Ticker

6/recent/ticker-posts

Ad Code

Responsive Advertisement

ಪ್ರವಚನದಿಂದ ಜನಕಲ್ಯಾಣ-ಸಾವಿರ ದಿನಗಳ ಕಾಲ ಸತತ ಪ್ರವಚನ-ಸ್ವಾಮಿ ರಾಕುಂಜೀ

 ಸ್ವಾಮಿ  ರಾಕುಂಜೀ ರವರು ಬೆಂಗಳೂರುನಗರ ಇಂದಿರಾನಗರದಲ್ಲಿ ಶ್ರೀ ರಾಕುಂ ಅಂಧರ ಉಚಿತ ವಸತಿ ಶಾಲೆ ಮತ್ತು ದೇವನಹಳ್ಳಿ ಶ್ರೀ ರಾಕುಂ ಶಾಲೆಯನ್ನು ಸ್ಥಾಪಿಸಿ ಮಕ್ಕಳಿಗೆ ಊಟ,ಸಮವಸ್ತ್ರ ಮತ್ತು ವಸತಿ ನೀಡಿ ಸಾವಿರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರ ಬಾಳಿಗೆ ಬೆಳಕಾಗಿದ್ದಾರೆ.

ನರ್ಸರಿಯಿಂದ ಮಾಸ್ಟರ್ ಪದವಿವರೆಗೆ ಅಭ್ಯಾಸ ಮಾಡುವ ಸೌಲಭ್ಯ ನೀಡಿದ್ದಾರೆ.

*ಸ್ವಾಮಿ ರಾಕುಂಜೀ ರವರು* ಮಾತನಾಡಿ *ಸಾವಿರ ದಿನದ ಪ್ರವಚನ ತತ್ವ- ಅವಿಭಕ್ತ ಕುಟುಂಬ (knit family)*

ಈ ಪ್ರವಚನಗಳನ್ನು ನಾವು ಫ್ರಾರಂಭಿಸಲು ಕಾರಣ ನಾವು ನಡೆಸುವ ಅಂಧರ ಶಾಲೆಯ ಶೇಯೋಭಿವೃದ್ದಿ. ಈ ಶಾಲೆಗೆ ರಾಜ್ಯ ಸರ್ಕಾರದ, ಕೇಂದ್ರ ಸರ್ಕಾರದ, ವಿದೇಶದ ಎಮ್ ಎನ್ ಸಿ ಸಂಸ್ಥೆ ಹಾಗೂ ಇತರೆ ಯಾವುದೇ ಸಂಸ್ಥೆಗಳಿಂದ ಪ್ರೋತ್ಸಾಹವಿಲ್ಲದೆ ಜನರು ನೀಡುವ ದಾನದಿಂದ ಶಾಲೆಯನ್ನು ನಡೆಸಿಕೊಂಡು ಉಚಿತ ವಿದ್ಯಾಭ್ಯಾಸ ನೀಡಿ ಹಿರಿಯ ನಾಗರಿಕರಿಗೆ ಮಾಸಿಕ ದಿನಸಿ ಪದಾರ್ಥ ವಿತರಣೆ.

ಸಮಾಜದಲ್ಲಿ ಅಂಟಿಕೊಂಡಿರುವ ದಾರಿದ್ರ್ಯ ವನ್ನು ಹೋಗಲಾಡಿಸಲು ನಮ್ಮ ಪ್ರವಚನಗಳಲ್ಲಿ ಕುಟುಂಬ, ಅವಿಭಕ್ತ ಕುಟುಂಬ , ವಂಶವೃಕ್ಷ, ಮಳೆನೀರಿನ ಕೊಯ್ಲು ಹಾಗೂ ಸೌರಶಕ್ತಿಯ ಸದ್ಬಳಕೆ ಮುಂತಾದ ತತ್ವಗಳ ಮುಖಾಂತರ ನಮ್ಮ ಪ್ರವಚನಗಳು ಸಾವಿರ ದಿನಗಳನ್ನು ಪೂರೈಸುತ್ತಿದೆ.ಇದರಂತೆ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಮತ್ತು ಅವಿಭಕ್ತ ಕುಟುಂಬಗಳನ್ನು ಹೆಚ್ಚಿಸಿಕೊಂಡು ಒಂದು ಸುಂದರ ಸುಖ ಸಮಾಜವನ್ನು ನಿರ್ಮಾಣಮಾಡುವುದಾಗಿದೆ.

ಬಡತನ, ಶಿಕ್ಷಣ ವಂಚಿತರು,ವೃದ್ದರು, ನೊಂದವರು, ಆರ್ಥಿಕ ಅಸಮಾನತೆ ಇವೆಲ್ಲವು ಸಮಾಜಕ್ಕೆ ಅಂಟಿದ ರೋಗ.

ಒತ್ತಡ ಜೀವನ, ಮಾನಸಿಕ ಖಿನ್ನತೆ ಸಮಾಜಕ್ಕೆ ರೋಗಯುತವಾಗಿದೆ.

ಜನಕಲ್ಯಾಣವಾಗಬೇಕಾದರೆ ತನ್ನನ್ನು ತಾನು ಅರಿಯಬೇಕು.

ತನ್ನ ಮನುಷ್ಯತ್ವ ಅರಿಯಬೇಕಾದರೆ ಆಧ್ಯಾತ್ಮ ಜೀವನ ಮುಖ್ಯ.ನಮ್ಮ ಜೀವನ ಯಾವ ಮಾರ್ಗದಲ್ಲಿ ಸಾಗಿದರೆ ಜೀವನದಲ್ಲಿ ಅಭಿವೃದ್ದಿ ಸಾಧ್ಯ.

ಸತತ ಮೂರು ವರ್ಷಗಳ ಕಾಲದಿಂದ ಪ್ರವಚನಗಳ ಮೂಲಕ ಜನಜಾಗೃತಿ ಮೂಡಿಸುತ್ತಿದ್ದಾರೆ.

 ಈಗಾಗಲೇ ಲಕ್ಷಾಂತರ ಜನರು ಪ್ರವಚನ ಹೇಳಿ ಸಮಾಜದ ಅಭಿವೃದ್ದಿಗೆ ಕೈಜೋಡಿಸಿದ್ದಾರೆ.

ನೊಂದವರ ಜೀವನ ಹಸನಾಗಬೇಕು, ಸಮಾಜ ನಿರ್ಮಾಣವಾಗಬೇಕು.

ಕೊರೋನ ಎಲ್ಲರ ಜೀವನದಲ್ಲಿ ಪಾಠ ಕಲಿಸಿತು, ಹಣಕ್ಕಿಂತ ಮಾನವೀಯತೆ ಮುಖ್ಯ.

ಹಣ ಬದುಕಿಗೆ ಬೇಕಾಗುವಷ್ಟು ಇದ್ದರೆ ಸಾಕು ,ಹೆಚ್ಚಿದ್ದರೆ ಶ್ರೀಮಂತರಾಗಿ ಬಾಳಬಹುದು, ಸಮಾಜಕ್ಕೆ ನಿನ್ನ ಕೊಡುಗೆ ಏನು.

ನಾವು ಗಳಿಸಿದ ಹಣದ ಸ್ವಲ್ಪ ಭಾಗ ಸಮಾಜದ ಅಭಿವೃದ್ದಿಗೆ ವಿನಿಯೋಗಿಸಬೇಕು.

ಬಡವರು, ಶ್ರೀಮಂತರು ಎಂಬ ಅಸಮಾನತೆ ತೊಲಗಬೇಕು, ನಾವೆಲ್ಲರೂ ದೇವರ ಮುಂದೆ ಒಂದೇ.

ಈ ಕಾರಣದಿಂದ ಉತ್ತಮ ಸಮಾಜ ನಿರ್ಮಾಣವಾಗಲು ಕಳೆದ ಸಾವಿರ ದಿನದಿಂದ ಸತತವಾಗಿ  ಪ್ರವಚನಗಳನ್ನು ಹಮ್ಮಿಕೊಂಡು ಬರಲಾಗಿದೆ.

ವಿಶ್ವದಲ್ಲಿ ಸಾಧನೆ ಮಾಡಿದ ಮಹನೀಯರುಗಳು, ಮಹಾಭಾರತ, ರಾಮಾಯಣ, ಬುದ್ಧ, ಬಸವ, ಅಂಬೇಡ್ಕರ್, ಜೆನ್ ಸಿದ್ದಾಂತವು ಮನುಷ್ಯ ಸರಿಯಾದ ಮಾರ್ಗದಲ್ಲಿ ಸಾಗಲು ಉತ್ತಮ ಜೀವನಶೈಲಿ, ಆಧ್ಯಾತ್ಮವನ್ನು ಆಳವಡಿಸಿಕೊಳ್ಳಬೇಕು.

ಕಷ್ಟದಲ್ಲಿ ಇರುವವರು, ನೊಂದವರು, ಆಸರೆ ಇಲ್ಲದವರ ಕಣ್ಣೀರಿಗೆ ನಾವು ಆಸರೆಯಾಗಬೇಕು.

ಕಾಯಕ ಮಹತ್ವದಂತೆ ನಾವು ದುಡಿದು ಹಣವನ್ನು ಸಮಾಜದ ಅಭಿವೃದ್ದಿಗೆ ವಿನಿಯೋಗಿಸಿದಾಗ ಸಮಾಜದ ಅಭಿವೃದ್ದಿ ಸಾಧ್ಯ.

ಈ ಪ್ರವಚನಗಳನ್ನು ಲಕ್ಷಾಂತರ ಜನರು ಆಲಿಸಿದ್ದಾರೆ. ಅವರು ಮಾಡುತ್ತಿರುವ ಸಮಾಜ ಸೇವೆಗೆ  ಕೈಜೋಡಿಸಿರುವುದು ಸಂತೋಷದಾಯಕ ವಿಷಯವಾಗಿದೆ.

Post a Comment

0 Comments

Ad Code

Responsive Advertisement