Ticker

6/recent/ticker-posts

Ad Code

Responsive Advertisement

೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ. ದೊಡ್ಡರಂಗೇಗೌಡರ ಭಾಷಣ

ಡಾ. ದೊಡ್ಡರಂಗೇಗೌಡ

 


 ಶರಣೆಂಬೆ ಅರಿವಿಗೆ

ಶರಣೆಂಬೆ ಗುರುವಿಗೆ

ಶರಣೆಂಬೆ ಸಾಹಿತ್ಯ ಸರಸ್ವತಿಗೆ

ಶರಣೆಂಬೆ ಸಾಹಿತ್ಯ ಸಂಗೀತ ಸರಸ್ವತಿಗೆ

ಶರಣು ಶರಣೆಂಬೆನಿಮ್ಮೆಲ್ಲರಿಗೆ.

 

ಅಕ್ಕರೆಯ ಸುಮಾರು ಏಳು ಕೋಟಿ ಕನ್ನಡಿಗರಿಗೆ ವಂದನೆ... ಶುಭ... ವಂದನೆ ನಿಮ್ಮೆಲ್ಲರಿಗೆ. ಕನ್ನಡ ತಾಯಿ ಭುವನೇಶ್ವರಿ ಹೃದಯ ತುಂಬಿ ನನಗೆ ಆಶೀರ್ವದಿಸಿದ್ದಾಳೆ. ಇದು ನನ್ನ ಬಾಳಿನ ಭಾಗ್ಯ. ನನ್ನ ನಲ್ಮೆಯ ಅಪ್ಪ ಅಮ್ಮ ಮೇಲಿಂದಲೇಹರಸಿದ್ದಾರೆ. ಇದು ನನ್ನ ಬದುಕಿನ ಸುಕೃತ.

 

ವೇದಿಕೆಯ ಮೇಲೆ ಆಸೀನರಾಗಿರುವ ಕರ್ನಾಟಕ ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರೇನಿಮಗಿದೋ ನನ್ನ ನಮಸ್ಕಾರಗಳು. ನಿಮ್ಮಿಂದ ಈ ಸಮ್ಮೇಳನ ಮತ್ತು ನಮ್ಮ ಅಕ್ಕರೆಯ ರಾಜ್ಯ ಬಹಳಷ್ಟು ಪ್ರಗತಿಯನ್ನೂ ಸಾಹಿತ್ಯದ ಸಂವರ್ಧನೆಯನ್ನೂನಿರೀಕ್ಷಿಸುತ್ತದೆ. ಈ ದಿಸೆಯಲ್ಲಿ ಏಳು ಕೋಟಿ ಕನ್ನಡಿಗರ ಪರವಾಗಿ ನಾನಿಲ್ಲಿ ಮಾತನಾಡುತ್ತಿದ್ದೇನೆ. ತಾವು ಪರಾಂಬರಿಸಬೇಕಾಗಿ ವಿನಂತಿ.

 

ಇನ್ನು ಈ ಸಮ್ಮೇಳನ ಇಷ್ಟು ವಿಜೃಂಭಣೆಯಿಂದ ಜರುಗಲು ಮುಖ್ಯ ರೂವಾರಿಕನ್ನಡ ಸಾಹಿತ್ಯ ಪರಿಷತ್ತಿಗೆ ಜನತೆಯ ಅಭಿಮತಗಳ ದಾಖಲೆ ಬರೆದ ಕನ್ನಡಿಗರೆಲ್ಲರ ಸ್ನೇಹ ಪ್ರೀತಿ ವಿಶ್ವಾಸಗಳಿಗೆಕಾರಣರಾದನಮ್ಮ ನಿಮ್ಮೆಲ್ಲರ ನಂಬಿಕೆಯ ನಾಡೋಜ” ಡಾ. ಮಹೇಶ ಜೋಶಿ ಅವರಿಗೆ ನನ್ನ ಹೃತ್ಪೂರ್ವಕ ನಮಸ್ಕಾರಗಳು. ಕಾರ್ಯಕಾರಿ ಮಂಡಳಿಯ ಎಲ್ಲ ಪದಾಧಿಕಾರಿಗಳಿಗೂ ನನ್ನ ನಮನಗಳು.

 

ಜಿಲ್ಲಾ ಉಸ್ತುವಾರಿ ಸಚಿವರಾದ ನಲ್ಮೆಯ ಅರಬೈಲ್ಶಿವರಾಮಹೆಬ್ಬಾರರೇರಾಜ್ಯ ವಿಧಾನಪರಿಷತ್ತಿನಸಭಾಪತಿಗಳಾದ ಮಾನ್ಯ ಬಸವರಾಜ ಹೊರಟ್ಟಿ ಅವರೇನನ್ನ ಆತ್ಮೀಯ ಕವಿಮಿತ್ರರಾದಎಚ್.ಎಸ್. ವೆಂಕಟೇಶಮೂರ್ತಿ ಅವರೇ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪನವರೇ ಮತ್ತು ಎಚ್.ಡಿ. ಕುಮಾರಸ್ವಾಮಿ ಅವರೇ ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಸಚಿವರಾದ  ವಿಸುನಿಲ್‌ಕುಮಾರ್ ಅವರೇಮಾನ್ಯ ಕೃಷಿ ಸಚಿವರಾದಬಿ.ಸಿ. ಪಾಟೀಲ್ ಅವರೇಮಾನ್ಯ ಲೋಕಸಭಾ ಸದಸ್ಯರಾದಶಿವಕುಮಾರಉದಾಸಿ ಅವರೇರಾಜ್ಯದ ರಾಜಕೀಯ ಕ್ಷೇತ್ರದ ಧುರೀಣರೇಸರ್ವರಿಗೂ ನನ್ನ ಅನಂತ ನಮಸ್ಕಾರಗಳು.

    

ಶುಭ ಸಿರಿ ಹಾವೇರಿ

ಯಾವ ತಾಣದಿ ಕನಕ ದಾಸರು

ಕೀರ್ತನೆ ಝುರಿಮೊರೆದರೋ

ಅದೇ ತಾಣವಿದು ಶುಭ ಸಿರಿ... ಹಾವೇರಿ!

ಯಾವ ನೆಲದಲಿಶಿಶುನಾಳಶರೀಫರು

ತತ್ವಜ್ಞಾನಅರುಹಿದರೋ

ಅದೇ ನೆಲವಿದುಶುಭಸಿರಿ ಹಾವೇರಿ

ಯಾವ ನೆಲೆಗಳಲಿ ಸರ್ವಜ್ಞ ತ್ರಿಪದಿಗಳನುಡಿದರೋ

ಅದೇ ನೆಲೆ ಇದುವೆ ಶುಭ ಸಿರಿ ಹಾವೇರಿ

ಯಾವ ಭುವಿಯಲ್ಲಿಹಾನಗಲ್ಲ ಕುಮಾರಸ್ವಾಮಿ

ಧರ್ಮವಹರಡಿದರೋ ಅದೇ ಭುವಿಯಿದು ಶುಭ ಸಿರಿ ಹಾವೇರಿ

 

ಈ ಭಾಗದ ಜ್ಞಾನಸಂತರಾದ ಕನಕಸಮಾಜಮುಖಿ ಆಶುಕವಿ ಸರ್ವಜ್ಞಸಂತ ಶರೀ¥sಸಂಗೀತ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ ಗಾನಯೋಗಿ” ಪಂಚಾಕ್ಷರಿ ಗವಾಯಿ ಮತ್ತು ಪುಟ್ಟರಾಜಗವಾಯಿಗಳುಕಾದಂಬರಿ ಪಿತಾಮಹರು ಎನ್ನಿಸಿಕೊಂಡ ಹಿರಿಯ ಲೇಖಕರಾದಗಳಗನಾಥರುಜ್ಞಾನಪೀಠ ಪುರಸ್ಕಾರ ಪಡೆದ ಭಾರತ ಸಿಂಧುರಶ್ಮಿ” ಬರೆದ ಡಾ. ವಿ.ಕೃ. ಗೋಕಾಕ್ ಅವರುಸ್ವಾತಂತ್ರಹೋರಾಟಗಾರರಾದ ಮೈಲಾರ ಮಹಾದೇವ ಅವರುಕನ್ನಡದ ಸುಪ್ರಸಿದ್ಧ ಕವಿ ಸು.ರಂ. ಎಕ್ಕುಂಡಿ ಅವರುಡಾ. ಹಿರೇಮಲ್ಲೂರುಈಶ್ವರನ್  ಅವರಿಗೆ ನನ್ನ ಹೃತ್ಪೂರ್ವಕ ನಮನಗಳು.

 

ಕನ್ನಡ ಭಾಷೆ ಅತ್ಯಂತ ಪ್ರಾಚೀನವಾದುದುಆ ಬಗೆಗೆ ನಮ್ಮೆಲ್ಲರಿಗೂ ಹೆಮ್ಮೆ ಇದೆ. ಜಾನಪದದಿಂದ ಪ್ರಾರಂಭವಾದ ಕನ್ನಡ ನುಡಿ ಇಂದಿನವರೆಗೆ ಕಾವ್ಯ ಕಾವೇರಿಯಾಗಿ ಹರಿದು ಬಂದದ್ದು ವಿಶೇಷವಾಗಿದೆ ಕನ್ನಡ - ಕನ್ನಡಿಗ- ಕರ್ನಾಟಕ ಈ ಮೂರೂ ಒಂದರಲ್ಲಿ ಒಂದು ತಳುಕು ಹಾಕಿಕೊಂಡಿದೆ. ಕನ್ನಡ ಅಕ್ಷರಗಳುಮುದ್ದಾಗಿವೆ. ಕನ್ನಡ "ಲಿಪಿಗಳ ರಾಣಿ" ಎಂಬ ಹೊಗಳಿಕೆಗೆ ಪಾತ್ರವಾಗಿದೆ.

 

ನಮ್ಮ ಕನ್ನಡಕ್ಕೆ ಒಂದು ಭವ್ಯ ಪರಂಪರೆ ಇದೆ. ಇತಿಹಾಸ ಕೆದಕಿ ನೋಡಿದರೆ ಕನ್ನಡ ನುಡಿಯ ಬೇರುಗಳು ಭದ್ರವಾಗಿವೆ. ಪ್ರಾಚೀನ ಪರಂಪರೆ ಅರ್ಥಮಾಡಿಕೊಂಡರೆ ಕನ್ನಡದ ಹಿರಿಮೆ - ಗರಿಮೆಗಳು ಸ್ಪಷ್ಟವಾಗಿ ಅರಿವಾಗುತ್ತವೆ.

 

ಬನ್ನಿ ಬನ್ನಿಗೆಳೆಯರೇಗೆಳತಿಯರೇ

ಜಾತಿಮತಪಂಥಪಕ್ಷ ಎಲ್ಲ ಮರೆತು

ಬನ್ನಿ ಬನ್ನಿಕನ್ನಡಿಗರೇತೋರಿ ಅಕ್ಕರೆ!

ಇಲ್ಲಿ ನಡೆದಿದೆಸಂಭ್ರಮದ ಜಾತ್ರೆ ಸಿರಿ!

ಜಾತ್ರೆಯಿದು ಕಡಿಮೆ ಇಲ್ಲ

ಇಲ್ಲಿ ಕಾಣುತ್ತಿದೆ ನಾಡು ನುಡಿ ಕಿಮ್ಮತ್ತೆಲ್ಲ!

ಇದುವೆ ನಮಗೆ ಪುಣ್ಯದ ಸಿರಿ ಬ್ರಹ್ಮಗಿರಿ

ಇಲ್ಲಿ ವಿಶ್ವ ಮುಖಿ ಕನ್ನಡದ ಮಹದೈಸಿರಿ

ನಮ್ಮ ತಾಯಿ ನಲ್ಮೆ ಅಮ್ಮ ಭುವನೇಶ್ವರಿ

ಮೂರು ದಿನದ ಜಾತ್ರೆಯಲಿ ಕನ್ನಡ ತೇರೆಳೆಯಿರಿ

ಎಲ್ಲರೂ ಒಂದಾಗಿ ಕನ್ನಡಕೆಜಯವೆನ್ನಿ ಶುಭ ಸಂದೇಶ ಸಾರಿರೀ

 

ಕನ್ನಡಿಗರಿಗೆ ಒಂದು ಸ್ಪಷ್ಟವಾದ ಸಂಸ್ಕೃತಿ ಇದೆ. ನಮ್ಮ ಪೂರ್ವ ಸೂರಿಗಳಿಗೆ ಕನ್ನಡದ ಕಿಮ್ಮತ್ತು ಗೊತ್ತಿದೆ. ಕನ್ನಡಿಗರ ಸ್ಫಟಿಕ ಮಣಿ ಸ್ವಭಾವವನ್ನು ಕಲ್ಲಿನ ಮೇಲೆ ಕೊರೆದಿದ್ದಾರೆಕನ್ನಡಿಗರವೈವಿಧ್ಯಮಯವಾದ ವ್ಯಕ್ತಿತ್ವವನ್ನು ಚೆನ್ನಾಗಿಯೇಉಲ್ಲೇಖಿಸಲಾಗಿದೆ. ಕಪ್ಪೆ ಅರೆಭಟ್ಟನನ್ನು ಕುರಿತ ವೈಲಕ್ಷಣಗಳನ್ನು ಬಾದಾಮಿ ಶಾಸನದಲ್ಲಿಕಾಣಬಹುದಾಗಿದೆ. ಖಚಿತ ಮಾತುಗಳಲ್ಲಿ ಹೇಳಿದ್ದಾರೆ.

 

ಸಾಧುಂಗೆ ಸಾಧು! ಮಾಧುರ್ಯಂಗೆಮಾಧುರ್ಯನ್!

ಬಾಧಿಪ್ಪಕಲಿಗೆ ಕಲಿಯುಗ ವಿಪರೀತನ್

ಮಾಧವನ್ ಈತನ್ಪೆರನಲ್ಲ

ಇದೊಂದು ಶಾಸನ ಪದ್ಯವಾದರೂ ಕನ್ನಡದ ಚಿರಂತನ ಅಸ್ಮಿತೆ ಗೊತ್ತಾಗುತ್ತದೆ.

ನಮ್ಮ ಅಭಿಮಾನದ ಹಾಡು

ಎದೆ ಎದೆಯ ದುಡಿ ಕನ್ನಡ ನುಡಿ;

ನಮ್ಮ ಕನ್ನಡ ನುಡಿ ನಾಡಿನ ಗುಡಿ!

ಬಿಟ್ಟು ಕೊಡೆವು ನಮ್ಮ ಗಡಿ

ನೆರೆ ಹೊರೆಯಗೆಳೆಯರೇ

ಆಕ್ರಮಿಸಿದರೆಹೊತ್ತಿಕೊಳ್ಳುವುದು

ನಮ್ಮ ಅಭಿಮಾನದ ಬೆಂಕಿ ಕಿಡಿ!

ಅಮ್ಮನ ಸೆರಗಿಗೆ ಸಿಡಿದರೆ ಕಿಡಿ

ಸಹಿಸೆವು ನಾವು ಸಿಡಿ-ಮಿಡಿ

ಇದು ಅಮ್ಮನ ಆಣತಿ ನಲ್ನುಡಿ

ತಂಟೆಗೆ ಬಂದರೆ ಹೋರಾಟ ದಂಡಿ

ಅತಿಕ್ರಮಿಸಬೇಡಿಇಡದಿರಿ ಮುಂದಕ್ಕೆ ಒಂದೂ ಅಡಿ!

 

ಕನ್ನಡಿಗರು ಎಲ್ಲಿ ಹೋದರೂ ಹೇಗೇ ಇದ್ದರೂ ಮೂಲತಃ ಮೃದು ಸ್ವಭಾವದವರುಒಳ್ಳೆಯವರಿಗೆ ಒಳ್ಳೆಯವರು! ಮಧುರವಾಗಿ ಮಾತಾಡುವವರಿಗೆಮಧುರವಾಗಿಯೇ ಉತ್ತರ ಕೊಡುವ ಸಹೃದಯರು. ಕನ್ನಡಿಗರತಂಟೆಗೆ ಬಂದರೆ ಮಾತ್ರ ಕನ್ನಡಿಗರುಸುಮ್ಮನಿರುವುದಿಲ್ಲ. ಬಾಧಿಪ್ಪಕಲಿಗಳಿಗೆ ಕಲಿಯುಗ ವಿಪರೀತವಾಗಬಲ್ಲವರು. ಕನ್ನಡ ಜನತೆಗೆ ಕೆಲವು ವಿಶೇಷ ಗುಣಗಳಿವೆಇತರ ಭಾಷೆಯ ಜನರಲ್ಲಿ ಪ್ರೀತಿ ತೋರುವುದು ಮತ್ತು ಪರಧರ್ಮವನ್ನುಪರವಿಚಾರವನ್ನುಸಹಿಸಿಕೊಳ್ಳುವುದು. ಪರಧರ್ಮ ಸಹಿಷ್ಣುತೆ ಕನ್ನಡಿಗರರಕ್ತದಲ್ಲೇಬೆರೆತಿದೆ. ಸಂತ ಶಿಶುನಾಳಶರೀ¥s಼ಜ್ಜರಸಾಹಿತ್ಯವನ್ನು ನಾವು ಬೇರೆಯೆಂದು ನೋಡಿಯೇ ಇಲ್ಲ. ಇದು ಕನ್ನಡಿಗರ ವೈಶಾಲ್ಯ ಗುಣ.

ನಾವು ಈಗ ಕನ್ನಡ - ಮಹಾರಾಷ್ಟçಗಳ ಗಡಿ ಸಮಸ್ಯೆಯ ಬೆಳಗಾವಿ ಎಲ್ಲಿಗೆ ಸೇರಬೇಕು ಎಂಬ ವಿಷಯಗಳು ಬಂದಾಗ ಕರ್ನಾಟಕದ ಜನ ಒಟ್ಟಾಗಿ ಉತ್ತರ ಕೊಟ್ಟಿದ್ದಾರೆ. ಕನ್ನಡದ ಒಂದು ಅಂಗುಲ ನೆಲವನ್ನೂ ಬೇರೆಯವರಿಗೆ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಖ್ಯಾತೆ ತೆಗೆದು ಬಂದವರ ಖಾತೆಗಳೇಇಲ್ಲವಾಗಿಸಬಲ್ಲರುಕನ್ನಡಿಗರು. ನಾಡಿಗೆಅವಮಾನವಾದರೆ ನಮಗೆ ಅವಮಾನ. ನುಡಿಗೆಅವಮಾನವಾದರೆಕೆರಳುತ್ತದೆ. ನಮ್ಮಭಿಮಾನ ನಾಡು ನುಡಿಗೆಅನ್ಯಾಯವಾಗಲು ನಾವು ಕನ್ನಡಿಗರು ಬಿಡುವುದಿಲ್ಲ. ನಮ್ಮಲ್ಲಿ ಅದಟು ಇದೆಪರಾಕ್ರಮವೂ ಇದೆ. ಎದುರಿಸುವ ಕೆಚ್ಚೂನೆಚ್ಚೂ ಆತ್ಮವಿಶ್ವಾಸ ಇದ್ದೇ ಇದೆ. ಬೆಳಗಾವಿಯನ್ನು ನಾವು ಕನ್ನಡಿಗರು ಯಾವ ಕಾರಣಕ್ಕೂ ಬಿಟ್ಟು ಕೊಡುವುದಿಲ್ಲ. ಇದು ನಮ್ಮ ಇಚ್ಛೆ ಇದು ನಮ್ಮ ಹೃದಯಂತರಾಳದ ವಾಂಛೆ! ನಮ್ಮದಲ್ಲದನೆಲವನ್ನು ನಾವು ಅಪೇಕ್ಷಿಸುವುದಿಲ್ಲ. ನಮ್ಮ ರಾಜ್ಯದ ಸ್ವತ್ತನ್ನು ನಮ್ಮ ಸರ್ಕಾರ ಕೂಡ ಬಿಟ್ಟು ಕೊಡುವುದಿಲ್ಲ. ಇದು ಸತ್ಯದ ಮಾತು! ಇದು ಪ್ರತಿ ನಿತ್ಯದ ಮಾತು!

 

ಇನ್ನು ಗಡಿನಾಡಿಗೆ ಸಂಬಂಧಿಸಿದಂತೆ ಮತ್ತೊಂದು ವಿಷಯ ನಾನು ಹೇಳಲೇಬೇಕಾಗಿದೆ. ಮಹಾಜನ್ವರದಿಯೇ ಅಂತಿಮ ಎಂದು ನಮ್ಮ ನಲ್ಮೆಯ ಕರ್ನಾಟಕ ಸರ್ಕಾರ ಹೇಳಿದೆ.

 

ಕಾಸರಗೋಡಿನಲ್ಲಿ ಕನ್ನಡ ಕಲೆಸಂಸ್ಕೃತಿಭಾಷೆಯ ಉಳಿವಿಗೆ ತೀವ್ರವಾದ ಗಮನವನ್ನು ಕೊಡಬೇಕಾಗಿದೆ. ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿ ಕನ್ನಡ ಮಾಧ್ಯಮದ ಶಿಕ್ಷಣ ಸಂಸ್ಥೆಗಳನ್ನು ಉಳಿಸುವಕೆಲಸವಾಗಬೇಕು. ಅಲ್ಲೀಗಮಲೆಯಾಳೀಕರಣ ಭರದಿಂದ ನಡೆದಿದೆ. ಕನ್ನಡ ವಿದ್ಯಾರ್ಥಿಗಳು ಕನ್ನಡ ಬಾರದ ಅಧ್ಯಾಪಕರಿಂದ ಪಾಠ ಕೇಳಬೇಕಾದವಿಪರ್ಯಾಸದ ಪರಿಸ್ಥಿತಿ ಅಲ್ಲಿದೆ. ಇತ್ತ ಕಡೆ ನಮ್ಮ ಪ್ರೀತಿಯ ಸರ್ಕಾರ ಆದ್ಯ ಗಮನ ನೀಡಬೇಕಿದೆ.

ಮಹಾಜನ ವರದಿ ರೂಪಿತವಾದ ಕಾಲಕ್ಕೆ ಮದರಾಸುಆಡಳಿತದಲ್ಲಿದ್ದ ದಕ್ಷಿಣ ಕನ್ನಡ ಪ್ರದೇಶವನ್ನುಮೈಸೂರಿನೊಂದಿಗೆಸೇರಿಸುವ ವೇಳೆಕಾಸರಗೋಡುಪ್ರದೇಶವನ್ನುಕೈಬಿಡಲಾಯಿತು. ಆ ಕಾರಣ ಉದ್ಭವವಾದ ಸಮಸ್ಯೆ ಇದು.

 

ಭಾಷಾ ಅಲ್ಪಸಂಖ್ಯಾತ ಗುಂಪಿನ ಮಕ್ಕಳಿಗೆ ಅವರ ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಒದಗಿಸಲು ಸಾಕಷ್ಟು ವ್ಯವಸ್ಥೆಯನ್ನು ಮಾಡಿಕೊಡಬೇಕಾದ ಹೊಣೆ ಪ್ರತಿ ರಾಜ್ಯ ಹಾಗೂ ಸ್ಥಳೀಯ ಆಡಳಿತಗಳದ್ದು. ರಾಷ್ಟçಪತಿಗಳು ಇಂತಹ ಸವಲತ್ತುಗಳನ್ನುಒದಗಿಸಲು ಯಾವುದೇ ರಾಜ್ಯಕ್ಕೆ ನಿರ್ದೇಶನ ನೀಡಬಹುದು. ಎಲ್ಲಾ ರಾಜ್ಯಗಳಲ್ಲೂಭಾಷಾಅಲ್ಪಸಂಖ್ಯಾತರಹಿತರಕ್ಷಣೆಗಾಗಿರಾಷ್ಟçಪತಿಗಳು ನೇಮಿಸಿದ ವಿಶೇಷ ಅಧಿಕಾರಿಯೊಬ್ಬರು ಇರುತ್ತಾರೆ. ಅವರು ರಾಷ್ಟçಪತಿಗಳಿಗೆ ವರದಿ ಸಲ್ಲಿಸುತ್ತಿರುತ್ತಾರೆ.

 

ಈ ಎಲ್ಲ ಹಿನ್ನೆಲೆಯಲ್ಲಿ ವಿಷಯವನ್ನು ಪರಾಮರ್ಶಿಸಿ ಹೇಳುವುದಾದರೆ- ಕೇರಳದಲ್ಲಿನ ಶಾಲೆಗಳಲ್ಲಿ ಕನ್ನಡ ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿಅನ್ಯಾಯವಾಗುತ್ತಿದೆ. ಕಾಸರಗೋಡಿನಕನ್ನಡಿಗರುಎಂದಿದ್ದರೂಕಾಸರಗೋಡು ಕರ್ನಾಟಕಕ್ಕೆ ಸೇರಿಯೇ ಸೇರುತ್ತೆ” ಎಂಬ ಆಶಾವಾದದಲ್ಲಿದ್ದಾರೆ.

ಈ ಬಗ್ಗೆ ನಮ್ಮ ರಾಜ್ಯ ಸರ್ಕಾರ ಸೂಕ್ತವಾದ ಕ್ರಮ ತೆಗೆದುಕೊಳ್ಳಬೇಕೆಂದು ನನ್ನ ಆಗ್ರಹ. ಅಲ್ಲಿ ಮಲೆಯಾಳೀಕರಣದ ದಾಳಿ ನಡೆದಿದೆ. ನಮ್ಮ ಸನ್ಮಾನ್ಯ ಮುಖ್ಯಮಂತ್ರಿ ಅವರು ಆ ಕಡೆ ಆದ್ಯ ಗಮನ ಕೊಡುವುದು ಒಳಿತು.

 

ರಾಜ್ಯದ ಹೊರಭಾಗದಗಡಿಯಲ್ಲಿಅವಶ್ಯವಿರುವಷ್ಟು ಕನ್ನಡ ಶಾಲೆಗಳನ್ನು ತೆರೆಯಲು ಸಹಾಯ ಒದಗಿಸುವುದುನೆರೆ ರಾಜ್ಯದವರು ಕನ್ನಡ ಶಾಲೆಗಳನ್ನು ಮುಚ್ಚಿರುವಂಥಾಗ್ರಾಮಗಳಲ್ಲಿಕನ್ನಡಿಗರಿಗೆ ಕನ್ನಡ ಮಾಧ್ಯಮದ ಮೂಲಕ ಶಿಕ್ಷಣ ನೀಡಲು ಕನ್ನಡ ಮಾಧ್ಯಮದ ಶಾಲೆಗಳನ್ನು ತೆರೆಯುವುದು ಅತ್ಯಗತ್ಯ.

 

ಇಲ್ಲಿ ನಮ್ಮ ಒಳನಾಡಿನಲ್ಲಿ ಹಿಂದಿನ ಸರ್ಕಾರ ಆತುರದ ನಿರ್ಧಾರ ತೆಗೆದುಕೊಂಡು ಕೆಲವು ಕನ್ನಡ ಪ್ರಾಥಮಿಕ ಶಾಲೆಗಳನ್ನು ಮುಚ್ಚಿದೆ. ಅಂಥ ಮುಚ್ಚಿದ ಶಾಲೆಗಳನ್ನು ನಮ್ಮ ಘನ ಸರ್ಕಾರ ಮತ್ತೆ ತೆರೆದು ಅವುಗಳಿಗೆ ಶೈಕ್ಷಣಿಕವಾಗಿ ಪುನರುಜ್ಜೀವನ ನೀಡುವುದು ಆಡಳಿತದ ಜವಾಬ್ದಾರಿಯುತನಡೆಯಾಗುತ್ತದೆ.

 

ಸಾವಿರದ ಸಮಸ್ಯೆಗಳು ಕನ್ನಡಿಗರನ್ನು ಕಿತ್ತು ತಿನ್ನುತ್ತಿವೆ. ಅದರಲ್ಲಿ ಬೇರೆ ರಾಜ್ಯಗಳಿಂದ ಬಂದ ವಲಸಿಗರ ಸಮಸ್ಯೆ ಉಲ್ಬಣವಾಗುತ್ತಿದೆ. ಕನ್ನಡೇತರರು ಇಲ್ಲಿಗೆ ಕೆಲಸ ಅರಸಿ ಬಂದು ಇಲ್ಲಿ ನೆಲೆ ನಿಂತರೆ ಹಾಗೆ ನೆಲೆಗೊಂಡವರುಕನ್ನಡವನ್ನು ಪ್ರೀತಿಯಿಂದ ಕಲಿಯಬೇಕುಇಲ್ಲವಾದರೆ ಕನ್ನಡ ಕಾರ್ಯಕರ್ತರುಕನ್ನಡವನ್ನುಕಲಿಸುತ್ತಾರೆ. ಅವರಿಗೆ ಇಲ್ಲಿಯ ನೆಲ ಬೇಕುಇಲ್ಲಿಯ ಜಲ ಬೇಕು. ಇಲ್ಲಿಯ ಸಕಲ ಸಂಪನ್ಮೂಲ ಬೇಕುಅದರೆಅಂಥವರಿಗೆ ಕನ್ನಡ ಬೇಕಾಗಿಲ್ಲ! ಹೀಗೆ ಹೇಳಿದರೆ ಹೇಗೆಕನ್ನಡಿಗರ ಜೊತೆ ಸ್ನೇಹ ಪ್ರೀತಿ ವಿಶ್ವಾಸಗಳಿಂದಕನ್ನಡೇತರರು ಒಂದಾಗಿ ಸೌಹಾರ್ದದಿಂದ ಬಾಳಿ ಬದುಕಬೇಕು. ಐ.ಎ.ಎಸ್. ಮುಂತಾದ ಹಿರಿಯ ಅಧಿಕಾರಿಗಳು ಕನ್ನಡ ಕಲಿಯಬೇಕು. ಸರ್ಕಾರ ಅಂಥವರಿಗೆ ಮೂರು ತಿಂಗಳ ಅಥವಾ ಆರು ತಿಂಗಳ "ಕನ್ನಡ ಕಲಿ-ನಲಿ" ಎಂಬ ಪ್ರಶಿಕ್ಷಣ ಕೊಡಬೇಕು.

ಅನೇಕರು ಇನ್ನೂ ಆಂಗ್ಲ ಭಾಷೆಯಲ್ಲೇ ಟಿಪ್ಪಣಿ ಬರೆಯುತ್ತಾರೆ. ಅವರಿಗೆ ಕನ್ನಡಿಗರಎಚ್ಚರಿಕೆಯ ಮಾತು ಇಷ್ಟೇನಿಯತ್ತಿನಿಂದ ಕನ್ನಡ ಕಲಿತು ಆಡಳಿತ ನಡೆಸಿ. ಕನ್ನಡ ನಾಡಲ್ಲಿ ಕನ್ನಡವೇ ಸಾರ್ವಭೌಮಕನ್ನಡಕ್ಕೇ ಆದ್ಯತೆ! ಇಲ್ಲಿ ಕನ್ನಡಕ್ಕೆ ಮೊದಲ ಮಣೆ ಸಂದಾಯ ಆಗಬೇಕು. ಇನ್ನೆಲ್ಲವೂ ಗೌಣ. ಕನ್ನಡ ಕಲಿಯುವುದೆಂದರೆ ಕರ್ನಾಟಕದ ದೇಸಿ ಭಾಷೆಯ ಆಳ ಅಗಲಗಳ ಅರಿಯುವುದು. ಕನ್ನಡ ಸಂಸ್ಕೃತಿ ತಿಳಿಯುವುದು.

 

ಪ್ರಾಥಮಿಕ ಶಾಲೆಗಳಲ್ಲಿ ಕನ್ನಡಕ್ಕೆ ನಾವೆಲ್ಲರೂ ಆದ್ಯತೆಯನ್ನು ಕೊಡಬೇಕು. ಇಲ್ಲಿಯ ಪ್ರಾದೇಶಿಕ ಭಾಷೆ ಕನ್ನಡ ಅದು ಮೊದಲು! ಆ ಮೇಲೆ - ಉಳಿದುದೆಲ್ಲಾ! ಮಗು ಚೆನ್ನಾಗಿ ವಿಷಯ ಗ್ರಹಿಸಬೇಕಾದರೆ ಕನ್ನಡ ಅತಿ ಮುಖ್ಯ. ಗ್ರಹಿಸಿದ ವಿಷಯವನ್ನು ಬರೆಯಬೇಕಾದರೂ ಅಷ್ಟೇ.

 

ಐದನೇತರಗತಿವರೆಗೆ ಕನ್ನಡ ಕಲಿಕೆಯನ್ನು ಸರ್ಕಾರ ಕಡ್ಡಾಯ ಗೊಳಿಸಬೇಕುಆ ಮೇಲೆ ಆ ಮಗುವಿನ ಬೌದ್ಧಿಕ ಸಾಮರ್ಥ್ಯದ ಮೇಲೆ ಎಷ್ಟು ಭಾಷೆಗಳನ್ನಾದರೂಕಲಿಯಲಿ. ನಮ್ಮ ವಿರೋಧವಿಲ್ಲ. ಇದು ಸೈದ್ಧಾಂತಿಕ ತರ್ಕ. ಆಗಲೇ ಬೇಕಾದ ಕಾರ್ಯ. ಈ ಬಗ್ಗೆ ಗಮನಕೊಡಲಿ ನಮ್ಮ ನಲ್ಮೆಯ ಸರ್ಕಾರ.

ಸಿರಿಗಂಧದ ಕನ್ನಡ

 

 

 

ಯುಗ ಯುಗದಿಂದಲೂ ಹರಿದು ಬಂದಿದೆ

ಕನ್ನಡದ ನದಿಯು

ಜನಪದರ ಕಾಲದಿಂದ ಕಂಗೊಳಿಸುತ ಬಂದಿದೆ

ಕನ್ನಡದ ಪಾವನ ತೀರ್ಥವಿದು;

ವಾಗರ್ಥದಹಿರಿಮೆಯಿದು

ನಮ್ಮ ಕನ್ನಡ

ಅಮ್ಮನ ಅಕ್ಕರೆ ಮಾತು

ನಲ್ಮೆ ಕನ್ನಡ!

ಕವಿಗಳು ಬರೆದ ಕಾವ್ಯದ ಕನ್ನಡ

ಹೆಜ್ಜೆ ಹೆಜ್ಜೆ ಗೆಜ್ಜೆ ಪಲುಕು ನೃತ್ಯದ ಕನ್ನಡ

ಸೊಬಗಿನ ಸೌಂದರ್ಯದ ಶಿಲ್ಪಿ ಸಿರಿ ಕನ್ನಡ

ಜನಮನದ ತನು ನುಡಿದ ಸಿರಿಗಂಧದ ಕನ್ನಡ

ಕನ್ನಡ ಕನ್ನಡಹಾಲ್ಜೇನು ಕನ್ನಡ!

 

ಕನ್ನಡ ಭಾಷೆಯ ಸಮಕಾಲೀನ ಸವಾಲುಗಳು ಮತ್ತು ಭವಿತವ್ಯದ ಹಾದಿ ಕನ್ನಡ ಭಾಷೆಯ ಅನನ್ಯತೆಅಸ್ಮಿತೆಯ ಬಗ್ಗೆ ನಾನು ಒಬ್ಬ ಪ್ರಾಚಾರ್ಯನಾಗಿಭಾಷಾವಿದ್ವಾಂಸನಾಗಿ ಸಾಕಷ್ಟು ವಿಷಯಗಳನ್ನು ನಿಮ್ಮ ಮುಂದೆ ಇದಾಗಲೇಹಂಚಿಕೊಂಡಿದ್ದೇನೆ. ಕನ್ನಡ ಭಾಷೆಯು ಈ ನಾಡಿನ ಜನಮನದಭಾಷೆಯಾಗಿಆಡಳಿತ ಭಾಷೆಯಾಗಿ ಸೂರ್ಯಚಂದ್ರರಿರುವತನಕವೂ ಇರುತ್ತದೆ ಎನ್ನುವ ದಿಟದ ಭಾವನೆ ನನ್ನದು ಆದರೆಅಷ್ಟು ಮಾತ್ರವೇ ಸಾಕೆ ಎನ್ನುವ ಪ್ರಶ್ನೆ ಇಂದು ನಮ್ಮ ಮುಂದಿದೆ.

 

ನಮ್ಮ ಜೀವನದ ಜೀವ ಜೀವಾಳ ಕನ್ನಡ

ಯಾವ ಭಾಷೆಗೂ ಕಡಿಮೆಯಿಲ್ಲ

ನಮ್ಮ ನಲ್ಮೆ ಕನ್ನಡ!

ಪರಿಸರದ ಕಂಪಿಗೆನುಡಿನುಡಿಯಇಂಪಿಗೆ,

ಮನದಾಳದ ತಂಪಿಗೆ ಆಡಿ ಶುಭ ಕನ್ನಡ!

ಅರಿವಿನಪರಿಧಿಯವಿಸ್ತರಣೆಗೆ

ಬದುಕಿನ ನೆಮ್ಮದಿ ಸಂಸಾರ ಸಾರಕ್ಕೆ

ಜೀವನ ಸೌಂದರ್ಯದ ಕಲೆಯಸಂಸ್ಕಾರಕ್ಕೆ

ಹರಿಯಲಿ ಕನ್ನಡ ವಾಹಿನಿ

ಜಗದ ಮೂಲೆ ಮೂಲೆಗೂಹಾಯಲಿ

ಕನ್ನಡದ ಅನರ್ಘ್ಯ ವಾಣಿ

ಪಂಪನರನ್ನನಜನ್ನನ ಹರಿಹರ ರಾಘವಾಂಕರ

ಶರಣರಕೀರ್ತನಕಾರರಕುಮಾರವ್ಯಾಸಸರ್ವಜ್ಞರ

ಅಮೃತ ವಾಹಿನಿ ಕನ್ನಡದ ಅಮೃತ ವಾಹಿನಿ

 

ಭಾಷೆ ಎನ್ನುವುದು ಇಂದು ಭಾವಕೋಶದನೆಲ ಜಲದಸಾಮುದಾಯಿಕ ಸಂಸ್ಕೃತಿಯದನಿಯಾಗಿ ಮಾತ್ರವೇ ಉಳಿದಿಲ್ಲ. ಜಾಗತೀಕರಣದ ಫಲವಾಗಿ ರೂಪುಗೊಂಡಿರುವ ಇಂದಿನ ಅರ್ಥವ್ಯವಸ್ಥೆ ಮತ್ತು ತಂತ್ರಜ್ಞಾನಗಳುದೇಶಭಾಷೆಗಳಗಡಿಗಳನ್ನು ಮೀರಿ ಎಲ್ಲರನ್ನೂಎಲ್ಲವನ್ನೂ ಆವರಿಸಿಕೊಂಡಿವೆ. ಹಾಗಾಗಿಸಹಜವಾಗಿಯೇ ಭಾಷೆ ಎನ್ನುವುದು ವ್ಯಾವಹಾರಿಕ ಸಾಧನವಾಗಿದುಡಿಮೆಯ ಮಾರ್ಗವಾಗಿ ತನ್ನ ಸ್ವರೂಪವನ್ನು ಹಿಗ್ಗಿಸಿಕೊಂಡಿದೆ. ಸಾಮುದಾಯಿಕ ಬದುಕಿನಿಂದ ದೂರವಾಗಿ ವ್ಯಕ್ತಿ ಕೇಂದ್ರಿತ ಬದುಕು ಮುನ್ನೆಲೆಗೆ ಬಂದಿರುವ ಇಂದಿನ ವಾಸ್ತವದ ಜಗತ್ತಿನಲ್ಲಿ ಅನ್ನ ನೀಡುವಭಾಷೆಯ ಬಗ್ಗೆ ಜನಸಮುದಾಯದಲ್ಲಿ ವಿಶೇಷ ಸೆಳೆತ ಕಂಡು ಬರುತ್ತಿರುವುದಕ್ಕೆ ನಾವು ಕುರುಡಾಗಬಾರದು.

 

ನಗರಗಳುಗ್ರಾಮಗಳು ಎನ್ನುವ ಭೇದವಿಲ್ಲದೆ ನಮ್ಮನ್ನು ಆವರಿಸಿರುವ ಇಂಗ್ಲಿಷ್ ಮಾಧ್ಯಮ ಶಿಕ್ಷಣದ ಹಿಂದಿನ ಹಂಬಲವೂ ಇದೇ ಅಗಿರುವುದನ್ನು ನಾವು ಸ್ಪಷ್ಟವಾಗಿ ಗುರುತಿಸಬಹುದು. ಕನ್ನಡ ಅಥವಾ ಭಾರತೀಯ ಭಾಷೆಗಳು ಮಾತ್ರವೇ ಅಲ್ಲಜಾಗತಿಕವಾಗಿ ಎಲ್ಲ ಅಭಿವೃದ್ಧಿಶೀಲದೇಶಗಳಲ್ಲಿಯೂಅನ್ನದ ಭಾಷೆ'ಯಾಗಿ ಅನ್ಯ ಭಾಷೆಯೊಂದಕ್ಕೆ ಮುಖ ಮಾಡಿರುವ ವಾಸ್ತವ ನಮ್ಮ ಮುಂದೆ ಕಂಡುಬರುತ್ತದೆ. ಇಪ್ಪತ್ತೊಂದನೆಯ ಶತಮಾನದಎರಡನೆಯ ದಶಕದಲ್ಲಿ ನಿಂತು ಕನ್ನಡದ ನನ್ನ ಬಂಧುಬಾಂಧವರನ್ನುಉದ್ದೇಶಿಸುವಾಗ ನನಗೆ ಇಂದಿನ ಕಟುವಾಸ್ತವಗಳಿಗೆ ಬೆನ್ನು ಹಾಕುವ ಮನಸ್ಸಿಲ್ಲ. ಏಳೂವರೆದಶಕವನ್ನು ಮೀರಿದ ನನ್ನ ಬದುಕಿನ ಅನುಭವಕ್ಕೆ ಇಪ್ಪತ್ತು-ಮೂವತ್ತರ ವಯೋಮಾನದ ಇಂದಿನ ಯುವಕ-ಯುವತಿಯರತಲ್ಲಣಗಳಅರಿವಿಲ್ಲದೇಹೋದೀತೇನನ್ನ ಮಕ್ಕಳುಮೊಮ್ಮಕ್ಕಳುಅವರನ್ನೂ ಮೀರಿದ ಸಾವಿರಾರು ಸಂಖ್ಯೆಯ ಹಿರಿಕಿರಿಯ ವಿದ್ಯಾರ್ಥಿಗಳ ತಲ್ಲಣಗಳಿಗೆ ಮುಖಾಮುಖಿ ಯಾಗುತ್ತಲೇ ಬಂದವನು ನಾನು.

 

ಹಾಗಾಗಿಯೇ ನಾನು ಸ್ಪಷ್ಟವಾಗಿ ಹೇಳುತ್ತಿದ್ದೇನೆಎರಡು ಸಾವಿರ ವರ್ಷಗಳಿಗೂ ಮೀರಿದ ಇತಿಹಾಸವಿರುವಜಗತ್ತಿನ ಶ್ರೇಷ್ಠ ಸಂಸ್ಕೃತಿಚಿಂತನೆಯನ್ನು ಪೊರೆದಿರುವ ಈ ನನ್ನ ಭಾಷೆ ಕನ್ನಡ ಮುಂದಿನ ದಿನಗಳಲ್ಲಿಯೂ ತನ್ನ ಪಾರಮ್ಯವನ್ನುಮೆರೆಯಬೇಕೆಂದರೆ ಅದು ಮನೆಮನದಭಾಷೆಯಾಗಿಉಳಿಯಬೇಕು. ಜೊತೆಗೆ ಕನ್ನಡಿಗರ ಭವ್ಯ ಭವಿತವ್ಯದಭಾಷೆಯೂ ಆಗಬೇಕು. ಕನ್ನಡಿಗರಿಗೆಅನ್ನವಿಕ್ಕುವಭಾಷೆಯಾಗಿಕರುನಾಡಿನಭವಿತವ್ಯವನ್ನುಮುನ್ನಡೆಸುವಕಹಳೆಯಾಗಿಕಂಗೊಳಿಸಬೇಕು. ಹೃದಯಕ್ಕೆ ಒಂದು ಭಾಷೆಬದುಕಲಿಕ್ಕೆದುಡಿಮೆಗೆ ಇನ್ನೊಂದು ಭಾಷೆ ಎನ್ನುವ ಇಂದಿನ ಇಬ್ಬಂದಿತನದ ಪರಿಸ್ಥಿತಿಯನ್ನು ತೊಡೆದು ನಲಿಯಲುಕಲಿಯಲುದುಡಿಯಲುಬದುಕಲುಬಾಳಲುನಮ್ಮದೆಲ್ಲವನ್ನೂಜಗತ್ತಿನೊಂದಿಗೆ ಹಂಚಿಕೊಳ್ಳಲುಜಗತ್ತಿನ ಎಲ್ಲದನ್ನೂನಮ್ಮೊಳಗೆತಂದುಕೊಳ್ಳಲು ಇರುವ ಸಶಕ್ತಸಮರ್ಥ ಭಾಷೆಯಾಗಿ ಕನ್ನಡ ರಾರಾಜಿಸಬೇಕು. ನನ್ನ ಕನ್ನಡ ನಾಲ್ಕು ಗೋಡೆಗಳ ನಡುವೆ ಉಳಿಯುವ ಭಾಷೆ ಎಂದೂ ಆಗಿರಲಿಲ್ಲ. ಹಾಗೆ ಅದು ಇಂದೂಮುಂದೂಎಂದೂ ಆಗಬಾರದು ಕೂಡ. ನನ್ನ ಕನ್ನಡ ಜಗತ್ತಿನ ಅಷ್ಟೂ ತಿಳಿವನ್ನು ನನಗೆ ಉಣಬಡಿಸುವ ಜ್ಞಾನದಕೌಶಲದಭಾಷೆಯಾಗಿ ಈ ಹಿಂದೆಯೂವಿಜೃಂಭಿಸಿತ್ತುಇಂದೂಮುಂದೂ ಅದು ಹಾಗೆಯೇ ವಿಜೃಂಭಿಸಬೇಕು. ಕನ್ನಡವೆನ್ನುವುದು ಸಭ್ಯತೆಯಸಜ್ಜನಿಕೆಯ ಗುರುತು ಮಾತ್ರವೇ ಅಲ್ಲಅದು ಮಹತ್ವಾಕಾಂಕ್ಷೆಯಮಹಾನ್ ಅನ್ವೇಷಣೆಯಭಾಷೆಯೂ ಕೂಡ ಎನ್ನುವುದನ್ನು ನನ್ನ ಜನ ಮರೆಯಬಾರದು.

ಜ್ಞಾನಕೋಶದಭಾಷೆಯಾಗಿ ಕನ್ನಡಕನ್ನಡವೆನ್ನುವುದುಕಪ್ಪೆಚಿಪ್ಪಿನಲ್ಲಿ ಅಡಗಿ ಕೂರಬೇಕಾದಭಾಷೆಯಲ್ಲ. ನನ್ನ ಗೆಳೆಯರೇನನ್ನ ಯುವ ಗೆಳೆಯರೇ... ಅದು ಮಹತ್ವಾಕಾಂಕ್ಷೆಯನೂಲಿನಲ್ಲಿ ತನ್ನ ಸುತ್ತ ಗೂಡುಕಟ್ಟಿಕೊಂಡು ಬಣ್ಣ ಬಣ್ಣದ ರೆಕ್ಕೆಗಳನ್ನುಬಲಿಸಿಕೊಂಡುಜಗತ್ತನ್ನುನಿಬ್ಬೆರಗಾಗಿಸುವಸಾಮರ್ಥ್ಯವಿರುವ ಮಹಾನ್ ಭಾಷೆಮೇರು ಭಾಷೆ ಕನ್ನಡ. ಹಾಗಾಗಿಯೇಇದು ಸತ್ತಂತಿಹರನ್ನೂಬಡಿದೆಚ್ಚರಿಸುವ ಭಾಷೆ ಎನ್ನುವ ಕವಿವಾಣಿಯನ್ನುಮರೆಯದಿರೋಣ.

 

ಈ ಕರ್ನಾಟದೇಶದೊಳ್ ಆಳುವ ಸರ್ಕಾರಗಳು ಯಾವುದೇ ಇರಲಿಎಡ-ಬಲ-ಮಧ್ಯಮ ಮಾರ್ಗಗಳೇನೇ ಇರಲಿಕನ್ನಡವೆಂಬುದುಕನ್ನಡಿಗರಅನ್ನದಹಕ್ಕಿನ ಭಾಷೆ ಎನ್ನುವುದನ್ನು ನಾವು ಮರೆಯಬಾರದು. ಆಳುವ ಸರ್ಕಾರಗಳು ಯಾವುದೇ ಇರಲಿಯಾವುದೇ ಬರಲಿ ಅವುಗಳ ಮುಂದೆ ನನ್ನ  ಬಿನ್ನಹವೊಂದೇ. ಕನ್ನಡವನ್ನುಬರಿದೇಭಾವಕೋಶದಭಾಷೆಯಾಗಿ ಮಾತ್ರವೇ ಕಾಣಬೇಡಿಅದು ಜ್ಞಾನಕೋಶದ ಭಾಷೆಕೌಶಲದ ಭಾಷೆಕನ್ನಡಿಗರಮಹತ್ವಾಕಾಂಕ್ಷೆಯ ಭಾಷೆಕ್ರಿಯಾಶೀಲತೆಉದ್ಯೋಗಶೀಲತೆಯ ಭಾಷೆ ಎನ್ನುವುದನ್ನು ಮರೆಯದಿರಿ. ನನ್ನ ಜನರಿಗೆ ಅವರಾಡುವಭಾಷೆಯಲ್ಲಿಯೇ ಜಗತ್ತಿನ ಜ್ಞಾನವನ್ನು ಕೊಡಲು ಪಣ ತೊಡಿ."

 

ಇಲ್ಲಿ ಒಂದು ವಿಚಾರವನ್ನು ಸರಳವಾಗಿನೇರವಾಗಿ ಹೇಳುತ್ತೇನೆ ಕೇಳಿ: ನಮ್ಮ ಜನತೆಬಹುಮುಖ್ಯವಾಗಿ ನಮ್ಮ ಯುವಪೀಳಿಗೆ ತಮ್ಮ ಜೀವನದಲ್ಲಿ ಒಂದಕ್ಷರವನ್ನೂಕೇಳಿರದ ಒಂದು ಭಾಷೆಯಲ್ಲಿ ಅದು ಜರ್ಮನ್ಜಪಾನೀಸ್ಸ್ಪಾö್ಯನಿಷ್ರಷಿಯನ್ಮ್ಯಾಂಡರೀನ್ ಮುಂತಾದ ಯಾವುದೇ ಆಗಿರಲಿಆ ಭಾಷೆಗಳನ್ನಾಡುವ ದೇಶಗಳಿಗೆ ಶಿಕ್ಷಣಕ್ಕೆಂದು ತೆರಳಿದಾಗ ಅಲ್ಪ ಅವಧಿಯಲ್ಲಿಯೇ ಆ ಭಾಷೆಗಳನ್ನುಅರೆಬರೆಯಾಗಿ ಕಲಿತುಆ ಭಾಷೆಗಳ ಶಿಕ್ಷಣ ಮಾಧ್ಯಮದಲ್ಲಿಯೇ ವೈದ್ಯಕೀಯ ಶಿಕ್ಷಣವನ್ನೂಇಂಜಿನಿಯರಿಂಗ್ಶಿಕ್ಷಣವನ್ನೋ ಅಥವಾ ಮತ್ತಾವುದೋ ಉನ್ನತ ಶಿಕ್ಷಣಪದವಿಗಳನ್ನೋನಿರಾಯಾಸವಾಗಿ ಪಡೆಯುತ್ತಾರೆ. ಹೀಗೆ ಆ ಭಾಷೆಗಳನ್ನೇ ತಿಳಿಯದ ಇಲ್ಲಿಂದ ಹೋದವರುವರ್ಷಗಟ್ಟಲೆ ವಿವಿಧ ವಿಷಯಗಳಲ್ಲಿ ಸಂಶೋಧನೆಗಳನ್ನು ನಡೆಸಿ ಆ ಭಾಷೆಗಳಲ್ಲಿ ಪ್ರಬಂಧಗಳನ್ನುಮಂಡಿಸಿದವರಿದ್ದಾರೆ. ಹೀಗಿರುವಾಗ ಹುಟ್ಟಾರಭ್ಯ ತಾವು ಆಡಿರುವನಲಿದಾಡಿರುವ ತಮ್ಮದೇ ಭಾಷೆಯಲ್ಲಿ ವೈದ್ಯಕೀಯತಂತ್ರಜ್ಞಾನ ಮುಂತಾದ ವೃತ್ತಿಪರ ಶಿಕ್ಷಣಗಳನ್ನಾಗಲಿವಿವಿಧ ಉನ್ನತ ಶಿಕ್ಷಣಗಳನ್ನಾಗಲಿ ತಮ್ಮದೇ ಭಾಷೆಯಲ್ಲಿ ಪಡೆಯುವ ಸಾಧ್ಯತೆ ಇದ್ದರೆ ಅವರು ಅದನ್ನು ನಿರಾಕರಿಸುವರೇ?

 

ಈ ಹಿನ್ನೆಲೆಯಲ್ಲಿ ನಮ್ಮ ಮುಂದಿರುವ ಬೃಹತ್ ಪ್ರಶ್ನೆ ಎಂದರೆ ಕನ್ನಡದಲ್ಲಿಯೇ ಉನ್ನತ ಶಿಕ್ಷಣವನ್ನು ನೀಡಲುಪಡೆಯಲು ನಮಗೇಕೆ ಸಾಧ್ಯವಾಗಿಲ್ಲ ಎನ್ನುವುದುಒಂದೊಮ್ಮೆ ಅದು ಸಾಧ್ಯವಿಲ್ಲ ಎನ್ನುವ ಭಾವನೆಯನ್ನು ಹೇಡಿಗಳಾರಾದರೂತುಂಬಿದ್ದರೆ ಅವರನ್ನು ಕನ್ನಡಿಗರು ಎಂದಾದರೂ ಕರೆಯಲಾದೀತೇ?

 

ಮಾನ್ಯ ಮುಖ್ಯಮಂತ್ರಿಗಳೇಇಂದಿನ ಈ ಶುಭ ಸಂದರ್ಭದಲ್ಲಿ ಸಮಸ್ತ ಕನ್ನಡಿಗರ ಪರವಾಗಿ ಒಂದು ಗಟ್ಟಿ ನಿರ್ಧಾರ ಮಾಡಿ ನಾನು ಓರ್ವ ಸಾಹಿತಿಯಾಗಿ ಆಗಲಿಓರ್ವ ಕನ್ನಡ ಭಾಷಾಪ್ರಾಚಾರ್ಯನಾಗಿ ಆಗಲಿಕನ್ನಡದ ಮೇಲಿನ ಅಭಿಮಾನಕ್ಕಾಗಿಯಾಗಲಿ ನಿಮ್ಮ ಮುಂದೆ ಈ ಮಾತು ಹೇಳುತ್ತಿಲ್ಲ. ಬದಲಿಗೆಶಿಕ್ಷಣ ವ್ಯವಸ್ಥೆಯನ್ನು ಬಹುಕಾಲ ಕಂಡಿರುವಅದರ ಒಳಹೊರಗನ್ನುಅರಿತವನಾಗಿ ಹೇಳುತ್ತಿದ್ದೇನೆ. ಕನ್ನಡದಲ್ಲಿಯೂ ವೃತ್ತಿಪರ ಶಿಕ್ಷಣಉನ್ನತ ಶಿಕ್ಷಣ ನೀಡಿಯೇತೀರುತ್ತೇವೆ ಎನ್ನುವ ಪಣ ತೊಡಿ.

ನಮ್ಮ ಯುವಪೀಳಿಗೆ ತಮ್ಮ ಕಿವಿಗಳಿಗೆ ಎಂದೂ ಬಿದ್ದೇ ಇರದಯಾವುದೋ ದೂರ ದೇಶದ ಕಂಡು ಕೇಳರಿಯದ ಭಾಷೆಯಲ್ಲಿ ಆ ದೇಶಗಳಿಗೆ ತೆರಳಿ ವೈದ್ಯಕೀಯವೃತ್ತಿಪರಉನ್ನತ ಶಿಕ್ಷಣವನ್ನು ಪಡೆಯುತ್ತಾರೆ ಎನ್ನುವುದಾದರೆ ನಮ್ಮದೇ ಭಾಷೆಯಲ್ಲಿ ನಗರ-ಹಳ್ಳಿ ಎಂಬ ಹಂಬಲವಿಲ್ಲದ ಈ ನಮ್ಮ ಕರುನಾಡ ಮಕ್ಕಳು ವೈದ್ಯಕೀಯವೃತ್ತಿಪರಉನ್ನತ ಶಿಕ್ಷಣಗಳನ್ನುಪಡೆಯಲಾಗುವುದಿಲ್ಲವೇಏಕೆ ನಮಗೆ ನಮ್ಮ ಭಾಷೆಯಲ್ಲಿ ಉನ್ನತ ಶಿಕ್ಷಣವನ್ನುಕೊಡಲಾಗುತ್ತಿಲ್ಲನಮ್ಮ ವಿಶ್ವವಿದ್ಯಾಲಯಗಳನ್ನು ನಾನು ಈ ವೇದಿಕೆಯಲ್ಲಿ ನಿಂತುಸಮಸ್ತ ಕನ್ನಡಿಗರ ಪರವಾಗಿ ಕೇಳುತ್ತಿದ್ದೇನೆನಾವು ಕೇವಲ ಎಡಬಲದ ವಾದ-ವಿವಾದಗಳಿಗೆ ಮಾತ್ರವೇ ನಮ್ಮ ಬೌದ್ಧಿಕತೆಯನ್ನುಸೀಮಿತಗೊಳಿಸಿಕೊಳ್ಳಬೇಕೆಕನ್ನಡವನ್ನು ಸಮರ್ಥ ಜ್ಞಾನದಾಯಿನಿಭಾಷೆಯಾಗಿ ಬೆಳೆಸುವ ಜವಾಬ್ದಾರಿ ನಮಗಿಲ್ಲವೇ?

 

ನಾನು ಇಲ್ಲಿ ಯಾವುದೇ ಒಂದು ಪಕ್ಷಸಿದ್ಧಾಂತದ ಪರವಾಗಿ ಮಾತನಾಡಲು ಬಂದು ನಿಂತಿಲ್ಲ. ಸಮಷ್ಟಿ ಪ್ರಜ್ಞೆಯನ್ನುಉಸಿರಾಗಿ ಕೊಟ್ಟ ಕನ್ನಡವೇ ನನ್ನ ಸಿದ್ಧಾಂತನಮ್ಮ ನಡುವಿನ ಎಲ್ಲ ವಿಚಾರಭೇದಗಳನ್ನುಬದಿಗಿರಿಸೋಣನಾನು ಕೇಳುವ ಪ್ರಶ್ನೆ ಒಂದೇಕನ್ನಡಿಗರಾದ ನಮಗೆ ನಮ್ಮ ಮುಂದಿನ ಪೀಳಿಗೆಗೆ ಜ್ಞಾನವಿಜ್ಞಾನತಂತ್ರಜ್ಞಾನವನ್ನು ಕನ್ನಡದಲ್ಲಿ ಕಲಿಸಲು ಸಾಧ್ಯವಿಲ್ಲವೇಜಪಾನ್ದಕ್ಷಿಣ ಕೊರಿಯಾತೈವಾನ್ಜರ್ಮನಿಸ್ಪೇನ್ಚೀನಾಫ್ರಾನ್ಸ್ರಷಿಯಾ ಮುಂತಾದ ಅನೇಕ ದೇಶಗಳಲ್ಲಿ ಇದು ಸಾಧ್ಯವಿದ್ದ ಮೇಲೆ ಏಳು ಕೋಟಿ ಕನ್ನಡಿಗರಿಗೆ ತಮ್ಮದೇ ಭಾಷೆಯಲ್ಲಿ ಉನ್ನತ ಶಿಕ್ಷಣವನ್ನು ನೀಡುವ ಸಾಮರ್ಥ್ಯಇಚ್ಛಾಶಕ್ತಿ ನಮ್ಮ ಸರ್ಕಾರಗಳಿಗಿಲ್ಲವೇಅಗಾಧ ಪ್ರತಿಭೆಅನ್ವೇಷಣೆಕುತೂಹಲವನ್ನುಳ್ಳ ನನ್ನ ಜನ ಭಾಷೆಯ ಕಾರಣವೊಂದರಿಂದಾಗಿಯೇ ಶುದ್ಧ ವಿಜ್ಞಾನವೃತ್ತಿಪರ ಶಿಕ್ಷಣಗಳಿಂದ ದೂರ ಉಳಿಯಬೇಕೆಕನ್ನಡದಲ್ಲಿ ಎಂಜಿನಿಯರಿಂಗ್ವೈದ್ಯಕೀಯ ಶಿಕ್ಷಣ ಪಡೆಯುವುದು ನಮಗೆ ಅಪಹಾಸ್ಯದ ವಿಷಯವೇಆಳುವ ಸರ್ಕಾರಕ್ಕೆಶಿಕ್ಷಣ ನೀಡುವ ವಿಶ್ವವಿದ್ಯಾಲಯಗಳಿಗೆ ನಾನು ಹೇಳುವುದೊಂದೇಕನ್ನಡವನ್ನು ಜ್ಞಾನವಿಜ್ಞಾನ,  ತಂತ್ರಜ್ಞಾನದ ಭಾಷೆಯಾಗಿ ನೀವು ರೂಪಿಸದೆ ಹೋದರೆ ನೀವು ಈ ನಾಡಿಗೆಇಲ್ಲಿನ ಜನತೆಗೆ ಅಖಂಡ ದ್ರೋಹ ಬಗೆದಂತೆ.

ಕನ್ನಡದಲ್ಲಿ ಎಷ್ಟೆಲ್ಲಾ ಗಹನವಿಚಾರಪೂರ್ಣ ವಿಷಯಗಳನ್ನು ಹತ್ತಾರು ಶತಮಾನಗಳ ಹಿಂದೆಯೇ ಬೆಡಗಿನಒನಪಿನಒಡಪಿನ ಭಾಷೆಯಲ್ಲಿ ಕಟ್ಟಿಕೊಡಲಾಗಿದೆ. ತತ್ವಅನುಭಾವಅಧ್ಯಾತ್ಮವನ್ನು ಒಂದು ಭಾಷೆ ಸರಳವಾಗಿಸುಲಲಿತವಾಗಿಸಿಪ್ಪೆ ಸುಲಿದಂತೆಹೇಳಬಲ್ಲುದಾದರೆ ಅದು ವಿಜ್ಞಾನತಂತ್ರಜ್ಞಾನಗಳವಿಷಯವನ್ನೂ ಅಷ್ಟೇ ಸರಳವಾಗಿಸುಲಲಿತವಾಗಿಹೇಳಬಲ್ಲರು ಎಂದೇ ಅರ್ಥ. ತಿಳಿಗನ್ನಡವೆಂಬುದುತಿಳಿವಿನಗನ್ನಡವೂಶುದ್ಧಪರಿಶುದ್ಧ ಜ್ಞಾನವನ್ನು ಅಭಿವ್ಯಕ್ತಿಸಬಲ್ಲಸ್ಫಟಿಕದಶಲಾಕೆಯಕನ್ನಡವೂ ಹೌದುಕನ್ನಡವೆಂಬುದುಭಾವಕೋಶದಭಾಷೆಯಾಗಿ ಮಾತ್ರವಲ್ಲದೆ ಜ್ಞಾನಕ್ರಿಯಾಶೀಲತೆಅನ್ವೇಷಣೆಯಭಾಷೆಯಾಗಿಯೂಸಮರ್ಥವಾಗಿಎದೆಯುಬ್ಬಿಸಬಲ್ಲದುಆದರೆನಾವು ಅದನ್ನು ಹಾಗೆ ನಿರೂಪಿಸುವಲ್ಲಿಸೋತಿದ್ದೇವೆ.

 

ವೃತ್ತಿಪರ ಶಿಕ್ಷಣಉನ್ನತ ಶಿಕ್ಷಣಗಳಲ್ಲಿ ಕನ್ನಡ ಒಂದು ಶಿಕ್ಷಣ ಮಾಧ್ಯಮವಾಗಿರಾರಾಜಿಸುವಂತೆ ಮಾಡಲು ನಾವು ಪಣ ತೊಡಬೇಕು. ಇಂಗ್ಲಿಷ್‌ನಲ್ಲಿಯೇ ಉನ್ನತ ಶಿಕ್ಷಣವನ್ನುಪಡೆಯುತ್ತೇನೆ ಎನ್ನುವವರು ಅದರಲ್ಲಿಯೇಪಡೆಯಲಿಅವರ ನಿರ್ಧಾರದ ಬಗ್ಗೆ ನನಗೆ ತಕರಾರಿಲ್ಲ. ಆದರೆಕನ್ನಡದಲ್ಲಿ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಿಲ್ಲ ಎನ್ನುವ ಕೊರಗು ಯಾವುದೇ ಕನ್ನಡಿಗನಿಗೆ ಇರಬಾರದು. ವಿಜ್ಞಾನದ ವಿಷಯಗಳನ್ನು ಕನ್ನಡದಲ್ಲಿ ಕಲಿಯಲು ಸಾಧ್ಯವಾಗದ ಕಾರಣಕ್ಕೆ ಈ ನಾಡಿನ ಪ್ರತಿಭಾವಂತ ವಿದ್ಯಾರ್ಥಿಯೊಬ್ಬ ತನಗಿಷ್ಟವಿಲ್ಲದಮತ್ತಾವುದೋಶಿಕ್ಷಣವನ್ನುಪಡೆಯುವಂತಾಗಬಾರದು. ವೃತ್ತಿಪರಉನ್ನತ ಶಿಕ್ಷಣವನ್ನು ಕನ್ನಡದಲ್ಲಿ ನೀಡುವುದು ಒಂದು ವ್ಯರ್ಥ ಕಸರತ್ತು ಎಂದು ಹಲವರು ಟೀಕೆ ಮಾಡಬಹುದು. ಆದರೆಎಲ್ಲ ಮಹತ್ವಾಕಾಂಕ್ಷೆಗಳನ್ನೂ ಜಗತ್ತು ವ್ಯರ್ಥ ಕಸರತ್ತು ಎಂದೇ ಕರೆದಿದೆ ಎನ್ನುವುದನ್ನು ವಿದ್ವಜ್ಜನರಿಗೆ ನಾನು ಜ್ಞಾಪಿಸಬೇಕಿಲ್ಲ. ಸಮಕಾಲೀನ ಜಗತ್ತಿನಲ್ಲಿ ಭಾಷೆಯೊಂದು ತನ್ನ ಪಾರಮ್ಯತೆಯನ್ನುಮೆರೆಯಬೇಕೆಂದರೆ ಅದು ಮನೆಯಂಗಳದಭಾಷೆಯಾಗಿದೈನಂದಿನ ವ್ಯಾವಹಾರಿಕ ಭಾಷೆಯಾಗಿ ಮಾತ್ರವೇ ಉಳಿದರೆ ಸಾಲದು. ಅದು ಜ್ಞಾನವಿಜ್ಞಾನತಂತ್ರಜ್ಞಾನದ ಭಾಷೆಯಾಗಿಯೂವಿಕಸಿತಗೊಳ್ಳಬೇಕು. ಹಾಗಾಗಿಉನ್ನತ ಶಿಕ್ಷಣದಲ್ಲಿಕನ್ನಡವನ್ನು ಶಿಕ್ಷಣ ಮಾಧ್ಯಮವಾಗಿ ರೂಪಿಸಲು ನಾವು ಇಂದು ಸ್ಪಷ್ಟ ಕಾರ್ಯಸೂಚಿಯೊಂದನ್ನುರೂಪಿಸಿಕೊಂಡು ಆ ದಿಕ್ಕಿನಲ್ಲಿ ದಿಟ್ಟ ಹೆಜ್ಜೆ ಇರಿಸಬೇಕಿದೆ. ಅಂತಿಮ ಪದವಿ ತರಗತಿಗಳಲ್ಲಿ ಸಾಮಾನ್ಯ ಕನ್ನಡ ಪಠ್ಯ ಕಲಿಕೆಯನ್ನು ಮುಂದುವರೆಸುವಂತಾಗಬೇಕು. ಇದರಿಂದಾಗಿ ಮತ್ತಷ್ಟು ಕನ್ನಡದ ಅಧ್ಯಾಪಕರಿಗೆಉದ್ಯೋಗದ ಅವಕಾಶಗಳು ಸಿಕ್ಕಂತೆ ಆಗುತ್ತದೆ.

 

ಈ ನಿಟ್ಟಿನಲ್ಲಿ ಮೊದಲಿಗೆ ನಾವು ಪರಿಹರಿಸಿಕೊಳ್ಳಬೇಕಾದವಿಷಯವೆಂದರೆವೃತ್ತಿಪರ ಶಿಕ್ಷಣವೈದ್ಯಕೀಯ ಶಿಕ್ಷಣವನ್ನು ಇಂಗ್ಲಿಷ್ ಭಾಷೆಯಲ್ಲಿಯೇ ನೀಡಬೇಕು ಎಂದು ಶಿಕ್ಷಣ ಮಾಧ್ಯಮ ನೀತಿಯಲ್ಲಿ ಏನಾದರೂ ನಿಯಂತ್ರಣವಿದೆಯೇ ಎನ್ನುವುದನ್ನು. ನನಗೆ ತಿಳಿದಂತೆ ವೈದ್ಯಕೀಯ ಶಿಕ್ಷಣವನ್ನು ಇಂಗ್ಲಿಷ್ ಭಾಷೆಯಲ್ಲಿಯೇ ನೀಡಬೇಕು ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗದ (ಓಚಿಣioಟಿಚಿಟ ಒeiಛಿಚಿಟ ಅommissioಟಿ) ನಿಯಮಾವಳಿ ಇದೆ. ಒಂದು ವೇಳೆ ಇಂತಹ ನಿಯಂತ್ರಣಗಳಿದ್ದರೆ ಅವು ಕನ್ನಡವನ್ನು ಮಾತ್ರವೇ ಅಲ್ಲ ಯಾವುದೇ ಭಾರತೀಯ ಭಾಷೆಯ ಮಹತ್ವಾಕಾಂಕ್ಷೆಯನ್ನು ಚಿವುಟಿ ಹಾಕುವಂಥದ್ದು. ಇಂತಹ ನಿಯಮಗಳುನಿಯಂತ್ರಣಗಳನ್ನು ನಾವು ರಾಜಕೀಯ ಇಚ್ಛಾಶಕ್ತಿಯಿಂದಲೇಪರಿಹರಿಸಿಕೊಳ್ಳಬೇಕು. ಆದರೆಯಾವುದೇ ಕಾರಣಕ್ಕೂ ಇಂತಹ ನಿಯಂತ್ರಣ ಗಳನ್ನು ನೆಪವಾಗಿರಿಸಿಕೊಂಡು ನಮ್ಮ ಗುರಿಯಿಂದಹಿಂದೆಗೆಯಬಾರದು.

ನಮ್ಮ ರಾಜ್ಯದಲ್ಲಿ ವೈದ್ಯಕೀಯಇಂಜಿನಿಯರಿಂಗ್ಶಿಕ್ಷಣವನ್ನು ಕನ್ನಡ ಭಾಷೆಯಲ್ಲಿಯೇ ನೀಡುವ ತಲಾ ಒಂದೊಂದು ಕಾಲೇಜನ್ನಾದರೂ ಮುಂದಿನ ಮೂರು ವರ್ಷದ ಅವಧಿಯಲ್ಲಿ ನಾವು ಆರಂಭಿಸಬೇಕು. ಇದಕ್ಕಾಗಿ `ಕನ್ನಡ ಜ್ಞಾನ-ವಿಜ್ಞಾನ-ತಂತ್ರಜ್ಞಾನ ಕಾರ್ಯಪಡೆ'ಯೊಂದನ್ನು ಮೊದಲು ರಾಜ್ಯ ಸರ್ಕಾರ ರಚಿಸಬೇಕುಕನ್ನಡವೆಂದಾಕ್ಷಣ ಕೇವಲ ಸಾಹಿತಿಗಳುಕವಿಪುಂಗವರನ್ನು ನೆನೆಯುವ ಸೀಮಿತ ಕಲ್ಪನೆಯಿಂದ ನಾವು ಇಂದು ಹೊರಬಂದು ವಿಜ್ಞಾನತಂತ್ರಜ್ಞಾನಜೀವಶಾಸ್ತç, ವೈದ್ಯಕೀಯಗಣಿತಶಾಸ್ತç, ಅರ್ಥಶಾಸ್ತç, ಮಾನವಿಕ  ಶಾಸ್ತçಗಳಲ್ಲಿರುವ ಕನ್ನಡದ ಮಹಾನ್ ಸಾಧಕರನ್ನುಮುನ್ನೆಲೆಗೆ ತರಬೇಕು. ಅವರನ್ನು ಮುಂದಿರಿಸಿಕೊಂಡುಕನ್ನಡವನ್ನು ಜ್ಞಾನದ ಭಾಷೆಯಾಗಿ ರೂಪಿಸಲುಕಲಿಸಲು ಗಟ್ಟಿಯಾದ ತಳಪಾಯ ಸೃಷ್ಟಿಸಬೇಕುವಿಜ್ಞಾನತಂತ್ರಜ್ಞಾನವೈದ್ಯಕೀಯ ಮುಂತಾದ ಕ್ಷೇತ್ರಗಳಲ್ಲಿನ ಪಾರಿಭಾಷಿಕ ಪದಗಳಿಗೆ ಸಂವಾದಿಯಾಗಿ ಕನ್ನಡಕಂಗ್ಲಿಷ್ ಪದಗಳನ್ನು ರೂಪಿಸುವುದರೊಟ್ಟಿಗೆ ಇವುಗಳಲ್ಲಿ ಏಕರೂಪತೆಯನ್ನು ತರುವ ನಿಟ್ಟಿನಲ್ಲಿ ಒಂದು ಸಮಗ್ರ ಪಾರಿಭಾಷಿಕ ಪದಕೋಶ'ವನ್ನು (Woಡಿಜ ಅoಡಿಠಿus) ರೂಪಿಸಬೇಕು.

 

ಈ ಹಿಂದೆಮೈಸೂರು ವಿಶ್ವವಿದ್ಯಾಲಯವುವಿಜ್ಞಾನಕ್ಕೆ ಸಂಬಂಧಿಸಿದಂತೆ ಇಂತಹ ಪ್ರಯತ್ನಕ್ಕೆ ಚಾಲನೆ ನೀಡಿತ್ತು. ಹಂಪಿ ಕನ್ನಡ ವಿಶ್ವವಿದ್ಯಾಲಯವೂಪದವಿಪೂರ್ವ ಹಂತದಲ್ಲಿ ವಿಜ್ಞಾನದ ವಿಷಯ ಪುಸ್ತಕಗಳನ್ನು ಕನ್ನಡಕ್ಕೆ ತರುವ ಕೆಲಸಕ್ಕೆ ಕೈ ಹಾಕಿತ್ತು. ಆದರೆಇಂತಹ ಕೆಲಸಗಳು ಒಂದಿಲ್ಲೊಂದು ಕಾರಣದಿಂದಾಗಿ ಪ್ರಾಯೋಗಿಕ ಹಂತಕ್ಕೆ ಮಾತ್ರವೇ ಸೀಮಿತಗೊಂಡವು. ನಿರಂತರವಾಗಿ ಮುಂದುವರೆಯಲಿಲ್ಲ. ಹಾಗಾಗಿಈ ಬಾರಿ ಮೊದಲಿಗೆ ಚಿರಸ್ಥಾಯಿಯಾಗಿ ಉಳಿಯುವಂತಹ ಒಂದು ಕನ್ನಡ ಸಮಗ್ರ ಪಾರಿಭಾಷಿಕ ಶಬ್ದಕೋಶ'ವನ್ನು (Woಡಿಜ ಅoಡಿಠಿus) ನಾವು ನಿರ್ಮಿಸಬೇಕು. ತಮಿಳುನಾಡಿನಲ್ಲಿ ಕೆಲ ವರ್ಷದ ಹಿಂದೆ ಅಲ್ಲಿನ ಸರ್ಕಾರ ಸೊರ್ಕುವÊ" (Soಡಿಞuvಚಿi - ಕನ್ನಡದಲ್ಲಿ ಶಬ್ದ ಭಂಡಾರ ಎನ್ನುವುದು ಸಮೀಪದ ಅರ್ಥ) ಎನ್ನುವ ಯೋಜನೆಯೊಂದಕ್ಕೆ ಚಾಲನೆ ನೀಡಿದೆ. ಇದರ ಮೂಲ ಉದ್ದೇಶ ವಿಭಿನ್ನ ಜ್ಞಾನಶಿಸ್ತುಗಳಲ್ಲಿನ ಪಾರಿಭಾಷಿಕ ಪದಗಳಿಗೆ ತಮಿಳು ಸಂವಾದಿ ಪದಗಳನ್ನು ಹೆಕ್ಕುವುದುರೂಪಿಸುವುದುಕಟ್ಟುವುದಾಗಿದೆ. ಬಳಕೆಯಿಂದ ಮರೆತು ಹೋಗಿರುವ ಅದರ ಇಂದಿನ ತಾಂತ್ರಿಕಪಾರಿಭಾಷಿಕ ಪದಗಳಿಗೆ ಸಂವಾದಿಯಾಗಬಲ್ಲ ಪದಗಳನ್ನು ಹೆಕ್ಕುವುದು ಯೋಜನೆಯ ಒಂದು ಭಾಗವಾದರೆವಿಜ್ಞಾನತಂತ್ರಜ್ಞಾನಗಳುಬೆಳವಣಿಗೆಯಾದಂತೆ ಅದಕ್ಕೆ ಅನುಗುಣವಾಗಿ ಮೂಡುವ ಪಾರಿಭಾಷಿಕ ಪದಗಳು ಹಾಗೂ ಆಧುನಿಕ ಸಂಸ್ಕೃತಿನಡೆನುಡಿಯಿಂದ ಜಾಗತಿಕ ಸ್ತರದಲ್ಲಿಮೂಡುವಹೊಸಪದಗಳಿಗೆಅಗತ್ಯಗಳಿಗೆ ಸಂವಾದಿಯಾಗಿ ನವೀನ ಪದಗಳನ್ನು ಕಟ್ಟುವುದು ಇದರ ಮತ್ತೊಂದು ಕೆಲಸ. ಈ ಯೋಜನೆಗೆ ಚಾಲನೆ ದೊರೆತ ಕೆಲ ವರ್ಷಗಳಲ್ಲಿಯೇ ಹತ್ತಾರು ಸಾವಿರ ಪದಗಳನ್ನು ಹೆಕ್ಕಿರುವಕಟ್ಟಿರುವ ಉದಾಹರಣೆ ಅಲ್ಲಿನದು. ಇಂತಹ ಭಂಡಾರವೊಂದು ಕನ್ನಡದಲ್ಲಿಅದೂ ಅಂತರ್ಜಾಲದ ಜಗತ್ತಿನಲ್ಲಿ ಅತ್ಯಗತ್ಯವಾಗಿ ಆಗಬೇಕು. ಅದರ ತಾಂತ್ರಿಕ ಅಂಶಗಳು ಹೇಗಿರಬೇಕು ಎನ್ನುವ ವಿಸ್ಮೃತ ಚರ್ಚೆಯನ್ನು ನಾನು ಇಲ್ಲಿ ಮುಂದುವರೆಸಲು ಹೋಗುವುದಿಲ್ಲ. ಅದು ಹೆಚ್ಚು ಅಕೆಡೆಮಿಕ್ ಆದ ಚರ್ಚೆ. ಆದರೆಅಂತಹ ಕೆಲಸ ಅಗತ್ಯವಾಗಿ ಆಗಬೇಕಿದೆ.

ಮುಂದುವರೆದುಕನ್ನಡದಲ್ಲಿ ಉನ್ನತವೃತ್ತಿಪರ ಶಿಕ್ಷಣ ನೀಡುವ ವಿಚಾರವಾಗಿ ಆರಂಭಿಕ ವರ್ಷಗಳಲ್ಲಿ ಪ್ರಸ್ತುತ ಇರುವ ಆಯ್ದ ಕೆಲ ಪ್ರತಿಷ್ಠಿತ ಸರ್ಕಾರಿ ವೈದ್ಯಕೀಯವಿಜ್ಞಾನಇಂಜಿನಿಯರಿಂಗ್ಕಾಲೇಜುಗಳ ಕಟ್ಟಡಮೂಲಸೌಕರ್ಯವನ್ನೇ ಬಳಸಿಕೊಂಡು ಅಲ್ಲಿನ ಸಿಬ್ಬಂದಿ ಹಾಗೂ ಪಠ್ಯಕ್ರಮವನ್ನು ಸೂಕ್ತ ರೀತಿಯಲ್ಲಿ ಅಣಿಗೊಳಿಸುವ ಮೂಲಕ ಹಾಗೂ ಕನ್ನಡದಲ್ಲಿ ಕಲಿಸಬೇಕೆನ್ನುವ ಇಚ್ಛಾಶಕ್ತಿ ಇರುವ ಉತ್ಸಾಹಶೀಲನುರಿತ ಬೋಧಕ ಸಿಬ್ಬಂದಿಯನ್ನು ಅಲ್ಲಿಗೆ ತರುವ ಮೂಲಕ ಕನ್ನಡದಲ್ಲಿಯೇ ಈ ಶಾಸ್ತçಗಳನ್ನು ಕಲಿಯಲು ಮುಂದಾಗುವ ವಿದ್ಯಾರ್ಥಿಗಳ ಒಂದು ಪ್ರತ್ಯೇಕ ತಂಡ ಆರಂಭಿಸಬಹುದು. ಹೀಗೆಕನ್ನಡದಲ್ಲಿಯೇ ವೃತ್ತಿಪರ ಶಿಕ್ಷಣವನ್ನು ಪಡೆಯಲು ಮುಂದಾಗುವ ಪ್ರತಿಭಾವಂತ ಮಕ್ಕಳ ಸಂಪೂರ್ಣ ಖರ್ಚುವೆಚ್ಚವನ್ನು ಸರ್ಕಾರವೇ ವಹಿಸಿಕೊಳ್ಳುವ ಮೂಲಕ ವೃತ್ತಿಪರ ಕೋರ್ಸ್ಗಳನ್ನುಉನ್ನತ ಶಿಕ್ಷಣವನ್ನು ಕನ್ನಡದಲ್ಲಿ ಕಲಿಯುವುದಕ್ಕೆ ದೊಡ್ಡ ಮಟ್ಟದ ಪ್ರೋತ್ಸಾಹ ನೀಡಬೇಕು. ಈ ಮಕ್ಕಳಿಗೆ ವ್ಯಾವಹಾರಿಕ ಬಳಕೆಗೆ ಅಗತ್ಯವಾದ ರೀತಿಯಲ್ಲಿಯಾವುದೇ ಕೀಳರಿಮೆಗೆಅವಕಾಶವಿಲ್ಲದಂತೆ ಇಂಗ್ಲಿಷ್ ಅನ್ನು ಒಂದು ಭಾಷೆಯಾಗಿಸಂವಹನ ಮಾಧ್ಯಮವಾಗಿ ಕಲಿಸಿದರೆ ಸಾಕು.

ಹೀಗೆ ಕಲಿತು ಪದವೀಧರಸ್ನಾತಕೋತ್ತರ ಪದವೀಧರರಾದ ಮಕ್ಕಳಿಗೆ ಸರ್ಕಾರದ ಉದ್ಯೋಗಾವಕಾಶಗಳಲ್ಲಿ ವಿಶೇಷ ಪ್ರಾಶಸ್ತö್ಯವನ್ನು ನೀಡಬೇಕು. ಅವರ ಸೇವೆಯನ್ನು ಈ ನಾಡಿನ ಮೂಲೆಮೂಲೆಗಳಿಗೆಲಭ್ಯವಾಗುವಂತೆ ಮಾಡಬೇಕು. ಕನ್ನಡದಲ್ಲಿಯೇ ಐಎಎಸ್ ಪರೀಕ್ಷೆ ಬರೆದು ಪಾಸು ಮಾಡಿದವರು ಎಂದು ಹೇಳುತ್ತಿದ್ದ ರೀತಿಯಲ್ಲಿಕನ್ನಡದಲ್ಲಿಯೇ ವೈದ್ಯಕೀಯ ಶಿಕ್ಷಣಎಂಜಿನಿಯರಿಂಗ್ ಶಿಕ್ಷಣವನ್ನುಪಡೆದವರು ಇವರು ಎಂದು ಈ ನಾಡಿನ ಜನ ಇವರನ್ನು ಹೆಮ್ಮೆಯಿಂದ ಗುರುತಿಸುವಂತಾಗಬೇಕು.

 

ಸಾಮಾಜಿಕ ಮಾಧ್ಯಮಗಳ ಇಂದಿನ ಯುಗದಲ್ಲಿ ಶೈಕ್ಷಣಿಕ ಸಂಪನ್ಮೂಲವನ್ನುವಿಫುಲವಾಗಿಕನ್ನಡದಲ್ಲಿಯೇಪಸರಿಸುವ ಪ್ರಯತ್ನಗಳು ಶ್ಲಾಘನಾರ್ಹವಾಗಿನಡೆಯುತ್ತಿವೆ. ಆದರೆಇದೆಲ್ಲವೂ ಖಾಸಗಿಯಾಗಿ ನಡೆಯುತ್ತಿರುವ  ಪ್ರಯತ್ನಗಳುಕೋವಿಡ್ಕಾಲಘಟ್ಟದಲ್ಲಿಯಂತೂ ಸಾವಿರಾರು ಸಂಖ್ಯೆಯಲ್ಲಿ ಬೋಧಕರು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎನ್ನುವ ನಿಟ್ಟಿನಿಂದಯೂಟ್ಯೂಬ್‌ನಂತಹಸಾಮಾಜಿಕಜಾಲತಾಣಗಳಲ್ಲಿಪಠ್ಯವನ್ನುಬೋಧಿಸಿವಿಡಿಯೋಗಳನ್ನುಅಪ್ಲೋಡ್ ಮಾಡಿದ್ದಾರೆ. ಇದರಿಂದ ಇಂದು ಅಂತರ್ಜಾಲದಲ್ಲಿ ಕನ್ನಡದ ಕಂಟೆಂಟ್ (ವಿಷಯ) ಸಾಕಷ್ಟು ಪ್ರಮಾಣದಲ್ಲಿ ಸೃಷ್ಟಿಯಾಗಿದೆ. ಆದರೆಇದೆಲ್ಲದಕ್ಕೆ ಸ್ಪಷ್ಟ ರೂಪುರೇಷೆಯೊಂದನ್ನು ನಾವು ನೀಡಬೇಕಿದೆಸರ್ಕಾರಿ ಕಾಲೇಜುಗಳಲ್ಲಿ ಇರುವ ಪ್ರತಿಭಾವಂತ ಶಿಕ್ಷಕರುಅಧ್ಯಾಪಕರುಪ್ರಾಚಾರ್ಯರನ್ನು ಬಳಸಿಕೊಂಡು ಒಂದನೇ ತರಗತಿಯಿಂದ ಹಿಡಿದು ಉನ್ನತ ಶಿಕ್ಷಣದವರೆಗೆ ವಿವಿಧ ಜ್ಞಾನಶಿಸ್ತುಗಳ ಕಲಿಕೆ ಕನ್ನಡದಲ್ಲಿ ಸಾಧ್ಯವಾಗುವಂತೆಬೋಧನಾವಿಡಿಯೋಗಳನ್ನುತಯಾರಿಸಿ ಸರ್ಕಾರದ ನಿರ್ದಿಷ್ಟ ಶೈಕ್ಷಣಿಕ ಅಂತರ್ಜಾಲತಾಣಗಳಲ್ಲಿಲಭ್ಯವಿರುವಂತೆ ಮಾಡಬೇಕಿದೆ. ನಾಡಿನ ಯಾವುದೇ ಮೂಲೆಯಲ್ಲಿರುವಹಳ್ಳಿಗಾಡಿನ ಮಕ್ಕಳೂ ಸಹ ಅತ್ಯುತ್ತಮ ಪ್ರಾಧ್ಯಾಪಕರಿಂದಪಠ್ಯವನ್ನು ಕಲಿಯುವ ಅವಕಾಶ ಇದರಿಂದ ಸಾಧ್ಯವಾಗಬೇಕು. ಕನ್ನಡದಲ್ಲಿ ಜ್ಞಾನವಿಜ್ಞಾನತಂತ್ರಜ್ಞಾನವನ್ನು ಕಲಿಯಲು ಇಂತಹ ಪೂರಕ ವಾತಾವರಣವನ್ನು ಸೃಷ್ಟಿಸುವುದು ಅತ್ಯವಶ್ಯಕ. ಈ ಕೆಲಸವನ್ನು ಸಮರೋಪಾದಿಯಲ್ಲಿ ಸರ್ಕಾರವಿಶ್ವವಿದ್ಯಾಲಯಗಳು ಮಾಡಬೇಕು.

 

ಇದೇ ವೇಳೆ ಇಂದು ವಿಜ್ಞಾನತಂತ್ರಜ್ಞಾನವೈದ್ಯಕೀಯಕಾನೂನು ಮುಂತಾದ ವಲಯಗಳಿಗೆ ಸಂಬಂಧಿಸಿದ ಬೆಳವಣಿಗೆಗಳನ್ನುಸುದ್ದಿ-ವಿಚಾರಗಳನ್ನು ಕನ್ನಡದಲ್ಲಿಯೇಓದುಗರಿಗೆನೋಡುಗರಿಗೆತಲುಪಿಸುವಂತಹಕಾರ್ಯಕ್ರಮಗಳುಪ್ರಕಟಣೆಗಳುಮಾಧ್ಯಮಗಳು ನಾಡಿನ ಉದ್ದಗಲಕ್ಕೂ ಕಂಡು ಬರುತ್ತವೆ. ಇಂದಿನ ಡಿಜಿಟಲ್ ಯುಗದಲ್ಲಿ ಇಂತಹ ಅನೇಕ ಮಾಧ್ಯಮಗಳು ತಲೆ ಎತ್ತಿ ನಿಂತಿವೆ. ಇಂತಹವುಗಳನ್ನು ಗುರುತಿಸುವಪ್ರೋತ್ಸಾಹಿಸುವಬೆಂಬಲಿಸುವ ಕೆಲಸವನ್ನೂ ಸರ್ಕಾರ ಮಾಡಬೇಕು.

 

ಉದ್ಯೋಗಉದ್ಯಮಶೀಲತೆಯಭಾಷೆಯಾಗಿ ಕನ್ನಡ ಕನ್ನಡಅನ್ನದಭಾಷೆಯಾಗಿಉದ್ಯೋಗದಭಾಷೆಯಾಗಿಉದ್ಯಮಶೀಲತೆಯಭಾಷೆಯಾಗಿಸಶಕ್ತವಾಗಬೇಕಾದರೆ ಮಾರುಕಟ್ಟೆ ಸಂಸ್ಕೃತಿಯ ಇಂದಿನ ದಿನಗಳಲ್ಲಿ ಕನ್ನಡಿಗರು ತಾವು ಪಡೆಯುವ ಸೇವೆಗಳನ್ನುಕನ್ನಡದಲ್ಲಿಯೇ ಪಡೆಯುವ ಜಾಗೃತಿಆಗ್ರಹಗಳನ್ನುಬೆಳಸಿಕೊಳ್ಳಬೇಕು. ವಿಪರ್ಯಾಸವೆಂದರೆಪರಿಸ್ಥಿತಿ ಇದಕ್ಕೆ ವ್ಯತಿರಿಕ್ತವಾಗಿದೆ.

 

ಇಂದು ನಮ್ಮ ಮುಗ್ಧ ಜನತೆ ತಮ್ಮದೇ ಹಳ್ಳಿಯಲ್ಲಿರುವಬ್ಯಾಂಕುಗಳಲ್ಲಿಯೂಬ್ಯಾಂಕಿಂಗ್ ಸೇವೆಯನ್ನು ಕನ್ನಡದಲ್ಲಿ ಪಡೆಯಲು ಹೆಣಗಾಡಬೇಕಾದ ಪರಿಸ್ಥಿತಿ ಇದೆಬ್ಯಾಂಕುಗಳವಿಲೀನದನಂತರವಂತೂ ನಮ್ಮ ಹೆಮ್ಮೆಯ ಗುರುತಾಗಿದ್ದ ಅನೇಕ ಬ್ಯಾಂಕುಗಳಚಹರೆಯೇ ಬದಲಾಗಿ ಹೋಗಿದೆ. ಕನ್ನಡ ಬಾರದಅರೆಬರೆ ಕನ್ನಡ ಬಂದರೂ ಕನ್ನಡದಲ್ಲಿ ಸೇವೆಯನ್ನು ನಿರಾಕರಿಸುವಸಿಬ್ಬಂದಿಗಳೇ ಇಂದು ಹೆಚ್ಚಿದ್ದಾರೆ. ಇತ್ತೀಚೆಗಷ್ಟೇಗ್ರಾಹಕರೊಬ್ಬರು ಕನ್ನಡದಲ್ಲಿ ಬರದಿದ್ದ ಚೆಕ್ ಅನ್ನು ನಗದೀಕರಿಸಲುಅನುಮತಿಸದರಾಷ್ಟಿçÃಕೃತ ಬ್ಯಾಂಕ್ ಒಂದಕ್ಕೆ ಗ್ರಾಹಕ ಆಯೋಗವು ದಂಡ ವಿಧಿಸಿದ್ದ ಸುದ್ದಿಯನ್ನು ನಾನು ಗಮನಿಸಿದೆನೀವೂ ಗಮನಿಸಿರಬಹುದುಅಲ್ಲಗ್ರಾಹಕನಭಾಷೆಯನ್ನಾಡದಬ್ಯಾಂಕುಗಳು ಕರ್ನಾಟಕದಲ್ಲಿ ಏಕಾದರೂ ಇರಬೇಕು ಹೇಳಿಕನ್ನಡಿಗರು ಹಾಗೂ ಕರ್ನಾಟಕ ಸರ್ಕಾರ ಇಂತಹ ಅಭಾಸಗಳನ್ನುನಿವಾರಿಸಿಕೊಳ್ಳಲು ವೈಯಕ್ತಿಕ ಹಾಗೂ ಆಡಳಿತಾತ್ಮಕ ನಗರಿಗರಲ್ಲೂ ಕಠಿಣ ತೀರ್ಮಾನಗಳನ್ನು ಕೈಗೊಳ್ಳಬೇಕು.

 

ನಮ್ಮ ಭಾಷೆಯಲ್ಲಿ ಸೇವೆ ನೀಡದಬ್ಯಾಂಕುಗಳುಸರ್ಕಾರಿ ಉದ್ದಿಮೆಗಳುಖಾಸಗಿ ಸಂಸ್ಥೆಗಳನ್ನು ಮುಲಾಜಿಲ್ಲದಧಿಕ್ಕರಿಸಬೇಕು. ಕರ್ನಾಟಕದೆಲ್ಲೆಡೆಕನ್ನಡದಲ್ಲಿಯೇ ಸೇವೆ ನೀಡುವಂತೆ ಸರ್ಕಾರಿ ಹಾಗೂ ಸರ್ಕಾರೇತರಸಂಸ್ಥೆಗಳಲ್ಲಿ ನಾವು ಬಲವಾಗಿ ಆಗ್ರಹಿಸಲು ತೊಡಗಿದರೆ ಸಹಜವಾಗಿಯೇ ಉದ್ಯೋಗಗಳಲ್ಲಿಕನ್ನಡಿಗರ ಸಂಖ್ಯೆ ಖಾಸಗಿ ವಲಯದಲ್ಲಿ ಮತ್ತಷ್ಟು ವ್ಯಾಪಕವಾಗಿಗಣನೀಯವಾಗಿಹೆಚ್ಚುತ್ತದೆ.

 

ಇತ್ತೀಚೆಗೆ ರಾಜ್ಯದ ಶಾಸನಸಭೆಯಲ್ಲಿಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಮಸೂದೆ - ೨೦೨೨ಅನ್ನು ಮಂಡಿಸಲಾಯಿತು. ಇದರಲ್ಲಿ ಕನ್ನಡವನ್ನು ಅಧಿಕೃತ ರಾಜ್ಯಭಾಷೆಯಾಗಿತೀರ್ಮಾನಿಸುವಅಡಳಿತ ಮತ್ತು   ನ್ಯಾಯಾಂಗದಲ್ಲಿ ಕನ್ನಡ ಬಳಕೆ ಕಡ್ಡಾಯಗೊಳಿಸುವಅಂಶಗಳೂ ಸೇರಿದಂತೆ ಹಲವು ಉತ್ತಮ ಅಂಶಗಳಿವೆ. ಈ ಮಸೂದೆಯನ್ನುಕಾಯಿದೆಯಾಗಿಸಮರ್ಥವಾಗಿಅನುಷ್ಠಾನಗೊಳಿಸುವಂತಾಗಲಿ. ಇದರ ಜೊತೆಗೆ ಇಂದಿನ ಅಗತ್ಯಗಳಿಗೆಸವಾಲುಗಳಿಗೆ ಈ ಮಸೂದೆ ಮತ್ತೊಮ್ಮೆ ಮುಖಾಮುಖಿ ಯಾಗಬೇಕಿದೆ.

 

ಕರ್ನಾಟಕ ಇಂದು ಬಹುರಾಷ್ಟ್ರೀಯ ಸಂಸ್ಥೆಗಳ ನವೋದ್ಯಮಗಳತವರಾಗಿದೆ. ಆದರೆ ಇಂದು ಬಹುರಾಷ್ಟ್ರೀಯ ಸಂಸ್ಥೆಗಳು ಕನ್ನಡಿಗರಿಗೆ ಹೆಚ್ಚು ಉದ್ಯೋಗಗಳನ್ನುನೀಡುತ್ತಿಲ್ಲ. ಅದರಲ್ಲಿಯೂ ಬೆಂಗಳೂರು ನವೋದ್ಯಮಗಳರಾಜಧಾನಿಯಾಗಿದೆ. ನನ್ನ ವಿಶೇಷ ಬಿನ್ನಹವೇನೆಂದರೆ ಕನ್ನಡದಲ್ಲಿ ವಿವಿಧ ಬಗೆಯ ಸೇವೆಯನ್ನು ಒದಗಿಸುವ ನವೋದ್ಯಮಗಳಿಗೆ ಸರ್ಕಾರವು ವಿಶೇಷ ಪ್ರೋತ್ಸಾಹವನ್ನು ನೀಡಬೇಕು. ಅಲ್ಲದೇಆಂಗ್ಲ ಭಾಷೆಯಲ್ಲಿ ಮಾತ್ರವೇ ಸೇವೆಯನ್ನು ಒದಗಿಸುತ್ತಿರುವ ವಿವಿಧ ಆನ್‌ಲೈನ್ಸೇವಾಉದ್ಯಮಗಳಿಗೆ ಕನ್ನಡದಲ್ಲಿ ಸೇವೆ ಒದಗಿಸಲು ವಿಶೇಷ ಉತ್ತೇಜನಗಳನ್ನು ನೀಡುವ ಮೂಲಕ ಪ್ರೋತ್ಸಾಹಿಸಬೇಕು. ಖಾಸಗಿ ಕ್ಷೇತ್ರಗಳಲ್ಲಿ ಕನ್ನಡವನ್ನುವ್ಯಾಪಿಸಲು ಸರ್ಕಾರವು ವಿಶೇಷ ನೀತಿಯೊಂದನ್ನು ರೂಪಿಸಬೇಕು. ಕೇವಲ ಆದೇಶಗಳಿಂದ ಮಾತ್ರವೇ ಇದು ಅನುಷ್ಠಾನವಾಗದೆ ಹೋಗಬಹುದುಹಾಗಾಗಿಸೇವೆಯಲ್ಲಿ ಸಹಭಾಗಿತ್ವ ಎನ್ನುವ ತತ್ವದಡಿ ಕನ್ನಡದಲ್ಲಿ ಸೇವೆಯನ್ನು ನೀಡುವ ಖಾಸಗಿ ಆನ್‌ಲೈನ್ಸೇವಾ ಸಂಸ್ಥೆಗಳಿಗೆ ವಿಶೇಷ ರಿಯಾಯಿತಿಗಳನ್ನುಧನಸಹಾಯಗಳನ್ನು ನೀಡಬೇಕು. ಇದು ಖಾಸಗಿ ಸೇವಾ ಸಂಸ್ಥೆಗಳು ಹೆಚ್ಚು ಕನ್ನಡಪರ ಧೋರಣೆ ಬೆಳಸಿಕೊಳ್ಳಲುಉದ್ಯೋಗಗಳಲ್ಲಿಕನ್ನಡಿಗರನ್ನುಹೆಚ್ಚೆಚ್ಚು ಹೊಂದಲು ಕಾರಣವಾಗುತ್ತದೆ.

 

ಕನ್ನಡ ಮತ್ತು ಮನರಂಜನಾ ಉದ್ಯಮಇಂದು ಮನರಂಜನೆ ಎನ್ನುವುದು ಸಾವಿರಾರು ಕೋಟಿಗಳ ಬೃಹತ್ ಉದ್ಯಮವಾಗಿದೆ. ಇತ್ತೀಚಿನ ದಿನಮಾನಗಳಲ್ಲಿ ಪ್ರವರ್ಧಮಾನಕ್ಕೆ ಬಂದಿರುವ ಒಟಿಟಿ (ಓವರ್ ದ ಟಾಪ್) ವೇದಿಕೆಗಳುವೆಬ್ಸ್ಟಿçÃಮಿಂಗ್ ಮುಖೇನ ಮನರಂಜನೆಯ ಚಹರೆಯನ್ನೇಅಗಾಧವಾಗಿಬದಲಿಸಿವೆ ಹಾಗೂ ವಿಸ್ತರಿಸಿವೆ. ಸಿನಿಮಾ ನೋಡಲು ಥಿಯೇಟರ್‌ಗಳಿಗೇ ಹೋಗಬೇಕು ಎಂದಾಗಲಿವೈಜ್ಞಾನಿಕ ಕಾರ್ಯಕ್ರಮಗಳನ್ನುಸಾಕ್ಷ್ಯಚಿತ್ರಗಳನ್ನು ನಿರ್ದಿಷ್ಟ ಚಾನಲ್‌ಗಳಲ್ಲಿನಿರ್ದಿಷ್ಟ ಸಮಯದಲ್ಲಿಯೇ ನೋಡಬೇಕು ಎಂದಾಗಲಿ ಇಂದು ಇಲ್ಲ. ನೋಡುಗ ತನ್ನ ಸಮಯಅನುಕೂಲತೆಆಸಕ್ತಿಗೆ ತಕ್ಕಂತೆ ತನ್ನ ಮನೆಯ ಟಿವಿಯಲ್ಲಿಯೋಅಂಗೈನಲ್ಲಿರುವಮೊಬೈಲ್‌ನಮುಖೇನವೋ ಮನರಂಜನೆಆಸಕ್ತಿಗಳನ್ನು ಇಂದು ತಣಿಸಿಕೊಳ್ಳಬಹುದು. ಇಂದಿನ ಒಟಿಟಿವೇದಿಕೆಗಳಲ್ಲಿ ವಿವಿಧ ಜಾಗತಿಕ ಭಾಷೆಗಳಮನರಂಜನಾಸರಣಿಗಳುಕಾರ್ಯಕ್ರಮಗಳನ್ನು ಸ್ಥಳೀಯ ಭಾಷೆಯಲ್ಲಿ ಬಿತ್ತರಿಸುವ ಪ್ರಯತ್ನಗಳು ವ್ಯಾಪಕವಾಗಿನಡೆಯುತ್ತಿವೆ. ಇತ್ತೀಚಿನ ದಿನಗಳಲ್ಲಿ ಅನೇಕ ಪ್ರಮುಖ ವೆಬ್ಸರಣಿಗಳುಕನ್ನಡದಲ್ಲಿಯೂಲಭ್ಯವಿರುವುದನ್ನು ನಾನು ಗಮನಿಸಿದ್ದೇನೆ. ಇದು ಉತ್ತಮ ಬೆಳವಣಿಗೆಒಟಿಟಿವೀಕ್ಷಕರುತಮ್ಮಿಷ್ಟದ ವಿವಿಧ ಜಾಗತಿಕ ಕಾರ್ಯಕ್ರಮಗಳನ್ನುಸರಣಿಗಳನ್ನುಕನ್ನಡದಲ್ಲಿಯೇ ನೋಡಲು ಇಚ್ಛೆ ವ್ಯಕ್ತಪಡಿಸಿ ಸಾಮಾಜಿಕ ಮಾಧ್ಯಮಗಳ ಮೂಲಕ ಕೂಗು ಮಂಡಿಸುವುದನ್ನು ನಾನು ಗಮನಿಸಿದ್ದೇನೆ. ಟ್ವಿಟರ್ಫೇಸ್‌ಬುಕ್‌ಗಳಲ್ಲಿ ಇದಕ್ಕಾಗಿ ಟ್ರೆಂಡಿಂಗ್ ನಡೆಸುವುದನ್ನು ಗಮನಿಸಿದ್ದೇನೆ. ಇದೆಲ್ಲಾ ಉತ್ತಮ ಬೆಳವಣಿಗೆಇಂತಹ ಅಗ್ರಹಗಳುಹೆಚ್ಚಾಗಲಿಆ ಮೂಲಕ ಜಾಗತಿಕ ಮನರಂಜನೆಉತ್ತಮ ಕಾರ್ಯಕ್ರಮಗಳುಕನ್ನಡದಲ್ಲಿಯೇಲಭ್ಯವಾಗಲಿ.

 

ಆದರೆಕನ್ನಡಿಗರು ಇಷ್ಟಕ್ಕೇ ತೃಪ್ತರಾಗಬಾರದು. ಡಬ್ಬಿಂಗ್‌ಗೆ ಮಾತ್ರವೇ ನಾವು ಸೀಮಿತವಾಗಬೇಕಿಲ್ಲ. ಜಾಗತಿಕ ಮಟ್ಟದ ಒಟಿಟಿವೇದಿಕೆಗಳುಕನ್ನಡದಲ್ಲಿಯೂಹೆಚ್ಚೆಚ್ಚುಕಂಟೆಂಟ್ತಯಾರಿಸುವಂತೆಕನ್ನಡಿಗರು ಒತ್ತಡ ಹೇರಬೇಕು. ಕನ್ನಡದ ಮನರಂಜನಉದ್ಯಮವನ್ನು ದೊಡ್ಡ ಮಟ್ಟದಲ್ಲಿ ವಿಸ್ತರಿಸುವ ಸಾಧ್ಯತೆಗಳ ಬಗ್ಗೆ ಚಿತ್ರರಂಗಕಿರುತೆರೆಗಳು ಮಾತ್ರವೇ ಅಲ್ಲದೆ ಸರ್ಕಾರವು ಸಹ ಗಂಭೀರವಾಗಿ ಚಿಂತಿಸಬೇಕು. ತನ್ನ ಮನರಂಜನಾ ನೀತಿಯನ್ನು ಇಂದಿನ ಕಾಲಮಾನಕ್ಕೆ ಅಗತ್ಯವಾದ ರೀತಿಯಲ್ಲಿ ಅಣಿಗೊಳಿಸಬೇಕು. ಕನ್ನಡಿಗರು ಕನ್ನಡದಲ್ಲಿ ಮಾಡಿದ ವೆಬ್ಸರಣಿಗಳುಸಿನಿಮಾಸಾಕ್ಷ್ಯಚಿತ್ರಗಳನ್ನು ಭಾರತದಲ್ಲಿ ಮಾತ್ರವೇ ಅಲ್ಲದೆಜಗತ್ತಿನ ಬೇರೆಬೇರೆ ಭಾಷೆಗಳಲ್ಲಿ ಡಬ್ ಮಾಡಿಕೊಂಡು ನೋಡುವಂತಾಗಬೇಕುಕನ್ನಡದಲ್ಲಿ ಸೃಜನಶೀಲತೆಗೆಕ್ರಿಯಾಶೀಲತೆಗೆ ಕೊರತೆಯಿಲ್ಲ. ಕನ್ನಡದ ಸೃಜನಶೀಲ ಮನಸ್ಸುಗಳುಅವಕಾಶಗಳಿಗಾಗಿ ಕಾಯುತ್ತಾ ಕೂರುವ ಬದಲಿಗೆ ಅವಕಾಶಗಳ ದಿಡ್ಡಿ ಬಾಗಿಲೇ ಅವರಿಗೆ ತೆರೆಯುವಂತಹಸನ್ನಿವೇಶವನ್ನು ನಾವು ಸೃಷ್ಟಿಸಬೇಕಿದೆ. ವಿಶೇಷವಾಗಿ ಸರ್ಕಾರವು ಕನ್ನಡ ಚಲನಚಿತ್ರಮನರಂಜನಾಉದ್ಯಮಗಳ ಸಮಕಾಲೀನ ಅಗತ್ಯಗಳಿಗೆ ಸ್ಪಂದಿಸುವಅವುಗಳನ್ನು ಪೂರೈಸುವಪ್ರೋತ್ಸಾಹಿಸುವ ಸಕಾಲಿಕ ನೀತಿನಿರೂಪಣೆಗಳನ್ನುತನ್ನದಾಗಿಸಿಕೊಳ್ಳಬೇಕು. ಇದರಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಾವಂತರಿಗೆತಂತ್ರಜ್ಞರಿಗೆ ಕೆಲಸ ದೊರೆಯಲಿದೆ. ವ್ಯಾಪಕವಾದಅದಾಯವರಮಾನವೂಉತ್ಪತ್ತಿಯಾಗಲಿದೆ.

 

 ಇಲ್ಲಿ ಒಂದು ಸಣ್ಣ ಉದಾಹರಣೆಯನ್ನು ನೀಡುತ್ತೇನೆ. ಸ್ಕಾಂಡಿನೇವಿಯನ್ದೇಶಗಳು ಎಂದು ಕರೆಯಲಾಗುವ ಉತ್ತರ ಯೂರೋಪಿನ ಸಣ್ಣ ದೇಶಗಳಾದನಾರ್ವೆಡೆನ್ಮಾರ್ಕ್ಐಸ್‌ಲ್ಯಾಂಡ್ಫಿನ್‌ಲ್ಯಾಂಡ್ದೇಶಗಳ ಒಟ್ಟು ಜನಸಂಖ್ಯೆ ಏನಿದೆ ಅದು ನಮ್ಮ ಕರ್ನಾಟಕದ ಅರ್ಧ ಜನಸಂಖ್ಯೆಗಿಂತಲೂ ಕಡಿಮೆಇವುಗಳನ್ನು ನಾರ್ಡಿಕ್ ದೇಶಗಳು ಎಂದೂ ಕರೆಯುತ್ತಾರೆ. ನನಗೆ ಚಲನಚಿತ್ರೋದ್ಯಮದ ಹಿನ್ನೆಲೆ ಇರುವುದರಿಂದ ಹಾಗೂ ತಕ್ಕಮಟ್ಟಿಗೆ ಅದರ ಗಂಧಗಾಳಿ ಇರುವುದರಿಂದ ಹೇಳುತ್ತಿದ್ದೇನೆ.

 

ನಾನು ಹೇಳಿದ ಈ ದೇಶಗಳ ಮನರಂಜನಾಉದ್ಯಮವೇನಿದೆ ಅದು ಇಂದು ಬಿಲಿಯನ್ಡಾಲರ್‌ಗಳವ್ಯವಹಾರವಾಗಿದೆ. ಈ ದೇಶಗಳ ಭಾಷೆಗಳಾದಡ್ಯಾನಿಶ್ನಾರ್ವೇಜಿಯನ್ಸ್ವೀಡಿಷ್‌ಗಳಲ್ಲಿತಯಾರಾಗುವವಿಶೇಷವಾಗಿ ಥ್ರಿಲ್ಲರ್ ಮಾದರಿಯ ಕಥಾವಸ್ತುಗಳನ್ನುಳ್ಳವೆಬ್ಸರಣಿಗಳುಚಿತ್ರಗಳನ್ನು ನೋಡುವ ಬೃಹತ್ ಜಾಗತಿಕ ವೀಕ್ಷಕ ವರ್ಗವೇ ಇದೆ. ಜಗತ್ತಿನ ಅನೇಕ ಭಾಷೆಗಳಿಗೆವಿಶೇಷವಾಗಿ ಇಂಗ್ಲಿಷ್ ಈ ಸರಣಿಗಳುಚಿತ್ರಗಳು ಡಬ್ ಆಗುತ್ತವೆ. ಮಿಲಿಯನ್  ಗಟ್ಟಲೆ ಡಾಲರ್ ವ್ಯವಹಾರವನ್ನು ಇಲ್ಲಿನ ಪ್ರೊಡಕ್ಷನ್ಹೌಸ್‌ಗಳುಮಾಡುತ್ತವೆ. ಹಾಲಿವುಡ್ ಚಿತ್ರರಂಗಕ್ಕೆಸೆಡ್ಡು ಹೊಡೆಯುವ ರೀತಿಯಲ್ಲಿ ಇಲ್ಲಿನ ಮನರಂಜನಾ ಉದ್ಯಮ ಇಂದು ಬೆಳೆಯುತ್ತಿದೆ. ತಮ್ಮದೇ ಭಾಷೆಯಲ್ಲಿಯೇಇದೆಲ್ಲವನ್ನೂ ಅವರು ಸಾಧ್ಯವಾಗಿಸಿದ್ದಾರೆ.

 

ಇದೇ ರೀತಿಚೀನಾಹಾಂಕಾಂಗ್‌ನ ಸಿನಿಮಾ ಉದ್ಯಮವು ಸಮರ ಕಲೆಗಳ ಚಿತ್ರಗಳ ಮೂಲಕವೇ ಜಾಗತಿಕ ಮಾರುಕಟ್ಟೆಯನ್ನುಆಕ್ರಮಿಸಿದ್ದನ್ನು ನಾವೆಲ್ಲಾ ಗಮನಿಸಿದ್ದೇವೆ. ಇನ್ನು ಇರಾನಿಸಿನಿಮಾಗಳುಮಧ್ಯಪ್ರಾಚ್ಯ ಸಿನಿಮಾಗಳನ್ನು ನೋಡುಗ ವರ್ಗವೂದೊಡ್ಡದಿದೆ. ನಮ್ಮದೇ ಬಾಲಿವುಡ್ನೆರೆಯ ತಮಿಳುತೆಲುಗುಮಲಯಾಳಂಚಿತ್ರರಂಗಗಳು ಬೆಳೆದಿರುವ ಪರಿಯನ್ನೂ ಇಲ್ಲಿ ಗಮನಿಸಬಹುದು. ಕನ್ನಡದ ಚಿತ್ರರಂಗ ಹಾಗೂ ಮನರಂಜನಾಉದ್ಯಮವೂ ಇಂದು ಭರವಸೆಯಿಂದಮಹತ್ವಾಕಾಂಕ್ಷೆಯಿಂದ ಬೆಳೆಯುತ್ತಿದೆ. ಸಾವಿರಾರು ಕೋಟಿ ವ್ಯವಹಾರವನ್ನು ಕನ್ನಡ ಚಿತ್ರಗಳು ಮಾಡಬಲ್ಲವು ಎನ್ನುವುದನ್ನು ನಾವು ಇಂದು ಕಂಡಿದ್ದೇವೆ. ಕಥಾವಸ್ತುಗಳ ಬಗ್ಗೆ ನಮ್ಮ ವೈಯಕ್ತಿಕ ತಕರಾರುಗಳೇನೇ ಇರಲಿಒಂದು ಉದ್ಯಮವಾಗಿಚಿತ್ರರಂಗವನ್ನುಟಿವಿಒಟಿಟಿವೇದಿಕೆಗಳನ್ನುಮಹತ್ವಾಕಾಂಕ್ಷೆಯಿಂದಉದ್ಯಮಶೀಲತೆಯಿಂದನಾವಿಂದುಬೆಳೆಸಬೇಕಿದೆ. ಈ ಕ್ಷೇತ್ರಗಳುಹೆಚ್ಚೆಚ್ಚುಸೃಜನಶೀಲವೂವೃತ್ತಿಪರವೂ ಆಗುವಂತೆ ನೋಡಿಕೊಳ್ಳುವ ಮೂಲಕ ಜಾಗತಿಕ ವೇದಿಕೆಗಳಿಗೆ ಇವುಗಳನ್ನು ಒಯ್ಯಬೇಕಿದೆ. ಅತ್ಯುತ್ತಮ ತಂತ್ರಜ್ಞಾನ ಇವುಗಳಿಗೆಲಭ್ಯವಾಗುವಂತೆನೋಡಿಕೊಳ್ಳಬೇಕಿದೆ. ಹಾಗಾಗಿಉದ್ಯಮಶೀಲತೆವಿಫುಲ ಉದ್ಯೋಗ ಸಾಧ್ಯತೆಯ ಹಿನ್ನೆಲೆಯಲ್ಲಿ ಕನ್ನಡದ ಮನರಂಜನಾಉದ್ಯಮವನ್ನು ಬೆಳೆಸುವಜಾಗತಿಕವಾಗಿ ವಿಸ್ತರಿಸುವ ನೀಲನಕ್ಷೆ ತಯಾರಿಸಲು ಇದು ಸಕಾಲಸರ್ಕಾರ ಮತ್ತು ಸಚಿವಾಲಯಗಳು ಈ ನಿಟ್ಟಿನಲ್ಲಿ ಗಂಭೀರವಾಗಿ ಆಲೋಚಿಸಬೇಕು. ಕನ್ನಡ ಚಿತ್ರೋದ್ಯಮದಲ್ಲಿ ನಿರ್ಮಾಪಕರು ಕನ್ನಡದಲ್ಲಿ ಹೆಸರುಗಳೇಇಲ್ಲವೇನೋ ಎಂಬಂತೆ ಬೇರೆ ಬೇರೆಭಾಷೆಗಳಶೀರ್ಷಿಕೆಗಳನ್ನುಇಡುತ್ತಿದ್ದಾರೆ. ಇದು ನಿಲ್ಲಬೇಕು.

 

ಕನ್ನಡ ಮತ್ತು ರಾಯಭಾರಿತ್ವ

 

ಕರ್ನಾಟಕವೆನ್ನುವುದು ಉತ್ತರ ಮತ್ತು ದಕ್ಷಿಣದಸಂಸ್ಕೃತಿಗಳುಸಂಧಿಸುವ ಜಾಗ. ಕನ್ನಡಿಗರವೈವಿಧ್ಯಮಯ ಆಸಕ್ತಿಅಭಿರುಚಿಗಳಿಗೆಸಹಿಷ್ಣುತೆಗೆಇದುವೇ ಕಾರಣ. ಉತ್ತಮವಾದುದನ್ನು ಎಲ್ಲ ಕಡೆಯಿಂದ ಹೆಕ್ಕುವುದುಬೆಂಬಲಿಸುವುದುಕನ್ನಡಿಗರ ಜಾಯಮಾನ. ನಮ್ಮ ಸಂಸ್ಕೃತಿಅನುಭವಗಳನ್ನು ಇದು ಸಾಕಷ್ಟು ಶ್ರೀಮಂತಗೊಳಿಸಿದೆ ಕೂಡ. ಕನ್ನಡಿಗರುಕೂಪಮಂಡೂಕಗಳಲ್ಲ. ಜಗತ್ತಿನೆಲ್ಲೆಡೆಎಲ್ಲ ರಂಗಗಳಲ್ಲಿಕನ್ನಡಿಗರುವ್ಯಾಪಿಸಿದ್ದಾರೆ. ಅಮೆರಿಕಪಾಶ್ಚಿಮಾತ್ಯ ರಾಷ್ಟçಗಳುಮಧ್ಯಪ್ರಾಚ್ಯ ದೇಶಗಳುಆಗ್ನೆಯರಾಷ್ಟçಗಳು ಹೀಗೆ ಎಲ್ಲೆಡೆ ಕನ್ನಡಿಗರುವ್ಯಾಪಿಸಿದ್ದಾರೆ. ಅದರಲ್ಲಿಯೂ ಕನ್ನಡಿಗರುಕೌಶಲಾಧಾರಿತಸೇವೆಗಳಲ್ಲಿಹೆಚ್ಚೆಚ್ಚುತೊಡಗಿಕೊಂಡಿರುವುದನ್ನು ನೋಡಬಹುದು. ಇವರಲ್ಲಿ ಅನೇಕರು ವಿವಿಧ ರಾಷ್ಟçಗಳಲ್ಲಿಯೇ ಅಲ್ಲಿನ ನಾಗರಿಕತ್ವ ಪಡೆದು ಉಳಿದಿದ್ದಾರೆ ಕೂಡ.

 

ಇಂದು ಪ್ರತಿಯೊಬ್ಬ ಹೊರನಾಡಕನ್ನಡಿಗನನ್ನೂಕನ್ನಡದ ರಾಯಭಾರಿ’ ಎಂದೇ ನಮ್ಮ ಸರ್ಕಾರವು ನೋಡಬೇಕು. ಅಲ್ಲಿನ ಕನ್ನಡಪರ ಸಂಘ ಸಂಸ್ಥೆಗಳಿಗೆ ವಿಶೇಷ ಉತ್ತೇಜನಗಳನ್ನು ನೀಡುವ ಮೂಲಕ ಕನ್ನಡದ ಚಟುವಟಿಕೆಗಳನ್ನುಹೆಚ್ಚೆಚ್ಚುಪಸರಿಸುವಶ್ಲಾಘನಾ ಕಾರ್ಯಗಳಿಗೆ ಒಂದು ಖಚಿತ ರೂಪುರೇಷೆಯನ್ನು ನೀಡಲು ಇದು ಸಕಾಲ. ಈವರೆಗೆ ನಡೆದಿರುವಂತಇವುಗಳಿಗೆ ಒಂದಿಷ್ಟು ಅನುದಾನ ನೀಡುವುದುಸಾಂಸ್ಕೃತಿಕ ಪ್ರವಾಸಗಳನ್ನುಏರ್ಪಡಿಸುವುದರಿಂದ ಹೆಚ್ಚಿನ ಉಪಯೋಗವಾಗದುಬದಲಿಗೆ ಈ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಕರ್ನಾಟಕಕನ್ನಡದ ಬಗ್ಗೆ ಹೊರದೇಶಗಳಲ್ಲಿಹೆಚ್ಚಚ್ಚು ಆಸಕ್ತಿಉತ್ಸಾಹ ಕೆರಳಿಸುವಂತಹ ಶೈಕ್ಷಣಿಕಸಾಂಸ್ಕೃತಿಕಔದ್ಯಮಿಕ ಕಾರ್ಯಕ್ರಮಗಳನ್ನು ರೂಪಿಸಲು ವಿಶೇಷ ಅಸ್ಥೆ ವಹಿಸಬೇಕು. ಹೊರನಾಡಕನ್ನಡಿಗರಲ್ಲಿ ಭದ್ರತೆಯ ಭಾವನೆಯನ್ನು ಮೂಡಿಸುವುದರೊಟ್ಟಿಗೇಅವರಲ್ಲಿ ರಾಯಭಾರಿತ್ವಉದ್ಯಮಶೀಲತೆಯನ್ನುಉದ್ದೀಪಿಸುವಕಾರ್ಯಕ್ರಮಗಳುಯೋಜನೆಗಳನ್ನು ರೂಪಿಸಬೇಕು.

ಕನ್ನಡ ಮತ್ತು ಶಾಸ್ತ್ರೀಯಭಾಷಾ ಸ್ಥಾನಮಾನ

 

ಕನ್ನಡದಲ್ಲಿ ಎಣೆಯಿಲ್ಲದ ಪ್ರಾಚೀನ ಸಾಹಿತ್ಯತತ್ವವ್ಯಾಕರಣ ಶಾಸ್ತçಗಳುವಚನ ಸಾಹಿತ್ಯದಾಸ ಸಾಹಿತ್ಯಶಿಲ್ಪಶಾಸ್ತç ಇವೆಲ್ಲವುಗಳಿಗೆಕಳಶವಿಟ್ಟಂತ ಜಾನಪದ ಮಹಾಕಾವ್ಯಗಳಿವೆ. ಈ ಹಿನ್ನೆಲೆಯಲ್ಲಿ ಕನ್ನಡಕ್ಕೆಶಾಸ್ತ್ರೀಯ ಭಾಷೆಯ ಸ್ಥಾನಮಾನವೂದೊರತಿದೆ. ಸುಮಾರು ಎರಡು ಸಾವಿರ ವರ್ಷದಷ್ಟುಇತಿಹಾಸವನ್ನು ಹೊಂದಿರುವ ಸಾವಿರ ವರ್ಷಗಳನ್ನು ಮೀರಿದ ಸುಧಾರಿತ ಲಿಖಿತ ಭಾಷಾಪ್ರಯೋಗವನ್ನು ಹೊಂದಿರುವ ಕನ್ನಡ ಭಾಷೆ ಬಹುತೇಕ ಪಾಶ್ಚಿಮಾತ್ಯ ಭಾಷೆಗಳು ಶೈಶವಾಸ್ಥೆಯಲ್ಲಿರುವಹೊತ್ತಿನಲ್ಲಿಯೇ ಸಮೃದ್ಧವಾದ ಮೌಖಿಕಲಿಖಿತ ಸಾಹಿತ್ಯಶಾಸ್ತç ಗ್ರಂಥಗಳನ್ನುಹೊಂದಿತ್ತು. ವಿಪರ್ಯಾಸವೆಂದರೆಕನ್ನಡಕ್ಕೆಶಾಸ್ತ್ರೀಯಭಾಷಾಸ್ಥಾನಮಾನದಹೊರತಾಗಿಯೂ ಭಾಷೆಯ ಅಧ್ಯಯನಸಂಶೋಧನೆಪ್ರಚುರ ಪಡಿಸುವಿಕೆಗೆ ಕೇಂದ್ರದಿಂದ ನಿರೀಕ್ಷಿತ ಪ್ರಮಾಣದಲ್ಲಿ ಧನಸಹಾಯ ಹರಿದು ಬಂದಿಲ್ಲ.

 

ಈ ಆಕ್ಷೇಪಣೆ ಕನ್ನಡ ಭಾಷೆಯೊಂದರದ್ದು ಮಾತ್ರವಲ್ಲಶಾಸ್ತ್ರೀಯಭಾಷಾ ಸ್ಥಾನಮಾನ ಪಡೆದಿರುವ ತಮಿಳುತೆಲುಗುಮಲಯಾಳಂಒಡಿಯಾಭಾಷೆಗಳಆಕ್ಷೇಪಣೆಯೂ ಆಗಿದೆ. ಇತರ ಶಾಸ್ತ್ರೀಯಭಾಷೆಗಳಹೋಲಿಕೆಯಲ್ಲಿ ೨೦೧೭ ರಿಂದ ೨೦೨೦ರ ಅವಧಿಯಲ್ಲಿ ಸಂಸ್ಕೃತ ಭಾಷೆಗೆ ಕೇಂದ್ರವು ನೀಡಿದ ಅನುದಾನದ ಮೊತ್ತ ರೂ. ೬೪೩ ಕೋಟಿ ಆಗಿದೆ. ಇದೇ ಅವಧಿಯಲ್ಲಿ ಶಾಸ್ತ್ರೀಯಭಾಷಾಸ್ಥಾನಮಾನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ಕನ್ನಡದ ಅಧ್ಯಯನಸಂಶೋಧನೆಗಳಿಗೆ ಬಿಡುಗಡೆಯಾದ ಹಣ ಕೇವಲ ರೂ. ೩ ಕೋಟಿ. ನೆರೆಯ ತಮಿಳು ಭಾಷೆಗೆ ಈ ಅವಧಿಯಲ್ಲಿ ದೊರೆತ ಹಣ ರೂ. ೨೩ ಕೋಟಿತಮಿಳು ಭಾಷೆಗೆ ೨೦೧೭ರಿಂದ ೨೦೨೧ರ ವರೆಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾದ ಹಿನ್ನೆಲೆಯಲ್ಲಿ ಬಿಡುಗಡೆಯಾದ ಒಟ್ಟು ಹಣ ರೂ. ೪೨ ಕೋಟಿ ಎನ್ನುವ ಮಾಹಿತಿ ಇದು ಕನ್ನಡಕ್ಕೆನೀಡಲಾಗಿರುವಅನುದಾನ ಪರಿಸ್ಥಿತಿಯಲ್ಲಿ ಕಳೆದ ಎರಡು ವರ್ಷದ ಅವಧಿಯಲ್ಲಿಯೂ ಗಣನೀಯ ಸುಧಾರಣೆಯೇನೂ ಆಗಿಲ್ಲ ಎನ್ನುವುದು ನನಗಿರುವ ಮಾಹಿತಿಹೆಚ್ಚೆಂದರೆ ೨೦೧೭ರಿಂದ ಇಲ್ಲಿಯವರೆಗೆ ಐದಾರು ಕೋಟಿ ರೂಪಾಯಿ ಅನುದಾನಸಿಕ್ಕಿರಬಹುದು.

 

ಹೀಗಾದರೆಶಾಸ್ತ್ರೀಯ ಭಾಷೆಯ ಸ್ಥಾನಮಾನ ಪಡೆದೂ ನಾವು ಏನು ಸಾಧಿಸಲು ಸಾಧ್ಯಡಬಲ್ ಎಂಜಿನ್ ಸರ್ಕಾರದ ಅನುಕೂಲತೆಗಳ ಬಗ್ಗೆ ಪದೇ ಪದೆ ಹೇಳುವ ಕೇಂದ್ರದ ಸರ್ಕಾರವು ಕನ್ನಡಕ್ಕೆ ಮಾಡಿರುವ ಅನುಕೂಲ ಇದೆ ಏನುಅನುದಾನದವಿಚಾರದಲ್ಲಿನನಗಿರುವಮಾಹಿತಿಯಲ್ಲಿತಪ್ಪಿದ್ದರೆ ಸರ್ಕಾರಸಂಬಂಧಪಟ್ಟ ಸಚಿವರು ಅದನ್ನು ಸರಿಪಡಿಸಲಿನಿಖರ ಮಾಹಿತಿಯನ್ನು ಹಂಚಿಕೊಳ್ಳಲಿ. ಆದರೆ ಒಂದಂತೂ ಸತ್ಯ ಕನ್ನಡಕ್ಕೆಶಾಸ್ತ್ರೀಯ ಭಾಷೆಯ ಸ್ಥಾನಮಾನ ಕೇವಲ ಕಣ್ಣ್ಣೊರೆಸುವತಂತ್ರವಾಗಿದೆಯೇ ಹೊರತು ಭಾಷೆಸಂಶೋಧನೆಯ ದೃಷ್ಟಿಯಿಂದ ಮಹತ್ವದ್ದೇನನ್ನೂ ಸಾಧಿಸಲು ಸಾಧ್ಯವಾಗಿಲ್ಲ.

ಈ ವಾಸ್ತವದ ಹಿನ್ನೆಲೆಯಲ್ಲಿ ನಾಡಿನ ಆಳುವ ಸರ್ಕಾರಕ್ಕೆ ನಾನು ಹೇಳುವ ಮಾತೊಂದೇಶಾಸ್ತ್ರೀಯಭಾಷಾಸ್ಥಾನಮಾನದ ಹಿನ್ನೆಲೆಯಲ್ಲಿ ಕನ್ನಡಕ್ಕೆದೊರೆಯಬೇಕಾದಹಕ್ಕಿನ ಹಣವನ್ನು ತರುವ ಜವಾಬ್ದಾರಿ ನಿಮ್ಮದು ಅದನ್ನು  ಹೇಗೆ ಸಾಧಿಸಿ ತೋರಿಸುತ್ತೀರೋ ನೋಡಿ. ಉಳಿದಂತೆಕೇಂದ್ರದ ಹಣ ಒಂದು ಭಾಗವಾದರೆ ರಾಜ್ಯವು ಈ ನಿಟ್ಟಿನಲ್ಲಿ ಮಾಡಬೇಕಾದ ಕೆಲಸಗಳೂವ್ಯಾಪಕವಾಗಿವೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇರುವ ಪ್ರತಿಷ್ಠಿತ ಕಲೆಸಾಹಿತ್ಯಭಾಷಾವಿಶ್ವವಿದ್ಯಾಲಯಗಳಲ್ಲಿ ಕನ್ನಡ ಅಧ್ಯಯನ ಪೀಠವನ್ನು ಸ್ಥಾಪಿಸುವುದುಅವುಗಳ ಮೂಲಕ ಕನ್ನಡ ಭಾಷೆಸಂಸ್ಕೃತಿಪರಿಸರದ ಅನನ್ಯತೆಯನ್ನುಅಧ್ಯಯನಾರ್ಹಗೊಳಿಸುವುದು ಇವುಗಳಲ್ಲಿ ಅತ್ಯಂತ ಪ್ರಮುಖವಾದುದು. ಈ ನಿಟ್ಟಿನಲ್ಲಿ ಕನ್ನಡದ ಪ್ರಾಚೀನ ಸಾಹಿತ್ಯಕಲೆಸಂಸ್ಕೃತಿಗಳ ಅಧ್ಯಯನಕ್ಕೆ ಪೂರಕವಾದ ಶೈಕ್ಷಣಿಕ ಸಂಪನ್ಮೂಲವನ್ನುಆಕರ ಗ್ರಂಥಗಳನ್ನುಅಧುನಿಕ ಪ್ರಾತಿನಿಧಿಕ ಕೃತಿಗಳನ್ನು ಆದ್ಯತೆಯ ಮೇರೆಗೆ ಇಂಗ್ಲಿಷ್ಹಿಂದಿ ಸೇರಿದಂತೆ ಪ್ರಮುಖ ಭಾಷೆಗಳಿಗೆಭಾಷಾಂತರಿಸುವ ಕೆಲಸ ನಡೆಯಬೇಕು.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಕೆಲವು ಗಮನಾರ್ಹ ಕೆಲಸಗಳನ್ನು ಮಾಡಿದೆ. ಅದರೆಎಲ್ಲವೂ ಚದುರಿದಂತಿದೆ. ಇವುಗಳ ಧ್ಯೇಯೋದ್ದೇಶಗಳು ಮಹತ್ವಾಕಾಂಕ್ಷೆಯಿಂದಕೂಡಿದ್ದರೂ ಇಂದು ಹೆಚ್ಚಿನ ನಿರ್ದಿಷ್ಟತೆಸ್ಪಷ್ಟತೆಯಿಂದಯೋಜನಾಬದ್ಧವಾಗಿ ನಾವು ಮುಂದುವರಿಯಬೇಕಿದೆ. ಸರ್ಕಾರಗಳುಅಧ್ಯಕ್ಷರುಬದಲಾದಂತೆ ನೀತಿಅನುದಾನಉತ್ಸಾಹಗಳಲ್ಲಿವ್ಯತ್ಯಯವಾಗುತ್ತಾ ಹೋದರೆ ಇಂತಹ ಪ್ರಾಧಿಕಾರಗಳಿಂದ ಸಮರ್ಥ ಕೆಲಸವಾಗುವುದಿಲ್ಲ.

 

ಕನ್ನಡದ ಎಲ್ಲ ಪ್ರಾಚೀನ ಲಕ್ಷಣ ಗ್ರಂಥಗಳು ಸೇರಿದಂತೆ ಕ್ಲಾಸಿಕ್ ಕೃತಿಗಳನ್ನು ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಜಗತ್ತಿನ ಯಾವುದೇ ಮೂಲೆಯಲ್ಲಿರುವ ಆಸಕ್ತರಿಗೆ ಲಭ್ಯವಾಗುವಂತೆ ಮಾಡಲು ನಾವು ಇಂದು ವಿಶೇಷ ಆನ್‌ಲೈನ್ಜ್ಞಾನಕೋಶವೊಂದನ್ನು ರೂಪಿಸಬೇಕು. ಇದು ಸಂಪೂರ್ಣ ಉಚಿತವಾಗಿದ್ದುಅಕಡೆಮಿಕ್ ಶಿಸ್ತಿನಿಂದ ಕೂಡಿರಬೇಕು. ಸಾಹಿತ್ಯಸಂಸ್ಕೃತಿಜಾನಪದಕ್ಕೆ ಮಾತ್ರವೇ ಇದನ್ನು ಸೀಮಿತಗೊಳಿಸದೆ ಕನ್ನಡದ ಪ್ರಮುಖ ಸಂಶೋಧನಾ ಕೃತಿಗಳುಮಹತ್ವದ ಡಾಕ್ಟರೇಟ್ ಪ್ರಬಂಧಗಳೂ ಇದರಲ್ಲಿ ಲಭ್ಯವಾಗುವಂತಿರಬೇಕು. ಈ ಕೆಲಸ ನಿರಂತರವಾಗಿಅಕಡೆಮಿಕ್ ಶಿಸ್ತಿನಿಂದ ನಡೆಯಬೇಕು. ನಮ್ಮ ಎಲ್ಲ ವಿಶ್ವವಿದ್ಯಾಲಯಗಳ ಕನ್ನಡ ಅಧ್ಯಯನ ವಿಭಾಗಗಳುಕನ್ನಡ ಪೀಠಗಳು ಒಂದು ಸಮಾನ ಆಶಯವನ್ನು ಗುರುತಿಸಿಕೊಂಡು ತಮ್ಮ ವಿದ್ವತ್ತುಪಾಂಡಿತ್ಯಪ್ರಾಜ್ಞತೆಯನ್ನುಮೆರೆದು ಜಗತ್ತಿನ ಶ್ರೇಷ್ಠ ಅಕಡೆಮಿಕ್ಆನ್‌ಲೈನ್ತಾಣವೊಂದನ್ನು ರೂಪಿಸಬೇಕು. ಈ ಜಾಲತಾಣದಲ್ಲಿನಮ್ಮ ಕುವೆಂಪು ಭಾಷಾ ಭಾರತಿ ಪ್ರಾಧಿಕಾರಗಳುವಿಶ್ವವಿದ್ಯಾಲಯದ ಪ್ರಸಾರಾಂಗಗಳು ಈವರೆಗೆ ಮಾಡಿರುವ ಕೆಲಸವೂ ಪ್ರತಿಫಲಿತವಾಗಲಿ.

 

ಒಟ್ಟಂದದಲ್ಲಿ ಹೇಳಬೇಕೆಂದರೆ ಜಗತ್ತಿನ ಯಾವುದೇ ಮೂಲೆಯಲ್ಲಿರುವಯಾವುದೇ ಭಾಷೆಯ ಸಾಮಾನ್ಯ ಕುತೂಹಲಿಯೇಅಗಲಿಗಂಭೀರ ಅಕಡೆಮಿಕ್ಆಸಕ್ತಿಯುಳ್ಳ ವ್ಯಕ್ತಿಯೇ ಆಗಲಿ ಕನ್ನಡದ ಬಗ್ಗೆ ತಿಳಿಯಲು ಅಂತರ್ಜಾಲದಲ್ಲಿಕೈಯಾಡಿಸಿದರೆಕನ್ನಡವೆಂಬ ಈ ಮೇರು ಭಾಷೆಯ ವಿಹಂಗಮ ನೋಟಅನನ್ಯತೆಯನ್ನು ಈ ತಾಣ ಬಿಂಬಿಸುವಂತಿರಬೇಕು. ಇದೇ ವೇಳೆ ಅಧ್ಯಯನಪ್ರೇರಕವೂಸಂಶೋಧನಾಪೂರಕವೂ ಆದ ಹೆಮ್ಮೆಯ ಜಾಲತಾಣವಾಗಿಯೂ ಇದು ಹೊರಹೊಮ್ಮಬೇಕು.

 

ವಚನ ಸಾಹಿತ್ಯ

 

ಇಡೀ ಕನ್ನಡ ಸಾಹಿತ್ಯಕ್ಕೆ ವಿಶ್ವಮುಖಿ ಶಕ್ತಿ ಬಂದದ್ದು- ೧೨ನೇ ಶತಮಾನದ ವಚನಕಾರರಿಂದ. ೯೦೦ ವರ್ಷಗಳ ಹಿಂದೆಯೇ ಕನ್ನಡದ ವಚನವಾರಿಧಿ ತುಂಬಿ ತುಳುಕಿನೆರೆಹೊರೆಗೆಲ್ಲಾ ತನ್ನ ಸಾಹಿತ್ಯಕ ನರುಗಂಪನ್ನುಪಸರಿಸಿದ್ದು ಐತಿಹಾಸಿಕ ದಾಖಲೆ.

ಅಲ್ಲಮಪ್ರಭುವಿನಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ ಅನುಭವ ಮಂಟಪ ಮಾದರಿ ಪಾರ್ಲಿಮೆಂಟಿನಂತೆವಿಶ್ವವಿಖ್ಯಾತವಾಗಿದೆ. ಭಕ್ತಿ ಭಂಡಾರಿ ಬಸವಣ್ಣ ಅವರು ಕೈಗೊಂಡ ಸಾಮಾಜಿಕ ಕಾರ್ಯಗಳು ಅಂದಿನ ಆಡಳಿತಗಾರರ ಸಮಾಜಮುಖಿಧೋರಣೆಯನ್ನುಸೂಚಿಸುತ್ತವೆ.

 

ಎಲ್ಲ ವಚನಕಾರರಿಗೂ ಅನುಭವ ಮಂಟಪದಲ್ಲಿ ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಸ್ವಾತಂತ್ರ್ಯವಿತ್ತು. ವಚನ ಹೇಳಲು ಸಂಪೂರ್ಣ ಸ್ವಾತಂತ್ರö್ಯವಿತ್ತು. ಹೀಗಾಗಿ ಸರ್ವದ ಏಳಿಗೆಗೂ ಅದು ನಾಂದಿಯಾಯಿತು.

 

ಸಾಮಾಜಿಕ ನ್ಯಾಯದ ಪರಿಕಲ್ಪನೆ ಮೂಡಿ ಅದು ಸಾಕಾರವಾಗಿ ಅಸ್ತಿತ್ವಕ್ಕೆ ಬಂದು ಆದರ್ಶವಾಗಿಪರಿಪಾಲನೆಯಾದದ್ದು ಇದೇ ಸಂದರ್ಭದಲ್ಲಿ. ಆಗಿನ ಸಮಾಜ ಸ್ವಾಸ್ಥö್ಯವನ್ನುಮಾದರಿಯಾಗಿ ನಾವೆಲ್ಲಾ ಅನುಸರಿಸುವುದು ಒಳಿತು. ಸಿದ್ಧರಾಮಚೆನ್ನಬಸವಣ್ಣಮಾದಾರ ಚೆನ್ನಯ್ಯಡೋಹರ ಕಕ್ಕಯ್ಯಮೋಳಿಗೆ ಮಾರಯ್ಯಹರಳಯ್ಯಸಂಕವ್ವ ಮುಂತಾಗಿ ನೂರಾರು ವಚನಕಾರರು ಒಂದು ವಿನೂತನವಾದಹಾದಿಯನ್ನೇತೆರೆದರು. ಇಂದಿಗೂ ಅದು ನಮಗೆ ಬೆನ್ನ ಹಿಂದಿನ ನೆಚ್ಚಿನ ಹೊಂಬೆಕಾಗಿರುವುದುಸ್ಮರಣೀಯ. ಅನುಸರಣೀಯ ಕೂಡ.

 

ದಾಸ ಸಾಹಿತ್ಯ

ಸಂಗೀತ-ಸಾಹಿತ್ಯವನ್ನುಮೇಳೈಸುವತವನಿಧಿಯಾಗಿದಾರ್ಶನಿಕತೆಯ ಜೊತೆಗೆ ಆಧ್ಯಾತ್ಮಿಕತೆಸಾಮಾಜಿಕ ಜಾಗೃತಿಯನ್ನುಸಾಮಾಜಿಕ ಅರಿವನ್ನು ನಿಚ್ಚಳವಾಗಿ ಪಡಿಮೂಡಿಸುವಲ್ಲಿದಾಸ ಸಾಹಿತ್ಯದ ಸೊಬಗು ೧೬ನೇ ಶತಮಾನದ ಕನ್ನಡ ಸಾಹಿತ್ಯದ ಪರಂಪರೆಯಲ್ಲಿಉಜ್ವಲವಾಗಿದೆ. ಕರ್ನಾಟಕದ ಸಂಗೀತ ಪಿತಾಮಹರೆನಿಸಿದ ಶ್ರೀ ಪುರಂದರದಾಸರುಸಂತ ಶ್ರೀ ಕನಕದಾಸರುವಿಜಯದಾಸರುಮೊದಲಾದವರು ತಮ್ಮ ತಮ್ಮಕೀರ್ತನೆಗಳಲ್ಲಿಅಂಕಿತನಾಮದೊಂದಿಗೆಮೌಲಿಕವಾದ ಚಿರಂತನ ವಿಚಾರಗಳನ್ನೂಸಮಾನತೆಯಅರಿವನ್ನುಮಾನವೀಯತೆಯವೈಚಾರಿಕತೆಯನ್ನು ಸಮಾಜ ವಿಮರ್ಶೆಯನ್ನುಪ್ರತಿಪಾದಿಸಿದ್ದಾರೆ. ಇದರಿಂದಾಗಿಯೇ ಈ ಕಾಲಕ್ಕೂಪ್ರಸ್ತುತವಾಗುವಕೀರ್ತನೆಗಳು’ ಕನ್ನಡದ ಸಂಸ್ಕೃತಿಯವಾರಿಧಿಯಾಗಿದೆ.

 

* * *

 

ಕನ್ನಡದ ಒಬ್ಬೊಬ್ಬ ಪ್ರಾಚೀನ ಕವಿಯೂ ಒಂದೊಂದು ಮಹತ್ತರವಾದ ಕೃತಿಯನ್ನೇಕಾಣಿಕೆಯಾಗೇನೀಡಿದ್ದಾನೆ. ಎಲ್ಲರಿಂದಲೂ ಕಲಿಯ ಬೇಕಾದ ಪಾಠಗಳಿಗೆ. ಕನ್ನಡಿಗರಾದ ನಾವೆಲ್ಲಾ ಆ ಆದರ್ಶಗಳನ್ನುಅಳವಡಿಸಿಕೊಂಡರೆ ನಮ್ಮ ಬಾಳು ಬೆಳಕಾಗುವುದು ಖಂಡಿತಾ.

 

ಆದಿ ಕವಿ ಪಂಪನ ವಿಶಾಲ ಮನೋಧರ್ಮ ಮನುಷ್ಯ ಜಾತಿ ತಾನೊಂದೇವಲಂ” ಎಂಬ ವಿಶ್ವ ಮಾನವ ಪ್ರಜ್ಞೆಯಿಂದಇತ್ಯಾತ್ಮಕಗುಣಗಳಇತಿಹಾಸವೇ ಪ್ರಾರಂಭವಾಯಿತು.

 

ಆನಂತರದಲ್ಲಿ ಬಂದ ರನ್ನಜನ್ನಪೊನ್ನಹರಿಹರರಾಘವಾಂಕ... ಹದಿನೈದನೇ ಶತಮಾನದ ಹರಿದಾಸ ಪರಂಪರೆಯ ಎಲ್ಲ ದಾಸವರೇಣ್ಯರುಗಳೂ ಇಂದಿನ ಪೀಳಿಗೆಗೆ ಆದರ್ಶವೇ! ರತ್ನಾಕರವರ್ಣಿಯಂಥ ಭೋಗ-ಯೋಗದ ಸಮನ್ವಯ ತತ್ವವೂ ನಮಗೆ ಬೇಕಾದದ್ದೇ ಆಗಿದೆ.

 

ಹೀಗೆ- ಅಸಂಖ್ಯ ಕವಿಗಳಿಂದ ಅಗಣಿತ ಕನ್ನಡ ಕಾವ್ಯ ಕೃತಿಗಳಿಂದ ದೀಪ್ತವಾದ ಕನ್ನಡ ಸಾಹಿತ್ಯ ಪರಂಪರೆ ನಮಗೆ ಬದುಕಿನುದ್ದಕ್ಕೂಬೆಳಕಾಗಿಹರಿವದಾರಿದೀಪಗಳಾಗಿವೆ.

 

ಕವಿ ಮುದ್ದಣ ಹಳಬರಲ್ಲಿಕೊನೆಯವನುಹೊಸಬರಲ್ಲಿಮೊದಲನೆಯವನು. ೧೯೦೫ರ ನಂತರದ ಕನ್ನಡ ಸಾಹಿತ್ಯ ಕ್ಷೇತ್ರವು ಪೊರೆ ಬಿಟ್ಟ ಹಾವಿನಂತೆ- ವಿನೂತನವಾಯಿತು.

 

ಪ್ರಮುಖವಾಗಿ ಪಂಜೆ ಮಂಗೇಶ ರಾಯರು ಹೊಸ ಬಗೆಯ ಪದ್ಯಗಳನ್ನುರಚಿಸಲು ತೊಡಗಿದ್ದರು. ವಾಸ್ತವವಾಗಿ ಕನ್ನಡ ನವೋದಯ ಕಾವ್ಯದ ನೈಜ ಹರಿಕಾರರು ಅವರೇ!

 

೧೯೨೦ರ ವೇಳೆಗೆ ಕನ್ನಡ ಕಾವ್ಯದ ನೀಲಿ ನಕಾಶೆಯೇ ಬದಲಾಗಿ ಹೋಗಿತ್ತು. ಕವೀಂದ್ರರವೀಂದ್ರರಿಗೆ ಅವರ ಗೀತಾಂಜಲಿ” ಸಂಕಲನಕ್ಕಾಗಿನೋಬೆಲ್ ಪಾರಿತೋಷಕ ಬಂದ ಘಳಿಗೆ ಭಾರತೀಯ ಸಾಹಿತ್ಯದಲ್ಲಿ ಅನೇಕ ರೂಪಾಂತರಗಳಾದವು.

 

ಕನ್ನಡದ ಕಣ್ವರ್ಷಿ” ಎನ್ನಿಸಿಕೊಂಡ ಬಿ.ಎಂ. ಶ್ರೀಕಂಠಯ್ಯ ಅವರು ಅವಳ ತೊಡಿಗೆ ಇವಳಿಗಿಟ್ಟು ನೋಡ ಬಯಸಿದೆಇವಳ ಉಡುಗೆ ಅವಳಿಗಿಟ್ಟು ಹಾಡ ಬಯಸಿದೆ” ಎಂಬ ಮಾತೇ ಮಾರ್ಮಿಕವಾದುದಾಗಿದೆ.

ಶ್ರೀ” ಅವರ ಇಂಗ್ಲಿಷ್ ಗೀತೆಗಳು (ಕನ್ನಡಕ್ಕೆರೂಪಾಂತರವಾಗಿ ಬಂದ ಕವಿತೆಗಳು) ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಹಾದಿ ತೆರೆದವು. ಕನ್ನಡ ನಾಡಿನುದ್ದಕ್ಕೂ ಕಾವ್ಯ ಕ್ಷೇತ್ರದಲ್ಲಿ ಹೊಸ ಸಂಚಲನವೇಸೃಷ್ಟಿಯಾಯಿತು.

ಅಲ್ಲಿಂದ ನವೋದಯದ ಕಾವ್ಯದ ಅಲೆ ಕವಿಗಳಅಭಿವ್ಯಕ್ತಿಯಲ್ಲಿ ಹೊಸ ಸಾಧ್ಯತೆಗಳನ್ನು ಕಂಡುಕೊಳ್ಳಲು ಬಗೆ ಬಗೆ ಅವಕಾಶಗಳು ಕಂಡು ಬಂದು ಅರುಣೋದಯ ಕಾಲ” ಹೊನ್ನೇಸರಹೊಂಬಣ್ಣದಂತೆ- ಇಡೀ ಕರ್ನಾಟಕದಲ್ಲಿ ಮೆಲ್ಲ ಮೆಲ್ಲಗೆ ಪಸರಿಸುತ್ತಾನಾಡಿನುದ್ದಗಲ ಸಾಂಸ್ಕೃತಿಕ ಉತ್ಕರ್ಷ ಕಾಣಿಸಿಕೊಂಡಿತು.

 

ಮುದ್ದಣ ಕವಿಯನಂತರದಲ್ಲಿ ಕನ್ನಡ ನವೋದಯ ಕವಿಗಳ ಕಾವ್ಯ ಕೃಷಿ ಸಮೃದ್ಧವಾಗಿದೆ. ಕುವೆಂಪುಬೇಂದ್ರೆಶಿವರಾಮಕಾರಂತವಿ.ಕೃ. ಗೋಕಾಕ್ಡಿವಿಜಿಮಾಸ್ತಿಯು.ಆರ್. ಅನಂತಮೂರ್ತಿಗಿರೀಶ್ ಕಾರ್ನಾಡಚಂದ್ರಶೇಖರ ಕಂಬಾರರಾಜರತ್ನಂವಿ.ಸೀ.ಎಂ.ವಿ.ಸೀ ... ಒಬ್ಬರಲ್ಲಇಬ್ಬರಲ್ಲಹರಿದದ್ದು ಅನಂತವಾದ ಅನನ್ಯವಾದಅಸೀಮವಾದ ಕಾವ್ಯ ಕಾವೇರಿ.

 

ಹಾಗೆಯೇ ಅನಕೃತರಾಸುಕಟ್ಟೀಮನಿಚದುರಂಗನಿರಂಜನ ಹೀಗೆ ಒಂದು ದೊಡ್ಡ ಪಟ್ಟಿಯನ್ನೇ ನಾವು ನೀಡಬಹುದು. ಟಿ.ಪಿ. ಕೈಲಾಸಂಶ್ರೀರಂಗ ಮುಂತಾಗಿ ನಾಟಕ ಕ್ಷೇತ್ರದಲ್ಲೂ ಹೊಸ ಹೊಸಆಯಾಮಗಳುತೆರೆದುಕೊಂಡವು.

 

ನವೋದಯ ಕಾವ್ಯದಸಂದರ್ಭದಲ್ಲಂತೂಬಿಎಂಶ್ರೀ ತರುವಾಯ ಕುವೆಂಪುಬೇಂದ್ರೆಪು.ತಿ.ನ.ಕೆ.ಎಸ್.ನ. .... ಒಬ್ಬರಲ್ಲಇಬ್ಬರಲ್ಲ. ಒಬ್ಬೊಬ್ಬಕವಿಯೂಅನರ್ಘ್ಯರತ್ನವೇ!

 

ಕನ್ನಡ ಸಾಹಿತ್ಯದ ಬೃಹತ್ ವಾರಿಧಿಯಲ್ಲಿಮೀಯದವರಿಲ್ಲ. ಮಹಿಳೆಯರ ಪಾತ್ರವೂಅದ್ಭುತವೇ! ಕೊಡಗಿನ ಗೌರಮ್ಮತ್ರಿವೇಣಿವಾಣಿಡಾ. ಗಿರಿಜಮ್ಮ- ಇವರೆಲ್ಲರಕಾಣಿಕೆಗಳೂ ಅಮೂಲ್ಯ. ಇಂದಿನ ವೈದೇಹಿನೇಮಿಚಂದ್ರರವರೆಗೆ- ನಡೆದು ಬಂದ ಸಾಹಿತ್ಯದ ಹೆಜ್ಜೆ ಗುರುತುಗಳದಾರಿಯೇ ಒಂದು ಉಜ್ವಲ ದಾಖಲೆ!

ಎಂಥ ಹೊಸ ಮಾರ್ಗವೂ ಕಾಲ ಕಳೆದಂತೆಪೇಲವವಾಗಿಹಳತಾಗುವುದು ನೈಸರ್ಗಿಕ ನಿಯಮ. ಮೂರುವರೆ ದಶಕಗಳ ಕಾಲ ನಿರಂತರ ಮೊಳಗಿದ ರಮ್ಯ ಕಾವ್ಯ ಮಾರ್ಗಕ್ರಮ ಕ್ರಮೇಣ ಒಂದೇ ಬಂಡೀಜಾಡಿಗೆ ಬಿದ್ದು ಸವಕಲಾಯಿತು.

 

ಆಗ ಹೊಸತಿನಅನ್ವೇಷಣೆಯಲ್ಲಿದ್ದ ಪ್ರೊ. ಎಂ. ಗೋಪಾಲಕೃಷ್ಣಅಡಿಗರು ನವ್ಯಕಾವ್ಯ ಮಾರ್ಗಕ್ಕೆ ನಾಂದಿ ಹಾಡಿದರು. ನಡೆದು ಬಂದ ದಾರಿಯ ಕಡೆ ಹೊರಳಿಸಬೇಡ - ಕಣ್ಣು ತಿರುಗಿಸಬೇಡ” ಎಂಬಂಥಘೋಷಣೆಯೊಂದಿಗೆ ವಿನೂತನ ಮಾರ್ಗದಲ್ಲಿ ಕಾವ್ಯದಪಯಣವನ್ನುಮುಂದುವರೆಸಿದರು. ಅನ್ಯರೊರೆಹುದನೇಬರೆಬರೆದುಭಿನ್ನವಾಗಿದೆಮನವು” ಎಂದು ಆತ್ಮವಿಮರ್ಶೆಯನ್ನೂ ಮಾಡಿಕೊಂಡು ಹೊಸ ನಾಡನ್ನು ಕಟ್ಟುವ ಕಡೆಗೆ ಅಭಿಮುಖವಾಗುತ್ತಾರೆ.

 

ಮೊಗೇರಿ ಗೋಪಾಲ ಕೃಷ್ಣ ಅಡಿಗರ ಆಗಿನ ನಿಲುವು ಕಟ್ಟುವೆವು ನಾವು ಹೊಸ ನಾಡೊಂದನು ಹೊಸ ನೆತ್ತರುಕ್ಕುಕ್ಕಿಆರಿ ಹೋಗುವ ಮುನ್ನ ಕಟ್ಟುವೆವು ನಾವು ಹೊಸ ನಾಡೊಂದನುರಸದಬೀಡೊಂದನು!

ಕೋಟಿ ಗೋಡೆಗೆ ನಮ್ಮ ಹೆಣಗಳೇ ಮೆಟ್ಟಿಲು! ಆದಾವುಕರೆದಾವುವಾಂಛಿತವನು.

ಹೀಗೆ ಭಾವಾವೇಶದಿಂದ ಬರೆದ ಕವಿ ಮುಂದಿನ ತಮ್ಮ ಕವನ ಸಂಕಲನಗಳಲ್ಲಿ ಸಂಪೂರ್ಣ ಬದಲಾಗುತ್ತಾರೆ... ಆಂಗ್ಲ ನವ್ಯ ಕಾವ್ಯದ ಕೇಂದ್ರ ಬಿಂದು ಎನ್ನಿಸಿಕೊಂಡ ಟಿ.ಎಸ್. ಎಲಿಯಟ್ಟನಕಾವ್ಯದಜಾಡಿನಲ್ಲಿಸಾಗುತ್ತಾರೆ. ಗೇಯತೆಗಿಂಥಗದ್ಯದಲಯಗಾರಿಕೆಯತ್ತ ಹೆಚ್ಚು ಗಮನ ನೀಡಿ ವೈಚಾರಿಕತೆಯಕಾವ್ಯವನ್ನೇಸೃಜಿಸುತ್ತಾರೆ. ಆಗ ಬಂದದ್ದೇ ಹಿಮಗಿರಿಯ ಕಂದರ. ವರ್ಧಮಾನದೆಹಲಿಯಲ್ಲಿಶ್ರೀರಾಮನವಮಿಯ ದಿನ ಇತ್ಯಾದಿ ನನ್ನ ಕಾವ್ಯದಅಗ್ರಮಾನ್ಯಕವಿತೆಗಳು.

 

ಕನ್ನಡ ನಾಡಿನಲ್ಲಿ ಸುಪ್ರಸಿದ್ದಕಾದಂಬರಿಕಾರರಾದಡಾ. ಎಸ್.ಎಲ್. ಭೈರಪ್ಪ ಅವರ ಸಾಹಿತ್ಯಕ ಕೊಡುಗೆ ಅನನ್ಯವಾದುದು. ಅಡಿಗರಹಾದಿಯಲ್ಲಿಸಾಗಿದಯು.ಆರ್. ಅನಂತಮೂರ್ತಿಬಿ.ಸಿ. ರಾಮಚಂದ್ರ ಶರ್ಮಪಿ. ಲಂಕೇಶ್ಚಂದ್ರಶೇಖರ ಪಾಟೀಲಸಿದ್ಧಲಿಂಗಪಟ್ಟಣಶೆಟ್ಟಿಡಾ. ಗಿರಡ್ಡಿಗೋವಿಂದರಾಜಸುಮತೀಂದ್ರನಾಡಿಗ್ಡಾ. ಬುದ್ದಣ್ಣಹಿಂಗಮಿರೆಸುಬ್ರಾಯಚೊಕ್ಕಾಡಿಕೆ.ವಿ. ತಿರುಮಲೇಶ್ದೊಡ್ಡರಂಗೇಗೌಡಎಚ್.ಎಸ್. ವೆಂಕಟೇಶಮೂರ್ತಿಬಿ.ಆರ್. ಲಕ್ಷ್ಮಮಣ ರಾವ್ವೇಣುಗೋಪಾಲ ಸೊರಬಮುಂತಾದವರುತುಳಿದ ಹಾದಿ ಸಂಪೂರ್ಣ ನವ್ಯ.

 

ಕಾಲಕ್ರಮೇಣ ನವ್ಯವೂ ತನ್ನ ಪ್ರಭಾವ ಕುಂಠಿತವಾದಾಗಹುಟ್ಟಿಕೊಂಡದ್ದು ಬಂಡಾಯ ಕಾವ್ಯ. ದೇವನೂರು ಮಹಾದೇವಸಿದ್ದಲಿಂಗಯ್ಯಬರಗೂರು ರಾಮಚಂದ್ರಪ್ಪಚೆನ್ನಣ್ಣವಾಲೀಕಾರಸರಜೂಕಾಟ್ಕರ್ಮುಂತಾದವರುಶತಶತಮಾನಗಳಿಂದತುಳಿತಕ್ಕೆಒಳಗಾದವರುದಮನಿತರಶೋಷಣೆಗೆಒಳಗಾದವರ ಮೌನ ಆಕ್ರಂದನಕ್ಕೆನಾಲಗೆಯಾದರು. ಹೊಸ ಬಗೆಯ ನುಡಿಗಟ್ಟುಗಳಿಂದ ಹಿಂದುಳಿದ ವರ್ಗದವರ ಪಾಲಿಗೆ ಖಡ್ಗವೇಕಾವ್ಯವಾದದ್ದು ಈಗ ಇತಿಹಾಸ.

 

ನವ್ಯೋತ್ತರ ಕನ್ನಡ ಕಾವ್ಯದ ಸಂದರ್ಭದಲ್ಲಿ ಮೂಡ್ನಾಕೂಡು

 

ಚಿನ್ನಸ್ವಾಮಿಡಾ. ಎಲ್. ಹನುಮಂತಯ್ಯಡಾ. ಅರವಿಂದ ಮಾಲಗತ್ತಿಲಕ್ಷಿö್ಮÃಪತಿ ಕೋಲಾರಕೆ.ಬಿ. ಸಿದ್ದಯ್ಯಸುಬ್ಬುಹೊಲೆಯಾರ್ಡಾ. ಕೃಷ್ಣಪ್ಪ ಕೆ.ಡಾ. ಎಚ್.ಟಿ. ಪೋತೆಡಾ. ವಡ್ಡಗೆರೆನಾಗರಾಜಯ್ಯಡಾ. ಕಾ.ವೆಂ. ಶ್ರೀನಿವಾಸಮೂರ್ತಿಡಾ. ಸುಮಾ ಯು.ಬಿ.ಡಾ. ಬಿ.ಕೃಷ್ಣಪ್ಪಡಾ. ಮಳ್ಳೂರುನಾಗರಾಜುಡಾ. ರಾಜಪ್ಪ ದಳವಾಯಿಡಾ. ದೇವಯ್ಯ ಹರವೆಪ್ರೊ. ಮಲ್ಲೇಪುರಂಜಿ. ವೆಂಕಟೇಶ್ದು. ಸರಸ್ವತಿಡಾ. ಅನುಸೂಯಾಕಾಂಬಳೆಡಾ. ಅಪ್ಪಗೆರೆಸೋಮಶೇಖರಡಾ. ಸುಜಾತಾ ಚಲವಾದಿಡಾ. ಸದಾಶಿವ ದೊಡ್ಡಮನಿಡಾ. ಅರ್ಜುನ ಗೊಳಸಂಗಿಡಾ. ಟಿ.ಎಂ. ಭಾಸ್ಕರ್ಡಾ. ಸತ್ಯಾನಂದಪಾತ್ರೋಟಡಾ. ಅಣ್ಣಮ್ಮಟಿ. ತಿಪ್ಪೇಸ್ವಾಮಿ ಕೆರೆಯಾಗಲಹಳ್ಳಿಮುಂತಾದವರು ಕನ್ನಡ ಸಾಹಿತ್ಯದಲ್ಲಿ ದಲಿತ ಬದುಕಿನ ಅನಾವರಣವನ್ನು ಮಾಡಿದ್ದಾರೆ.

 

ಹಿಂದೆಂದಿಗಿಂತಲೂ ಇಂದು ಸಾಹಿತ್ಯ ಕ್ಷೇತ್ರದಲ್ಲಿ ಮಹಿಳಾ ಜಾಗೃತಿ ಮುಂಚೂಣಿಯಲ್ಲಿದೆ. ಇಡೀ ಭಾರತೀಯ ಪರಿಸರವನ್ನು ಮಹಿಳೆಯರು ತಮ್ಮ ಕಲಾಕೃತಿಗಳಲ್ಲಿಅತ್ಯುತ್ತಮವಾಗಿ ಅನಾವರಣ ಮಾಡುತ್ತಿರುವುದು ವಾಸ್ತವದಶುಭದ ಸಂಗತಿಯಾಗಿದೆ.

 

ಶ್ರೀಮತಿ ವೈದೇಹಿಶ್ರೀಮತಿ ಸಂಧ್ಯಾ ಪೈಪ್ರೊ. ಸ. ಉಷಾಶ್ರೀಮತಿ ಸವಿತಾ ನಾಗಭೂಷಣಡಾ. ಕೆ. ರಾಜೇಶ್ವರಿ ಗೌಡಶ್ರೀಮತಿ ಪ್ರತಿಭಾ ನಂದಕುಮಾರ್ಡಾ. ನೇಮಿಚಂದ್ರಶ್ರೀಮತಿ ಎಚ್.ಎಲ್. ಪುಷ್ಪಶ್ರೀಮತಿ ಪಾರ್ವತಿ ಐತಾಳ್ಶ್ರೀಮತಿ ಮಾಲತಿ ಪಟ್ಟಣಶೆಟ್ಟಿಡಾ. ಪಿ. ಚಂದ್ರಿಕಾಪ್ರೊ. ಎಲ್.ವಿ. ಶಾಂತಕುಮಾರಿಶ್ರೀಮತಿ ಹೇಮಾ ಪಟ್ಟಣಶೆಟ್ಟಿಡಾ. ಎಂ.ಎಸ್. ಆಶಾದೇವಿಡಾ. ಮಲ್ಲಿಕಾಘಂಟಿಶ್ರೀಮತಿ ಬಾ.ಹ. ರಮಾಕುಮಾರಿಡಾ. ತಮಿಳ್ ಸೆಲ್ವಿಶ್ರೀಮತಿ ರೂಪಾ ಹಾಸನಶ್ರೀಮತಿ ಎಂ.ಆರ್. ಕಮಲಶ್ರೀಮತಿ ವೈ.ಕೆ. ಸಂಧ್ಯಾಶರ್ಮಾಡಾ. ಪ್ರೀತಿ ಶುಭಚಂದ್ರಶ್ರೀಮತಿ ಎಚ್.ಎಸ್. ಮುಕ್ತಾಯಕ್ಕಡಾ. ಪದ್ಮಿನಿ ನಾಗರಾಜುಶ್ರೀಮತಿ ಬಿ.ಎನ್. ಸುಮಿತ್ರಾಬಾಯಿಶ್ರೀಮತಿ ತೇಜಸ್ವಿನಿ ನಿರಂಜನಡಾ. ಎಚ್.ಎಸ್. ಶ್ರೀಮತಿಡಾ. ಗಾಯತ್ರಿ ನಾವಡಡಾ. ಕಮಲಾಹಂಪನಾಶ್ರೀಮತಿ ಮಧು ವೆಂಕಾರೆಡ್ಡಿಶ್ರೀಮತಿ ಮೀನಾ ಮೈಸೂರುಶ್ರೀಮತಿ ಶಾಂತಾಇಮ್ರಾಪುರಡಾ. ಧರಣೀದೇವಿಮಾಲಗತ್ತಿಶ್ರೀಮತಿ ಕೆ. ಷರೀಫಾಡಾ. ಕವಿತಾಕುಸುಗಲ್ಲಶ್ರೀಮತಿ ಭಾನು ಮುಷ್ತಾಕ್ಶ್ರೀಮತಿ ವಿಜಯಾಸುಬ್ಬರಾಜ್ಶ್ರೀಮತಿ ಟಿ.ಸಿ. ಪೂರ್ಣಿಮಾಶ್ರೀಮತಿ ಸಬೀಹಭೂಮಿಗೌಡಶ್ರೀಮತಿ ಸರಸ್ವತಿ ಚಿಮ್ಮಲಗಿಡಾ. ವೀಣಾ ಶಾಂತೇಶ್ವರಡಾ. ಶೈಲಜಾಉಡಚಣಡಾ. ಸಬಿತಾಬನ್ನಾಡಿಡಾ. ವಿನಯಾಒಕ್ಕುಂದಡಾ. ಎಚ್.ಎಸ್. ಅನುಪಮಾಶ್ರೀಮತಿ ಶಾರದಾಡಾ. ವಿಜಯಶ್ರೀ ಸಬರದಡಾ. ಸಿ.ಎಸ್. ವಿಜಯಲಕ್ಷಿö್ಮಶ್ರೀಮತಿ ಸಾರಾಅಬೂಬಕರ್ಲತಾ ರಾಜಶೇಖರ್ಬ್ಯಾಡಗಿಸಂಕಮ್ಮ.

ಕನ್ನಡ ಚಲನಚಿತ್ರ ಗೀತ ಸಾಹಿತ್ಯ ವಿಭಾಗದಲ್ಲಿ ಜಿ.ವಿ. ಐಯ್ಯರಕುರಸೀಹುಣಸೂರು ಕೃಷ್ಣಮೂರ್ತಿಚಿ. ಸದಾಶಿವಯ್ಯ ತರುವಾಯ ಬಂದ ಗೀತ ರಚನಕಾರರಲ್ಲಿಪ್ರಮುಖರಾದಗೀತಪ್ರಿಯಆರ್.ಎನ್. ಜಯಗೋಪಾಲ್ಚಿ. ಉದಯಶಂಕರವಿಜಯಾನಾರಸಿಂಹಡಾ. ದೊಡ್ಡರಂಗೇಗೌಡಎಂ.ಎನ್. ವ್ಯಾಸರಾವ್ಶ್ಯಾಮಸುಂದರ ಕುಲಕರ್ಣಿಹಂಸಲೇಖವಿ. ಮನೋಹರ್ಜಯಂತ ಕಾಯ್ಕಿಣಿಡಾ. ವಿ. ನಾಗೇಂದ್ರಪ್ರಸಾದ್ಗೋಪಾಲ ವಾಜಪೇಯಿಕಲ್ಯಾಣ್ಕವಿರಾಜ್ಡಾ. ಡಿ. ಭರತ್ಹೃದಯಶಿವಮುಂತಾದವರ ಸಾಹಿತ್ಯ ಸೇವೆ ಶ್ಲಾಘನೀಯವಾದುದು.

 

ಇನ್ನಾದರೂ ಎಲ್ಲ ಮಡಿವಂತಿಕೆಗಳನ್ನು ಬಿಟ್ಟು ಮುಕ್ತವಾಗಿ ತೆರೆದ ಮನಸ್ಸಿನಿಂದ ಚಲನಚಿತ್ರ ಗೀತ ಸಾಹಿತ್ಯದ ಸಂಪುಟಗಳುಗೀತಕೋಶದ ಸ್ವರೂಪದಲ್ಲಿಪ್ರಕಟವಾಗಲಿ. ಸಾಹಿತ್ಯಕ ವೇದಿಕೆಗಳಲ್ಲಿ ಆ ಸಾಹಿತ್ಯವೂ ಗಂಭೀರವಾಗಿ ಚರ್ಚಿತವಾಗಲಿ.

 

ವೈದ್ಯಕೀಯ ಸಾಹಿತ್ಯ

 

ಇಂದು ತಂತ್ರಜ್ಞಾನ ಬೆಳೆದಿದೆ. ವೈಜ್ಞಾನಿಕವಾದ ವಿನೂತನ ಆವಿಷ್ಕಾರಗಳುಬದಲಾವಣೆಯನ್ನುತರುತ್ತಿವೆ. ಖಜಿಟಲೀಕರಣ ಎಲ್ಲ ಕಡೆ ವ್ಯಾಪಕವಾಗುತ್ತಿರುವುದು ಶುಭದ ಸಂಕೇತವಾಗಿದೆ. ವೈದ್ಯಕೀಯ ವಿಜ್ಞಾನಕ್ಕೆ ಸಂಬಂಧಿಸಿದಂತೆ ಡಾ. ಡಿ.ಎಸ್. ಶಿವಪ್ಪಡಾ. ನಾಗಲೋಟಿಮಠ ಅವರುಗಳು ಈ ದಿಸೆಯಲ್ಲಿ ಹೆಚ್ಚಿನ ಕನ್ನಡಕ್ಕೆ ಕಾಣಿಕೆ ನೀಡಿದ್ದಾರೆ. ಇನ್ನು ಮೂಲ ವಿಜ್ಞಾನಕ್ಕೆ ಸಂಬಂಧಿಸಿದಂತೆ ಜಿ.ಟಿ. ನಾರಾಯಣ ರಾವ್ಟಿ.ಆರ್. ಅನಂತರಾಮುಬಿ.ಎಸ್. ಶೈಲಜಾವಸುಂಧರಾ ಭೂಪತಿ ಮುಂತಾದವರುಮೌಲ್ವಿಕಗ್ರಂಥಗಳನ್ನೇಹೊರತಂದಿದ್ದಾರೆ. ವೈಮಾನಿಕ ಚಿಂತನೆಗಳಿಗೆ ಅನುಗುಣವಾಗಿ ಜಿ.ಆರ್. ಗೋಪಿನಾಥ ಸಾಕಷ್ಟು ಕೆಲಸ ಮಾಡಿದ್ದಾರೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಡಾ. ಯು.ಆರ್. ರಾವ್ಡಾ. ಸಿ.ಎನ್.ಆರ್. ರಾವ್ ಅವರ ಕಾಣಿಕೆ ಸ್ಮರಣೀಯವಾದುದಾಗಿದೆ. ಕೃಷಿ ಕ್ಷೇತ್ರದಲ್ಲಿ ಡಾ. ವಸಂತ ತಿಮಕಾಪುರಡಾ. ರಾಘವ ರೆಡ್ಡಿನರೇಂದ್ರ ರೈ ದೇರ್ಲ- ಹೀಗೆ ಕನ್ನಡ ಸಾಹಿತ್ಯವು ಕನ್ನಡಿಗನ ಬೌದ್ಧಿಕ ತೃಷೆಗೆತಣಿವನ್ನು ಉಂಟು ಮಾಡುವ ರೀತಿಯಲ್ಲಿ ಬಹುಮುಖಿ ಆಯಾಮವನ್ನುತೋರಿರುವುದುಅಭಿನಂದನೀಯವಾಗಿದೆ.

 

ಯಾವುದೇ ಭಾಷೆಯಲ್ಲಿ ಆದ್ಯತೆ ದೊರಕಬೇಕಾದದ್ದು ಆ ಭಾಷೆಯ ಮಕ್ಕಳ ಸಾಹಿತ್ಯದ ರಚನೆಕಾರರಿಗೆ. ಕನ್ನಡದಲ್ಲಿ ರಾಜರತ್ನಂಎಚ್.ಎಸ್. ವೆಂಕಟೇಶಮೂರ್ತಿಸಿಸು ಸಂಗಮೇಶಟಿ.ಎಸ್. ನಾಗರಾಜ ಶೆಟ್ಟಿಆನಂದ ಪಾಟೀಲತಮ್ಮಣ್ಣಬೀಗಾರಬಸುಬೇವಿನಗಿಡದಶಂಗುಬಿರಾದಾರಕಂಚ್ಯಾಣಿಶರಣಪ್ಪಡಾ. ಜಯಶ್ರೀ ಅರವಿಂದ ಮುಂತಾದವರುಚಿರಂತನವಾದಕಾಣಿಕೆಯನ್ನು ನೀಡಿದ್ದಾರೆ.

 

ವನ್ಯಜೀವಿಗಳ ಬಗೆಗೆ ಅತ್ಯುದ್ಭತವಾದ ಕೃತಿಗಳನ್ನು ನೀಡಿದವರುಡಾ. ಉಲ್ಲಾಸ ಕಾರಂತ ಮತ್ತು ಕೃಪಾಕರ ಹಾಗೂ ಸೇನಾನಿ ಅವರುಗಳು. ಶ್ರೀಮತಿ ಸುಮಂಗಲಾಮಮ್ಮಿಗಟ್ಟಿ ಅವರ ಕೊಡುಗೆಯೂ ಉಲ್ಲೇಖನೀಯವಾದುದು.

 

ಶ್ರೀಮತಿ ಸುಧಾ ಮೂರ್ತಿಲತಾ ಗುತ್ತಿಡಾ. ಎಸ್.ಪಿ. ಪದ್ಮಪ್ರಸಾದ್ನೇಮಿಚಂದ್ರಸುಚರಿತಾ ಹೆಗಡೆ ಅವರು ಕಣ್ಣಿಗೆ ಕಟ್ಟುವ ಹಾಗೆ ಪ್ರವಾಸ ಕಥನಗಳನ್ನು ಕನ್ನಡದಲ್ಲಿ ಕಟ್ಟಿಕೊಟ್ಟಿದ್ದಾರೆ.

ಕನ್ನಡ ಪುಸ್ತಕೋದ್ಯಮ

ಕರ್ನಾಟಕ ರಾಜ್ಯ ಗ್ರಂಥಾಲಯಕ್ಕೆ ಸಂಬಂಧಿಸಿದ ಹಾಗೆ ನಾಲ್ಕು ಮಾತು ನಾನು ಹೇಳಲೇಬೇಕಾಗಿದೆ. ಈ ಹೊತ್ತು ಪುಸ್ತಕೋದ್ಯಮಸೊರಗಬಾರದುಅದು ಪರಿಪ್ಲುತವಾಗಬೇಕು. ಗ್ರಂಥಗಳುಸರಕುಗಳಲ್ಲ. ಅವುಗಳಲ್ಲಿ ಸಂಸ್ಕೃತಿಯಹೃದಯವಿದೆ. ಬಿಬಿಎಂಪಿಗ್ರಂಥಾಲಯಗಳಿಗೆ ಕೊಡಬೇಕಾದ ಹಣ ಸುಮಾರು ೫೦೦ ಕೋಟಿ ಕರವನ್ನು ಬಾಕಿ ಉಳಿಸಿಕೊಂಡು ಆ ಹಣವನ್ನು ಬೇರೆ ಖಾತೆಗಳಿಗೆ ನೀಡಿ ಪುಸ್ತಕೋದ್ಯಮಕ್ಕೆ ಸಲ್ಲಬೇಕಾದ ಧನ ಸಂಗ್ರಹವನ್ನು ತಡೆ ಹಿಡಿದು ಬಹಳ ಅನ್ಯಾಯ ಮಾಡಿದೆ.

 

ಹೀಗಾದರೆಪುಸ್ತಕ ಪ್ರಕಾಶಕರು ಬದುಕುವುದು ಹೇಗೆಪುಸ್ತಕ ಬರೆಯುವ ಬರಹಗಾರರು ಬದುಕುವುದು ಹೇಗೆಇಂಥ ವಿಷಮ ಸ್ಥಿತಿಯಲ್ಲಿ ಪುಸ್ತಕೋದ್ಯಮಬೆಳೆಯುವುದಾದರೂ ಹೇಗೆನಮ್ಮ ಪ್ರೀತಿಯ ಸರ್ಕಾರ ಇದನ್ನು ಸರಿಪಡಿಸಬೇಕು. ಪುಸ್ತಕೋದ್ಯಮಕ್ಕೆ ಕಾಯಕಲ್ಪ ಮಾಡಬೇಕಾಗಿದೆ. ಕರ್ನಾಟಕ ರಾಜ್ಯ ಸರ್ಕಾರ ಇದುವರೆಗೆ ಸಗಟು ಖರೀದಿಗೆ ಸಂಬಂಧಿಸಿದಂತೆ ಏಕಗವಾಕ್ಷಿ ಮೂಲಕ ಒಬ್ಬೊಬ್ಬಪ್ರಕಾಶಕರಿಂದ ೩೦೦ ಪ್ರತಿಗಳನ್ನು ಮಾತ್ರ ಕೊಳ್ಳುತ್ತಿದೆ. ಇಂದಿನ ದಿನಮಾನಗಳಲ್ಲಿ ಪುಸ್ತಕೋದ್ಯಮಬದುಕುಳಿಯಬೇಕಾದರೆ ನೆರೆಯ ರಾಜ್ಯಗಳಾದ ತಮಿಳು ನಾಡುಕೇರಳದಲ್ಲಿರುವಂತೆ ಕನಿಷ್ಠ ೫೦೦ ಪ್ರತಿಗಳನ್ನಾದರೂ ಕೊಳ್ಳುವ ಮನಸ್ಸು ಮಾಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಆಯಾ ವರ್ಷ ಖರೀದಿಸಿದ ಪುಸ್ತಕದ ಹಣವನ್ನು ಪ್ರಕಾಶಕರಿಗೆ ತಲುಪಿಸುವ ತುರ್ತು ಕಾರ್ಯವೂಆಗಬೇಕಿದೆ.

 

ಕನ್ನಡ ಶಾಸ್ತ್ರೀಯ ಭಾಷೆ

 

ಸರ್ಕಾರ ತುರ್ತಾಗಿ ಗಮನಹರಿಸಬೇಕಾದ ಕೆಲವು ವಿಷಯಗಳು

ಅಕ್ಟೋಬರ್ ೩೦೨೦೦೮ ರಂದು ಕನ್ನಡಕ್ಕೆಶಾಸ್ತ್ರೀಯ ಭಾಷೆ ಸ್ಥಾನಮಾನ ದೊರೆಯಿತು. ಆದರೆ ಅದು ನಾಮಕಾವಸ್ಥೆಘೋಷಣೆಯಾಗಿ ಉಳಿದಿದೆ. ತಮಿಳು ಭಾಷೆ ಮೊದಲಬಾರಿಗೆ ೨೦೦೪ರಲ್ಲಿ ಈ ಸ್ಥಾನಮಾನ ಪಡೆಯಿತು.

 

ತಮಿಳುನಾಡು ಸರ್ಕಾರ ಈ ನಿಟ್ಟಿನಲ್ಲಿ ಅನೇಕ ಸೂಕ್ತ ಕ್ರಮಗಳನ್ನು ತೆಗೆದುಕೊಂಡು ಆರಂಭದಿಂದಲೇ ವಾರ್ಷಿಕ ೭-೮ ಕೋಟಿ ರೂಪಾಯಿಗಳ ಕೇಂದ್ರ ಸರ್ಕಾರದ ನೆರವನ್ನು ಪಡೆಯುತ್ತಿದೆ. ಹದಿನೆಂಟು ವರ್ಷದಲ್ಲಿ  ನೂರಾರು ಕೋಟಿ ರೂಪಾಯಿಗಳು ತಮಿಳು ಶಾಸ್ತ್ರೀಯ ಭಾಷೆಯ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಕೇಂದ್ರದಿಂದ ಹರಿದು ಬಂದಿದೆ.

 

ಕರ್ನಾಟಕ ಸರ್ಕಾರ ಈ ನಿಟ್ಟಿನಲ್ಲಿ ಯಾವುದೇ ಸೂಕ್ತವಾದ ಕಾರ್ಯಕ್ರಮ ರೂಪಿಸದೇಶಾಸ್ತ್ರೀಯ ಭಾಷೆಯ ವಿಚಾರದಲ್ಲಿ ಕೇಂದ್ರದಿಂದ ಕೇವಲ ೨-೩ ಕೋಟಿ ರೂ. ನೆರವು ಪಡೆದಿರಬಹುದು. ಇದು ನಮ್ಮ ಜಡತೆಯಕುರುಹಲ್ಲವೇನು?

 

ಬಹಳ ವಿಳಂಬವಾಗಿ ಹೋದ ವರ್ಷದಿಂದ ಮೈಸೂರಿನಲ್ಲಿ ಶಾಸ್ತ್ರೀಯಭಾಷಾ ಅಧ್ಯಯನ ಕೇಂದ್ರವನ್ನು ಭಾರತೀಯ ಭಾಷಾ ಸಂಸ್ಥಾನದ ಅಂಗ ಸಂಸ್ಥೆಯಾಗಿಅದರ ಅಧೀನದಕಚೇರಿಯಾಗಿರೂಪಿಸಿದೆ. ಸರ್ಕಾರ ಇದಕ್ಕೆ ಒಂದು ಜಾಗ ಕೊಡುವಲ್ಲಿಯೂಗಮನಹರಿಸಲಿಲ್ಲ. ಕೊನೆಗೆ ಮೈಸೂರು ವಿಶ್ವವಿದ್ಯಾನಿಲಯದವರು ಜಾಗ ಕೊಟ್ಟರು. ಹೀಗಾಗದರೆ ಹೇಗೆಕನ್ನಡಿಗರುಬೆಳೆಯುವದೆಂತು?

 

ಕನ್ನಡ ಮತ್ತು ಸಂಸ್ಕೃತಿ ಸಚಿವರಅಧ್ಯಕ್ಷತೆಯಲ್ಲಿಉನ್ನತಮಟ್ಟದ ಸಮಿತಿ ಆಗಬೇಕು.

 

            ಕನ್ನಡ ಶಾಸ್ತ್ರೀಯ ಭಾಷೆಯ ಅಭಿವೃದ್ಧಿಯ ವಿಚಾರದಲ್ಲಿ ಕೈಗೊಳ್ಳಬೇಕಾದ ಕ್ರಮಗಳುಕೇಂದ್ರದಿಂದ ನೆರವು ಪಡೆಯುವುದು ಇವುಗಳ ಬಗ್ಗೆ ಕಾಲಕಾಲಕ್ಕೆಚರ್ಚಿಸಿ ಯೋಜನೆಗಳನ್ನು ರೂಪಿಸುವ ಬಗ್ಗೆ ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಅಧ್ಯಕ್ಷತೆಯಲ್ಲಿ ಒಂದು ಉನ್ನತ ಮಟ್ಟದ ಸಮಿತಿಯನ್ನು ರಚಿಸಬೇಕು. ಸಮಿತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರುರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯದ ಉಪ ಕುಲಪತಿಗಳುಎಲ್ಲಾ ಅಕಾಡೆಮಿಗಳ ಅಧ್ಯಕ್ಷರುಬಿ.ಎಂ.ಶ್ರೀ. ಪ್ರತಿಷ್ಠಾನಉದಯಭಾನುಕಲಾಸಂಘಇತಿಹಾಸ ಅಕಾಡೆಮಿ ಮೊದಲಾದ ಎಲ್ಲ ಕನ್ನಡ ಸಂಘ ಸಂಸ್ಥೆಗಳ ಅಧ್ಯಕ್ಷರುಸದಸ್ಯರುಗಳಾಗಿರಬೇಕು.

 

ಕೇಂದ್ರದ ಶಾಸ್ತ್ರೀಯಭಾಷಾ ಅಧ್ಯಯನ ಕೇಂದ್ರ ಸ್ವಾಯತ್ತ ಸಂಸ್ಥೆಯಾಗಬೇಕು.

 

ಮೊಟ್ಟಮೊದಲಿಗೆ ಈ ಶಾಸ್ತ್ರೀಯಭಾಷಾ ಅಧ್ಯಯನ ಕೇಂದ್ರ ಸ್ವಾಯತ್ತ ಸಂಸ್ಥೆಯಾಗಬೇಕು. ಈ ಕೇಂದ್ರದ ನಿರ್ದೇಶಕರು ಸೇರಿದಂತೆ ಪರಿಣತ ಸಿಬ್ಬಂದಿ ವರ್ಗದವರನ್ನುಕಚೇರಿ ಸಿಬ್ಬಂದಿ ವರ್ಗದವರನ್ನು ರಾಜ್ಯ ಸರ್ಕಾರದ ಸಲಹೆಯ ಮೇರೆಗೆ ನೇಮಿಸಬೇಕು. ಈ ಬಗ್ಗೆ ರಾಜ್ಯ ತಮಿಳುನಾಡಿನಮಾದರಿಯಲ್ಲಿಯೇ ಸ್ವಾಯತ್ತ ಕೇಂದ್ರ ರಚಿಸುವಂತೆಕೇಂದ್ರಕ್ಕೆಒತ್ತಾಯಿಸಬೇಕು. ತಮಿಳು ಭಾಷೆಗೆನೀಡುತ್ತಿರುವಷ್ಟೇ ನೆರವನ್ನು ಕನ್ನಡಕ್ಕೂ ನೀಡಬೇಕು.

 

ಶಾಸ್ತ್ರೀಯಭಾಷಾ ಅಧ್ಯಯನದ ಉಪ ಕೇಂದ್ರಗಳ ಸ್ಥಾಪನೆ ಆಗಬೇಕು.

 

ಶಾಸ್ತ್ರೀಯ ಭಾಷೆಯ ಅಧ್ಯಯನ ಕೇಂದ್ರಕ್ಕೆ ಸಹಕಾರಿಯಾಗುವ ರೀತಿಯಲ್ಲಿ ಉಪಕೇಂದ್ರಗಳನ್ನುಸ್ಥಾಪಿಸಬೇಕು. ಕನ್ನಡ ಸಾಹಿತ್ಯ ಪರಿಷತ್ತುಕರ್ನಾಟಕ ಇತಿಹಾಸ ಅಕಾಡೆಮಿಬಿ.ಎಂ.ಶ್ರೀ. ಪ್ರತಿಷ್ಠಾನಉದಯಭಾನುಕಲಾಸಂಘಬೆಂಗಳೂರುಕರ್ನಾಟಕ ಸಂಘ ಧಾರವಾಡಮೊದಲಾದ ಕನ್ನಡಪರಸಂಘಗಳನ್ನುಶಾಸ್ತ್ರೀಯ ಭಾಷೆಯ ಅಧ್ಯಯನದ ಉಪ ಕೇಂದ್ರಗಳನ್ನಾಗಿಸ್ಥಾಪಿಸಬೇಕು. ಈ ಬಗ್ಗೆ ಯೋಜನೆ ಸಿದ್ಧಪಡಿಸಿ ಶಾಸ್ತ್ರೀಯ ಭಾಷೆ

 

ಅಧ್ಯಯನ ಅಭಿವೃದ್ಧಿ ಅಡಿಯಲ್ಲಿ ಕೇಂದ್ರದಿಂದ ನೆರವನ್ನು ಪಡೆಯಬೇಕು.

 

ಕನ್ನಡ ಸಂಸ್ಕೃತಿ ಇಲಾಖೆಯಲ್ಲಿ ಕನ್ನಡ ಶಾಸ್ತ್ರೀಯಭಾಷೆಗೆ ಸಂಬಂಧಿಸಿದ ಪ್ರತ್ಯೇಕ ವಿಭಾಗ ಆಗಬೇಕು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿಶಾಸ್ತ್ರೀಯ ಭಾಷೆ ಅಧ್ಯಯನಕ್ಕೆ ಪ್ರತ್ಯೇಕ ವಿಭಾಗವನ್ನು ಮಾಡಿ ಅದಕ್ಕೆ ಒಬ್ಬರು ಹೆಚ್ಚುವರಿ ಆಯುಕ್ತರನ್ನುನೇಮಿಸಿಅವರಿಗೆ ಪೂರ್ಣಪ್ರಮಾಣದಸಿಬ್ಬಂದಿಯನ್ನು ನೀಡಬೇಕು.

ಈ ವಿಭಾಗವು ಕನ್ನಡ ಸಾಹಿತ್ಯ ಅಕಾಡೆಮಿಜಾನಪದ ಅಕಾಡೆಮಿಪುಸ್ತಕ ಪ್ರಾಧಿಕಾರ ಮೊದಲಾದ ಸರ್ಕಾರದ ಸಂಸ್ಥೆಗಳೊಡನೆವಿಶ್ವವಿದ್ಯಾನಿಲಯಗಳೊಡನೆ ಸಮನ್ವಯ ಸಾಧಿಸಿಶಾಸ್ತ್ರೀಯ ಭಾಷೆ ಅಭಿವೃದ್ಧಿ ಕಾರ್ಯಗಳು ಓವರ್‌ಲ್ಯಾಪ್ ಆಗದಂತೆ ನೋಡಿಕೊಂಡು ಎಲ್ಲ ಸಂಸ್ಥೆಗಳಿಗೂ ಪ್ರತ್ಯೇಕ ಯೋಜನೆ ಕಾರ್ಯಕ್ರಮಗಳನ್ನು ಸಿದ್ಧಪಡಿಸಿ ನೀಡಬೇಕು.

ರಾಜ್ಯದ ಎಲ್ಲ ವಿಶ್ವವಿದ್ಯಾನಿಲಯಗಳ ಕನ್ನಡ ವಿಭಾಗದಲ್ಲಿ ಶಾಸ್ತ್ರೀಯ ಭಾಷೆ ಅಧ್ಯಯನಕ್ಕೆ ಒಂದು ಪ್ರತ್ಯೇಕ ವಿಭಾಗ ಆಗಬೇಕು.

 

ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳ ಕನ್ನಡ ವಿಭಾಗದಲ್ಲಿ ಶಾಸ್ತ್ರೀಯಭಾಷಾ ಅಧ್ಯಯನ ವಿಭಾಗವನ್ನು ತೆರೆದು ಅದಕ್ಕೆ ನಿರ್ದೇಶಕರು ಸೇರಿದಂತೆ ಪರಿಣತ ಸಿಬ್ಬಂದಿ ವರ್ಗದವರನ್ನುನೇಮಿಸಲು ಸರ್ಕಾರ ಪೂರ್ಣ ನೆರವು ನೀಡಬೇಕು. ಅದೇ ರೀತಿ ಹೊರನಾಡಿನವಿಶ್ವವಿದ್ಯಾನಿಲಯಗಳಲ್ಲಿಎಲ್ಲೆಲ್ಲಿ ಕನ್ನಡ ವಿಭಾಗಗಳಿವೆಅದನ್ನು ಬಲಪಡಿಸಿಅಲ್ಲಿಯೂ ಕೂಡಾ ಕನ್ನಡ ಶಾಸ್ತ್ರೀಯಭಾಷಾ ಅಧ್ಯಯನ ವಿಭಾಗವನ್ನು ಮಾಡಬೇಕು. ಈ ಎರಡೂ ವಿಭಾಗಗಳಿಗೆ ಕರ್ನಾಟಕ ಸರ್ಕಾರ ಪೂರ್ಣ ನೆರವನ್ನು ನೀಡಬೇಕು. ಈ ಬಗ್ಗೆ ಅಂದಾಜು ಮಾಡಿ ಕೇಂದ್ರಕ್ಕೆ ಕಳುಹಿಸಿ ಶಾಸ್ತ್ರೀಯ ಭಾಷೆ ಅಡಿಯಲ್ಲಿ ಹಣಕಾಸಿನ ನೆರವನ್ನು ಪಡೆಯಬೇಕು.

ವಿಶ್ವವಿದ್ಯಾನಿಲಯಗಳಿಂದ ಶಾಸನ ಸಂಪುಟಗಳ ಪ್ರಕಟಣೆಹಳಗನ್ನಡ ಕಾವ್ಯಗಳ ಪ್ರಕಟಣೆಹಸ್ತಪ್ರತಿಗಳಲ್ಲಿ ಉಳಿದಿರುವ ಅಮೂಲ್ಯವಾದ ಮತ್ತು ಪ್ರಮುಖವಾದ ಕಾವ್ಯಗಳನ್ನುಪ್ರಕಟಿಸುವ ಯೋಜನೆಗಳನ್ನು ರೂಪಿಸಬೇಕು.

ಕನ್ನಡದ ಪ್ರಮುಖ ಹಳಗನ್ನಡನಡುಗನ್ನಡಹೊಸಗನ್ನಡ ಕೃತಿಗಳನ್ನು ಆಯ್ಕೆ ಮಾಡಿಅವುಗಳನ್ನು ಡಿಜಿಟಲ್ ರೂಪದಲ್ಲಿ ಪ್ರಕಟಿಸಬೇಕು.

 

ಕನ್ನಡ ಶಾಸ್ತ್ರೀಯ ಭಾಷೆ ಅಧ್ಯಯನಕ್ಕೆ ಶಾಸನಾತ್ಮಕ ಮಾನ್ಯತೆ

 

ಈಗ ರಾಜ್ಯ ಸರ್ಕಾರ ಕನ್ನಡ ಭಾಷೆಯ ಅಭಿವೃದ್ಧಿ ವಿಚಾರದಲ್ಲಿ ತರುತ್ತಿರುವ ಹೊಸ ವಿಧೇಯಕದಲ್ಲಿ ಈ ಎಲ್ಲ ಅಂಶಗಳನ್ನೂ ಸೇರ್ಪಡೆ ಮಾಡಬೇಕು. ಆಗ ಈ ಎಲ್ಲ ಕಾರ್ಯಕ್ರಮಗಳಿಗೆಶಾಸನಾತ್ಮಕ ಮಾನ್ಯತೆ ಇರುತ್ತದೆ. ಈ ವಿಧೇಯಕವನ್ನುವಿಧಾನಸಭಾಅಧ್ಯಕ್ಷರ ಮೂಲಕ ಜಂಟಿ ಸದನದ ಸಮಿತಿಗೆ ಒಪ್ಪಿಸಿಮೂರು ತಿಂಗಳಲ್ಲಿ ವಿಧೇಯಕ ಸಿದ್ಧಪಡಿಸಿಬರುವ ಜನವರಿ ತಿಂಗಳ ಅಧಿವೇಶನದಲ್ಲಿ ವಿಧೇಯಕವನ್ನುಅಂಗೀಕರಿಸಿರಾಷ್ಟçಪತಿಗಳ ಅಂಗೀಕಾರ ಪಡೆದು ಜಾರಿಗೆ ತರಬೇಕು.

 

ತಮಿಳುನಾಡಿನಯೋಜನೆಗಳಮಾದರಿಯನ್ನು ಅಧ್ಯಯನ ಮಾಡಬೇಕು

 

ತಮಿಳು ಭಾಷೆಯನ್ನು ಶಾಸ್ತ್ರೀಯಭಾಷಾ ಯೋಜನೆಅಡಿಯಲ್ಲಿ ಅಭಿವೃದ್ಧಿ ಪಡಿಸಲು ತಮಿಳುನಾಡು ಸರ್ಕಾರ ಯಾವ ರೀತಿಯ ಕ್ರಮಗಳನ್ನು ಕೈಗೊಂಡಿದೆಯಾವ ಯಾವ ಯೋಜನೆಗಳನ್ನು ರೂಪಿಸಿದೆ ಎಂಬುದನ್ನು ಸಮಗ್ರವಾಗಿ ಅಧ್ಯಯನ ಮಾಡಲು ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಸಮಿತಿಯನ್ನು ರಚಿಸಿವರದಿಯನ್ನು ಪಡೆದುಅದರಂತೆ ನಮ್ಮ ರಾಜ್ಯದಲ್ಲೂ ಕ್ರಮ ಜರುಗಿಸಬೇಕು.

 

ಕೇಂದ್ರ ಸರ್ಕಾರ ಸ್ಪಷ್ಟೀಕರಣ ಕೇಳಿದರೆತಕರಾರು ಎತ್ತಿದರೆತಮಿಳುನಾಡುಹೊರಡಿಸಿರುವ ಆದೇಶ ಅಧಿಸೂಚನೆಗಳನ್ನುಲಗತ್ತಿಸಿ ಉತ್ತರ ನೀಡಬೇಕು.

ಅಂತರಂಗದ ಹಸಿವು ನುಡಿ ಪ್ರೇಮಕ್ಕೆ ಮೂಲವಾಗಲಿ

ಕನ್ನಡ-ಕನ್ನಡಿಗ-ಕರ್ನಾಟಕ ಎನ್ನುವುದು ಪ್ರತಿಯೊಬ್ಬರಲ್ಲೂ ಈ ಹೊತ್ತಿನ ಸಂದರ್ಭ ಸನ್ನಿವೇಶಗಳಲ್ಲಿನೆಲೆಗೊಂಡಿದೆಯೇ ಎಂಬ ಪ್ರಶ್ನೆ ಬಹಳ ಮುಖ್ಯ ಹಾಗೂ ಸಂಕೀರ್ಣವೆಂದು ನಾನು ಭಾವಿಸಿದ್ದೇನೆ. ಭಾಷೆ - ಪ್ರದೇಶಗಳ ದೃಷ್ಟಿಯಿಂದ ಅಸಮತೋಲನದ ಭೀತಿಯಲ್ಲೇ ನಾವು ಇಂದು ಬಾಳುತ್ತಿದ್ದೇವೆ. ಸಾಹಿತ್ಯ - ಸಂಸ್ಕೃತಿಯಬಾಧ್ಯತೆಯನ್ನುಪ್ರಧಾನವಾಗಿ ಇಂದಿನ ಯುವಜನಾಂಗ ಅರ್ಥ ಮಾಡಿಕೊಳ್ಳಬೇಕಾಗಿದೆ.

ರಭಸದ ಅಥವಾ ತರಾತುರಿಯ ಜೀವನ ಶೈಲಿಯೇ ಸಾಕು ಎಂದು ಅದರಲ್ಲೇಓಲಾಡುತ್ತಿರುವವರಿಗೆನಿಯಂತ್ರಿತವಾದ ರೀತಿಯಲ್ಲಿ ಕಡಿವಾಣ ಹಾಕಿ ನುಡಿಕನ್ನಡದ ಒಳಗೆ ಅವರನ್ನು ತರಲೇಬೇಕಾದ ಅವಶ್ಯಕತೆ ಇದೆ. ಸಮಾಜ ಚಲನಶೀಲವೂಪರಿವರ್ತನ ಶೀಲವೂ ಹೌದುಆದರೆ ಹಾಗೆ ಸ್ಥಿತ್ಯಂತರಗೊಳ್ಳುವ ಸಾಮಾಜಿಕ ಪರಿಚಲನೆಗಳಅಪಸವ್ಯಗಳನ್ನು ನಾವು ಮನಗಾಣಬೇಕಾಗಿದೆ. ಈ ನಿಟ್ಟಿನಲ್ಲಿ ಹಿರಿಯರು ಕಿರಿಯ ಜನಾಂಗವನ್ನುತಿದ್ದಲೇಬೇಕಾಗಿದೆ. ಹಿರಿಯರಪ್ರಾಜ್ಞರಅನುಭವಗಳ ರಾಶಿ ಹಾಗೂ ಕಿರಿಯರ ಉತ್ಸಾಹ ಸಮಪಾಕಗೊಂಡುಸಂಸರ್ಗವನ್ನುಪಡೆದಾಗ ಸಾಹಿತ್ಯ ಭಾಷೆ ಸಂಸ್ಕೃತಿಗಳ ಅಂದಕ್ಕೆ ಒಂದು ಆಕೃತಿ ದೊರೆಯುತ್ತದೆ.

ಹಿರಿಯರೂ ಸಹ ತಾವು ನಂಬಿಕೊಂಡು ಬಂದ ಪರಿಪಾಲಿಸಿಕೊಂಡು ಬಂದ ಹಳೆಯ ರೂಢಿಗತ ಪರಂಪರಾಗತ ಮೌಲ್ಯಗಳನ್ನು ಸರಿ ಎನ್ನುವುದಾಗಲಿಕಿರಿಯರು ಹಿರಿಯರ ಮಾತುಗಳಲ್ಲಿ ವ್ಯರ್ಥವೆಂದು ಅದರಲ್ಲಿ ದೋಷ ಹುಡುಕುವುದಾಗಲಿ ಆದರೆ ಅಲ್ಲಿ ಯಾವ ಸಕಾರಾತ್ಮಕ ಕ್ರಿಯೆ - ಪ್ರಕ್ರಿಯೆಗಳೂ ಆಗದೆ ಕೇವಲ ಶೂನ್ಯತೆಯನ್ನುಸೃಷ್ಟಿಸಿಕೊಳ್ಳುವದುರಂತವಾಗುತ್ತದೆ.

 

ಹೊಸ ಚಿಗುರು ಹಳೆಬೇರುಕೂಡಿರಲು ಮರ ಸೊಬಗು” ಎಂಬ ಡಿ.ವಿ.ಜಿ.ಯವರಮಂಕುತಿಮ್ಮನಕಗ್ಗದ ಸಾಲು ಹೇಳುವಂತೆ ಸಾಂಘಿಕ ಹಾಗೂ ಒಗ್ಗೂಡುವಿಕೆಯ ಸಾಮರಸ್ಯ  ಏರ್ಪಡಬೇಕಾಗಿದೆ. ಇದು ಪರಸ್ಪರ ಕೊಡುಕೊಳ್ಳುವಿಕೆಯ ಅಂತರ್ಗತ ಧ್ಯೇಯೋದ್ದೇಶಗಳಿಂದ ಆಗುತ್ತದೆ. ಸಕಾರಾತ್ಮಕವಾದ ಯೋಚನೆಯೋಜನೆಆಲೋಚನೆಅಭಿರುಚಿಗಳವಿನಿಮಯಗಳಿಂದ ಈ ಬಗೆಯ ಅನುಸಂಧಾನಅನುಸರಣ ಸಾಧ್ಯ.

ಸುಲಿದಬಾಳೆಯಹಣ್ಣಿನಂದದಿ” ಎಂಬ ಮಹಾಲಿಂಗರಂಗನ ಮಾತನ್ನು ಎಷ್ಟರ ಮಟ್ಟಿಗೆ ಭಾಷಾಸ್ವರೂಪಗಳಲ್ಲಿಕನ್ನಡವನ್ನುಬಳಸುವುದರಲ್ಲಿ ನಾವು ಪ್ರಯತ್ನಪಟ್ಟಿದ್ದೇವೆ. ಕ್ರಿಯಾಶೀಲತೆಯುಕರ್ತವ್ಯವಾಗಬೇಕೆಂಬ ಛಲವ್ರತನಿಷ್ಠ ಸಂಕಲ್ಪ ಇಲ್ಲದಿದ್ದರೆಪ್ರಬಲವಾದ ಇಚ್ಛಾಶಕ್ತಿ ಇಲ್ಲದಿದ್ದರೆಕನ್ನಡದ ಘನತೆ ಔನ್ನತ್ಯ ಮತ್ತು ಅದರ ಕುರಿತಾದ ಕಾಳಜಿಆಸಕ್ತಿಗಳು ಮನಸ್ಸಿಗೆ ಮುಟ್ಟುವ ಸಾಧ್ಯತೆ ಬಹಳ ನಗಣ್ಯ ಹಾಗೂ ಕ್ಷೀಣವಾಗಿಬಿಡುತ್ತವೆ.

ಕುವೆಂಪುಬೇಂದ್ರೆಕಯ್ಯಾರಕಿಂಞ್ಞಣ್ಣ ರೈಗೋವಿಂದ ಪೈಆಲೂರುವೆಂಕಟರಾಯರುಅನಕೃಮ. ರಾಮಮೂರ್ತಿ ಮುಂತಾದವರೆಲ್ಲ ಕೇವಲ ಕನ್ನಡವನ್ನು ಬರೆದು ಸುಮ್ಮನಾಗಿಬಿಡಲಿಲ್ಲಬದಲಾಗಿ ಕನ್ನಡಕ್ಕಾಗಿ ಅದಮ್ಯ ನಿಷ್ಠೆಯನ್ನು ಬೆಳೆಸಿಕೊಂಡು ಕನ್ನಡವೆಂಬನುಡಿವೆಣ್‌ಗೆ ಸಹಕರಿಸಿದರು. ಅಖಂಡ ಕರ್ಣಾಟಕ ಅಲ್ತೋ ರಾಜಕೀಯ ನಾಟಕ” ಎನ್ನುತ್ತಾರೆ.  ಖಡ್ಗಕ್ಕಿಂತ ಲೇಖನಿ ಹರಿತ” ಎಂದು ಕುವೆಂಪು ಕನ್ನಡವನ್ನುಭಾರತ ಜನನಿಯತನುಜಾತೆಯಾಗಿರಿಸಿ” ಅಭಿಮಾನ ಉಕ್ಕಿಸಿದ್ದಾರೆ.

 

ಕನ್ನಡವುಕನ್ನಡವಕನ್ನಡಿಸುತಿರಬೇಕು” ಎಂಬ ಅಮೃತವಾಣಿ ವರಕವಿ ಬೇಂದ್ರೆಯವರದ್ದು. ಕೊಂಕಣಿ ಮನೆ ಮಾತಿನ ಕನ್ನಡದ ಮೊತ್ತ ಮೊದಲ ರಾಷ್ಟçಕವಿ ಗೋವಿಂದ ಪೈ ಅವರಂತೂಬಹುಭಾಷಾವಿಶಾರದರಾಗಿಯೂ ಸಹ ತಾಯೆ ಬಾರ ಮೊಗವ ತೋರ ಕನ್ನಡಿಗರಮಾತೆಯೇ ಹರಸು ತಾಯೆಸುತರ ಕಾಯ ನಮ್ಮ ಜನ್ಮದಾತೆಯೇ’’ ಎಂದು ಕನ್ನಡ ಮಾತೆಯನ್ನುಹೃನ್ಮನಕ್ಕೆಇಳಿಸಿದರು.

ನಾಡದೇವಿಯೇ ಕಂಡೆ ನಿನ್ನ ಮಡಿಲಲ್ಲಿ ಎಂಥ ದೃಶ್ಯ ನೋವು ನಲಿವು ಸಮ್ಮಿಶ್ರದಲ್ಲಿಎದೆಯಾಯಿತದಕವಶ್ಯಒಂದೆದೆಯಹಾಲಕುಡಿದವರ ನಡುವೆ ಎಷ್ಟೊಂದು ಭೇದ ತಾಯಿ” - ಎಂಬ ಕವಿ ಕೆ.ಎಸ್. ನಿಸಾರ್ಅಹಮದ್ ಅವರ ಸಾಲುಗಳು ಇಂದಿಗೂ ಕನ್ನಡದ ದೈನ್ಯ ಸ್ಥಿತಿ ಹಾಗೂ ಪ್ರಕ್ಷÄಬ್ಧ ಗತಿ ಸ್ಥಿತಿಗಳಿಗೆಪ್ರಸ್ತುತವಾಗಿಪರಿಣಾಮಕಾರಿಯಾಗಿದೆ. 

 

ಕನ್ನಡದ ಭವ್ಯ ಇತಿಹಾಸಪರಂಪರೆ ಶತಶತಮಾನಗಳಹಿನ್ನೆಲೆಗಳಿಂದ ಅದರ ಸಂರಚನೆವಿಧಾನಗಳನ್ನುಅನುಲಕ್ಷಿಸುವ ಕ್ರಮ ನಿಜಕ್ಕೂ ಸರಿಯಾದ ಕ್ರಮವೇ ಹೌದುಆದರೆ ಅಷ್ಟಕ್ಕೇ ಸೀಮಿತವಾದರೆ ಸಾವಿರಾರು ವರ್ಷಗಳಿಂದ ಬಾಳುತ್ತಿರುವ ಕನ್ನಡ ಮತ್ತು ಕನ್ನಡಿಗರವಿಕಾಸಶೀಲತೆ ಸರಿಯಾದ ಹಂತದಲ್ಲಿ ವಿನ್ಯಾಸಗೊಳ್ಳುವುದಿಲ್ಲ. ಕ್ರಮಬದ್ಧವಾದ ರೂಪುರೇಷೆ ಹಾಗೂ ಅದಕ್ಕೆ ತಕ್ಕಂತೆ ಆಗಬೇಕೆಂಬಅವಿರತವಾದ ಹೋರಾಟದ ಅನಿವಾರ್ಯತೆ ಇದೆ. ಕನ್ನಡವನ್ನುಶಾಸ್ತ್ರೀಯ ಭಾಷೆ” ಎಂದು ಘೋಷಿಸಿ ಹಲವು ವರ್ಷಗಳೇ ಆಗಿದ್ದರೂ ಕನ್ನಡಕ್ಕೆಆಗಬೇಕಾದ ಕಾರ್ಯಗಳು ಆ ಗತಿಯಲ್ಲೇಸಾಗಿದೆ. ಭ್ರಮಾಧೀನ ಸ್ಥಿತಿಯಲ್ಲಿ ನಲುಗಿ ಕೊರಗಿ ಕರಗುತ್ತಿರುವವರಿಗೆಲ್ಲಭ್ರಮನಿರಸನದಹಂತವೂಬಂದೊದಗುವುದರಲ್ಲಿ ಸಂಶಯವಿಲ್ಲ. ಜಾಗತೀಕರಣದ ಪ್ರಭಾವ ಅದರ ಭರಾಟೆ ಎಂದೆಲ್ಲ ಇಂದು ಬೊಬ್ಬೆ ಇಡುತ್ತಿದ್ದೇವೆ. ಹಾಗೆ ನೋಡಿದರೆಜಾಗತೀಕರಣದ ಪ್ರಭಾವ ಇಂದು ನಿನ್ನೆಯದ್ದಲ್ಲ. ಬಹಳ ಹಿಂದಿನಿಂದಲೂ ಇದೆ. ಅನೇಕ ದಶಕಗಳ ಹಿಂದೆಯೇ ಕುವೆಂಪು ಅವರು ಇದನ್ನು ತಮ್ಮ ಹಾಳೂರು” ಎಂಬ ಪದ್ಯದಲ್ಲಿ ಮನೋಜ್ಞವಾಗಿ ಹೇಳಿದ್ದಾರೆ. ಜನವಲಸೆನಿರಾಶ್ರಿತ ಬದುಕಿನ ತಲ್ಲಣಗಳನ್ನು ಕುವೆಂಪು ಅವರು ಹೇಳಿರುವುದು ಬಹಳ ಗಮನೀಯ ಸಂಗತಿ ನಿನಗೆ ವಸನವಿತ್ತವರೀಗೆಎಂದು ಪ್ರಶ್ನಿಸುತ್ತಾರೆ.

ಆದ್ದರಿಂದಲೇ ವಿಶ್ವ ಜೀವನವೊಂದುಪಾರವಿಲ್ಲದ ಸಿಂಧು” ಎಂಬ ನುಡಿಮಂತ್ರವನ್ನು ಕುವೆಂಪು ಹೇಳಿದ್ದರಲ್ಲಿ ಸತ್ಯ ತಥ್ಯ ಎರಡೂ ಇದೆ. ಈ ದೃಷ್ಟಿಯಲ್ಲಿ ಆಧುನಿಕತೆಯನ್ನುಸೈರತೆಸ್ವೇಚ್ಛೆಗೆ ಬಳಸಿಕೊಳ್ಳದೆ ಶುದ್ಧವಾಗಿವಿನಿಯೋಗಿಸಿಕೊಳ್ಳುವುದೇನುಡಿಕಂಕಣಕ್ಕೆಪೂರಕವಾಗಿಇಂಬಾಗಿಒದಗಿಬರುತ್ತದೆ. ಆದರೆ ಇದು ಸುಲಭವಲ್ಲ ಇದಕ್ಕೆ ಬೇಕಾದ ಶೃದ್ಧೆಕ್ಷಮತೆಕಾರ್ಯತತ್ಪರತೆ ಅತ್ಯಗತ್ಯ ಹಾಗೆಂದು ನುಡಿಸೌಧವನ್ನುಪ್ರಜ್ಞಾಪೂರ್ವಕವಾಗಿ ಕಟ್ಟುವ ಕನ್ನಡ ನಾಡು ನುಡಿಯನ್ನು ಉಳಿಸಿ ಬೆಳೆಸುವ ಅಭಿಲಾಷೆಯನ್ನು ನಾವೇ ಹೊಂದದಿದ್ದರೆ ಹೇಗೇಸಹಕಾರ ಸಮನ್ವಯದ ಅಡಿಯಲ್ಲಿ ಕನ್ನಡವನ್ನು ಕಲಿಸುವ ಇಂಗಿತ ನಮ್ಮಲ್ಲಿ ಜವಾಬ್ದಾರಿಯಾಗಬೇಕಾಗಿದೆ. ಇಂದಿಗೂ ಗಡಿನಾಡಿನ ಪ್ರದೇಶಗಳಲ್ಲಿ ಭೌಗೋಳಿಕವಾಗಿಬೌದ್ಧಿಕತೆಗೆಕನ್ನಡಿಗರಅಸ್ತಿತ್ವವೇ ತೀರಾ ಕಳವಳಕಾರಿಯಾಗಿದ್ದು ಆತಂಕ ಹಾಗೂ ಅತಂತ್ರಸ್ಥಿತಿಯಲ್ಲಿಕನ್ನಡಿಗರುಬಾಳುತ್ತಿದ್ದಾರೆ.

 

ಕನ್ನಡವನ್ನು ಎದೆಯ ಸಂಪ್ರೀತಿಯಿಂದಕಲಿಸಬೇಕಾಗಿರುವುದು ಆದ್ಯ ಕರ್ತವ್ಯವಾಗಬೇಕಾಗಿದೆ. ಅಂತರಂಗದಲ್ಲಿ ಆ ಹಸಿವು ಮೂಡಿಕೊಳ್ಳದೆರೂಢಿಸಿಕೊಳ್ಳದೆ ಹೋದರೆ ಕನ್ನಡಿಗರಾಗಿ ಕರ್ನಾಟಕದಲ್ಲಿ ನೆಲೆಸುವುದರಲ್ಲಿ ಯಾವ ಹೆಚ್ಚುಗಾರಿಕೆಯೂಇರದು. ಪರಭಾಷಿಕರುಅನ್ಯಸಂಸ್ಕೃತಿಯ ನಿರಂತರವಾಗಿ ಆಕ್ರಮಿಸಿಕೊಳ್ಳುವಿಕೆಯ ನಡುವೆ ಕನ್ನಡ ಸಂಸ್ಕೃತಿಯನ್ನುಉಳಿಸಿಕೊಳ್ಳಬೇಕಾದ ಗಣನೀಯ ಪ್ರಮಾಣದ ಎಚ್ಚರದನಡೆಯ ಆದ್ಯತೆ ಇದೆ. ಸಹನೆ - ಸಂಯಮದರಹದಾರಿಗಳಿಂದಲೇ ಇದನ್ನು ಸಾಧಿಸಬೇಕಾಗಿದೆ. ವಿಜ್ಞಾನ - ತಂತ್ರಜ್ಞಾನ ಇವುಗಳನ್ನು ನಮ್ಮ ಜನ ಸ್ವೀಕರಿಸುತ್ತಿರುವುದು ಬಹಳ ವಿಶೇಷ ಹಾಗೂ ಸಂತಸದ ಸಂಗತಿ. ಆದರೆ ಹಾಗೆ ಒದಗಿ ಬರುವ ವಿಜ್ಞಾನ ತಂತ್ರಜ್ಞಾನದ ಕುರಿತಾದ ಕೃತಿಗಳು ಕನ್ನಡಕ್ಕೆ ಬರುವಂತೆ ಸುಲಭ. ಕನ್ನಡದಲ್ಲಿ ತಾಂತ್ರಿಕ ಪದಗಳೂ ಅರ್ಥವಾಗುವಂತೆ ಆದಾಗಕನ್ನಡಕ್ಕೆ ಕನ್ನಡ ಜಗತ್ತಿಗೆ ನಿಜವಾದ ಕೊಡುಗೆಯಾಗುತ್ತದೆ. ವಿಜ್ಞಾನ - ತಂತ್ರಜ್ಞಾನ ಹಾಗೂ ಅದರ ಪರಿಭಾಷೆಗಳನ್ನು ಕನ್ನಡದಲ್ಲಿ ಬಳಸಲೂಸಾದ್ಯವಿದೆಬರೆಯಲೂ ಸಾಧ್ಯವಿದೆ ಎನ್ನುವುದಕ್ಕೆ ರಾಮಕೃಷ್ಣರಾವ್ಟಿ.ಆರ್. ಅನಂತರಾಮುಜೆ.ಆರ್. ಲಕ್ಷö್ಮಣರಾವ್ಎಚ್.ಎ. ಪುರುಷೋತ್ತಮರಾವ್  ಇವರು ಕನ್ನಡದಲ್ಲಿ ವಿಜ್ಞಾನದ ಸಾಹಿತ್ಯವನ್ನು ತಲುಪಿಸಲು ಮಾಡಿದ ಕೃಷಿ ಖುಷಿಯ ವಿಚಾರ. ಜೊತೆಗೆ ವಿಜ್ಞಾನದ ಭಾಷೆ ಒಣ ಭಾಷೆ ಅಲ್ಲಶುಷ್ಕವೂ ಅಲ್ಲಕನ್ನಡ ಮಾಧ್ಯಮದಲ್ಲೇ ಓದಿ ಅತ್ಯುತ್ತಮ ವಿಜ್ಞಾನಿಗಳೆನಿಸಿದ ಪ್ರೊ. ಯು.ಆರ್. ರಾವ್ ಹಾಗೂ ಸಿ.ಎನ್.ಆರ್. ರಾವ್ ಅವರುಗಳ ಸಾಧನೆ ನಮಗೆ ಮಾದರಿಯಾಗಬೇಕು.

ಇಂದಿನ ಸಾಹಿತ್ಯದ ಬಗ್ಗೆ ಕೆಲವು ಅಪಸ್ವರಗಳಿವೆ. ಆದರೆ ಕವಿಯಾದವನಿಗೆಸ್ವಾತಂತ್ರö್ಯಸ್ವತಂತ್ರ ಎರಡೂ ಇದ್ದೇ ಇರುತ್ತದೆ. ಅದು ಅವನ ಪ್ರಥಮ ಹಕ್ಕು ಸಹಾ ಹೌದು. ಭಾರತೀಯ ಕಾವ್ಯ ಮೀಮಾಂಸೆಯಲ್ಲೇ ಇದಕ್ಕೆ ನೇರ ಉದಾಹರಣೆಯಿದೆ. ಕವಿ ಕಾವ್ಯ ಭೂಮಿಕೆಯನ್ನು ಕುರಿತು ಅಂದಿನ ಪ್ರಸಿದ್ಧ ಲಾಕ್ಷಣಿಕನಾದಆನಂದವರ್ಧನನು ತನ್ನ ಧ್ವನ್ಯಾಲೋಕ ಕೃತಿಯಲ್ಲಿ ``ತನ್ನ ಅಪಾರವುಅಗಾಧವೂ ಆದ ಕಾವ್ಯ ಜಗತ್ತಿನಲ್ಲಿ ಕವಿಯೇ ಸಾರ್ವಭೌಮ. ಅವನ ಕಾವ್ಯಕ್ಕೆ ಅವನೇ ಸೃಷ್ಟಿಕರ್ತಬ್ರಹ್ಮ ! ತನಗೆ ಹೇಗೇ ಬೇಕೋ ಹಾಗೆ ಅವನು ತನ್ನ ಕಾವ್ಯದಜಗತ್ತನ್ನುಬದಲಾಯಿಸಿಕೊಳ್ಳಲು ಅವನಿಗೆ ಸ್ವಾತಂತ್ರö್ಯಇದ್ದೆ ಇದೆ’’ ಎಂದು ಹೇಳಿದ್ದಾನೆ.

ರವಿ ಕಾಣದ್ದನ್ನು ಕವಿ ಕಂಡ” ಎಂಬ ಕುವೆಂಪು ಅವರ ಮಾತಿನೊಳಗಿನ ಸತ್ವ ದರ್ಶನವೂ ಹೀಗೆ ಪ್ರಮುಖವಾಗುತ್ತದೆ. ಸಹೃದಯ ಕವಿ ಇವುಗಳ ಭಾವ ಪ್ರಪಂಚ ಇವತ್ತು ವ್ಯಾಪಕವಾಗಿಆಗುತ್ತಿಲ್ಲ ಮತ್ತು ಆ ಭಾವ ವಲಯಗಳನ್ನು ಮುಟ್ಟಲು ಇಂದಿನ ಜನತೆ ಸ್ಪಂದಿಸುತಿಲ್ಲವೆಂಬ ಕೂಗು ಇರುವುದೂ ನಿಜಆದರೆ ಸಮಾಜವುವಾಹಿನಿಯಂತೆಹರಿಯವಗುಣಧರ್ಮದ್ದುಹೊಸ ನೀರು ಬಂದು ಹಳೆಯ ನೀರು ಕೊಚ್ಚಿ ಹೋಗುವ ಜಾಗ ಬಿಡುವ ಪರಿಪಾಠ ಸಹಜ ಆದರೆ ಹಳೆಯದು ಎಂಬ ಕಾರಣಕ್ಕೆ ಎಲ್ಲ ಸಾಹಿತ್ಯವನ್ನುಮೂಲೆಗೆಬಿಸಾಡುವ ಪ್ರವೃತ್ತಿಹೊಸದೆಂಬ ಕಾರಣಕ್ಕೆ ಎಲ್ಲ ಮಾದರಿಯ ಸಾಹಿತ್ಯವೂ ಶ್ರೇಷ್ಠ ಎಂಬ ಭಾವನೆಗೆ ಒಗ್ಗಿಕೊಳ್ಳಬಾರದು.

ಹೊಸತರಲ್ಲೂಹಳತುಂಟುಹಳತರಲ್ಲೂಹೊಸದುಂಟು ಎಂಬುದೇ ಸಾಹಿತ್ಯದ ಆಮೂಲಾಗ್ರವಾದಸತ್ಯದೀಪಿಕೆ. ಕನ್ನಡ ಭಾಷೆಗೆ ನೂರಾರು ಸಾಹಿತಿಗಳನುಡಿಮುಡಿಪುನುಡಿ ಕಾಣಿಕೆ ಅನಿರ್ಬಂಧಿತವಾಗಿ ಸಾಗುತ್ತಾ ಮಾಗುತ್ತಾ ಬಂದಿದೆ. ಆದರೆ ಪದಕ್ಕೆ ಪದ ಜೊತೆಗಿದ್ದ ಮಾತ್ರಕ್ಕೆ ಪದ್ಯವಾದೀತು ಹೇಗೇಎಂಬ ಡಾ. ಜಿ.ಎಸ್. ಶಿವರುದ್ರಪ್ಪನವರ ಮಾತು ಬಹಳ ಔಚಿತ್ಯ ಪೂರ್ಣ. ಈ ದಿಸೆಯಲ್ಲಿ ಕನ್ನಡ ನಾಡು ಹಾಗೂ ನುಡಿಯ ಜಗತ್ತು ಇನ್ನಷ್ಟು ತನ್ನ ಹಾಸು ಬೀಸುಗಳನ್ನುವಿಸ್ತರಿಸಿಕೊಳ್ಳಬೇಕಾಗಿದೆ.

 

ಬಹುಭಾಷಿಕ ಹಾಗೂ ಬಹುಸಾಂಸ್ಕೃತಿಕಪರಿಸರಗಳಲ್ಲಿ ಬದುಕುವ ನಮಗೆ ಮುಖ್ಯವಾಗಿ ಯಾವುದೇ ಅತಿರೇಕಗಳಿಲ್ಲದೆ ಹೋದಾಗ ಈ ಬಗೆಯ ಸಾಮರಸ್ಯ ಹಾಗೂ ಸೌಹಾರ್ದ ಬಂಧ ಬಾಂಧವ್ಯಗಳುಏಕತ್ರಗೊಳ್ಳುತ್ತವೆ. ನಿರಭಿಮಾನದುರಭಿಮಾನ ಹಾಗೂ ಅಂಧಾಭಿಮಾನ ಎಲ್ಲ ರೀತಿಯಿಂದಲೂ ಅಪಾಯ ಹಾಗೂ ದುರಂತಕ್ಕೆಕಾರಣವಾಗುತ್ತವೆ. ಭಾಷೆನೆಲಜಲ ಈ ಎಲ್ಲ ಮಜಲುಗಳಲ್ಲೂ ಈ ರೀತಿಯ ವಿಪರೀತವಾದಗ್ರಹಿಕೆಗಳು ಮಿತಿಮೀರಿದ ಉತ್ಪೆçÃಕ್ಷಾಪೂರಿತನಿಲುವುಗಳಿಂದ ನಾವು ಹೊರಬಂದು ಇದರಿಂದ ಹೊರತಾದ ಹೊಸ ಜಗತ್ತನ್ನುಕಾಣಬೇಕಿದೆ ಮತ್ತು ಅದನ್ನು ನಮ್ಮ ಮುಂದಿನ ಪೀಳಿಗೆಗಳಿಗೆಕಾಯ್ದಿರಿಸಿಜತನವಾಗಿಕಾಪಿಟ್ಟುಕೊಂಡುಕಾಣಿಸಬೇಕಿದೆ.

 

ಬಯಕೆ ಬರುವುದರಕಣ್ಸನ್ನೇಕಾಣಾ” ಎಂಬ ಮಧುರಚನ್ನರಮಾತಿನಂತೆ ಆಸೆ-ಆಮಿಷಗಳಿಗೆದಾಸರಾಗಿ ವ್ಯಾವಹಾರಿಕ ದೃಷ್ಟಿಗಾಗಿ ಕನ್ನಡ ಎಂದಾದಲ್ಲಿ ಅದರಿಂದ ಯಾವುದೇ ಫಲಿತಗಳಾಗಲಿಪ್ರಯೋಜನಗಳಾಗಲಿಇರುವುದಿಲ್ಲ. ನಂಬಿಕೆಅಚಲ ವಿಶ್ವಾಸ ನಮ್ಮ ನುಡಿ ನಾಲಿಗೆಯಾಗಬೇಕು. ಹಾಗಾದಾಗ ಮಾತ್ರ ಕನ್ನಡದ ವೈಶಿಷ್ಟö್ಯವೈವಿಧ್ಯತೆಗೊಂದು ಆಯಾಮ ಆದ್ಯತೆ ದೊರಕುತ್ತದೆ. ನುಡಿಯ ಲಾಲಿತ್ಯ ಹಾಗೂ ಅದರ ಅವಸ್ತಾಂತರಗಳನ್ನುಅರಿಯದೆ ಹೋದಲ್ಲಿ ಅದು ಕೇವಲ ಭಾಷಾಶೂನ್ಯತೆಯನ್ನಷ್ಟೆ ಅಲ್ಲದೆ ಭಾವ ಶೂನ್ಯತೆಯನ್ನೂ ಸೃಷ್ಟಿಸಿ ಬಿಡುತ್ತದೆ.

 

ಕನ್ನಡದ ನೆಲ ಜಾನಪದ ಗೇಯತೆಯನ್ನುಮೈಗೂಡಿಸಿಕೊಂಡುಹುಲುಸಾಗಿ ವಿಪುಲವಾಗಿ ಬೆಳೆದಿರುವ ನಾಡು ಜನವಾಣಿ ಬೇರುಕವಿವಾಣಿ ಹೂವು” ಎಂಬಂತೆ ಈ ಕನ್ನಡದ ಮಣ್ಣಿನ ಅಂತಃಸತ್ವದೇಸಿತನಅಂತರಂಗದ ಸೊಗಡನ್ನೆಲ್ಲಗರ್ಭೀಕರಿಸಿಕೊಂಡು ಹುಟ್ಟಿದ ಹಾಡುಗಳಿಗೆ ಹಾಗೆ ಜನ್ಯವಾದಬೇರಿನ ಅಥವಾ ನೆಲ ಸಂಸ್ಕೃತಿಯ  ಜಾನಪದ ಗೀತೆಗಳಲ್ಲಿಪುಣ್ಯಕೋಟಿಯ ಪ್ರಾಮಾಣಿಕತೆಅರ್ಬುತನೆಂಬವ್ಯಾಘ್ರದ ಅನುಕಂಪೆ ಬಹಳ ವಿಶಿಷ್ಟ ಮೌಲ್ಯಗಳಾಗಿವೆ. ಜನ ಮುಖ ಬದುಕಿಗೆ ವಿಮುಖವಾಗಿ ಜನಪದ ಸಾಹಿತ್ಯ ಎಂದೂ ವರ್ತಿಸಿಲ್ಲ. ಇಲ್ಲಿಯೂ ನೋವು ನಲಿವುಗಳಿವೆದುಗುಡ ದುಮ್ಮಾನಗಳಿವೆಬೇಸರ - ನಿರಾಶೆಗಳಿದ್ದೇ ಇವೆ ಬಡತನ ಸೌಲಭ್ಯ ಸವಲತ್ತುಗಳಿಂದವಂಚಿತರಾದ ನಿಮ್ಮ ಸಮೂಹವೇ ಇದೆ. ಆದರೆ ಆ ದಾರಿಯಲ್ಲೇ ಅವರಿಗೆ ಎಲ್ಲಾ ಸಮುದಾಯದ ಜೀವ - ಜೀವನವನ್ನು ಸಾಗಿಸುವಹಾದಿಗಳೂ ಇವೆ. ಶಿಷ್ಟ ಸಾಹಿತ್ಯದಿಂದಕೊಡಲಾಗದಷ್ಟು ಸಮೃದ್ಧ ಹಾಗೂ ಸಂಪದ್ಭರಿತ ನೆಲದ ಸಾಹಿತ್ಯವೇಜಾನಪದೀಯರ ಮೂಲ ತಿರುಳು ಅದರ ಮಟ್ಟುಗಳುಗೀತಿಕೆಗಳುಪ್ರಯೋಗಗಳು ಶಿಷ್ಟ ಸಾಹಿತ್ಯ ಪ್ರಪಂಚವನ್ನು ಕ್ಷಣ ಕಾಲ ಮೂಕವಿಸ್ಮಿತರನ್ನಾಗಿಸಿಬೆರಗುಗೊಳಿಸುತ್ತವೆ. ನಿರಂತರತೆ ಜಾನಪದಿಯರ ಮೂಲಮುಖ್ಯ ಲಕ್ಷಣ ಅದನ್ನು ಅವರು ಎಂದೆಂದಿಗೂ ಬಿಟ್ಟುಕೊಟ್ಟಿಲ್ಲ.

 

``ನೂಲಲ್ಯಾಕ ಚೆನ್ನಿ ನೂಲಲ್ಯಾಕ ಚೆನ್ನಿ’’ ಎಂಬ ಗಂಡನ ಮೃದುವಾದ ಹುಸಿ ಗದರುವಿಕೆಮುನಿಸಿಗೆ ಹೆಂಡತಿಯ ಮುಗ್ಧವಾದ ಉತ್ತರ ನಂಗೆ ಬರೋದಿಲ್ಲೋ ಜಾಣನಂಗೆ ಬರೋದಿಲ್ಲೋ ಜಾಣ” ಎಂದು. ಅದೇ ರೀತಿ ಬಡತನಹಸಿವುಸಂಕಟದೈನಿಕ ಬದುಕು ನಡೆಸುವಾಗಿನ ತಲ್ಲಣ- ತವಕಗಳುಕಾಡಿರುವುದು ಉಂಟು. ಆದರೆ ಹಿತಮಿತವಾದಬದುಕಿನಲ್ಲಿ ಅವರಿಗೆ ಅದೆಲ್ಲ ಗೌಣ.

ನೆಲ್ಲಕ್ಕಿ ಬೋನವನುಉಣಲೊಲ್ಲ ನನ್ನ ನಲ್ಲ

ಏಕೊಲ್ಲಇಲ್ಲದುದಕೆಒಲ್ಲ !

 

ಅಂದರೆ ಒಳ್ಳೆಯಉತ್ತಮ ಗುಣಮಟ್ಟದ ಅಕ್ಕಿಯಿಂದ ಅನ್ನ ತಯಾರಿಸಿಕೊಂಡು ಉಣ್ಣುವ ಆಸೆ ಇರುವುದು ಸಹಜ ಆದರೆ ಆ ಹಂಬಲ ಈಡೇರುವ ಸಾಧ್ಯತೆ ಇಲ್ಲಏಕೆಂದರೆ ಕಾರಣ ಸುದೀರ್ಘವಾದ ಬಡತನ. ಆ ಸಾಧ್ಯತೆ ಇಲ್ಲದ್ದರಿಂದ ಉತ್ತಮ ಆಹಾರ ಸಿಗದಿದ್ದರಿಂದಉಣ್ಣಲುಬಯಸದಂಥ ನುಡಿ ಇದು.

 

``ನಿಂಬಿಯಬನಾದಮ್ಯಾಗಚಂದ್ರಾಮಚಂಡಾಡಿ’’ ಎಂದು ಅಷ್ಟೆಲ್ಲ ಕಷ್ಟ - ದುಮ್ಮಾನಗಳ ಮಧ್ಯೆಯೂ ಸಡಗರಿಸುವಸಂತೋಷಿಸುವ ನಿರ್ಮಲ ಹೃದಯ ಹಾಗೂ ಪ್ರಫುಲ್ಲಿತ ಮನೋಧರ್ಮ ಜನಪದರ ಮೂಲಜಾಯಮಾನ ಮೂಡಲ್ ಕುಣಿಗಲ್ ಕೆರೆಯವೈಭೋಗವನ್ನು ಈ ಜಗತ್ತು ಬಣ್ಣಿಸಿಕೊಳ್ಳುತ್ತದೆ.

ಹಾಗೆಯೇ ಭಾಗ್ಯದ ಬಳೆಗಾರ ತವರಿಗೆ ಹೋಗಿ ಬಾ” ಎಂದು ನಿರುಪಾದಿಕವಾಗಿ ಆಶಿಸಿ ಒಳಿತಿನಹಾರೈಕೆಯನ್ನೇಬಯಸುತ್ತದೆ. ವ್ಯಷ್ಟಿ ಸಮಾಜವಲ್ಲದ ಸಮಷ್ಟಿ ಸಮಾಜದ ಹಿತಚಿಂತನೆಯಹೂರಣವಾದಜಾನಪದೀಯ ಜಗತ್ತು ಕನ್ನಡ ನೆಲದ ತವನಿಧಿ ಹಾಗೂ ಶಾಶ್ವತವಾದ ಆಸ್ತಿ. ವೀರಗಾಸೆಜಗ್ಗಲಿಗೆ ಮೇಳಕರಗಚೌಡಿಕಿಪದ ನಾನಾ ಬಗೆಯ ಉತ್ಸವಗಳುಜಾತ್ರೆಗಳು ಎಲ್ಲವೂ ಜಾನಪದೀಯಸತ್ವಗಳಿಂದ ಆಕಾರ ಪಡೆದುಕೊಂಡು ವ್ಯವಸ್ಥಿತವಾಗಿ ರೂಪು ತಾಳಿದ ಮಹೋನ್ನತ ಅಂಶಗಳು.

 

ಚೆಲುವಯ್ಯಚೆಲುವೋತಾನಿತಂದಾನ ಚಿನ್ಮಯ ರೂಪೇ ಕೋಲಣ್ಣ ಕೋಲೆ” ಎಂಬ ಹಾಡಾಗಲಿ, “ಚನ್ನಪ್ಪಚನ್ನೆಗೌಡ ಕುಂಬಾರ ಮಾಡಿದ ಕೊಡನವ್ವ” ಎಂಬ ಜಾನಪದ ಗೀತೆಗಳಾಗಲಿ ನೂರಕ್ಕೆ ನೂರರಷ್ಟು ಗುಂಪಿನಲ್ಲಿ ಭಾಗಿಯಾಗಿ ಅವರ ಭಾವವಾಗಿ ಸಂತೃಪ್ತ ಆನಂದವನ್ನುಸವಿದು ಇತರರಿಗೂ ಸಮಸಮವಾಗಿಹಂಚುವ ಅದ್ಭುತ ರಸಘಟ್ಟ.

 

ಗ್ರಾಮ್ಯ ಪರಿಸರ ಹಾಗೂ ಹಳ್ಳಿಗಳ ಬಗೆಗೆ ಏನೇ ಅನಾದರಗಳಿದ್ದರೂ ದಿವ್ಯ ನಿರ್ಲಕ್ಷö್ಯಗಳೇ ಇದ್ದರೂ ಜಾನಪದ ಸಂಕುಲ ನೀಡಿದ ಅನರ್ಘ್ಯ ಸಾಹಿತ್ಯ ಹಾಗೂ ಧಾರ್ಮಿಕಸಾಂಸ್ಕೃತಿಕಸಾಮಾಜಿಕ ಚೌಕಟ್ಟು ಅಸಾಧಾರಣವಾದುದು. ಇಂತಹ ಅತ್ಯಮೋಘವಾದ ಜಾನಪದ ಸಮೃದ್ಧತೆಯತಿಳಿವನ್ನುಮೂಡಿಸುವ ಹಾಗೂ ಆಳವಾಗಿ ನಾಗರಿಕ ಸಮುದಾಯ ಮತ್ತು ಸುರಕ್ಷಿತ ಸಮಾಜಗಳಿಗೆ ತಲುಪಿಸುವ ಕಾರ್ಯ ಹೆಚ್ಚು ಹೆಚ್ಚಾಗಿ ಆಗಬೇಕಿದೆ. ತಿಟ್ಹತ್ತಿ ತಿರುಗಿ ತವರು ಮನೆಯನ್ನು ನೋಡುತ್ತಾ ನೋಡುತ್ತಾಕಣ್ತುಂಬಿಕೊಳ್ಳುವ ಹೆಣ್ಣು ಮಗಳು ಕೇವಲ ಭಾವುಕತೆಯತೀವ್ರತೆಯಲ್ಲೇ ಮುಳುಗಿ ದುಃಖಿಸುವುದಿಲ್ಲ. ಗರಿಕೆಯಕುಡಿಹಾಂಗ ತವರು ಮನೆ ರಸಬಳ್ಳಿಯಾಗಿಹಬ್ಬಲಿ ಎಂದು ನಿರ್ಮಲ ಹೃದಯದಿಂದಹರಸಿಹಾರೈಸುತ್ತಾಳೆ. ಎದೆಯ ಗೂಡಿನ ತುಂಬಾ

 

ಅವಳಿಗೆ ತಾಯಿ ಮನೆಯ ಔನ್ನತ್ಯವೇ ಪ್ರಧಾನ.

 

ಕೂಸು ಕಂದಯ್ಯಒಳಹೊರಗಆಡಿದರ ಬೀಸಣಿಗೆ ಗಾಳಿ ಸುಳಿದು ಬಡತನವೆಲ್ಲಬಯಲಾದಂತೆಹೊರಟು ಹೋದಂತೆ ಅಳುನುಂಗಿ ಮಗುವನ್ನು ಮಡಿಲ ಸಂತೋಷ ವ್ಯಾತ್ಸಲ್ಯದಜೀವವಾಗಿಕಂಡಂಥ ತಾಯ್ತನ ಜಾನಪದ ಹೆಣ್ಣು ಮಗಳದ್ದು. ಇಂಥ ಸಾಂಸಾರಿಕ ಬಾಂಧವ್ಯಗಳ ಬಗ್ಗೆ ಕಾರ್ಪೋರೇಟ್ ಮತ್ತು ಬಹುರಾಷ್ಟ್ರೀಯಕಂಪನಿಗಳಸೆರಗಿನಲ್ಲಿ ಬಾಳುತ್ತಿರುವ ವಿದ್ಯಾರ್ಥಿಗಳಿಗೆನಾಗರಿಕರಿಗೆ ತಿಳಿಸುವ ಕೆಲಸ ಆಗಬೇಕಿದೆ. ಸಾಮಾಜಿಕ ಒಳ ರಚನೆಯ ಪದರುಗಳಲ್ಲಿ ಅವಿಭಕ್ತ ಕುಟುಂಬದ ಚಹರೆಗಳು ಬಹುತೇಕ ಕಣ್ಮರೆಯಾಗಿ ಸಾಮೂಹಿಕ ಸಂಸಾರಬಾಳುವೆಯ ಬದಲು ವಿಭಕ್ತ ಪರಿತ್ಯಕ್ತ ಕುಟುಂಬಗಳೇ ಕಂಡು ಬರುತ್ತಿರುವಾಗಮುಂಪೀಳಿಗೆಗೆ ಇಂತಹ ಮಣ್ಣಿನ ಸಂವೇದನೆಯ ವಾಂಛಲ್ಯಅಕ್ಕರೆನೋವುಗಳನ್ನೆದುರಿಸಿ ಬಾಳುವ ಜಾನಪದೀಯರಸತ್ಪರಂಪರೆಯನ್ನು ಒಳಗು ಮಾಡಲೇಬೇಕಾಗಿದೆ.

 

ಪಠ್ಯದಓದಿನ ಮೂಲಕವೇ ಜ್ಞಾನಅಂಕೆಗಳಿಕೆಯೊಂದೇ ಮಾನದಂಡ ಎಂಬ ಭ್ರಮೆ ಹಾಗೂ ಕನ್ನಡ ಶಾಲೆಗಳಕಡೆಗಣನೆನಿರುತ್ತೇಜಕ ಪರಿಸ್ಥಿತಿಯ ಬಗ್ಗೆ ಸೊಲ್ಲೆತ್ತಬೇಕಾಗಿರುವುದು ಸಹಾ ಇಂದಿನ ಜನರಸರ್ಕಾರ ಹಾಗೂ ಎಲ್ಲರ ಪ್ರಮುಖ ಕೂಗು ಆಗಬೇಕಿದೆ. ಸರ್ಕಾರಿ ಶಾಲಾ ಕಾಲೇಜುಗಳ ದುಸ್ಥಿತಿಪಾಳು ಬಿದ್ದ ಶಾಲೆ. ಸಮರ್ಪಕವಾಗಿ ಆಗದ ಪಾಠ ಪ್ರವಚನಗಳುದೊಡ್ಡಿಯಂತೆ ಆದ ಸರ್ಕಾರಿ ಶಾಲಾ ಕೊಠಡಿಗಳ ಈ ಅಧ್ವಾನದ ಸ್ಥಿತಿಯಿಂದ ಹೊರಬರಬೇಕಾಗಿದೆ.  ಆರ್ಥಿಕ ಪುನಶ್ಚೇತನ ಮತ್ತು ಅನುದಾನದ ಯಶಸ್ವಿ ಬಳಕೆಯೂ ಸಹಾ ಇಲ್ಲಿ ಮುಖ್ಯವಾಗಿ ಸಾಧಿತವಾಗಬೇಕಾಗಿದೆ.

ಭೂತಭವಿಷ್ಯತ್ವರ್ತಮಾನನಿನ್ನೆಇಂದುನಾಳೆ ಎಲ್ಲದರ ಒಟ್ಟು ಸಂಗಮವಾದಾಗ ಕನ್ನಡ ನಾಡು ನುಡಿಯ ಜಗತ್ತಿಗೆ ಹೊಸತನ ಹಾಗೂ ವಿಶಾಲ ಭೂಮಿಕೆ ಪ್ರಾಪ್ತವಾಗುತ್ತದೆ. ಆಗು ಹೋಗುಗಳಮನ್ವಂತರದಘಟ್ಟಗಳನ್ನುಗಮನಿಸುತ್ತಲೇ ಕನ್ನಡ ಭಾಷೆಗೆ ಸ್ವಲ್ಪ ಬೇಕಾದ ಪ್ರಾಶಸ್ತö್ಯವನ್ನುಗುರುತಿಸಿಕೊಳ್ಳಬೇಕಾಗಿದೆ ಎನ್ನುವುದು ಪ್ರಗತಿ ದಿಢೀರ್ ಆಗುವಂಥದ್ದಲ್ಲಆತುರದಅಡುಗೆಯು ಅಲ್ಲ ಕಾಯುವಿಕೆತಾಳ್ಮೆಯಅವಲೋಕನವೇ ಭಾಷೆ ಹಾಗೂ ನಾಡು ನುಡಿಗಳಏಳ್ಗೆಗೂಪೂರಕವಾಗಬಲ್ಲದು.

 

ಕನ್ನಡ ಎಂದರೆ ಬರೀ ನುಡಿಯಲ್ಲಹಿರಿದಿದೆಅದರರ್ಥ” ಎಂಬ ಕವಿವಾಣಿಯಂತೆ ನಾವು ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗುವಕನ್ನಡಿಗರಾಗಬಾರದು. ಕನ್ನಡ ನೆಲದಲ್ಲಿ ಹರಡಿಕೊಂಡಿರುವ ಪರಭಾಷಿಕರೂ ಸಹ ಕನ್ನಡವನ್ನು ಕಲಿತು ಆಡುವಾಗನಾಡಗೀತೆರೈತಗೀತೆಯನ್ನುಗುನುಗುವಾಗ ಆಗುವ ಆನಂದವೇ ಬೇರೆ. ಈ ಹಿನ್ನೆಲೆಯಲ್ಲಿ ಜನಸ್ತೋಮದ ನಡುವೆ ಕನ್ನಡವನ್ನು ಕಲಿಸುವ ಪ್ರಕ್ರಿಯೆಗಳು ಸದಾ ವಿಸ್ತಾರಗೊಳ್ಳಬೇಕಾಗಿದೆ.

ಕನ್ನಡಕ್ಕೆದೊರಕಿರುವ ಎಂಟು ಜ್ಞಾನಪೀಠ ಪ್ರಶಸ್ತಿಗಳ ಪೈಕಿ ಬೇಂದ್ರೆಯವರ ಮಾತೃಭಾಷೆ ಮರಾಠಿಮಾಸ್ತಿ ವೆಂಕಟೇಶ ಅಯ್ಯಂಗಾರರ ಮನೆಮಾತು ತಮಿಳುಕಾರ್ನಾಡರದ್ದು ಕೊಂಕಣಿ ಆದರೆ ಅವರ ಸೇವೆ ಸಾಹಿತ್ಯ ಕೃಷಿ ಕನ್ನಡಕ್ಕೆ ಅವರು ನೀಡಿದ ಕೊಡುಗೆ ಬಹಳ ವಿಭಿನ್ನ ಹಾಗೂ ವೈಶಿಷ್ಟö್ಯಪೂರ್ಣವಾದವುಗಳಾಗಿವೆ.

ಅದರಂತೆ ಮಲೆಯಾಳಿ ಮಾತೃಭಾಷಿಕರಾಗಿಕೇರಳದಲ್ಲಿಜನಿಸಿ ಅಲ್ಲೇ ಬಹುಕಾಲವಿದ್ದು ನಂತರ ಮೈಸೂರಿಗೆ ಬಂದು ಕನ್ನಡವನುಕಲಿತಿದ್ದಷ್ಟೇ ಅಲ್ಲದೆ ಪಾತಾಳದಲ್ಲಿ ಪಾಪಚ್ಚಿಅನರ್ಥಕೋಶ ಹೀಗೆ ಅಪೂರ್ವ ಕೃತಿಗಳನ್ನು ನೀಡಿದ ನಾ. ಕಸ್ತೂರಿಯವರ ಕನ್ನಡ ಭಾಷೆಯ ಕನ್ನಡ ಸಾಹಿತ್ಯದ ಸೃಜನಶೀಲತೆಗೆ ಮಾರು ಹೋಗದಿರಲು ಸಾಧ್ಯವೇವಿದೇಶಿಯೊಬ್ಬರುಹಿಂದೆಂದು ಕಾಣದ ನಿಘಂಟು ನೀಡಿ ಕನ್ನಡ - ಇಂಗ್ಲಿಷ ನಿಘಂಟು ಲೋಕಕ್ಕೆಮೇರುವಾಗಿ ಕಂಡ ಫರ್ಡಿನೆಂಡ್ಕಿಟೆಲ್ಭಾಷೆ ಶಾಸನಗಳಿಗೆ ಜೀವ ತೇಯ್ದಬಿ.ಎಲ್. ರೈಸ್ಇ.ಪಿ. ರೈಸ್ಮೊಗ್ಲಿಂಗ್ಇವರೆಲ್ಲರನ್ನೂಕನ್ನಡಿಗರಲ್ಲ ಎನ್ನುವುದು ಸಾಧ್ಯವಿಲ್ಲ ಅವರ ಕನ್ನಡದ ಮೇಲಿನ ಅಭಿಮಾನವನ್ನುಪ್ರಶ್ನಿಸುವ ಹಾಗೂ ಇಲ್ಲ ಫಲೀಟ್ ಅವರು ಸಂಗ್ರಹಿಸಿದ ಲಾವಣಿಗಳು ಇಂದಿಗೂ ಆ ವಿಷಯದ ಕುರಿತು ಅಧ್ಯಯನ ಮಾಡುವವರಿಗೆ ಇರುವ ಶ್ರೇಷ್ಠ ಆಕರ.

 

ಅಫ್ಘನ್ಮೂಲದವರಾಗಿ ಉರ್ದು ಭಾಷಿಕರಾಗಿ  ನಾಡು ನುಡಿಗೆ ಜಾನಪದ ಬುಡಕಟ್ಟು ಚಿತ್ರರಂಗಸ್ವಾತಂತ್ರö್ಯ ಹೋರಾಟ ಹೀಗೆ ಬಹುಮುಖಿಯಾಗಿ ದುಡಿದು ದುಡಿದು ಜೀವ ತೇಯ್ದಎಸ್.ಕೆ. ಕರೀಂಖಾನರ ಸೇವೆ ಸೂರ್ಯ ಚಂದ್ರರಿರುವ ತನಕ ಶಾಶ್ವತವಾದುದು. ಇಂಥವರನುಡಿಕಾಣಿಕೆಯಕೈಂರ‍್ಯ ಕನ್ನಡದ ಬೇರುಗಳನ್ನು ಆಳವಾಗಿ ಸುಸ್ಥಿರಗೊಳಿಸಿವೆ.

 

ಕನ್ನಡ ಭಾಷಾಶಿಕ್ಷಕರುಉಪನ್ಯಾಸಕರುಎದುರಿಸುತ್ತಿರುವ ಮತ್ತೊಂದು ಗಂಭೀರವಾದ ಸವಾಲು ಎಂದರೆ ಹಳೆಗನ್ನಡ ಪಠ್ಯದ ಬೋಧನೆ. ಈ ವಿಚಾರದಲ್ಲಿ ಹಳೆಗನ್ನಡ ಪದ್ಯ ಗದ್ಯಗಳನ್ನುಕಲಿಸುವುದರಲ್ಲಿ ಕನ್ನಡದ

ಬೋಧಕ ವರ್ಗದ ವಿಶೇಷ ಪಾತ್ರವಿದೆ.

 

ಪಂಪರನ್ನಪೊನ್ನಅಸಗದುರ್ವಿನೀತ ಇಂಥ ಕವಿಗಳಕಾವ್ಯಗಳ ಬಗ್ಗೆ ಇರುವ ವಿದ್ಯಾರ್ಥಿಗಳು ಹಾಗೂ ಅವರ ಬಗ್ಗೆ ವಿಶದವಾಗಿ ವಿವರಿಸದ ಸ್ಥಿತಿಯಿಂದ ವಿದ್ಯಾರ್ಥಿಗಳಿಗೆ ಈ ಕವಿಗಳ ಬಗ್ಗೆ ವಿಶೇಷ ಆಸಕ್ತಿ

ಮೂಡುತ್ತಿಲ್ಲ. ಶಾಸನಗಳು ಗ್ರಂಥ ಸಂಪಾದನಾಶಾಸ್ತç ಇವುಗಳು ತೆರೆಮರೆಗೆಸರಿದುಬಿಡುತ್ತಿವೆ.

ಪಠ್ಯದಓದಿಗಾಗಿ ಮಾತ್ರ ಸೀಮಿತಗೊಳಿಸುವಹಳೆಗನ್ನಡದ ಪದ್ಯ ಗದ್ಯಗಳಲ್ಲಿ ಮಾತ್ರ ವಿದ್ಯಾರ್ಥಿಗಳು ಬೇಕಷ್ಟು ಮಾತ್ರ ತಿಳಿದು ಕೊಂಡರೆ ಸಾಲದು. ಈ ದೆಸೆಯಲ್ಲಿಆಮೂಲಾಗ್ರವಾದಬೋಧನಾಕ್ರಮಸಿದ್ಧವಾಗದಿದ್ದರೆ ಚಂಪೂ ಕಾವ್ಯ ಗೀತಿಕೆ ಕಂದಪದ್ಯಸುನೀತಷಟ್ಪದಿಗಳು ವಿದ್ಯಾರ್ಥಿಗಳಿಗೆ ಖಂಡಿತ ತಲುಪಲಾರವು.

ಈ ಅಪಾಯವನ್ನು ತಪ್ಪಿಸಲು ಇರುವ ಅನೇಕ ಪರ್ಯಾಲೋಚನೆಮಾರ್ಗೋಪಾಯಗಳನ್ನು ಕುರಿತು ನಾವು ಬಹಳ ಯೋಜನಾಬದ್ದವಾಗಿವರ್ತಿಸಬೇಕಾಗಿದೆ. ಪಠ್ಯ ಲಯಬಂಧಗಳಿಗೆ ಅನುಗುಣವಾಗಿ ಛಂದಸ್ಸು ಪ್ರಸ್ತಾರ ಕ್ರಮ ಪದ ವಿಂಗಡಣೆಯ ಬಗ್ಗೆ ಆಸಕ್ತಿ ಮೂಡಿಸದೆ ಹೋದರೆ  ವಿದ್ಯಾರ್ಥಿಗಳಿಗೆ ಅರ್ಥವಾಗದೆನೀರಿಳಿಯದ ಗಂಟಲೋಳ್ ಕಡುಬು ತುರುಕಿದಂತಾಯ್ತು” ಎಂಬಂತೆ ಆಗುತ್ತದೆ. 

 

ಕಲಿಸುವ ಈ ವಿಧಾನಗಳಲ್ಲಿಉತ್ಸಾಹವಿರುವಬೋಧಕರು ಮತ್ತು ಅಷ್ಟೇ ಆಸಕ್ತಿಆಸೆ ಮುತುವರ್ಜಿಗಳಿಂದಕಲಿಯವ ವಿದ್ಯಾರ್ಥಿ ಸಮೂಹ ಇಂದು ಸಿಗದಿರಬಹುದು. ಆದರೆ ಮುಂದೊಂದು ದಿನ ಛಂದಸ್ಸುವ್ಯಾಕರಣಪದ್ಯ ಪ್ರಕಾರಗಳ ಬಗ್ಗೆ ವಿಶ್ವಾಸ ನಂಬಿಕೆಯಿಡುವ ವಿದ್ಯಾರ್ಥಿ ಜಗತ್ತು ಸೃಷ್ಟಿಯಾಗಬಹುದುದೆಂಬ ಖಚಿತವಾದ ಭರವಸೆ ಹಾಗೂ ಆಶಾವಾದಿತನ ಇಲ್ಲಿ ಮುಖ್ಯ.

 

ಇಡೀ ವಿಶ್ವವನ್ನೇನಡುಗಿಸಿದ ಲಕ್ಷಾಂತರ ಜೀವ - ಜೀವನಗಳನ್ನು ಬಲಿ ತೆಗೆದುಕೊಂಡ ಕೋವಿಡ್ ವೈರಸ್ ಶೈಕ್ಷಣಿಕ ಬದುಕಿಗೂಮಾರಣಾಂತಿಕ ಪೆಟ್ಟು ನೀಡಿರುವುದು ಸತ್ಯ. ಏಕೆಂದರೆ ಸಾರ್ವಜನಿಕರ ಬದುಕನ್ನು ಖಾಲಿ ಮಾಡಿದ ಪ್ರಕ್ಷÄಬ್ಧುತೆಯಲ್ಲಿನರಳುವಂತೆ ಮಾಡಿದ ಈ ಹಂತದಲ್ಲಿ ವಿದ್ಯಾರ್ಥಿಗಳು ಶಿಕ್ಷಕರುಆನ್‌ಲೈನ್ತರಗತಿಗಳ ಮೂಲಕ ಪಾಠ ಪ್ರವಚನಗಳನ್ನು ಕಲಿಯುವಕೇಳಿಸಿಕೊಳ್ಳುವ ಅನಿವಾರ್ಯ ಸನ್ನಿವೇಶ ಹುಟ್ಟಿಕೊಂಡಿತು.

 

ಇದು ಎಷ್ಟರ ಮಟ್ಟಿಗೆ ಪ್ರಯೋಜನಕಾರಿ ಎಂಬುದು ಪ್ರಶ್ನೆಯಾಗದೆಅನಿವಾರ್ಯತೆಯಲ್ಲಿ ಆದ ಈ ಸಂಗತಿಗಳ ನಡುವೆ ಕನ್ನಡ ನುಡಿ ಕಲಿಕೆ ವಿದ್ಯಾರ್ಥಿಗಳ ಗೈರು ಹಾಜರುಮೊಬೈಲ್ ನೆಟ್‌ವರ್ಕ್ ಸಮಸ್ಯೆ ಹಳ್ಳಿಗಾಡಿನ ವಿದ್ಯಾರ್ಥಿಗಳಿಗೆ ಆದ ತೊಂದರೆಗಳುಶೈಕ್ಷಣಿಕವಾಗಿಯೂ ಹೊಡೆತ

ನೀಡಿತ್ತು.

 

ಹೀಗೆ ಆದ ಧಕ್ಕೆಯನ್ನುಸರಿಹೊಂದಿಸಿಕೊಳ್ಳುವನಿಧಾನಗತಿಯ ಕ್ರಮಕ್ಕೆ ಈಗೀಗಒಗ್ಗಿಕೊಳ್ಳುತ್ತಿದ್ದೇವೆ. ಆದುದರಿಂದ ಒಟ್ಟಾರೆಯಾಗಿಭೌಗೋಳಿಕವಾಗಿ ಕನ್ನಡ ಭಾಷಾಬೋಧನೆಯುಹಿಂದೆಂದಿಗಿಂತಲೂ ಈಗ ಅತ್ಯಂತ ಬದ್ಧತೆ ಹಾಗೂ ಹೊಣೆಗಾರಿಕೆಯಿಂದಆಗಬೇಕಾಗಿದೆ. ಈ ದೃಷ್ಟಿಯಲ್ಲಿ ವಿದ್ಯಾರ್ಥಿಗಳು - ಶಿಕ್ಷಕರ ನಡುವಿನ ಸೇತುಬಂಧ ಹೆಚ್ಚು ಸುಭದ್ರವಾಗಿಬಾಳಬೇಕಿದೆ.

 

ಕನ್ನಡವನ್ನು ಕಲಿಸುವ ವಿಧಾನ ಬೇರೆ ಬೇರೆ ರೂಪ ಸ್ವರೂಪಗಳನ್ನು ಹೊತ್ತು ಸಾಗಲೇಬೇಕಾಗಿದೆ. ವಿದ್ಯಾರ್ಥಿಗಳ ಮನೋಧರ್ಮ ವಯೋಮಾನದ ಲೆಕ್ಕಾಚಾರಗಳಹಿನ್ನೆಲೆಯಿಂದಲೂ ಕನ್ನಡದ ಕಲಿಕೆ ಹೆಚ್ಚು ಮಹತ್ವದ್ದಾಗಿದೆ. ಕೋವಿಡ್‌ನಿಂದ ಹೊರ ಬಂದು ಶಾಲಾ ಬದುಕು ಆರಂಭವಾಗಿದೆ. ಈಗ ಬೇರೆ ಬೇರೆ ಹಂತದಲ್ಲಿ ಕನ್ನಡ ಭಾಷಾಕಲಿಕೆಯತ್ತ ಯೋಚಿಸಬೇಕಾಗಿದೆ. ದುರದೃಷ್ಟವೆಂದರೆ ಮತ್ತೆ ಕರೋನಾ ಇನ್ನೊಂದು ರೂಪದಲ್ಲಿ ರೂಪಾಂತರಿಯಾಗಿಒಕ್ಕರಿಸುತ್ತಿದೆ!

ಅಂತರಂಗದ ಹಸಿವು ನುಡಿಯನ್ನು ಕಟ್ಟಿ ಬೆಳಗಿಸಲು ಅನುವು ಮಾಡಿಕೊಡುತ್ತದೆ. ಕನ್ನಡಕ್ಕಾಗಿಹೋರಾಡಲುನನ್ನಂಥ ಅನೇಕರು ಇದ್ದಾರೆ. ಆದರೆ ನನಗಿರುವುದು ಒಂದೇ ಕನ್ನಡ ಎಂಬ ಅಪ್ಪಟ ಭಾಷಾ ಪ್ರೇಮಿ ನುಡಿಸೇವಕಅನಕೃಮರಾಠಿಮಾತೃಭಾಷೆಯಜಯದೇವಿತಾಯಿಲಿಗಾಡೆಕನ್ನಡವನ್ನು ಕಲಿತು ಸಿದ್ಧರಾಮೇಶ್ವರ ಪುರಾಣ ಗ್ರಂಥ ರಚಿಸಿದ ಕ್ರಮ ನಮ್ಮಲ್ಲಿ ಇಂಥ ನುಡಿ ಪ್ರೇಮವನ್ನು ಅಂತರಂಗಪೂರ್ವಕವಾಗಿಹಸಿವೆಯಾಗಿಸಿಕೊಂಡು ಅಧ್ಯಯನ ಹೆಚ್ಚಿಸಬೇಕು. ಬೌದ್ಧಿಕವಾಗಿ ಪಂಡಿತ ನೆಲೆಗಟ್ಟಿನಪಾಂಡಿತ್ಯಪೂರ್ಣತೆಯಲ್ಲಿ ಮಾತ್ರ ಕನ್ನಡದ ನುಡಿ ಹೆಣ್ಣು ಬಂಧಿಯಾಗಬಾರದು. ಲವಲವಿಕೆಯನ್ನು ಹೆಚ್ಚಿಸುವ ತುಡಿತ ಮಿಡಿತಗಳಭಾಷೆಯಾಗಿ ಅಂತರಂಗದ ಹಸಿವಿನಿಂದ ಕೂಡಿ ನುಡಿಯ ತೋರಣವನ್ನು ಕಟ್ಟಲು ಎಲ್ಲರೂ ಮುನ್ನುಗುವ ಅಗತ್ಯವಿದೆ.

 

ಸಾಹಿತ್ಯ ಸಮ್ಮೇಳನಗಳಿಗೆ ಭವ್ಯ ಪರಂಪರೆ ಇದೆ. ಆದರೆ ಇಂಥ ಸಮ್ಮೇಳನಗಳಆಶಯಗಳುಜಾರಿಯಾಗಬೇಕು ಕನ್ನಡ ನಾಡು ನುಡಿಗೆ ಸಂಬಂಧಿಸಿದ ಹಕ್ಕೊತ್ತಾಯಗಳಿಗೆ ಮಾನ್ಯತೆ ಸಿಕ್ಕಿ ಅದಕ್ಕೆ ಕಾಯಕಲ್ಪ ಒದಗಿದಾಗ ಮಾತ್ರ ನಮ್ಮ ಅಂತರಂಗದ ಹಸಿವಿನ ಶಕ್ತಿಗೆ ಸಾರ್ಥಕತೆ ದೊರೆಯುವ ಸಾಧ್ಯತೆ. ಹಾಗಾಗಿ ಯಾವುದೇ ಹಂತದಲ್ಲೂಧೈರ್ಯಗೆಡದೆಹೋರಾಡುವ ಛಲ ಬಲ ಎರಡೂ ಆಗಿ ಕನ್ನಡದ ನುಡಿತೇರನ್ನುಎಳೆಯಬೇಕಾಗಿದೆ. ಆದರೆ ಕೆರಳಿಸುವ ಉದ್ದೇಶಿಸುವಭಾಷಾ ವೈರತ್ವ ಬೇಕಾಗಿಲ್ಲ. ನಮಗೆ ಶಾಂತಿ ಸಹಬಾಳ್ವೆಸೌಹಾರ್ದತೆಯಸಂಪದವಾಗಿಕನ್ನಡವು ಶಾಶ್ವತವಾಗಿ ಬಾಳ ಬೇಕಿದೆ. ಚಿನ್ನದ ಕಸ್ತೂರಿಯಾದಕನ್ನಡವುಅನ್ನದಭಾಷೆಯೂ ಆಗಿರುವುದರಿಂದ ಆ ನುಡಿ ತಾಯಿಗೆ ಗೌರವ ತರುವ ಕೆಲಸ ನಿಷ್ಠೆಯಿಂದ ಆಗಲಿಆಗೇಆಗುತ್ತದೆಂಬ ಗಟ್ಟಿ ನಂಬಿಕೆ ನನ್ನಲ್ಲಿ ಸದಾ ಇದ್ದೇ ಇದೆ.

 

ಇತ್ತೀಚಿನ ವರ್ಷಗಳಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಧನಸಹಾಯ/ಅನುದಾನಪಡೆದುಕೊಳ್ಳುತ್ತಿರುವ ಸಂಘಸಂಸ್ಥೆಗಳನ್ನು ನಿರ್ಲಕ್ಷಿಸಲಾಗುತ್ತದೆ. ನಲವತ್ತು ಐವತ್ತು ವರ್ಷಗಳಿಂದ ಕನ್ನಡ ಸಂಸ್ಕೃತಿ ಸಂವರ್ಧನೆಯ ಚಟುವಟಿಕೆಗಳನ್ನುಬದ್ಧತೆಯಿಂದ ಮಾಡುತ್ತಿರುವ ಹಿರಿಯ ಸಂಸ್ಥೆಗಳ ಧನಸಹಾಯವನ್ನುಕಡಿತಗೊಳಿಸಿರುವ ಅಥವಾ ಧನಸಹಾಯ ಮಂಜೂರು ಮಾಡದಿರುವ ಉದಾಹರಣೆಗಳೂ ಇವೆ. ಕನ್ನಡದ ಕೆಲಸ ಮಾಡುತ್ತಿರುವ ಸಂಘ ಸಂಸ್ಥೆಗಳನ್ನು ಹೆಚ್ಚಿನ ಅನುದಾನ/ಧನ ಸಹಾಯದಿಂದಪೋಷಿಸಬೇಕಾದದ್ದು ಸರ್ಕಾರದ ಆದ್ಯ ಕರ್ತವ್ಯ. ಅವುಗಳು ಸರ್ಕಾರದ ಆಶಯ ಮತ್ತು ಯೋಜನೆಗಳನ್ನು ವಿಸ್ತಾರವಾದ ನೆಲೆಯಲ್ಲಿ ಮಾಡುತ್ತಿವೆ ಎನ್ನುವುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಈಗ ಸಂಘಸಂಸ್ಥೆಗಳು ಧನಸಹಾಯ ಪಡೆಯಲು ಅನುಸರಿಸಬೇಕಾದಕಗ್ಗಂಟಿನಮಾರ್ಗಗಳನ್ನುಬದಲಿಸಿ ಸುಗಮವಾಗಿ ಸಾಗಲು ಅನುಕೂಲ ಮಾಡಿಕೊಡುವ ಬಗ್ಗೆಯೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಈ ಮುಖಾಂತರ ಆಶಿಸುತ್ತೇನೆ.

 

ಸರ್ವ ಜನಾಂಗದ ಶಾಂತಿಯತೋಟವಾಗಿ” ನಾಡು ನಳನಳಿಸಲಿಕನ್ನಡ ತಾಯಿಯ ಗೇಹ ಹಾಗೂ ಅವಳ ಮಕ್ಕಳ ದೇಹ ಮನಸ್ಸುಗಳುಒಗ್ಗೂಡಿ ಬಾಳಿ ನಾಡಿನ ಏಳಿಗೆಗಾಗಿಶ್ರಮಿಸಲಿ ಎಂಬ ನಿರ್ಮಲವಾದ ಕಾಳಜಿ ನನ್ನದಾಗಿದೆ.

 

ನೇಸರು ನೀಲಾಂಬರದಲಿ ನಗು ನಗುವ ತನಕ

ಕನ್ನಡದ ಅಸ್ತಿತ್ವ ಉಳಿಯಲಿ

ಕನ್ನಡದ ಅಸ್ಮಿತೆ ಅಳಿಯದಿರಲಿ.

ಕಾವೇರಿ ಕೃಷ್ಣೆಯರು ಹರಿ ಹರಿವ ತನಕ

ಕನ್ನಡದ ಚಿರಂತನತೆಹಸಿರಾಗಿರಲಿ;

ಬೇಲೂರು ಹಳೆಬೀಡು ಹೊಳೆ ಹೊಳೆವ ತನಕ

ಕನ್ನಡದ ಕೀರ್ತಿ ಪತಾಕೆ ಹಾರುತಿರಲಿ!

ಬೆಳ್ಗೊಳದ ಗೊಮ್ಮಟನ ನಿಲುವಿರುವ ತನಕ

ಕನ್ನಡದ ಹೆಸರು ಪಸರಿಸುತಿರಲಿ!

 

* * *

 

ಶ್ರೀಃ

 

 

ನಿವೇದನೆ

ಕನ್ನಡಿಗರಎದೆಯಾಳದಲ್ಲಿ

ಮೊಳಗುತಿರಲಿ ಕನ್ನಡ;

ಕನ್ನಡದ ನೆಲ ನೀರು ಗಾಳಿಯಲ್ಲಿ

ಉಸಿರಾಡಲಿ ಕನ್ನಡ,

 

ಕನ್ನಡದ ಬಾಂದಳದಲ್ಲಿ

ಅನುರಣಿಸಲಿ ಕನ್ನಡ;

ಮನೆ ಮನೆಯ ಕಂದನ

ನಾಲಗೆಯಲ್ಲಿ ನಲಿಯಲಿ,

 

ನಲ್ಗನ್ನಡ ಒಳ್ಗನ್ನಡ!

ತನಿಗನ್ನಡ ಇನಿಗನ್ನಡ!

 

ಸಿರಿಗನ್ನಡಂ... ಗೆಲ್ಗೆ

ಸಿರಿಗನ್ನಡಂ... ಬಾಳ್ಗೆ

ಸಿರಿಗನ್ನಡಂ... ಏಳ್ಗೆ

 

 

 

 

ಡಾ. ದೊಡ್ಡರಂಗೇಗೌಡ

ಸರ್ವಾಧ್ಯಕ್ಷರು

೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

Post a Comment

0 Comments

Ad Code

Responsive Advertisement