Ticker

6/recent/ticker-posts

Ad Code

Responsive Advertisement

ಕುಮಾರಿ ಕುಸುಮಾ ಎ ಭರತನಾಟ್ಯ ಕಾರ್ಯಕ್ರಮ

 ಕನ್ನಡ ಸಂಸ್ಕೃತಿ ಇಲಾಖೆ ಹಾಗು  ಐಸಿಸಿಆರ್ ಜಂಟಿ ಆಶ್ರಯದಲ್ಲಿ ನಡೆದ ಪ್ರತಿ ಶುಕ್ರವಾರದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗುರು ಶ್ರೀಮತಿ ದೀಪಾಭಟ್ ಅವರ ಶಿಷ್ಯೆ ಕುಮಾರಿ ಕುಸುಮಾ ಎ ಭರತನಾಟ್ಯ ಕಾರ್ಯಕ್ರಮ ನಡೆಸಿಕೊಟ್ಟರು. 




ಪುಷ್ಪಾಂಜಲಿ, ಶಿವ ಶಬ್ಧಂ ನಂತರ ಪ್ರಮುಖ ಭಾಗವಾದ ವಸಂತ  ರಾಗದಲ್ಲಿ  ಸಂಯೋಜನೆಗೊಂಡ  ಮೈಸೂರು ಚಾಮುಂಡೇಶ್ವರಿ ದೇವಿಯ ಕುರಿತಾದ ಅಪರೂಪದ ಧರು ವರ್ಣ ಸನ್ನುತಾಂಗಿ ಶ್ರೀ ಚಾಮುಂಡೇಶ್ವರಿ ಯನ್ನು ಪ್ರಸ್ತುತಪಡಿಸಿದ್ದು ವಿಶೇಷ.  

ಕಲಾಕ್ಷೇತ್ರ ಬಾಣಿಯ ಪ್ರಸಿದ್ಧ ಜಾವಳಿ ಏರ ರಾರಾ , ಅಕ್ಕಮಹಾದೇವಿ ವಚನವನ್ನು ಮನೋಜ್ಞವಾಗಿ ಅಭಿನಯಿಸಿದರು. 

ಉಡುಪಿಯ ಕೃಷ್ಣನ ಕುರಿತಾದ ಕನಕದಾಸರ ಪ್ರಸಿದ್ದ ದೇವರನಾಮ "ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ" ದಲ್ಲಿ, ಗಜೇಂದ್ರ ಮೋಕ್ಷ, ನರಸಿಂಹ ಅವತಾರ ಹಾಗು ದ್ರೌಪದಿ ವಸ್ತ್ರಾಪಹರಣ ದೃಶ್ಯಗಳನ್ನು ತಮ್ಮ ನೈಜ ಅಭಿನಯದಿಂದ  ಜನರ ಮನಸೆಳೆದರು. 

ಕಡೆಯದಾಗಿ ಕ್ಷಿಪ್ರಗತಿಯ ಚಲನೆಗಳಿಂದ ಕೂಡಿದ ಕಲ್ಯಾಣೀ ರಾಗದ ತಿಲ್ಲಾನದಿಂದ ಕಾರ್ಯಕ್ರಮ ಕೊನೆಗೊಂಡಿತು.

Post a Comment

0 Comments

Ad Code

Responsive Advertisement