ ವಿದ್ಯಾರ್ಥಿಗಳಿಗೆ ಖ್ಯಾತ ತರ್ಕ ವಿದ್ವಾಂಸ ದೇವದತ್ತ ಪಾಟೀಲ, ಸಂಸ್ಕೃತ ವಿವಿ ಕುಲಪತಿ ಪ್ರೊ. ಗಿರೀಶಚಂದ್ರ, ಕುಲಸಚಿವ ಪ್ರೊ. ವೀರನಾರಾಯಣ ಪಾಂಡುರಂಗಿ ಬಹುಮಾನ ವಿತರಿಸಿದರು. ರಾಜ್ಯದ ವಿವಿಧ ಭಾಗದ 25 ಗುರುಕುಲ ಮತ್ತು ವಿದ್ಯಾಪೀಠಗಳ 300ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.  

(ಚಿತ್ರ) 

ಬೆಂಗಳೂರಿನ ಚಾಮರಾಜಪೇಟೆಯ ಕರ್ನಾಟಕ ಸಂಸ್ಕೃತ ವಿವಿಯಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ನ್ಯಾಯಶಾಸ್ತ್ರ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಮೈಸೂರಿನ ಶ್ರೀ ವ್ಯಾಸತೀರ್ಥ ವಿದ್ಯಾಪೀಠದ ಪ್ರಣವ ಆಚಾರ್ಯ ಅವರಿಗೆ ಬಹುಮಾನ ವಿತರಿಸಲಾಯಿತು. ಖ್ಯಾತ ತರ್ಕ ವಿದ್ವಾಂಸ ದೇವದತ್ತ ಪಾಟೀಲ, ಸಂಸ್ಕೃತ ವಿವಿ ಕುಲಪತಿ ಪ್ರೊ. ಗಿರೀಶಚಂದ್ರ, ಕುಲಸಚಿವ ಪ್ರೊ. ವೀರನಾರಾಯಣ ಪಾಂಡುರಂಗಿ, ಪ್ರಾಚಾರ್ಯ ಡಾ. ಶ್ರೀನಿಧಿ ಹಾಜರಿದ್ದರು.

* ಪ್ರಣವ ಆಚಾರ್ಯ

Post a Comment

0 Comments

Ad Code

Responsive Advertisement