Ticker

6/recent/ticker-posts

Ad Code

Responsive Advertisement

'ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಲಿ' ಓಂ ಶಕ್ತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಕಾರ್ಯಕ್ರಮ

ಡಿ.ಕೆ.ಶಿವಕುಮಾರ್,ಸಿದ್ದರಾಮಯ್ಯರವರ ಜನತಾ ಜನಾರ್ಧನ ಆಶೀರ್ವಾದ ಲಭಿಸಲಿ ಎಂದು ವಿಶೇಷಪೂಜಾ ಕಾರ್ಯಕ್ರಮ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಂದ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿ:ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ರವರಿಗೆ ಜನತಾ ಜನಾರ್ಧನಾ ಆಶಿರ್ವಾದ ಸಿಗಲಿ ಎಂದು ಮಾಜಿ ಶಾಸಕಿ ಪ್ರಫುಲ್ಲಾ ಮಧುಕರ್ *ಕೆ.ಪಿ.ಸಿ.ಸಿ.ಸಂಯೋಜಕರಾದ ಸುದರ್ಶನ್ ರವರ ನೇತೃತ್ವದಲ್ಲಿ  ಕಾಂಗ್ರೆಸ್ ಪಕ್ಷದ ನೂರಾರು ಕಾರ್ಯಕರ್ತರು ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಮಹಾಗಣಪತಿ,ಅಭಯ ಆಂಜನೇಯ ಸ್ವಾಮಿ ಸನ್ನಿಧಿ ಮತ್ತು ಪ್ರಕಾಶನಗರದ ಓಂ ಶಕ್ತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು.




ಕೆ.ಪಿ.ಸಿ.ಸಿ.ಸಂಯೋಜಕರಾದ ಸುದರ್ಶನ್ ರವರು ಮಾತನಾಡಿ ಪ್ರಜ್ಞಾವಂತ ಮತದಾರರು ಇರುವ ರಾಜ್ಯ ನಮ್ಮದು.

ಎ.ಐ.ಸಿ.ಸಿ.ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆರವರು,ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕೆ.ಪಿ.ಸಿ.ಸಿ.ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ರವರು ಮತ್ತು ಮಾಜಿ ಮುಖ್ಯಮಂತ್ರಿಗಳು, ವಿರೋಧ ಪಕ್ಷದ ನಾಯಕ  ಸಿದ್ದರಾಮಯ್ಯರವರು, ವಿಧಾನಪರಿಷತ್ ವಿರೋಧ ಪಕ್ಷದ ನಾಯಕರಾದ ಬಿ.ಕೆ.ಹರಿಪ್ರಸಾದ್ ರವರ ನೇತೃತ್ವದಲ್ಲಿ ಜನಸೇವೆಯೆ ಸಂಕಲ್ಪ ಯಾತ್ರೆ ಕೈಗೊಳ್ಳಲಾಗಿದೆ.

ಕೆ.ಪಿ.ಸಿ.ಸಿ.ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ರವರು ಪ್ರತಿಬೂತ್ ಮಟ್ಟದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನೀಡಿದ ಆದೇಶ ಆನ್ವಯ ಇಂದಿನಿಂದ ನಮ್ಮ ಪ್ರಚಾರ ಕಾರ್ಯ ಆರಂಭವಾಗಿದೆ.

ಎಲ್ಲ ವರ್ಗ, ಧರ್ಮದ ವರ್ಗದವರಿಗೆ ಸಾಮಾಜಿಕ ನ್ಯಾಯ ನೀಡಿ ,ಸರ್ವರಿಗೂ ಸಮಪಾಲು,ಸರ್ವರಿಗೂ ಸಮಬಾಳು ಎಂಬ ಆದರ್ಶ ಸಿದ್ದಾಂತಗಳಿಂದ ಬಡವರ, ದೀನ ದಲಿತರ ಸೇವೆ ಮಾಡುತ್ತಿರುವ ಮತ್ತು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡ ಕಾಂಗ್ರೆಸ್ ಪಕ್ಷ ಜನರ ಒಡನಾಡಿಯಾಗಿ ಕಾರ್ಯನಿರ್ವಹಿಸುತ್ತಿದೆ.

ಈ ಹಿಂದೆ ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ರಾಜ್ಯದ ಜನತೆಗೆ ನೀಡಿದ 165ಭರವಸೆಗಳನ್ನ ಈಡೇರಿಸಿದ ದೇಶದ ಮೊಟ್ಟ ಮೊದಲ ಸರ್ಕಾರ ನಮ್ಮದು.

ಹಸಿವಿನಿಂದ ಯಾರು ಬಳಲಬಾರದು ಎಂದು ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್ ಕ್ಷೀರ ಭಾಗ್ಯ, ಮತ್ತು ವಸತಿ ಯೋಜನೆ, ಪಶುಭಾಗ್ಯ ಆರ್ಥಿಕವಾಗಿ ಹಿಂದುಳಿದ ಜನರು ಸಮಾಜದ ಮುಖ್ಯವಾಹಿನಿ ತರಲು ಬಡವರ ಪರ ಯೋಜನೆಗಳನ್ನು ರೂಪಿಸಿ, ಆನುಷ್ಠಾನಗೊಳಿಸಿದ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತದೆ.

ಜನಸೇವೆಯೆ ಸಂಕಲ್ಪ ಮಾಡಿ, ಜನತಾ ಆಶೀರ್ವಾದ ಪಡೆಯಲು ನಿಮ್ಮ ಮುಂದೆ ಬರುತ್ತಿದ್ದೇವೆ

ರಾಜ್ಯದಲ್ಲಿ ನವ ಇತಿಹಾಸ ನಿರ್ಮಿಸಲು, ಹೊಸ ಚಿಂತನೆ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ನಿಮ್ಮೆಲ್ಲರ ಸಹಕಾರ, ಆಶೀರ್ವಾದ ಇರಲಿ.

ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಮನೆ,ಮನೆಗಳಿಗೆ ಇಂದಿನಿಂದ ಜನಸಂಪರ್ಕ ಅಭಿಯಾನ ಹಮ್ಮಿಕೊಳ್ಳಲಾಗಿದೆ, ಕಾಂಗ್ರೆಸ್ ಪಕ್ಷದ ಸಾಧನೆಗಳನ್ನು ತಲುಪಿಸಲಾಗುತ್ತಿದೆ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಭ್ರಷ್ಟಚಾರ, ಜನವಿರೋಧಿ ಬಿ.ಜೆ.ಪಿ.ಪಕ್ಷಕ್ಕೆ ಜನರು ತಕ್ಕ ಪಾಠ ಕಲಿಸುತ್ತಾರೆ.

ಕಾಂಗ್ರೆಸ್ ಪಕ್ಷಕ್ಕೆ ಜನರ ಆಶೀರ್ವಾದ ಮೂಲಕ 140ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರದಲ್ಲಿ ಜಯಭೇರಿ ಬಾರಿಸಿ, ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.

ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ವಿಜಯಕುಮಾರ್,ಶ್ರೀರಾಮಮಂದಿರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ವೆಂಕಟೇಶ್,ಕಾಂಗ್ರೆಸ್ ಪಕ್ಷದ  ಮುಖಂಡರಾದ ಸುಧಾಕರ್,ಶಂಶೀರ್ ಬೇಗ್ ರವರು ಭಾಗವಹಿಸಿದ್ದರು.

Post a Comment

0 Comments

Ad Code

Responsive Advertisement