Ticker

6/recent/ticker-posts

Ad Code

Responsive Advertisement

ಹಿರಿಯ ಪತ್ರಕರ್ತ ಕೆ.ಸತ್ಯನಾರಾಯಣ ಅವರಿಗೆ ಭಾವಪೂರ್ಣ ಶ್ರದ್ದಾಂಜಲಿ

ಬೆಂಗಳೂರು: ಹಿರಿಯ ಪತ್ರಕರ್ತ ಕೆ.ಸತ್ಯನಾರಾಯಣ ಅವರಿಗೆ ನಗರದ ಪ್ರೆಸ್ ಕ್ಲಬ್ ಸಭಾ ಭವನದಲ್ಲಿ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಲಾಯಿತು.

ಪ್ರೆಸ್ ಕ್ಲಬ್ ಆಫ್ ಬೆಂಗಳೂರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡ್ಲ್ಯೂಜೆ) , ಕರ್ನಾಟಕ ಮಾದ್ಯಮ ಅಕಾಡೆಮಿ, ಬೆಂಗಳೂರು ವರದಿಗಾರರ ಕೂಟ, ಕರ್ನಾಟಕ ಪತ್ರಕರ್ತರ ಸಹಕಾರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಶನಿವಾರ ನಡೆದ ಸಭೆಯಲ್ಲಿ

ಮಾತನಾಡಿದ ಪತ್ರಕರ್ತರು ಅವರ ಒಡನಾಟ ಮೆಲುಕು ಹಾಕಿದರು. ಅವರ ಆದರ್ಶದ ಹಾದಿಯಲ್ಲಿ ನಡೆಯಲು ಕಂಕಣ ಬದ್ದರಾಗುವಂತೆ ಕರೆ ನೀಡಿದರು.

ಕೆಯುಡ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ,ಆಗಿನ ಕಾಲ ಘಟ್ಟದಿಂದ ಇಂದಿನ ಕಾಲಘಟ್ಟದವರೆಗೆ  ಸತ್ಯನಾರಾಯಣ ಅವರು ನಡೆದು ಬಂದ ದಾರಿ ಹಾಗು ತಮ್ಮ ವೃತ್ತಿ ಜೀವನದಲ್ಲಿ ಬದ್ದತೆಯನ್ನು ಕಾಪಾಡಿಕೊಂಡು ಬಂದಿದ್ದು ವಿಶೇಷ ಎಂದರು.

ಹಿರಿಯ ಚೇತನ ಸತ್ಯನಾರಾಯಣ ಅವರಿಗೆನಮ್ಮ ಸಂಘದ ವತಿಯಿಂದ ನಡೆಸಿದ ಹಿರಿಯ ಪತ್ರಕರ್ತರನ್ನು ಗೌರವಿಸುವ ಮನೆಯಂಗಳದಲ್ಲಿ ಕಾರ್ಯಕ್ರಮದಲ್ಲಿ ಅವರನ್ನು ಅಭಿನಂದಿಸಿದ್ದು ನಮಗೆ ಹೆಮ್ಮೆಯೆನಿಸುತ್ತದೆ. ಅಂದು ಅವರು ಅನೇಕ ಮಹತ್ವ ಪೂರ್ಣ ವಿಚಾರಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದು ಮರೆಯಲಾಗದ ಘಟನೆ ಎಂದರು.




ಹಿರಿಯರಾದ ನಾಗಮಣಿ ಎಸ್.ರಾವ್, ಪಿ.ರಾಮಯ್ಯ, ಡಿ.ಉಮಾಪತಿ, ಪ್ರೆಸ್ ಕ್ಲಬ್ ಅಧ್ಯಕ್ಷ ಶ್ರೀಧರ್, ಮಾಧ್ಯಮ ಅಕಾಡೆಮಿಯ ಅಧ್ಯಕ್ಷ ಸದಾಶಿವ ಶೆಣೈ,ಮುಂತಾದವರು ಸತ್ಯನಾರಾಯಣ ಅವರ ಒಡನಾಟದ ಕುರಿತು  ಮಾತನಾಡಿದರು.

ಶ್ರದ್ದಾಂಜಲಿ ಸಭೆಯಲ್ಲಿ ಹಿರಿಯ ಪತ್ರಕರ್ತರಾದ ಪಬ್ಲಿಕ್ ಟಿವಿ ರಂಗನಾಥ್, ಕನ್ನಡ ಪ್ರಭ ಸಂಪಾದಕ ರವಿಹೆಗಡೆ, ಈಶ್ವರ ದೈತೋಟ, ಆಶಾ ದೈತೋಟ, ಡಿ.ಮಹಾದೇವಪ್ಪ, ವೆಂಕಟನಾರಾಯಣ, ಕೆ.ಶೇಷಚಂದ್ರಿಕಾ, ಬಾಲ ಸುಬ್ರಹ್ಮಣ್ಯ, IFWJ ಅಧ್ಯಕ್ಷ ಮಲ್ಲಿಕಾರ್ಜುನಯ್ಯ, ಕೆಯುಡ್ಲ್ಯೂಜೆ ಖಜಾಂಚಿ ಎಂ.ವಾಸುದೇವ ಹೊಳ್ಳ, ನಗರ ಘಟಕದ ಅಧ್ಯಕ್ಷ ಸತ್ಯನಾರಾಯಣ ಮುಂತಾದವರು ಭಾಗವಹಿಸಿದ್ದರು.

Post a Comment

0 Comments

Ad Code

Responsive Advertisement