Ticker

6/recent/ticker-posts

Ad Code

Responsive Advertisement

EXAM WARRIORS ; ರಾಜ್ಯಪಾಲರಿಂದ "ಎಕ್ಸಾಮ್ ವಾರಿಯರ್ಸ್" ಕನ್ನಡ ಆವೃತಿ ಪುಸ್ತಕ ಬಿಡುಗಡೆ

ಬೆಂಗಳೂರು 23.01.2023 (ಕರ್ನಾಟಕ ವಾರ್ತೆ): ಕರ್ನಾಟಕದ ಗೌರವಾನ್ವಿತ ರಾಜ್ಯಪಾಲ  ಥಾವರ್ ಚಂದ್ ಗೆಹ್ಲೋಟ್ ಅವರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ರಾಜಭವನದ ಬಾಂಕ್ವೆಟ್ ಸಭಾಂಗಣದಲ್ಲಿ ಪ್ರಧಾನಿ  ನರೇಂದ್ರ ಮೋದಿ ಅವರ ಎಕ್ಸಾಮ್ ವಾರಿಯರ್ಸ್ ಇಂಗ್ಲಿಷ್ ಹಾಗೂ ಕನ್ನಡ ಅನುವಾದ ಪುಸ್ತಕವನ್ನು ಬಿಡುಗಡೆ ಮಾಡಿದರು.


ಎಕ್ಸಾಮ್ ವಾರಿಯರ್ಸ್ ಪುಸ್ತಕದ ಕನ್ನಡ ಆವೃತ್ತಿಯನ್ನು ನ್ಯಾಷನಲ್ ಬುಕ್ ಟ್ರಸ್ಟ್ ವತಿಯಿಂದ ಪ್ರಕಟಿಸಲಾಗಿದೆ. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ರಾಜ್ಯಪಾಲರು, ಗೌರವಾನ್ವಿತ ಪ್ರಧಾನಿ ಮೋದಿ ಅವರು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮವನ್ನು ಹಿಂದಿನ ವರ್ಷಗಳಲ್ಲಿ ನಡೆಸಿದ್ದು, ಅದರ ಅನುಭವಗಳು ಹಾಗೂ ಸಂವಾದ ಅನುಸರಿಸಿ “ಎಕ್ಸಾಮ್ ವಾರಿಯರ್ಸ್ಠ” ಪುಸ್ತಕವನ್ನು ರಚಿಸಿರುತ್ತಾರೆ. ರಾಷ್ಟ್ರವನ್ನು ಮುನ್ನಡೆಸುವಂತಹ ಅಗಾಧ ಕೆಲಸಕಾರ್ಯಗಳನ್ನು ನಡುವೆ ನಮ್ಮ ಮಾನ್ಯ ಪ್ರಧಾನಿಗಳು ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಪರೀಕ್ಷೆಗೆ ಸಿದ್ಧತೆ ನಡೆಸುವ ಕುರಿತಂತೆ ಸ್ವತಹ ಪುಸ್ತಕವನ್ನು ರಚಿಸಿದ್ದು ಈ ಪುಸ್ತಕ ವಿದ್ಯಾರ್ಥಿಗಳ ಕೌಶಲ್ಯ ವೃದ್ಧಿಗೆ ಅತ್ಯಂತ ಸಹಕಾರಿಯಾಗಿದೆ ಎಂದರು.


ಎಕ್ಸಾಮ್ ವಾರಿಯರ್ಸ್‌ನ ಹೊಸ ಆವೃತ್ತಿಯನ್ನು ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರಿಗೆ ಮೌಲ್ಯಯುತವಾದ ಹೊಸ ಮಂತ್ರಗಳನ್ನು ಸೇರಿಸುವುದರೊಂದಿಗೆ ವಿನ್ಯಾಸಗೊಳಿಸಲಾಗಿದೆ. ವಾರ್ಷಿಕ ಪರೀಕ್ಷೆ ಎದುರಿಸಲಿರುವವರು ವಿದ್ಯಾರ್ಥಿಗಳು ಆತಂಕ ಪಡದೆ ಯೋಧರಂತೆ ಕಾಣಿಸಿಕೊಳ್ಳಬೇಕು. ಮಕ್ಕಳು ಮತ್ತು ಪೋಷಕರಿಗಾಗಿ ಬರೆಯಲಾದ ಈ ಪುಸ್ತಕಕ್ಕೆ ಹೊಸ ವಿಭಾಗಗಳನ್ನು ಸೇರಿಸಲಾಗಿದೆ, ಇದು ವಿಶೇಷವಾಗಿ ಪೋಷಕರು ಮತ್ತು ಶಿಕ್ಷಕರಿಗೆ ಆಸಕ್ತಿ ನೀಡುತ್ತದೆ. ಪುಸ್ತಕವು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಅನೇಕ ಸಂಭಾಷಣೆ ಆಧಾರಿತ ಚಟುವಟಿಕೆಗಳನ್ನು ಹೊಂದಿದೆ, ಇದು ಸಾಕಷ್ಟು ಆಸಕ್ತಿದಾಯಕವಾಗಿದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.



ವಿದ್ಯಾರ್ಥಿಗಳಿಗೆ ಪುಸ್ತಕದಲ್ಲಿ ಸಹಾಯ ಮಾಡಲು, ಯೋಗದ ಅನೇಕ ಆಸನಗಳೊಂದಿಗೆ, ಉತ್ಸಾಹ ಮತ್ತು ಲವಲವಿಕೆಯಿಂದ ಪರೀಕ್ಷೆಯನ್ನು ಬರೆಯುವುದು, ಪರೀಕ್ಷೆಗೆ ನಗುತ್ತಾ ಬರುವುದು, ವರ್ತಮಾನದಲ್ಲಿ ಬದುಕುವುದು, ಕ್ರೀಡೆಯಿಂದ ಜೀವನವನ್ನು ಸುಧಾರಿಸುವುದು ಇತ್ಯಾದಿಗಳ ಬಗ್ಗೆ ಸಲಹೆ ನೀಡಲಾಗಿದೆ.  

ಪುಸ್ತಕದಲ್ಲಿ ಶಿಕ್ಷಕರಿಗೆ ಪತ್ರ ಬರೆಯುವುದರೊಂದಿಗೆ, ಜ್ಞಾನವನ್ನು ಶಾಶ್ವತ ಆಸ್ತಿ ಎಂದು ವಿವರಿಸುವ ಜೀವನಪರ್ಯಂತ ಕಲಿಕೆಗೆ ಕರೆ ಬಂದಿದೆ. “ಪರೀಕ್ಷಾ ಪೇ ಚರ್ಚಾ” ಸಂವಾದದ ಉದ್ದೇಶಕ್ಕಾಗಿ ಪ್ರಧಾನಿ ಮೋದಿ ಇದನ್ನು ಬರೆದಿದ್ದಾರೆ ಎಂಬುದು ಗಮನಾರ್ಹ. ಈ ಪುಸ್ತಕವು ಅನೇಕ ಭಾಷೆಗಳೊಂದಿಗೆ ಕನ್ನಡದಲ್ಲಿಯೂ ಲಭ್ಯವಿದೆ, ಪ್ರತಿಯೊಬ್ಬ ಮಕ್ಕಳು ಈ ಪುಸ್ತಕವನ್ನು ಓದಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಸನ್ಮಾನ್ಯ ಸಚಿವರಾದ ಬಿ ಸಿ ನಾಗೇಶ್, ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀ ರಿತೀಶ್ ಕುಮಾರ್ ಸಿಂಗ್, ರಾಜ್ಯ ಯೋಜನಾ ನಿರ್ದೇಶಕರಾದ ಬಿ ಬಿ ಕಾವೇರಿ ಮುಂತಾದ ಗಣ್ಯರು ಉಪಸ್ಥಿತರಿದ್ದರು. 

Post a Comment

0 Comments

Ad Code

Responsive Advertisement