Ticker

6/recent/ticker-posts

Ad Code

Responsive Advertisement

ಭ್ರಷ್ಟ ಬಿ.ಜೆ.ಪಿ.ತೊಲಗಿಸಿ, ಕಾಂಗ್ರೆಸ್ ಪಕ್ಷ ಗೆಲ್ಲಿಸಿ:ಜನ ಸಂಪರ್ಕ ಅಭಿಯಾನ



ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಇಂದಿರಾನಗರದ ಮಸೀದಿ ಮುಂಭಾಗ ಅಲ್ಪಸಂಖ್ಯಾತ ಮುಖಂಡರುಗಳ ಜೊತೆಯಲ್ಲಿ ಕೆ.ಪಿ.ಸಿ.ಸಿ.ಸಂಯೋಜಕರಾದ ಸುದರ್ಶನ್ ರವರು ಭೇಟಿ ಮಾಡಿ, ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸುವಂತೆ ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಸುದರ್ಶನ್ ರವರು ಮಾತನಾಡಿ ಕಾಂಗ್ರೆಸ್ ಪಕ್ಷ ಸರ್ವರಿಗೂ ಸಮಪಾಲು,ಸರ್ವರಿಗೂ ಸಮಬಾಳು ಕಾಯಕ ಸಿದ್ದಾಂತ ಮಾರ್ಗದಲ್ಲಿ ನಡೆಯುತ್ತಿರುವ ಪಕ್ಷ.

ಜಾತ್ಯತೀತ ಸಿದ್ದಾಂತದಂತೆ ಎಲ್ಲರು ಒಂದೇ ಸಹೋದರತ್ವದಲ್ಲಿ ಜೀವನ ಸಾಗಿಸಬೇಕು.

ಭಾರತ ದೇಶ ಜಾತ್ಯತೀತ ರಾಷ್ಟ್ರ. ಇಂದು ದೇಶದಲ್ಲಿ ಅಸಮಾನತೆ, ಅಶಾಂತಿ, ಭ್ರಷ್ಟಚಾರ ತಾಂಡವಾಡುತ್ತಿದೆ.

ರಾಜ್ಯದ ಬಿ.ಜೆ.ಪಿ.ಸರ್ಕಾರ 40%ಪರ್ಸೆಂಟ್ ಸರ್ಕಾರ ಎಂದು ಜನ ಮಾತನಾಡಿಕೊಳ್ಳುವ ಪರಿಸ್ಥಿತಿ ಬಂದಿದೆ.

ಕೊವಿಡ್ ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ ಭ್ರಷ್ಟಚಾರ, ಬೆಂಗಳೂರುನಗರ ಗುಂಡಿಗಳ ನಗರವಾಗಿದೆ.

ಪ್ರತಿಯೊಂದು ಕಾಮಗಾರಿಗಳ ಲಂಚವತಾರ ಹೆಚ್ಚಾಗಿ ಕಾಮಗಾರಿಗಳ ಗುಣಮಟ್ಟ ಕಳಪೆಯಾಗಿದೆ.

ಕಾಂಗ್ರೆಸ್ ಪಕ್ಷದ ಆಡಳಿತ ಅವಧಿಯಲ್ಲಿ ಎಲ್ಲ ಧರ್ಮ, ವರ್ಗದವರಿಗೆ ಸರ್ಕಾರದ ಯೋಜನೆಗಳನ್ನು ರೂಪಿಸಿ, ಸಾಮಾಜಿಕ ಬದಲಾವಣೆ ತಂದರು.

ಎ.ಐ.ಸಿ.ಸಿ.ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆರವರು,ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕೆ.ಪಿ.ಸಿ.ಸಿ.ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ರವರು ಮತ್ತು ಮಾಜಿ ಮುಖ್ಯಮಂತ್ರಿಗಳು, ವಿರೋಧ ಪಕ್ಷದ ನಾಯಕರಾದ ಶ್ರೀ ಸಿದ್ದರಾಮಯ್ಯರವರು,ವಿಧಾನಪರಿಷತ್ ವಿರೋಧ ಪಕ್ಷದ ನಾಯಕರಾದ ಬಿ.ಕೆ.ಹರಿಪ್ರಸಾದ್ ರವರ ನೇತೃತ್ವದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತದಿಂದ ಆಡಳಿತಪಕ್ಷವಾಗಿ ಹೊರಹೊಮ್ಮಲಿದೆ, ರಾಜ್ಯದ ಜನತೆ ಆಶೀರ್ವಾದ ಮಾಡಬೇಕು.

ಈ ಬಾರಿ ರಾಜಾಜಿನಗರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ನಾನು ಸಹ ಅಕಾಂಕ್ಷಿಯಾಗಿದ್ದೇನೆ, ಪಕ್ಷದ ತೀರ್ಮಾನಕ್ಕೆ ಬದ್ದನಾಗಿ ಕೆಲಸ ಮಾಡುತ್ತೇನೆ.

ಶಂಶೀರ್ ಬೇಗ್, ಮಹೇಶ್, ಜ್ಲಾನೇಶ್ ರವರು ಅಲ್ಪಸಂಖ್ಯಾತ ಧರ್ಮಗುರುಳು, ಮುಖಂಡರುಗಳು ಭಾಗವಹಿಸಿದ್ದರು.

Post a Comment

0 Comments

Ad Code

Responsive Advertisement