ಕರ್ನಾಟಕ ಸರ್ಕಾರ ಬ್ರಾಹ್ಮಣ ಅಭಿವೃದ್ಧಿ ಮಂಡಳಿ. ಬ್ರಹ್ಮಣರ ಅಭಿವೃದ್ಧಿಗಾಗಿ ಇರುವಂತಹ ಏಕೈಕ ಮಂಡಳಿ ತನ್ನ ಜನಾಂಗದ ಫಲಾನುಭವಿಗಳಿಗೆ ಹೆಚ್ಚಿನ ಸವಲತ್ತುಗಳನ್ನು ಕೊಡಿಸಲು ಆಗದೆ ಕೈಕಟ್ಟಿ ಕುಳಿತಿದೆ,
ಯೋಜನೆಗಳು ಹಲವಾರು ಚಾಲ್ತಿಯಲ್ಲಿ ಇದ್ದರೂ ಬಿಜೆಪಿ ಸರ್ಕಾರದಿಂದ ನಯಾ ಪೈಸಾ ಬಿಡುಗಡೆ ಮಾಡದೇ ಇರುವುದರಿಂದ ಅಭಿವೃದ್ಧಿ ಮಂಡಳಿಗೆ ಕೆಲಸವೇ ಇಲ್ಲದಂತಾಗಿದೆ, ಸರ್ಕಾರದ ಈ ನಡೆ ಬ್ರಾ ಹ್ಮಣ ಜನಾಂಗದ ಆಕ್ರೋಶಕ್ಕೆ ತುತ್ತಾಗಿದೆ. ಬಿಜೆಪಿ ಸರ್ಕಾರ ಬ್ರಾಹ್ಮಣರನ್ನು ಇಷ್ಟು ಮಟ್ಟಿಗೆ ಕಡಗಣನೆ ಮಾಡುತ್ತಿರುವುದು ತುಂಬಾ ವಿಪರ್ಯಾಸ. ಬ್ರಾಹ್ಮಣ ಜನಾಂಗ ಕರ್ನಾಟಕ ರಾಜ್ಯದಲ್ಲಿ 21 ವಿಧಾನಸಭಾ ಕ್ಷೇತ್ರದಲ್ಲಿ ನಿರ್ಣಾಯಕರಾಗಿದ್ದು, ಸರ್ಕಾರ ಧೋರಣೆ ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಬ್ರಾಹ್ಮಣರು ತಕ್ಕ ಪಾಠ ಕಲಿಸಲಿದ್ದಾರೆ.
ಹಾಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಎಲ್ಲ ಜನಾಂಗಕ್ಕೂ ಮುಖ್ಯಮಂತ್ರಿ ಆಗಿರುತ್ತಾರೆ, ಆದರೂ ಸಹ ಯಾಕೆ ಬ್ರಾಹ್ಮಣ ಜನಾಂಗಕ್ಕೆ ಈವರೆಗೂ ನಯಾಪೈಸ ಕೊಟ್ಟಿರುವುದಿಲ್ಲ? ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಎಲ್ಲಾ ಬ್ರಾಹ್ಮಣರಿಗೆ ಸರ್ಕಾರದ ಈ ಧೋರಣೆಯನ್ನು ತಿಳಿಸಿ ಬೆಂಗಳೂರಿನಲ್ಲಿ ಸರ್ಕಾರದ ವಿರುದ್ಧ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಲಾಗುವುದು.
-ವಿ ರಾಘವೇಂದ್ರ ಮಯ್ಯ, ವಿಪ್ರ ಹೋರಾಟಗಾರರು. 9844538382
0 Comments