Ticker

6/recent/ticker-posts

Ad Code

Responsive Advertisement

ಭಾರತದ ಧೀಶಕ್ತಿಯಾಗಿರುವ ಪ್ರಧಾನಿಗಳ ಮಾತೃಶ್ರೀ.

 *ಶ್ರೀಮತಿ ಹೀರಾ ಬೆನ್ ದಾಮೋದರ ದಾಸ್ ಮೋದಿ.* 




ಭಾರತದ ಧೀಶಕ್ತಿಯಾಗಿರುವ ಪ್ರಧಾನಿಗಳ ಮಾತೃಶ್ರೀ.

ಶತಾಯುಷಿಯಾದ ಮಾತೆಗೆ *ಶ್ರದ್ಧಾ ನಮನ* ಅರ್ಪಿಸುವ _ಈ ಸಂದರ್ಭದಲ್ಲಿ ಅವರ ಕುಟುಂಬದೊಡನೆ ನನ್ನ ನಿಕಟ, ಅವಿನಾಭಾವ ಸಂಬಂಧ ಸ್ಮೃತಿಪಟಲದಿಂದ ಹೊರಬರುತ್ತಿದೆ._ 

ಪ್ರಧಾನಿ‌ ನರೇಂದ್ರರ ಅಣ್ಣ ಸೋಮಾಭಾಯಿ, ತಮ್ಮಂದಿರಾದ ಪ್ರಹ್ಲಾದ್, ಪಂಕಜ್ ಅವರೊಡನೆ ನನ್ನ ನೇರಸಂಪರ್ಕ ಇತ್ತು.

ಅವರು ಬೆಂಗಳೂರಿಗೆ ಬಂದಾಗ ಆಗುತ್ತಿದ್ದ ನಮ್ಮ ಭೇಟಿಗಳಲ್ಲಿ‌ ರಾಜಕೀಯ ಹೊರತಾಗಿ ತಾಯಿ ಹೀರಾ ಬೆನ್ ಅವರ ಕತೃತ್ವ ಶಕ್ತಿಯ ಕುರಿತೇ ಸುದೀರ್ಘ ಮಾತುಕತೆ ನಡೆಯುತ್ತಿದ್ದವು.

ಶ್ರೀಮತಿ ಹೀರಾ ಬೆನ್ ಮತ್ತವರ ಕುಟುಂಬದ ಸದಸ್ಯರು ಅತಿ ಹೆಚ್ಚು ಆರಾಧಿಸುವ ಸ್ವಾಮಿ ನಾರಾಯಣ ಪಂಥದ ಅಕ್ಷರ ಧಾಮ್ ದೇಗುಲ ಬೆಂಗಳೂರಿನಲ್ಲೂ ಸ್ಥಾಪನೆಯಾದಾಗ ಸಂತಸ ಪಟ್ಟಿದ್ದ ಈ ಕುಟುಂಬಸ್ಥರನ್ನು ರಾಜಾಜಿ‌ ನಗರದ ಮಾಗಡಿ ಕೂಡು ರಸ್ತೆ ಸಮೀಪದ ಹಳೇ ಟೋಲ್ ಗೇಟ್ ಬಳಿ ಇರುವ ಅಕ್ಷರ್ ಧಾಮಕ್ಕೆ ಕರೆದುಕೊಂಡು ಹೋಗುವ ಸೌಭಾಗ್ಯ ನನಗೆ ಸಿಕ್ಕಿತ್ತು.

ಆಹಾರವನ್ನು ವ್ಯರ್ಥ ಮಾಡಬಾರದೆಂದು ಎಲ್ಲರಿಗೂ ತಿಳುವಳಿಕೆ ಮೂಡಿಸುತ್ತಿದ್ದ ಮೋದೀಜೀಯವರ ತಾಯಿ, ಅವರ ಸಹೋದರರಿಗೆ ಗುಜರಾತ್ ಶೈಲಿಯ ಊಟವನ್ನೇ ಉಣಬಡಿಸಿದ್ದೆವು. ಒಂದು ಅಗುಳು ಅನ್ನವನ್ನೂ ಹಾಳು ಮಾಡಬಾರದೆಂಬ ಅವರ ಉದ್ದೇಶವನ್ನು ಅಂದು ಅವರು ಎಲ್ಲರಿಗೂ ಮನವರಿಕೆ ಮಾಡಿಕೊಟ್ಟಿದ್ದರು.

ಧರ್ಮ ಮತ್ತು ಆಧ್ಯಾತ್ಮಿಕತೆ ಕುರಿತಾದ ಉಪನ್ಯಾಸಗಳನ್ನು ತದೇಕಚಿತ್ತದಿಂದ ಕೇಳಿಸಿಕೊಳ್ಳುತ್ತಿದ್ದ ಹೀರಾ ಬೆನ್ ಅವರು ಈ ಸಂಸ್ಕಾರವನ್ನು ಬಾಲ್ಯದಲ್ಲಿಯೇ ತಮ್ಮ ಮಕ್ಕಳಿಗೆ ಧಾರೆ ಎರೆದಿದ್ದರು.

ಅಂಥಹಾ ಮಹಾನ್ ಶಕ್ತಿಯಾಗಿದ್ದ ಮಾತೃ ಸ್ವರೂಪಿಣಿ ಶ್ರೀಮತಿ ಹೀರಾ ಬೆನ್ ಅವರ ನೂರನೇ ಜನ್ಮದಿನಾಚರಣೆಯನ್ನು ನಾನು ಬೆಂಗಳೂರಿನ ಐದು ವೃದ್ಧಾ / ಅನಾಥಾಶ್ರಮಗಳಲ್ಲಿ ಆಚರಿಸಿದುದನ್ನು ಕೇಳಿ ಸಂತಸ ಪಟ್ಟಿದ್ದ ಹೀರಾ ಬೆನ್‌ ಅವರು ತಿಪಟೂರಿನ ತೆಂಗಿನ ಸಸಿಗಳೇ ಬೇಕೆಂದು ಕೇಳಿ ತರಿಸಿಕೊಂಡಿದ್ದರು. ಮತ್ತು ಅಹ್ಮದಾಬಾದ್ ಸಮೀಪದ ದೇಗುಲದ ಸುತ್ತಲೂ ಈ ನಮ್ಮ ಕನ್ನಡ ನಾಡಿನ ತಿಪಟೂರು ತೆಂಗನ್ನು ನೆಡೆಸಿದ್ದರು.

ನರೇಂದ್ರರಂಥಹಾ ಧೀಮಂತ ಸುಪುತ್ರರನ್ನು ಹೆತ್ತ ಈ‌ ಮಹಾತಾಯಿಯನ್ನು ನಮ್ಮ ಹೆಮ್ಮೆಯ ಹಂಪಿಗೆ ಕರೆದುಕೊಂಡು ಹೋಗಿ ವಿರೂಪಾಕ್ಷನ ದರ್ಶನ ಮಾಡಿಸಬೇಕೆಂಬ ಆಸೆ ಹಾಗೆಯೇ ಉಳಿದಿದೆ.

ಆದರ್ಶಪ್ರಾಯರಾಗಿದ್ದ ಹೀರಾ ಬೆನ್ ಜೀ ಅವರ ಆದರ್ಶದಂತೆಯೇ ಕೊನೆಯ ಕ್ರಿಯೆಗಳ ಬಳಿಕ ಅವರ ಸುಪುತ್ರ, ಪ್ರಧಾನಿ ನರೇಂದ್ರರು ತಾಯಿ ಅಗಲಿಕೆಯ ನೋವಿನಲ್ಲೂ ತಮ್ಮ ದೈನಂದಿನ ಕೆಲಸಗಳಲ್ಲಿ ತೊಡಗಿಕೊಂಡು ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ. ಇಂತಹ ಕೌಟುಂಬಿಕ ಸ್ನೇಹ ಪಡೆದ ನಾನೇ ಧನ್ಯ.

 *ತಾಯಿ ಹೀರಾ ಬೆನ್ ಅವರ ಅಗಲಿದ ಆತ್ಮಕ್ಕೆ ಶ್ರದ್ಧಾಂಜಲಿ ಕೋರುತ್ತಾ...* 

- ಶಂಕರ್ ಎಸ್ ಎನ್, ಬೆಂಗಳೂರು

Post a Comment

0 Comments

Ad Code

Responsive Advertisement