ಬೆಂಗಳೂರು :, ಹಲವಾರು ವರ್ಷಗಳಿಂದ ಕಾರ್ಮಿಕರ ಪರವಾಗಿ ಧ್ವನಿಯಾಗಿ ಕರ್ನಾಟಕ ರಾಜ್ಯದಂತ ಮನೆಮಾತಾಗಿರುವ ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ನ ವಾರ್ಷಿಕ ಕಾರ್ಮಿಕ ಮಹಾಸಭೆ ಮಂಗಳವಾರ ಬೆಂಗಳೂರು ರಾಜಾಜಿನಗರದ ಕದಂಬ ಹೋಟೆಲ್ ನ ಎರಡನೇ ಮಹಡಿಯಲ್ಲಿರುವ ಅನ್ನಪೂರ್ಣೇಶ್ವರಿ ಸಭಾಂಗಣದಲ್ಲಿ ಜರುಗಿತು,
ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆ ಮತ್ತು ತಾಲೂಕು ಮಟ್ಟದ ಅಧ್ಯಕ್ಷರು ಮತ್ತು ಮುಖ್ಯ ಪದಾಧಿಕಾರಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು ಸುಮಾರು 350ಕ್ಕೂ ಹೆಚ್ಚು ನಾನು ವಿಭಾಗದ ಅಧ್ಯಕ್ಷರುಗಳು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಕಾರ್ಮಿಕರಿಗೆ ಸಿಗಬೇಕಾದ ಸೌಲತ್ತುಗಳು, ಕಾನೂನು ಅರಿವು ಮತ್ತು ಕಾರ್ಮಿಕರ ನೋಂದಾವಣೆ ಕಾರ್ಯವು ಯಶಸ್ವಿಯಾಗಿ ನಡೆಯಿತು, ಈ ಸಂದರ್ಭದಲ್ಲಿ ಉತ್ತಮವಾಗಿ ಬಡತನದಿಂದ ಕಷ್ಟಪಟ್ಟು ಓದುತ್ತಿರುವ ಆಯ್ದ ಮಕ್ಕಳಿಗೆ ಸೈಕಲ್ ಮತ್ತು ಲ್ಯಾಪ್ಟಾಪ್ ವಿತರಣೆ ಮಾಡಲಾಯಿತು,
ಕಾರ್ಮಿಕ ನೋಂದಾವಣೆ ಮತ್ತು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ
ವಾರ್ಷಿಕ ಸಭೆಯಲ್ಲಿ ಕಟ್ಟಡ ಕಾರ್ಮಿಕ, ಸಂಘಟಿತ ಕಾರ್ಮಿಕ, ವಿಭಾಗದವರನ್ನು ಕಾರ್ಮಿಕ ನೊಂದವಣೆ ಮಾಡಿಸಿ, ಸರ್ಕಾರದಿಂದ ಸಿಗುವ ಸೌಲತ್ತುಗಳ ಬಗ್ಗೆ ಪದಾಧಿಕಾರಿಗಳಿಗೆ ಮಾಹಿತಿ ನೀಡಿ ಮತ್ತು ಯಾವ ರೀತಿ ಆಯ್ಕೆ ಮಾಡಬೇಕು ಎಂಬುದರ ಬಗ್ಗೆ ತರಬೇತಿ ನೀಡಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ರಾಜ್ಯಾಧ್ಯಕ್ಷರಾದ ಡಾ.ರವಿ ಶೆಟ್ಟಿ ಬೈಂದೂರ್ ಮಾತನಾಡಿ, ಮುಂದಿನ ಇನ್ನೂ ಒಂದು ವರ್ಷದಲ್ಲಿ ಕರ್ನಾಟಕ ರಾಜ್ಯದ್ಯಂತ ಸಂಸ್ಥೆಯನ್ನು ಹಳ್ಳಿಹಳ್ಳಿ ಮನೆಮನೆಗೂ ತೆಗೆದುಕೊಂಡು ಹೋಗಿ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸುವಂತ ಕೆಲಸವನ್ನು ಮಾಡುತ್ತೇವೆ.. ಮತ್ತು ರೈತ ಕಾರ್ಮಿಕರಿಗೂ ಸಹ ಸರ್ಕಾರ ದ ಎಲ್ಲಾ ಸೌಲತ್ತುಗಳು ಸಿಗಬೇಕು ಈ ವಿಷಯದಲ್ಲಿ ಕೇಂದ್ರ ಸಚಿವರನ್ನು ಮತ್ತು ರಾಜ್ಯ ಸಚಿವರನ್ನು ಒತ್ತಾಯಿಸಲಾಗುವುದು ಎಂದರು.
ಕಾರ್ಮಿಕ ಪರಿಷತ್ತು ಪ್ರತ್ಯೇಕ ಬಾವುಟವನ್ನು ಹೊಂದಲು ಇಚ್ಚಿಸಿದ್ದು ಅದರಂತೆ ಎಲ್ಲ ಪದಾಧಿಕಾರಿಗಳು ಸೇರಿ ಒಂದು ಬಾವುಟದ ನಕ್ಷೆಯನ್ನು ತಯಾರು ಮಾಡಿದ್ದು ಮುಂದಿನ ತಿಂಗಳು ನಡೆಯುವ ರಾಜ್ಯ ಕಾರ್ಮಿಕ ಸಮ್ಮೇಳನದಲ್ಲಿ ಮಾನ್ಯ ಮುಖ್ಯಮಂತ್ರಿಗಳಿಂದ ಧ್ವಜವನ್ನು ಬಿಡುಗಡೆಗೊಳಿಸಲಾಗುವುದು ಎಂದು ತಿಳಿಸಿದರು,ಕಾರ್ಯಕ್ರಮದಲ್ಲಿ ಹಿರಿಯ ಸಲಹೆಗಾರರು ಗೌರವಾಧ್ಯಕ್ಷರಾದ ಶ್ರೀಯುತ ಪದ್ಮನಾಭ ಮತ್ತು ನ್ಯಾಯವಾದಿಗಳು ಹಾಗೂ ಕಾನೂನು ಸಲಹೆಗಾರರಾದ ನರಸಿಂಹಮೂರ್ತಿ , ಮಹಿಳಾ ರಾಜ್ಯಾಧ್ಯಕ್ಷರಾದ ಶ್ರೀಮತಿ ಪೂಜಾ ಶೆಟ್ಟಿ, ಹಿರಿಯ ಉಪಾಧ್ಯಕ್ಷರಾದ ಕನ್ನಡ ಕಿಟ್ಟಿ, ಉಪಾಧ್ಯಕ್ಷರಾದ ಎಂ ಸಿ ನಾಗರಾಜ್, ಪ್ರಧಾನ ಕಾರ್ಯದರ್ಶಿಗಳಾದ ಧನರಾಜ್ , ಕಾರ್ಮಿಕ ಹಿರಿಯ ಮುಖಂಡ ಶಿವಕುಮಾರ್ ಗೌಡ, ನಟರಾಜ್ , ಯುವ ರಾಜ್ಯಾಧ್ಯಕ್ಷ ದೇವಾನಂದ್ , ಕಾರ್ಮಿಕ ವಿಭಾಗದ ಮುಖ್ಯಸ್ಥ ಸಂಗಮೇಶ್ ಗೌಡ , ಹಾಗೂ ಎಲ್ಲಾ ವಿಭಾಗದ ರಾಜ್ಯಾಧ್ಯಕ್ಷರುಗಳು, ಜಿಲ್ಲಾಧ್ಯಕ್ಷರುಗಳು ಹಾಗೂ ತಾಲೂಕ್ ಅಧ್ಯಕ್ಷರುಗಳು ಮತ್ತು ರಾಜ್ಯ ಘಟಕದ ಎಲ್ಲಾ ಮುಖಂಡರುಗಳು ಪಾಲ್ಗೊಂಡಿದ್ದರು ಎಂದು ಪರಿಷತ್ ಪ್ರಕಟಣೆಯಲ್ಲಿ ತಿಳಿಸಿದೆ.








0 Comments