ಸುಂದರ ಕರಾವಳಿ ದೃಶ್ಯಗಳು ಹಾಗೂ ಕಡಲ ತೀರದ ಪಟ್ಟಣಗಳು ಹಾಗೂ ಗ್ರಾಮಗಳಿಗೆ ವಿಶ್ವ ಪ್ರಸಿದ್ದ ಪುಟ್ಟ ದೇಶ ಯೂರೋಪಿನ ರ‍್ಲೆಂಡ್ ರಾಷ್ಟç. ಭಾರತದಂತೆ ಬ್ರಿಟನ್ನಿನ ವಸಾಹತುಗಳಿಗೆ ಸೇರಿದ ಈ ದ್ವೀಪ ರಾಷ್ಟç. ಕಳೆದ ಶತಮಾನದ ಮೊದಲ ಭಾರದಲ್ಲಿ (1921) ಉಭಯ ರಾಷ್ಟçಗಳ ಸಂಧಾನದ ಮೂಲಕ ಬೇರೆ ರಾಷ್ಟçಗಳಾಗಿ ಬೇರ್ಪಟ್ಟಿದ್ದವು. ಭಾರತಕ್ಕೆ ಸ್ವಾತಂತ್ರ ಬಂದ ಮುಂದಿನ ವರ್ಷವೇ ಸ್ವತಂತ್ರ ರಾಷ್ಟçವಾಗಿ ಘೋಷಿಸಿಕೊಂಡು ಬ್ರಿಟನ್ನಿನ ಪಕ್ಕದಲ್ಲಿದ್ದರೂ ಯಾವುದೇ ಪ್ರಬಲ ರಾಷ್ಟçಗಳ ತೆಕ್ಕೆಗೆ ಸಿಲುಕದೆ ತನ್ನನ್ನು ತಾನು ಉಳಿಸಿಕೊಂಡು ಶ್ರೀಮಂತ ಹಾಗೂ ಅಭಿವೃದ್ದಿ ಅಲಿಪ್ತ ರಾಷ್ಟವಾಗಿ ಈ ದೇಶ ಬೆಳೆದು ಬಂದಿದೆ. ಐರ‍್ಲೆಂಡಿನ ಉತ್ತರ ಭಾಗ ಈಗಲೂ ಬ್ರಿಟನ್ನಿನ ಭಾಗವಾಗಿದೆ.
ಬ್ರಿಟನ್ ಯೂರೋಪೀಯಾ ಸಂಘದಿAದ ಹೊರಬಂದ (ಬ್ರೆಕ್ಸಿಟ್) ತರುವಾಯ ಯೂರೋಪಿನಲ್ಲಿ ಪ್ರಾಥಮಿಕವಾಗಿ ಇಂಗ್ಲೀಷ್ ಭಾಷೆಯ ಮಾತನಾಡುವ ಏಕೈಕ ರಾಷ್ಟçವಾಗಿ ಉಳಿದುಕೊಂಡಿದೆ ಹಾಗೂ ಈ ಸಂಸ್ಥೆಯ ಜನಕರೆಂಬ ಶ್ರೇಯಸ್ಸು ರ‍್ಲೆಂಡ್ ದೇಶಕ್ಕಿದೆ. ಬ್ರಿಟನ್ನಿನಿಂದ ಸ್ವತಂತ್ರವಾದರೂ ಉಭಯ ರಾಷ್ಟçಗಳ ಪ್ರಜೆಗಳೂ ಯಾಉದೇ ಅಡೆ ತಡೆಗಳಿಲ್ಲದೆ ಎಲ್ಲಿ ಬೇಕಾದರೂ ವಾಸ ಮಾಡುವುದಾಗಲಿ ವ್ಯವಹಾರ, ಉದ್ಯೋಗಗಳಲ್ಲಿ ತೊಡಗಬಹು ದಾದ ಸಡಿಲ ವ್ಯವಸ್ಥೆಯನ್ನು ರೂಪಿಸಿಕೊಂಡಿವೆ. ಇಂಗ್ಲಿಷಿನ ಮೇರು ಕವಿ ಹಾಗೂ ನಾಟಕಕಾರ ಆಸ್ಕರ್ ವೈಲ್ಡ್ ಈ ದೇಶದ ಸುಪುತ್ರರಲ್ಲೊಬ್ಬರು.
ಡಬ್ಲಿನ ಈ ರಾಷ್ಟದ ರಾಜಧಾನಿ. ದೇಶದ 50 ಲಕ್ಕಕ್ಕೂ ಮಿಗಿಲಾದ ಜನಸಂಖ್ಯೆಯಲ್ಲಿ 21 ಲಕ್ಷ ಜನರು ಡಬ್ಲಿನ್ ಹಾಗೂ ಅದರ ಆಸುಪಾಸಿನಲ್ಲಿ ನೆಲೆಸಿರುತ್ತಾರೆ.
ಭಾರತದಂತೆ ಈ ರಾಷ್ಟವೂ ಕೂಡ ಮೇಲ್ಮನೆ ಹಾಗೂ ಕೆಳಮನೆಯುಳ್ಳ ಸಂಸತ್ತನ್ನು ಹೊಂದಿದೆ. ಆಡಳಿತ ವ್ಯವಸ್ಥೆಯಲ್ಲಿಯೂ ಎರಡು ರಾಷ್ಟçಗಳಿಗೆ ಅಪಾರ ಸಾಮ್ಯವಿದೆ.
ಭಾರತ ಹಾಗೂ ಬ್ರಿಟನ್ನಿನ ಸಂಬ0ಧಗಳು ಮಧುರವಾಗಿದ್ದ ಕಾರಣ ಆ ದೇಶದ ನೆರೆ ರಾಷ್ಟದೊಡನೆ ವಾಣಿಜ್ಯ ಹಾಗೂ ಸಾಂಸ್ಕೃತಿಕ ಸಂಬ0ಧಗಳು ಬ್ರಿಟನ್ನಿನ ಇಚ್ಚಾನುಸಾರವಾಗಯೇ ಇರುತ್ತಿದ್ದವು. ಆದರೆ ಬ್ರಿಟನ್ ಯೂರೋಪೀಯ ಸಂಘದಿ0ದ ಹೊರ ಬಂದ ತರುವಾಯ ಸಂಘದಲ್ಲಿನ ಇಂಗ್ಲಿಷ್ ಭಾಷೆಯಲ್ಲಿ ಮಾತನಾಡುವ ಏಕೈಕ ರಾಷ್ಟçವಾಗಿ ಉಳಿದಿದೆ. ಹೀಗಾಗಿ ಈ ಭಾಷೆಯೇ ಭಾರತಕ್ಕೂ ಯೂರೋಪೀಯ ಸಂಘಕ್ಕೂ ಇರುವ ಬಲವಾದ ಕೊಂಡಿ.
ಬ್ರಿಟನ್ ಯೂರೋಪೀಯ ಸಂಘದಿAದ ಹೊರಬಂದ ತರುವಾಯ ಯೂರೋಪ್ ಹಾಗೂ ಭಾರತದ ವಾಣಿಜ್ಯ ವಹಿವಾಟು ಅನೇಕ ಪಟ್ಟು ವೃದ್ದಿಸುವ ಸುಪ್ತ ಚೇತನವನ್ನು ಬ್ರಿಟನ್ನಿನ ನೆರೆ ರಾಷ್ಟçವಾದ ರ‍್ಲೆಂಡ್ ಹೊಂದಿದೆ ಎಂದು ಭಾರತದ ವಾಣಿಜ್ಯ ಹಾಗೂ ಜಾಗತಿಕ ವಿಷಯಗಳ ಅಧ್ಯಯನ ಸಂಸ್ಥೆ ಇಕ್ರಿಯರ್ ಅಭಿಪ್ರಾಯ ಪಟ್ಟಿದೆ.
ಭಾರತ ಹಾಗೂ ಐರ‍್ಲೆಂಡ್ ವಾಣಿಜ್ಯ ಸೇವೆಗಳ ವಹಿವಾಟುಗಳು ಸರಕು ವ್ಯವಹಾರಗಳ ನಾಲ್ಕ ಪಟ್ಟು ವರ್ಷ 2020 ರಲ್ಲಿ ಇದ್ದಿತು.
ಭಾರತ - ಐರ‍್ಲೆಂಡ್‌ಗಳ ಒಟ್ಟು ವ್ಯವಹಾರ ಸರಕು ಹಾಗೂ ಸೇವೆಗಳು ಸೇರಿದಂತೆ 5.6 ಬಿಲಿಯನ್ ಡಾಲರ್‌ಗಳಷ್ಟಿತ್ತು (ಸುಮಾರು 45,000 ಕೋಟಿ ರೂ. ಗಳು) ಇದರಲ್ಲಿ ಸರಕುಗಳ ರಫ್ತಿನಿಂದ ಗಳಿಕೆ 1.26 ಬಿಲಿಯನ್ ಡಾಲರ್‌ಗಳನ್ನು (10,080 ಸಾವಿರ ರೂ. ಗಳು). ವಾಣಿಜ್ಯ ಸೇವೆಗಳ ವಹಿವಾಟುಗಳು ಸರಕುಗಳ ರಫ್ತಿಗಿಂತ ನಾಲ್ಕು ಪಟ್ಟು ಹೆಚ್ಚಿದ್ದಿತ್ತು. ವರ್ಷ 2020ರ ತರುವಾಯದ ರಫ್ತು ಆಮದುಗಳ ಸಂಖ್ಯೆ ಬಿಡಿ ಬಿಡಿಯಾಗಿ ದೊರಕುತ್ತಿದ್ದು ಇತ್ತೀಚಿನ ಸಮಗ್ರ ಚಿತ್ರ ಲಭ್ಯವಿ¯್ಲ.
ಕಳೆದ ಒಂದು ದಶಕದಲ್ಲಿ ಉಭಯ ರಾಷ್ಟçಗಳ ಸರಕುಗಳ ವಾಣಿಜ್ಯ / ವಹಿವಾಟು ಭಾರತದಿಂದ ಔಷಧೀಯ ಸಾಮಗ್ರಿಗಳು ಶಸ್ತçಚಿಕಿತ್ಸಾ ಉಪಕರಣಗಳು, ಪ್ರಮುಖದಾಯದ ದೇಶದ ರಫ್ತಿನ ಶೇಕಡ 27.3 ಭಾಗವಾಗಿದ್ದಿತ್ತು. ಇದಲ್ಲದೆ ರಫ್ತಾದ ಸಾಮಗ್ರಿಗಳಲ್ಲಿ ಜೈವಿಕ ರಸಾಯನ ಸಾಮಗ್ರಿಗಳು, ಅಣು ಸ್ಥಾವರ ಘಟಕಗಳು ಹಾಗೂ ಯಂತ್ರ ಸಾಮಾಗ್ರಿಗಳಿದ್ದವು. 2014 ನೇ ವರ್ಷದಲ್ಲಿ ಎರಡು ದೇಶಗಳ ವಹಿವಾಟುಗಳು ತುತ್ತ ತುದಿಯಲ್ಲಿದ್ದು, 1.26 ಬಿಲಿಯನ್ ಡಾಲರ್‌ಗಳು (10800 ರೂಪಾಯಿಗಳು) ಇದ್ದವು. ಅದೇ ವಿಮಾನಗಳು ಹಾಗೂ ಅದಕ್ಕೆ ಸಂಬ0ಧಿಸಿದ ಉಪಕರಣಗಳು ರಫ್ತು ಕಾರಣವಾಗಿತ್ತು. ಈ ವೈಮಾನಿಕ ಉಪಕರಣಗಳು ಆ ವರ್ಷದ ಶೇಕಡ 40 ಭಾಗದಷ್ಟು ರಫ್ತಿನ ಭಾಗವನ್ನು ಆಶ್ರಯಿಸಿತ್ತು. ಇದರ ತರುವಾಯದ 2015 ರಲ್ಲಿ ಸರಕುಗಳ ವಾಣಿಜ್ಯ ವವಾಟುಗಳು 947 ಮಿಲಿಯನ್ (7700) ಡಾಲರ್‌ಗಳನ್ನು ಇಳಿಕೆಯಾಗಿತ್ತು. ಸರಕುಗಳ ರಫ್ತು 2010 ರಲ್ಲಿ ವರ್ಷದಲ್ಲಿ 108 ಮಿಲಿಯನ್ ಡಾಲರ್‌ಗಳಿಂದ (864 ಕೋಟಿಗಳು) 2020 ರಲ್ಲಿ ಈ ಮೌಲ್ಯ 1.4 ಬಿಲಿಯನ್ ಡಾಲರ್‌ಗಳಿಗೆ (11,45 ರ ಕೋಟಿ ರೂ. ಗಳಿಗೆ) ಏರಿಕೆಂ ಗಿತ್ತು.
ಐರ‍್ಲೆ0ಡ್ ದೇಶಕ್ಕೆ ವಾಣಿಜ್ಯ ಸೇವೆಗಳ ರಫ್ತಿನಲ್ಲಿ ಭಾರತದ ಗಳಿಕೆ ಸರಕು ವ್ಯವಹಾರಗಳಿಗಿಂತ ಸುಮಾರು ನಾಲ್ಕು ಪಟ್ಟು ಹೆಚ್ಚು ಆದಾಯವನ್ನು ಸಹ ದೇಶಕ್ಕೆ ಗಳಿಸಿಕೊಟ್ಟಿತ್ತು. ಇಷ್ಟಾದರೂ ಸಹ ವಾಣಿಜ್ಯ ಸೇವೆಗಳ ಗಳಿಕೆಯಲ್ಲಿ ಉಭಯ ರಾಷ್ಟçಗಳ ಬಹುಪಾಲು ವಹಿವಾಟು ಸೇವಾ ಕ್ಷೇತ್ರದಲ್ಲೇ ಅಂದರೆ ಮಾಹಿತಿ ತಂತ್ರಜ್ಞಾನ ಶಿಕ್ಷಣ, ಐ.ಸಿ.ಟಿ. ಉದ್ಯಮ, ವೃತ್ತಿಯ ಹಾಗೂ ಪ್ರಬಂಧನಾತ್ಮಕ ನಿರ್ವಹಣಾ ಸಲಹಾ ಸೇವೆಗಳು ಇತ್ಯಾದಿಗಳಲ್ಲಿ ಎರಡು ರಾಷ್ಟçಗಳ ಸಮನ್ವಯತೆಗೆ ಸಂಭಾವ್ಯ ಕಾರಣಗಳಿವೆ.
ಯೂರೋಪೀಯ ಸಂಘದಲ್ಲಿ ಐರ‍್ಲೆಂಡ್ ಈಗ ಒಂದು ಪ್ರಭಾವಿ ರಾಷ್ಟç. ಸಂಘದ ಈಗಿನ ವ್ಯವಸ್ಥಯಲ್ಲಿ ಶ್ರಮದಾಯಕ ತಯಾರಿಕಾ ಉದ್ದಿಮೆಗಳಲ್ಲಿ ಭಾರತಕ್ಕೆ ವಿಯಟ್ನಾಂ ಹಾಗೂ ಬಾಂಗ್ಲಾದೇಶ ಗಳಂತಹ ಸೋವಿ ಬೆಲೆಯ ಅಪಾರ ಕಾರ್ಮಿಕ ಶಕ್ತ (ಲೋ ಕಾಸ್ಟ್ ಲೇಬರ್ ಅಬಂಡೆ0ಟ್) ರಾಷ್ಟçಗ ಳಿಂದ ಭಾರತಕ್ಕೆ ಹಿನ್ನಡೆಯಾಗಿದೆ. ಈ ರಾಷ್ಟçಗಳಿಗೆ ಈಗ ಯಾವುದೇ ರೀತಿಯ ನಿರ್ಬಂಧವಿಲ್ಲ ಹಾಗೂ ಎಲ್ಲ ಆಮದುಗಳು ತೆರಿಗೆ ಮುಕ್ತ. ಭಾರತದಿಂದ ರಫ್ತಾದ ಗೃಹ ಬಳಕೆಯ ವಸ್ತುಗಳಾದ ಜವಳಿ, ಪರದೆಗಳು ಇನ್ನಿತರ ವಸತಿ ಸಜ್ಜುಗೊಳಿಸುವ ಸಾಮಗ್ರಿಗಳು ಮೇಲಾಗಿ ವಾಹನಗಳು ಸರಬರಾಜಿನಲ್ಲಿ ಈ ಚಿಕ್ಕ ರಾಷ್ಟçಗಳಷ್ಟೇ ಸ್ಪರ್ಧಾತ್ಮಕವಾಗಿದ್ದರೂ ಸಹ ಭಾರತದಿಂದ ಆಮದಾದ ವಸ್ತುಗಳ ಮೇಲೆ 10 ಂದ 12 ಭಾಗ ಸುಂಕಗಳನ್ನು ವಿಧಿಸುವುದರಿಂದ ಸಗಟು ಹಾಗೂ ಬಿಡಿ ಮಾರುಕಟ್ಟೆಗಳಲ್ಲಿ ಭಾರತೀಯ ವಸ್ತುಗಳು ಜನ ಸಾಮಾನ್ಯರಿಗೆ ಅಷ್ಟರ ಮಟ್ಟಿಗೆ ದುಬಾರಿಯಾಗುತ್ತದ. ಯೂರೋಪ್ ಸಂಘದ ವ್ಯವಸ್ಥೆಯಲ್ಲಿ ಸುಂಕಗಳನ್ನು ವಿಧಿಸುವ ವಿಧಾನಗಳಲ್ಲಿ ಪರಿವರ್ತನೆಯಾದರೆ ಭಾರತೀಯ ಸಾಮಗ್ರಿಗಳು ಸ್ಫರ್ಧಾತ್ಮಕವಾಗಿ ಬಳಕೆದಾರರನ್ನು ಸುಲಭ ದರಗಳಲ್ಲಿ ತಲುಪಬಹುದು ಎಂಬುದು ಇಕ್ರಿಯರ್ ಅಧ್ಯಯನದ ಸಾರಾಂಶ.
ಅದೇ ರೀತಿ ಸುಮಾರು 50 ವಸ್ತುಗಳು ಅದರಲ್ಲಿಯೂ ಕುಶಲ ತಂತ್ರಜ್ಞಾನದ ಸಾಮಗ್ರಿಗಳನ್ನು ಭಾರತದಿಂದ ರ‍್ಲೆಂಡ್ ಆಮದು ಮಾಡಿಕೊಳ್ಳುತ್ತಿದೆ.
ಈ ಸಾಮಾಗ್ರಿಗಳು ಯೂರೋಪಿನ ಹೊರಗೆ ಸ್ಪರ್ಧಾತ್ಮಕವಾಗಿಯೂ ಇವೆ. ಆದರೆ ಶುಲ್ಕ ವಿಧಿಯಿಂದ ಭಾರತೀಯ ಸಾಮಾಗ್ರಿಗಳು ದುಬಾರಿಯಾಗುತ್ತವೆ. ಔಷಧ ಸಾಮಗ್ರಿಗಳು ಇದೇ ರೀತಿ ಐರ್ಲೆಂಡ್‌ಗೆ ರಫ್ತಾಗುತ್ತಿರುವ ಭಾರತೀಯ ವಸ್ತುಗಳು, ಕಳೆದ ಕೆಲ ವರ್ಷಗಳಿಂದ ಈ ಔಷಧಿಗಳ ಉಪಯೋಗ ಹೆಚ್ಚಾಗುತ್ತಿದೆ. ಐರ‍್ಲೆಂಡ್ ದೇಶವೊಂದೇ ಈ ಸಾಮಗ್ರಿಗಳ ಮೇಲೆ 2.7 ಬಿಲಿಯನ್ (ಸುಮಾರು 23000 ರೂ. ಗಳು) ಯೂರೋಗಳಷ್ಟನ್ನು ವೆಚ್ಚ ಮಾಡುತ್ತಿದೆ.
ಅದೇ ರೀತಿ ಭಾರತದಲ್ಲಿ ಐರ‍್ಲೆಂಡ್‌ನಿ0ದ ಉದಯೋನ್ಮಖ ತಂತ್ರಜ್ಞಾನ ಕ್ಷೇತ್ರದಲ್ಲಿ ಹಾಗೂ ನವೋದ್ಯಮ / ಸ್ಮಾರ್ಟ್ ಆಪ್ ಉದ್ಯಮಗಳಲ್ಲಿ ನೇರ ಬಂಡವಾಳ ಹೂಡಿಕೆಗೆ ಅಪಾರವಾದ ಸಂಭಾವನೆಗಳಿವೆ. ಆ ದೇಶದಿಂದ ಭಾರತದಲ್ಲಿನ ನೇರ ಬಂಡವಾಳ ವರ್ಷ 2011 ರಲ್ಲಿ 39 ಮಿಲಿಯನ್ ಡಾಲರ್‌ಗಳಿಂದ 2020 ರಲ್ಲಿ 209 ಮಿಲಿಯನ್ ಡಾಲರ್‌ಗಳಷ್ಟು ವೃದ್ದಿಯಾಗಿದೆ. ಈ ಬಂಡವಾಳ ವೃತ್ತೀಯ ಹಾಗೂ ವಿಮೆ ಹಾಗೂ ವಾಣಿಜ್ಯ ಸೇವಾ ವಲಯಗಳಲ್ಲಿ ಹೂಡಿಕೆಯಾಗಿದೆ. ಭಾರತ ಇದೇ ವರ್ಷಗಳಲ್ಲಿ 89 ಮಿಲಿಯನ್ ಡಾಲರ್‌ಗಳಿಂದ 2020 ರಲ್ಲಿ 170 ಮಿಲಿಯನ್ ಡಾಲರ್‌ಗಳಷ್ಟು ಬಂಡವಾಳವನ್ನು ಅದರಲ್ಲೂ ಉತ್ಪಾದನಾ ಕ್ಷೇತ್ರದಲ್ಲಿ ಹೂಡಿಕೆ ಮಾಡಿದೆ. ಔಷಧೀಯ ಕ್ಷೇತ್ರದಲ್ಲಿ ಜೈಡಸ್, ಕ್ಯಾಡಿಲ್ಯಾಕ್, ಹೆಲ್ತ್ಕೇರ್, ಆಲಿವೆರ್ ಅನಿಮಲ್ ಹೆಲ್ತ್, ಫೆಲಿಕ್ಸ್ ಫಾರ್ಮಾಸಿಟಿಕಲ್, ಅಲ್ಫಾ ಬಯೋಮೆಡ್ ಮೊದಲಾದ ಕಂಪನಿಗಳು ರ‍್ಲೆಂಡ್ ದೇಶದಲ್ಲಿ ಉತ್ಪಾದನೆಗೆ ಬಂಡವಾಳ ಹೂಡಿಕೆ ಮಾಡಿರುವುದನ್ನು ರಿಸರ್ವ್ ಬ್ಯಾಂಕ್ ಗಮನಿಸಿದೆ.
ಯೂರೋಪಿಯ ಸಂಘ ಪ್ರಸಕ್ತದಲ್ಲಿ ಮಾನವರಿಗೆ, ಪ್ರಾಣಿಗಳಿಗೆ ಹಾಗೂ ಪರಿಸರಕ್ಕೆ ಅಪಾಯಕಾರಿ ಯಾದ ಸಾಮಾಗ್ರಿಗಳ ತಯಾರಿಕೆ, ಮಾರಾಟ ಹಾಗೂ ಉಪಯೋಗಗಳನ್ನು ನಿಷೇಧಿಸಿದೆ. ಈ ಕಾರಣದಿಂದ ಔಷಧೀಯ ತಯಾರಿಕೆಗಳಿಗೆ ಭಾರತ ರಫ್ತು ಮಾಡುತ್ತಿರುವ ಕಚ್ಚಾವಸ್ತುವಾದ ಆಕ್ಟಿವ್ ಪಾರ್ಮಾಸಿಟಿಕಲ್ ಇಂಗ್ರಿಡಿಯೆ0ಟ್ (ಎಪಿಐ) ಮೇಲೆ ದುಷ್ಪರಿಣಾಮ ಬೀರುತ್ತದೆ. ಇದರೊಂದಿಗೆ ಪೆಟ್ರೋಲಿಯಮ್ ತೈಲಗಳು ಬಿಟಮಿನ್‌ಯುಕ್ತ ತೈಲಗಳು (ಹೆಚ್.ಎಸ್. 27) ಹಾಗೂ ರಬ್ಬರ್ ವಸ್ತುಗಳ ರಫ್ತಿನ ಮೇಲೂ ಪರಿಣಾಮ ಬೀರುತ್ತವೆ.
ಹೀಗಾಗಿಯೇ ಭಾರತೀಯ ಬೃಹತ್ ಮಾಹಿತಿ ತಂತ್ರಜ್ಞಾನ ಕಂಪನಿಗಳಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್, ಇನ್ಫೋಸಿಸ್, ಟೆಕ್ ಮಹೀಂದ್ರ, ವಿಪ್ರೋ, ಹೆಚ್.ಸಿ.ಎಲ್. ಮೊದಲಾದವು ಭಾರಿ ಉದ್ದಿಮೆಗಳನ್ನು ರ‍್ಲೆಂಡ್‌ನಲ್ಲಿಯೇ ಸ್ಥಾಪಿಸಿವೆ.
ಐರ‍್ಲೆಂಡ್ ದೇಶ ಮಾಹಿತಿ ತಂತ್ರಜ್ಞಾನ, ಸಂವಹನ ಹಗೂ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಮುಂದುವರಿದ ರಾಷ್ಟçವಾದರೂ ಸಹ ಈ ಘಟಕಗಳಿಗೆ ಬೇಕಾಗುವ ಮಾನವ ಸಂಪನ್ಮೂಲ ಕೊರತೆಯನ್ನು ಅನುಭವಿಸುತ್ತಿದೆ. ಈ ರಾಷ್ಟçಕ್ಕೆ ಬೇಕಾಗುವ ನುರಿತ ಕುಶಲ ತಂತ್ರಜ್ಞರನ್ನು ಭಾರತ ಸುಲಭವಾಗಿ ಒದಗಿಸಬಲ್ಲದು.
ಉಭಯ ದೇಶಗಳ (ಇನ್‌ಫರ್‌ಮೇಷನ್ ಕಮ್ಯೂನಿಕೇಷನ್ ಹಾಗೂ ಟೆಕ್ನಾಲಜಿ) (ಐ.ಸಿ.ಟಿ.) ಸೇವೆಗೆ, ಶಿಕ್ಷಣ ಸೇವೆಗಳ ವಿಷಯದಲ್ಲಿ ವಾಣಿಜ್ಯ ವ್ಯವಹಾರಗಳಿಗೆ ಕಡಿವಾಣ ಹಾಕುವಂತಹ ನಿಯಮಗಳು ಇವೆ. ಹಾಲಿ ಐರ‍್ಲೆಂಡ್‌ನಲ್ಲಿ ಅನ್ವಯವಾಗುವ 4 ನಿಯಂತ್ರಣ ನಿಯಮಗಳು ಯೂರೋಪಿಯ ಸಂಘದ ಇನ್ನಿತರ ರಾಷ್ಟçಗಳಿಗಿಂತ ಭಿನ್ನವಾಗಿದೆ.
ಇದೇ ರೀತಿ ಆರೋಗ್ಯ ಸೇವೆಗಳಲ್ಲಿಯೂ ರ‍್ಲೆಂಡ್ ಮಾನವ ಸಂಪನ್ಮೂಲಗಳ ಕೊರತೆಯನ್ನ ಎದುರಿಸುತ್ತಿದ್ದಾರೆ. ಹಾಗಾಗಿ ಅವರು ಹೊರ ರಾಷ್ಟçಗಳಿಂದ ಡಾಕ್ಟರ್‌ಗಳು ಹಾಗೂ ನರ್ಸ್ಗಳ ಸೇವೆಗಳಲ್ಲಿ ಪಡೆಯುತ್ತಿದ್ದಾರೆ. ಈ ದೇಶದ ಇಂತಹ ಸೇವೆಗಳಿಗೆ ಅದರಲ್ಲೂ ನರ್ಸಿಂಗ್ ಸೇವೆಗೆ ಶೇಕಡ 50 ಭಾಗ ಭಾರತದಿಂದಲೇ ಲಭ್ಯವಾಗಿದ್ದಾರೆ. 2019 ರ ಆರೋಗ್ಯ ಸೇವಾ ವೃತ್ತೀಯರ ವಲಸಿಗರ ಬಗ್ಗೆ ನಡೆಸಿದ ಅಧ್ಯಯನವೊಂದರ ಪ್ರಕಾರ ಭಾರತದಿಂದ ತರಪೇತಾದ 1200 ನರ್ಸ್ಗಳನ್ನು ರ‍್ಲೆಂಡ್ ಪ್ರತಿ ವರ್ಷ ನೇಮಕ ಮಾಡಿಕೊಳ್ಳುತ್ತಿದೆ.
ಒಟ್ಟಿನಲ್ಲಿ ಸೇವೆಗಳ ವಲಯಗಳಲ್ಲಿ ವರ್ಷ 2020 ರಲ್ಲಿ ಉಭಯ ರಾಷ್ಟçಗಳು ವಹಿವಾಟು ನಾಲ್ಕು ಬಿಲಿಯನ್ ಡಾಲರ್‌ಗಳಷ್ಟು ನಡೆಸಿದ್ದವು. ಈ ರಾಷ್ಟç 11 ವಲಯದಿಂದ 1.4 ಬಿಲಿಯನ್ ಡಾಲರ್‌ಗಳಷ್ಟು ಸೇವೆಯನ್ನು (20 ಸಾವಿರ ಕೋಟಿ ರೂ. ಗಳು) ಆಮದನ್ನು ಭಾರತ ಮಾಡಿಕೊಂಡಿದ್ದ ಕಾರಣ ಭಾರತಕ್ಕೆ ಸೇವಾ ವಾಣಿಜ್ಯದಲ್ಲಿ 1.1 ಬಿಲಿಯನ್ ಡಾಲರ್ (8080 ಕೋಟಿ ರೂ. ಗಳ) ಕೊರತೆ ಸೃಷ್ಟಿಯಾಗಿತ್ತು.
ಇಕ್ರಿಯರ್ ಅದ್ಯಯನದ ಪ್ರಕಾರ ಭಾರತ ಹಾಗೂ ರ‍್ಲೆಂಡ್ ದೇಶಗಳು ಪರಸ್ಪರ ಸಹಕಾರ ನೀಡಿದರೆ ಐ.ಟಿ. ಕ್ಷೇತ್ರ, ಔಷಧೀಯ ತಯಾರಿಕೆ ಹಾಗೂ ಸರಬರಾಜು, ತಂತ್ರಜ್ಞಾನ, ವೃತ್ತಿಯ ನಿರ್ವಹಣಾ ಸೇವೆಗಳೇ ಮೊದಲಾದ ಕ್ಷೇತ್ರಗಳಿಂದ ಯೂರೋಪೀಯ ಸಂಘಕ್ಕೆ ಹಾಗೂ ಇತರ ರಾಷ್ಟಗಳಿಗೆ ರಫ್ತು ಮಾಡುವುದರಿಂದ 19 ಬಿಲಿಯನ್ ಡಾಲರ್‌ಗಳಷ್ಟು ಅಂದರೆ 1.52 ಲಕ್ಷ ಕೋಟಿ ರೂಪಾಯಿಗಳಷ್ಟು ವಹಿವಾಟನ್ನು ಸೃಷ್ಟಿಸಬಹುದು ಎಂದು ಅಂದಾಜು ಮಾಡಿದೆ. ಈ ಗುರಿಯನ್ನು 2020 ರಲ್ಲೇ ಮುಟ್ಟಬೇಕಾಗಿತ್ತು. ಆದರೆ ಕೊರೋನ ಮಹಾಮಾರಿಯಂತಹ ಸಂಕಷ್ಟಕ್ಕೆ ಇಡೀ ವಿಶ್ವವೇ ತುತ್ತಾದ ಕಾರಣ ಈ ಗುರಿ ಸ್ವಲ್ಪ ಮುಂದೂಡಬಹುದು.
ಐರ‍್ಲೆಂಡ್, ಈ ಇಕ್ರಿಯರ್ ವರದಿಯ ಪ್ರಕಾರ ಯೂರೋಪಿಯ ಸಂಘದಲ್ಲಿ 2020 ರ ಸಾಲಿನಲ್ಲಿ ಸೇವಾ ರಫ್ತಿನಲ್ಲಿ ಶೇಕಡ 13 ಭಾಗ ರ‍್ಲೆಂಡ್‌ದಾಗಿತ್ತು. ಇದೇ ವರ್ಷ ರ‍್ಲೆಂಡ್‌ನ ರಫ್ತಿನಲ್ಲಿ ಶೇಕಡಾ 8.5 ಭಾಗ ಭಾರತದಿಂದ ಆದ ರಫ್ತಿನದಾಗಿತ್ತು. ಆದರೂ ಸಹ ಯೂರೋಪೀಯ ಸಂಘದಲ್ಲಿ ರ‍್ಲೆಂಡ್, ಭಾರತದ ಸೇವಾ ರಫ್ತಿಗೆ ನಾಲ್ಕನೇ ಅತಿ ದೊಡ್ಡ ಗಮ್ಯ ದೇಶವಾಗಿತ್ತು. ಆದರೆ ಅದೇ ವೇಳೆ ರ‍್ಲೆಂಡ್ ಯೂರೋಪ್ ಸಂಘದಿAದ ಭಾರತದ ಒಟ್ಟು ಆಮದಿನ ಶೇಕಡ 20.5 ಭಾಗ ರ‍್ಲೆಂಡ್ ದೇಶದಿಂದ ಆಗಿತ್ತು. ಭಾರತದ ಸೇವಾ ರಫ್ತುಗಳಲ್ಲಿ ವೃತ್ತೀಯ ಹಾಗೂ ನಿರ್ವಹಣಾ ಸಲಹೆಗಳು, ಕಂಪ್ಯೂಟರ್, ಹಾಗೂ ಸಾಗಣೆ ಸೇವೆಗಳಿದ್ದರೆ ಐರ‍್ಲೆಂಡಿನಿ0ದ ಆಮದಾದ ಸೇವೆಗಳೆಂದರೆ ಮುಂದುವರಿದ ಸಂಶೋಧನೆ ಹಾಗೂ ಅಭಿವೃದ್ದಿ ಕ್ಷೇತ್ರ, ಭೌದ್ದಿಕ ಆಸ್ತಿ ಹಕ್ಕು, ತಾಂತ್ರಿಕ ಸೇವೆಗಳು ಹಾಗೂ ವಾಣಿಜ್ಯ ಸಂಬ0ಧಿ ಸೇವೆಗಳಾಗಿದ್ದವು.
ವಾಣಿಜ್ಯ ಸೇವೆಗಳು, ವೃತ್ತೀಯ, ತಾಂತ್ರಿಕ ಹಾಗೂ ಮಾಹಿತಿ ಸರಬರಾಜು ಸೇವೆಗಳು, ಪ್ರವಾಸೋದ್ಯಮ, ವೈದ್ಯಕೀಯ ಸೇವೆಗಳು ಉಭಯ ದೇಶಗಳ ವಾಣಿಜ್ಯ ವಹಿವಾಟುಗಳಾಗಿವೆ ಹಾಗೂ ಈ ವಹಿವಾಟುಗಳು ಎರಡು ದೇಶಗಳ ನಡುವಿನ ಅರ್ಥಿಕ ಅಭಿವೃದ್ದಿ ಹಾಗೂ ನಾಗರೀಕರ ಪರಸ್ಪರ ಸಂಪರ್ಕ ಸಾಧನೆಗಳಾಗಿವೆ ಎಂದು ವರದಿ ಅಭಿಪ್ರಾಯ ಪಡುತ್ತದೆ.
ವಿದೇಶಿ ನೇರ ಬಂಡವಾಳ (ಎಫ್.ಡಿ.ಐ.) ಪರಿಸ್ಥಿತಿಯ ಬಗ್ಗೆ ಚರ್ಚೆ ಮಾಡಿದ ಇಕ್ರಿಯರ್ ವರದಿ ಉಭಯ ದೇಶಗಳೂ ಸಾಮಾಗ್ರಿಗಳ ವಹಿವಾಟು ಹಾಗೂ ಸೇವೆಗಳ ವ್ಯವಹಾರಗಳಲ್ಲಿ ಸ್ಫರ್ಧಾತ್ಮಕವಾಗಿವೆ ಎಂದು ಭಾವಿಸಿದೆ. ಭಾರತಕ್ಕೆ ಸಂಬ0ಧಿಸಿದ0ತೆ ಔಷಧೀಯ ರಫ್ತು ಹಾಗೂ ಜೈವಿಕ ರಾಸಾಯನಿಕ ವಸ್ತುಗಳಲ್ಲಿನ ರಫ್ತು ಸಾಮರ್ಥ್ಯದ ಫಲವಾಗಿ ಔಷಧಿ ಉತ್ಪಾದನೆ ಬಂಡವಾಳ ಐರ‍್ಲೆಂಡಿನಲ್ಲಿ ಹೂಡಿರುವುದನ್ನು ವರದಿ ಗಮನಿಸಿದೆ. ಇವುಗಳ ರಫ್ತಿನಿಂದ ದೇಶಕ್ಕೆ ಹೆಚ್ಚುವರಿ ಆದಾಯವುಂಟಾಗಿದೆ. ಅದೇ ರೀತಿ ರ‍್ಲೆಂಡ್ ಹಾಗೂ ಭಾರತಗಳ ವಾಣಿಜ್ಯ ಸೇವೆಗಳ ರಫ್ತಿನ ಹೆಗ್ಗುರುತಾಗಿ ಆ ದೇಶದ ಬಂಡವಾಳ ಭಾರತದಲ್ಲಿ ಹೂಡಿರುವುದರ ವರದಿ ಗಮನಿಸಿದೆ.
ವಿಶ್ವದ ನವೋದ್ಯಮಗಳನ್ನು ಸ್ಥಾಪಿಸುವ ಕಾರ್ಯದಲ್ಲಿ ಭಾರತವು ಏಷಿಯಾದಲ್ಲಿ ಮೊದಲ ಸ್ಥಾನದಲ್ಲಿ ಹಾಗೂ 100 ರಾಷ್ಟçಗಳಲ್ಲಿ ಪ್ರಪಂಚದಲ್ಲಿ 20 ನೇ ಸ್ಥಾನದಲ್ಲಿ ನಿಂತಿದೆ. ಅದರಲ್ಲೂ ಬೆಂಗಳೂರು, ನವದೆಹಲಿ ಹಾಗೂ ಮುಂಬೈ ನಗರಗಳು ಸ್ಟಾರ್ಟ್ ಅಪ್ ನಗರಗಳಾಗಿ ಹೊರಹೊಮ್ಮಿವೆ.
ಉಭಯ ರಾಷ್ಟçಗಳ ವಾಣಿಜ್ಯ ವಹಿವಾಟುಗಳನ್ನು ಅನೇಕ ಪಾಲು ಹೆಚ್ಚಿಸಲು ಭಾರತ ಹಾಗೂ ಯೂರೋಪಿಯ ಸಂಘಗಳ ನಡುವೆ ಮುಕ್ತ ಮಾರಾಟ ಹಾಗೂ ಬಂಡವಾಳ ಹೂಡಿಕೆಗಳ ಬಗ್ಗೆ ಮಾತುಕತೆಗಳಲ್ಲಿ ಮುಂಬರುವ ದಿನಗಳಲ್ಲಿ ಸಂಭಾವನೆಗಳಿವೆ.
ಐ.ಸಿ.ಟಿ. ಸೇವೆಗಳಲ್ಲಿ ಐರ‍್ಲೆಂಡ್ ಭಾರತದಂತೆ ಸೇವೆಗಳ ರಫ್ತು ರಾಷ್ಟç. ಆದರೆ ಆ ದೇಶದಲ್ಲಿ ನುರಿತ ಮಾನವ ಸಂಪನ್ಮೂಲಗಳ ಕೊರತೆ ಅಗಾಧವಾಗಿದೆ. ಈ ವಿಷಯ ಸವೇಕ್ಷಣಗಳಲ್ಲಿ ಹೊರಬಂದಿರುವ ಸಂಗತಿ. ಈ ವಿಭಾಗಗಳಲ್ಲಿ ಐರ‍್ಲೆಂಡ್‌ನಲ್ಲಿ ನುರಿತ ಕೆಲಸಗಾರರ ಅಗತ್ಯವಿದೆ. ಆದರೆ ಈ ಜಾಗಗಳನ್ನು ಭರ್ತಿ ಮಾಡಲು ಸೂಕ್ತ ಅಭ್ಯರ್ಥಿಗಳೇ ಸಿಗುತ್ತಿಲ್ಲವಂತೆ. ನುರಿತ ಭಾರತೀಯ ಅಭ್ಯರ್ಥಿಗಳಿಗೆ ಮಾಹಿತಿ ತಂತ್ರಜ್ಞಾನ ಕಾರ್ಯ ಕ್ಷೇತ್ರಗಳಲ್ಲಿ ಉತ್ತಮ ಅವಕಾಶಗಳು ಸುಲಭವೆಂಬುದು ವರದಿಯ ಅಭಿಮತ.
ಐರ‍್ಲೆಂಡ್ ಒಂದು ಅಲ್ಪ ತೆರಿಗೆ ಹಾಗೂ ವಾಣಿಜ್ಯ ಸ್ನೇಹಿ ಪರಿಸರ ಹೊಂದಿರುವ ದೇಶ. ಭಾರತದ ಐಟಿ ಕ್ಷೇತ್ರಗಳ ಪ್ರಮುಖ ಕಂಪನಿಗಳಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಇನ್ಫೋಸಿಸ್, ವಿಪ್ರೋ, ಟೆಕ್ ಮಹೀಂದ್ರ ಹಾಗೂ ಹೆಚ್.ಸಿ.ಎಲï. ಟೆಕ್ ಕಂಪನಿಗಳು ತಮ್ಮ ಸಾಂಪ್ರದಾಯಿಕ ಐಟಿ ಸೇವೆಗಳಿಂದ ಹೆಚ್ಚಿನ ಮೌಲ್ಯವರ್ಧಿತ ಸೇವೆಗಳನ್ನು ನೀಡುವುದರತ್ತ ಹೆಚ್ಚು ಗಮನ ನೀಡುತ್ತಿವೆ. ಹೀಗೆ ಮಾಡುವುದರಿಂದ ಈ ಕಂಪನಿಗಳು ಯೂರೋಪಿಯಾ ಸಂಘದ ರ‍್ಲೆಂಡ್ ಮೂಲಕ ವಿಸ್ತೃತ ಮಾರುಕಟ್ಟೆಗಳಲ್ಲಿ ತಮ್ಮ ಉಪಸ್ಥಿತಿಯನ್ನು ವಿಸ್ತರಿಸುತ್ತಿವೆ.
ಅದೇ ರೀತಿ ಯೂರೋಪೀಯ ಸಂಘಕ್ಕೆ ಆಮದಾಗುವ ಆಹಾರ ಪದಾರ್ಥಗಳಿಗೂ ಹಲವಾರು ರೀತಿಯ ಕಟ್ಟುನಿಟ್ಟಾದ ನಿಬಂಧಗಳಿವೆ. ಆದರೆ ಕಲಬೆರಕೆ ಹಲವಾರು ಮಟ್ಟಗಳಲ್ಲಿ ನಡೆಯುವ ಸಾಧ್ಯತೆಗಳಿವೆ. ಆಹಾರ ಉತ್ಪಾದನೆ, ಅವುಗಳನ್ನು ಪ್ಯಾಕಿಂಗ್, ಸಾಗಾಣಿಕೆ ವೇಳೆ, ಅಥವಾ ಸಂಗ್ರಹಣೆ ಸಮಯದಲ್ಲಿ ಕಲಬೆರಕೆಯ ಸಾಧ್ಯತೆಗಳಿರುತ್ತವೆ. ಹೀಗಾಗಿ ಆಮದು ಮಾಡಿಕೊಳ್ಳುವ ದೇಶಗಳು ಇಂತಹ ಕಲಬೆರಕೆಯಾಗದಂತೆ ನಿಗಾ ವಹಿಸಬೇಕಾಗುತ್ತದೆ. ಹಣ್ಣು, ತರಕಾರಿಗಳು, ಮೀನು, ಮಾಂಸ ಹಾಗೂ ದ್ವಿದಳ ಧಾನ್ಯಗಳು, ಹೈನು ಉತ್ಪಾದನೆಗಳೂ ಯಾವುವೇ ಇರಲಿ ಇವೆಲ್ಲಕ್ಕೂ ಇದೇ ರೀತಿಯ ಪ್ರೊಟೆಕ್ಷನ್ ಅವಶ್ಯವಿದೆ.
ಭಾರತವು ನವೋದ್ಯಮಗಳನ್ನು / ಸ್ಟಾರ್ಟ್ ಅಪ್ ಸ್ಥಾಪಿಸುವ ವಿಷಯದಲ್ಲಿ ವಿಶ್ವದಲ್ಲೇ ಮೂರನೇ ಸ್ಥಾನದಲ್ಲಿದೆ ಹಾಗೂ 2014 ರಿಂದ 2020 ರವರೆಗೆ 11000 ಉದ್ದಿಮೆಗಳು ಜನ್ಮ ತಾಳಿವೆ. ಇವುಗಳಲ್ಲಿ 1600 ನವೋದ್ಯಮಗಳು 2020 ರ ವರ್ಷದಲ್ಲೇ ಹುಟ್ಟಿವೆ. ಈ ಉದ್ಯಮಗಳು ಆಳವಾದ ತಂತಜ್ಞಾನ, ಅದರಲ್ಲೂ ಇಂಟರ್‌ನೆಟ್ ಆಪ್ ತಿಂಗ್ಸ್ (ಐ.ಓ.ಟಿ.) - ಎಲ್ಲವನ್ನು ಬೆಸೆಯುವ ಅಂತರ್ಜಾಲ, ಭವಿಷ್ಯದ ಭರವಸೆಗಳ ತಂತ್ರಜ್ಞಾನ (ಬ್ಲಾಕ್ ಚೈನ್), ಕ್ರಿಪ್ಟಾಲಜಿ ಅಂದರೆ ಸಂಕೇತಗಳ ವಿಶ್ಲೇಷಣೆ. ರೋಬೋಟಿಕ್ 3 ಡಿ ಪ್ರಿಂಟಿ0ಗ್ ಹಾಗೂ ಸಂಕೀರ್ಣ ಡೇಟಾ ವಿಶ್ಲೇಷಣೆಯಂತಹ ಕ್ಷೇತ್ರಗಳಲ್ಲಿ ರ‍್ಲೆಂಡ್ ಭಾರತದಲ್ಲಿ ಹೂಡಿಕೆ ಮಾಡಿದೆ.
ವಿಶ್ವ ಮಟ್ಟದಲ್ಲಿ ಐರ‍್ಲೆಂಡ್ ಹಾಗೂ ಭಾರತ ಸೇವಾ ರಫ್ತು ಮಾಡುತ್ತಿರುವ ದೊಡ್ಡ ರಾಷ್ಟçಗಳು. ಈ ವಿಭಾಗದಲ್ಲಿ ವಿಶ್ವದ ಪೂರ್ಣ ರಫ್ತಿನಲ್ಲಿ ಶೇಕಡ 6.2 ಭಾಗಗಳಷ್ಟು ವಾಣಿಜ್ಯ ಸೇವಾ ಕ್ಷೇತ್ರಗಳಲ್ಲಿ ಐರ‍್ಲೆಂಡಿನ ಪಾಲು. ಆ ದೇಶಕ್ಕೆ ಹಾಗಾಗಿ ವಿಶ್ವದಲ್ಲಿ ಮೂರನೇ ಅತಿ ದೊಡ್ಡ ಸೇವಾ ರಫ್ತಿನ ರಾಷ್ಟçವೆಂದು ಗಣಿಸಲಾಗಿದೆ. ವಿಶ್ವದ ಸೇವಾ ಕ್ಷೇತ್ರದ ರಫ್ತಿನಲ್ಲಿ ಶೇಕಡ 30 ಭಾಗವಿದ್ದರೂ ಭಾರತದ ಸ್ಥಾನ 10 ನೇಯದಾಗಿದೆ. ರ‍್ಲೆಂಡ್ ಸೇವಾ ಆಮದಿನ ರಾಷ್ಟçವೂ ಹೌದು. ಹಾಗಾಗಿ ಆ ರಾಷ್ಟçದ ಕೊರತೆ ಸುಮಾರು 350 ಬಿಲಿಯನ್ ಡಾಲರ್‌ಗಳು. ಭಾರತ ಈ ಸೇವೆಗಳಲ್ಲಿ 9 ನೇ ಅತಿ ದೊಡ್ಡ ರಫ್ತಿನ ರಾಷ್ಟç ಹಾಗೂ 10 ನೇ ದೊಡ್ಡ ಆಮದು ರಾಷ್ಟç. ಆದರೆ ಈ ಸೇವೆಗಳಲ್ಲಿ ಭಾರತ 50 ಬಿಲಿಯನ್ ಡಾಲರ್‌ಗಳಷ್ಟು ಹೆಚ್ಚುವರಿ ಆದಾಯ ಗಳಿಸುತ್ತಿರುವ ರಾಷ್ಟç. ಈ ಕಾರಣದಿಂದ ಐರ‍್ಲೆಂಡ್ ವಾಣಿಜ್ಯ ಸೇವೆಗಳು ಆಮದು ಮಾಡಿಕೊಳ್ಳುತ್ತಿರುವ ರಾಷ್ಟçವಾದರೆ ಭಾರತ ಈ ಸೇವೆಗಳನ್ನು ರಫ್ತು ಮಾಡುತ್ತಿರುವ ದೇಶವಾಗಿದೆ.
ಬ್ರಿಟನ್ ಯೂರೋಪಿಯ ಸಂಘದಿ0ದ ಬೇರ್ಪಟ್ಟಿರುವುದರಿಂದ ಈ ಸಂಘದಲ್ಲಿ ಐರ‍್ಲೆಂಡ್ ಇಂಗ್ಲೀಷ್ ಮಾತನಾಡುವ ದೇಶವಾಗಿ ಉಳಿದಿದೆ. ಭಾರತದ ವಹಿವಾಟು ಈ ದೇಶದೊಡನೆ ಸದ್ಯದಲ್ಲಿ ಅಲ್ಪಸ್ವಲ್ಪವಿದ್ದರೂ ಸಹ ಯೂರೋಪಿನ ಇತರ ರಾಷ್ಟçಗಳೊಡನೆ ವಾಣಿಜ್ಯದ ಗಾತ್ರವನ್ನು ಕುದುರಿಸುವ ಶಕ್ತಿ ರ‍್ಲೆಂಡ್ ದೇಶಕ್ಕೆ ಅಪಾರವಾಗಿದೆ ಹಾಗೂ ಈ ರಾಷ್ಟç ಭಾರತಕ್ಕೆ ಅತ್ಯಂತ ಸಹಕಾರಿ ದೇಶವಾಗಿ ಪರಿಗಣಿಸಬೇಕಾಗುತ್ತದೆ ಎಂದು ಈ ಚಿಂತನ ಸಂಸ್ಥೆ ಇದೇ ತಿಂಗಳು (ನವೆಂಬರ್ 2022) ಬಿಡುಗಡೆ ಮಾಡಿರುವ ವರದಿಯ ತಿಳಿಸಿದೆ.
ವೈಶ್ವಿಕ ವಾಣಿಜ್ಯ ಪರಿಸರದಲ್ಲಿ ಭಾರತಕ್ಕೆ ಯೂರೋಪ್ ಸಂಘ ಅತಿ ಪ್ರಮುಖ ವ್ಯವಹಾರಿಕ ಕೇಂದ್ರ. ಈ ಪರಿಸರದಲ್ಲಿ ಗಮನಿಸಬೇಕಾದ ಗಣನೀಯ ಅಂಶಗಳೂ ಮೂರು. ಅಮೆರಿಕಾ ಹಾಗೂ ಚೀನಾ ರಾಷ್ಟçಗಳ ನಡುವಿನ ವ್ಯಾಪಾರ ಸಂಘರ್ಷ, ಯೂರೋಪಿಯ ಸಂಘದಿ0ದ ಬ್ರಟನ್ನಿನ ನಿಷ್ಕçಮಣ ಹಾಗೂ ವಿಶ್ವ ವ್ಯಾಪಾರ ಸಂಘಟನೆ (ಡಬ್ಲೂö್ಯ.ಟಿ.ಓ.) ಯಲ್ಲಿನ ವ್ಯವಸ್ಥಾ ಪರಿಷ್ಕರಣೆ. ಈ ಮೂರು ವಿಷಯಗಳು ಭಾರತದ ವೈಶ್ವಿಕ ವಾಣಿಜ್ಯಗಳ ಮೇಲೆ ನೇರವಾಗಿ ಹಾಗೂ ಬಳಸುದಾರಿಗಳಿಂದ ಪರಿಣಾಮ ಬೀರುವಂತಹ ಸನ್ನಿವೇಶಗಳಿವೆ. ಇಂತಹ ಪರಿಸ್ಥಿತಿಯಲ್ಲಿ ಭಾರತಕ್ಕೆ ಅಷ್ಟೇನು ಹೆಚ್ಚಿನ ವ್ಯವಹಾರ ವಹಿವಾಟಿನ ರಾಷ್ಟçವಲ್ಲದ ಐರ‍್ಲೆಂಡ್ ಇನ್ನು ಮುಂದೆ ಅತ್ಯಂತ ಸಹಕಾರಿ ದೇಶವಾಗಿ ದೂರಗಾಮಿ ಪಾತ್ರ ವಹಿಸುವ ರಾಷ್ಟçವಾಗಿ ಪರಿಣಮಿಸಲಿದೆ ಎಂದು ಇಕ್ರಿಯರ್ ಅಭಿಪ್ರಾಯ ಪಟ್ಟಿದೆ.
ಪ್ರವಾಸೋದ್ಯಮ ಸಂಗತಿಗಳನ್ನು ಪ್ರಸ್ತಾಪಿಸಿದ ಇಕೆಂಟರ್ ವರದಿ ಭಾರತ ವಿಶ್ವದ 2ನೇ ಅತ್ಯಧಿಕ ಜನಸಂಖ್ಯೆಯುಳ್ಳ ರಾಷ್ಟç ಹಾಗೂ ಅದರ ಮಧ್ಯಮ ವರ್ಗ ದಿನೇ ದಿನೇ ವೃದ್ದಿಯಾಗುತ್ತಿದೆ. ಆದರೆ ಇಲ್ಲಿನ ಹೊರರಾಷ್ಟಗಳಿಗೆ ಪ್ರವಾಸ ಮಾಡುತ್ತಿರುವ ಭಾರತೀಯರು ಬ್ರಿಟನ್ ಪ್ರವಾಸಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಬ್ರಿಟನ್ನಿನ ಪಕ್ಕದಲ್ಲೆ ಇರುವ ಐರ‍್ಲೆಂಡ್, ಈಗ ಯೂರೋಪಿಯ ಸಂಘದ ಒಂದು ಭಾಗ. ಈ ದೇಶ ನೀಡುವ ಷೆನ್‌ಗನ್ ವೀಸಾದ ಆಧಾರದ ಮೇಲೆ ಪಯಣಿಗರು ಸಂಘದ ಎಲ್ಲಾ ದೇಶಗಳಲ್ಲಿ ಪರ್ಯಟನೆ ಮಾಡಬಹುದು. ಪ್ರಸಕ್ತದಲ್ಲಿ ಎರಡು ದೇಶಗಳ ಪ್ರಯಾಣಿಕರು ಸುಮಾರು 40 - 45,000 ಸಂಖ್ಯೆಯಲ್ಲಿ ಪರಸ್ಪರ ದೇಶಗಳಲ್ಲಿ ಪ್ರಯಾಣಿಸುತ್ತಿದ್ದಾರೆ.
ಭಾರತ ಪರ್ಯಟನೆಯ ಇಂಡಿಯಾ ಟೂರಿಸಂ ಕಛೇರಿ, ರ‍್ಲೆಂಡ್‌ನಲ್ಲಿ ಇಲ್ಲಿಯತನಕ ಪ್ರಾರಂಭವಾಗಿಲ್ಲ. ಅಲ್ಲಿ ಕಛೇರಿಯನ್ನು ತೆಗೆದರೆ ಭಾರತೀಯ ಯಾತ್ರಿಕರಿಗೆ ಹಾಗೂ ಅಲ್ಲಿನ ಸ್ಥಳೀಯರಿಗೆ ಹೆಚ್ಚು ಉಪಯೋಗಕಾರಿ. ಹಾಗೆಯೇ ಐರ‍್ಲೆಂಡ್ ನವದೆಹಲಿಯಲ್ಲಿ ಎರಡನೇ ಪ್ರವಾಸಿಗರ ಕಛೇರಿ ಪ್ರಾರಂಬಿಸಿದರೆ ಹೆಚ್ಚು ಪ್ರವಾಸಿಗರನ್ನು ಆ ದೇಶ ಆಕರ್ಷಿಸಬಹುದು.
ಶಿಕ್ಷಣ ಕ್ಷೇತ್ರದಲ್ಲಿ ರ‍್ಲೆಂಡ್ ದೇಶ ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿ0ಗ್ ಹಾಗೂ ಗಣಿತ ಶಾಸ್ತç (ಸ್ಟೆಮ್) ವಿಷಯಗಳಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಉಚ್ಛಶಿಕ್ಷಣ ಹಾಗೂ ತರಬೇತಿ ನೀಡಬಲ್ಲ ಸಾಮರ್ಥ್ಯವುಳ್ಳ ರಾಷ್ಟçವಾಗಿದೆ. ಇದೇ ರೀತಿ ಕೃತಕ ಬುದ್ದಿಶಕ್ತಿಯ (ಎ.ಐ.) ಕುಶಲ ಕರ್ಮಿಗಳ ಸಂಖ್ಯೆಯೂ ಅಧಿಕವಾಗಿದೆ. ಅದೇ ರೀತಿ ವೈದ್ಯಕೀಯ ತಂತಜ್ಞಾನದ ವಿಷಯದಲ್ಲಿಯೂ ಸಹ ಆ ದೇಶದ ಜನ ಯೂರೋಪಿಯ ಸಂಘದಲ್ಲೆಲ್ಲಾ ಪಸರಿಸಿದ್ದಾರೆ.
ಭಾರತದಲ್ಲಿಯೂ ಇಂಜಿನಿಯರಿ0ಗ್‌ನಲ್ಲಿ ಉನ್ನತ ಶಿಕ್ಷಣಕ್ಕೆ ಮುಗಿಬಿದ್ದ ವಿದ್ಯಾರ್ಥಿಗಳ ಸಂಖ್ಯೆ ಅಧಿಕವಾಗಿಯೇ ಇದೆ. ಇತರ ದೇಶಗಳಿಗೆ ಹೋಲಿಸಿದರೆ ಐರ‍್ಲೆಂಡ್‌ನಲ್ಲಿ ಸ್ವಲ್ಪ ಕಡಿಮೆ ವೆಚ್ಚದಲ್ಲಿ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಿರುವ ಕಾರಣ ಸ್ನಾತಕೋತ್ತರ, ಡಾಕ್ಟರೇಟ್ ಹಾಗೂ ಪೋಸ್ಟ್ ಡಾಕ್ಟೋರಲ್ ಪದವಿಗಳನ್ನು ಗಳಿಸಲು ಅವಕಾಶಗಳು ಅಧಿಕವಾಗಿವೆ. 2019 ರ ವರದಿಗಳ ಪ್ರಕಾರ ಈ ವಿಭಾಗಗಳಲ್ಲಿ ಅಧ್ಯಯನ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಐದು ಸಾವಿರವಿತ್ತು.
-Chenna Nagaraj
0 Comments