ಕನ್ನಡ ಸಾಹಿತ್ಯ ಪರಿಷತ್ತು ಶಿವಾಜಿನಗರ ವಿಧಾನಸಭಾ ಕ್ಷೇತ್ರ ಘಟಕದ ಸಾಹಿತ್ಯ, ಸಾಂಸ್ಕೃತಿಕ, ಕಾರ್ಯಾಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ವಸಂತನಗರ ದ ರಜಪೂತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು ಸ್ಥಳೀಯ ಶಾಸಕ ರಿಜ್ವಾನ್ ಅರ್ಷದ್ ರವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು .
ಕನ್ನಡ ಭಾಷೆಗೆ ಸಿಕ್ಕಿರುವಂತ ಮನ್ನಣೆ ಬೇರೆ ಯಾವ ಭಾಷೆಗೂ ದೊರಕಿಲ್ಲ ಅದಕ್ಕೆ ಸಾಕ್ಷಿ ಜ್ಞಾನಪೀಠ ಪ್ರಶಸ್ತಿಗಳು ಎಂದರು.ನಾಡು-ನುಡಿ ಕಾಯಕಕ್ಕೆ ಸದಾ ಕಂಕಣ ಬದ್ಧರಾಗಿರುವುದಾಗಿ ತಿಳಿಸಿದರು.ನಗರ ಜಿಲ್ಲೆ ಘಟಕದ ಅಧ್ಯಕ್ಷ ಎಂ ಪ್ರಕಾಶ ಮೂರ್ತಿ ರವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ರಾಜಧಾನಿ ಬೆಂಗಳೂರು ಕನ್ನಡ ಮುಯವಾದರೆ, ಇಡೀ ರಾಜ್ಯ ಕನ್ನಡ ಮಯವಾದಂತೆ. ಎಚ್ ನರಸಿಂಹಯ್ಯ ರವರ ನುಡಿಗಳನ್ನು ಮೆಲುಕು ಹಾಕುತ್ತಾ ಈ ನಿಟ್ಟಿನಲ್ಲಿ ಸರ್ಕಾರಗಳು, ಸಂಘ ಸಂಸ್ಥೆಗಳು ಕಾರ್ಯೋನ್ಮುಖ ರಾಗಬೇಕೆಂದು ಬೇಕೆಂದು ಎಂದು ತಿಳಿಸುತ್ತಾ ಶಿವಾಜಿನಗರ ಕ್ಷೇತ್ರದ ದಂಡು ಪ್ರದೇಶದಲ್ಲಿ ಕನ್ನಡಪರ ಚಟುವಟಿಕೆಗಳಿಗೆ, ಕನ್ನಡ ಭವನ ಅವಶ್ಯಕತೆ ಇದ್ದು, ಸೂಕ್ತ ಸ್ಥಳವನ್ನು ಗುರುತಿಸಿ ನೀಡಬೇಕೆಂದು ಮನವಿ ಮಾಡಿದರು .
ಶಿವಾಜಿನಗರ ವಿಧಾನಸಭಾ ಕ್ಷೇತ್ರ ಘಟಕದ ಅಧ್ಯಕ್ಷ ಎಂ ನಾಗೇಶ್. ಪ್ರಾಸ್ತಾವಿಕ ನುಡಿಗಳೊಂದಿಗೆ ಎಲ್ಲರನ್ನೂ ಸ್ವಾಗತಿಸಿದರು ಮುಖ್ಯ ಅತಿಥಿಗಳಾಗಿ ಶ್ರ. ದೇ. ಪಾರ್ಶ್ವನಾಥ ಮಾಜಿ ಅಧ್ಯಕ್ಷರು ಬೆಂ, ನಗರ ಜಿಲ್ಲೆ , ಶ್ರೀ ಶಿವಾನಂದ ಶೆಟ್ಟಿ, ಅಧ್ಯಕ್ಷರು ಕರವೇ ಬೆಂ, ನಗರ ಜಿಲ್ಲೆ ಶ್ರೀ ಎಸ್ ಸಂಪತ್ ಕುಮಾರ್ ಮಾಜಿ ಬಿ.ಬಿ.ಎಂ.ಪಿ. ಸದಸ್ಯರು, ಬೆಂಗಳೂರು ನಗರ ಜಿಲ್ಲೆ ಪದಾಧಿಕಾರಿಗಳಾದ ಡಾ. ಮಾಗಡಿ ಗಿರೀಶ್, ಶ್ರೀಮತಿ ಇಂದಿರಾ ಶರಣ ಜಮ್ಮಲದಿನ್ನಿ, ಶ್ರೀಮತಿ ವಿಜಯಲಕ್ಷ್ಮಿ ಸತ್ಯಮೂರ್ತಿ, ಶ್ರೀ ವರ್ಧಮಾನ ಕಳಸೂರು ಅಧ್ಯಕ್ಷರು ಕ.ಸಾ.ಪ.ಸರ್ವಜ್ಞನಗರ ವಿ.ಕ್ಷೇತ್ರ. ಕನ್ನಡ ಪರ ಹೋರಾಟಗಾರರಾದ ಸಮೀ ಉಲ್ಲಾ ಖಾನ್, , ಡಿ ಮುನ್ನು ರಾವ್ , ಪಾ ಮುರಳಿಧರ್, ಬಸವ ರಾಜ್ ಪಡುಕೋಟೆ ವಚನ ಜ್ಯೋತಿ ಬಳಗದ ಅಧ್ಯಕ್ಷ ಪಿನಾಕ ಪಾಣಿ, ಸ್ಥಳೀಯ ಮುಖಂಡರಾದ ಬಿವಿ ,ಸುರೇಶ್ , ಸಿ ಗೋಪಾಲ್, ಟಿಎಲ್ ರಮೇಶ್ ,ರಘು ರಾಮಕೃಷ್ಣ, ಪ್ರೊಫೆಸರ್ ನಿಶಾ ಜೋಸೆಫ್ ಪ್ರಾಂಶುಪಾಲರು ಸೇಂಟ್ ಆನ್ಸ್ ಮಹಿಳಾ ಪದವಿ ಕಾಲೇಜು .ಘಟಕದ ಪ್ರತಿನಿಧಿ ಸದಸ್ಯರಾದ ರಾಜಣ್ಣ ಎಚ್, ಅರವಿಂದ ಆರ್ , ಚಂದ್ರಶೇಖರ್ ಎ ,ಚಂದ್ರಶೇಖರ್ ಎಂ, ಡಾ.ಪ್ರಮೀಳಾ, ಡಾ//ಗೀತಾ ಪವಾರ್, ಎಮ್ ಮುರಳಿ,ಜೈ ಪ್ರಕಾಶ್ ಎಸ್, ಶ್ರೀಮತಿ ರಾಧಮ್ಮ ಎನ್, ಶ್ರೀ ಪೈಜಲ್ ಪಿಕೆ . ಮಹೇಶ್ ಎಂ. ಸೈಯದ್ ಮುಬಾರಕ್ ಹಾಗೂ ಸೇಂಟ್ ಆನ್ಸ್ ಮಹಿಳಾ ಪದವಿ ಕಾಲೇಜು ಹಲಸೂರು ಹಾಗೂ ನ್ಯೂ ಫ್ಲಾರೆನ್ಸ್ ಪಬ್ಲಿಕ್ ಶಾಲೆ ಸಂಜಯನಗರ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು ದಂಡು ಪ್ರದೇಶ ದ ವಿವಿಧ ಸಂಘಟನೆಗಳ ಮುಖಂಡರುಗಳು ಉಪಸ್ಥಿತರಿದ್ದರು.
.jpeg)


0 Comments