ಕೊಳ್ಳೇಗಾಲ ತಾಲ್ಲೂಕಿನ ಎರಡು ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕ ಎನ್. ಮಹೇಶ್ ರವರಿಂದ ಗುದ್ದಲಿ ಪೂಜೆ,
ಮುಖ್ಯಮಂತ್ರಿಗಳ ವಿಶೇಷ ಅನುದಾನ ಹಾಗೂ ಕೆ.ಆರ್. ಐ. ಡಿ. ಎಲ್. ಯೋಜನೆಯ ಸುಮಾರು 5.50 ಲಕ್ಷ ರೂಪಾಯಿ ಅನುದಾನದ ಕಾಮಗಾರಿಗಳಿಗೆ ಕೊಳ್ಳೇಗಾಲದ ಶಾಸಕ ಎನ್. ಮಹೇಶ್ ರವರು ಗುದ್ದಲಿ ಪೂಜೆಯನ್ನು ನೆರವೇರಿಸಿದರು,
ತಾಲ್ಲೂಕಿನ ಹಿತ್ತಲದೊಡ್ಡಿ ಹೆಬ್ಬಳ್ಳಕ್ಕೆ 1.40 ರೂಪಾಯಿ ಅನುದಾನದಲ್ಲಿ ಸೇತುವೆ ನಿರ್ಮಾಣ, ಕೊಳ್ಳೇಗಾಲದಿಂದ ಅರೆಪಾಳ್ಯ, ಮಾರ್ಗವಾಗಿ ಸೂರಪುರ ಹೋಗುವ ರಸ್ತೆಯಲ್ಲಿ, 1.50 ಲಕ್ಷ ಅನುದಾನದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗಳಿಗೆ ಗುದ್ದಲಿ ಪೂಜೆಯನ್ನು
ನೆರವೇರಿಸಿ ಶಾಸಕರು ಮಾತನಾಡಿ ರಾಜ್ಯದ ಮುಖ್ಯಮಂತ್ರಿಗಳ ವಿಶೇಷ ಅನುದಾನದಿಂದ ತಾಲ್ಲೂಕಿನ ಹಿತ್ತಲದೊಡ್ಡಿ ಗ್ರಾಮದ ಹಳ್ಳಕ್ಕೆ 1 ಕೋಟಿ 40 ಲಕ್ಷ ರೂಪಾಯಿ ವೆಚ್ಚದಲ್ಲಿ ಸೇತುವೆ ನಿರ್ಮಾಣಕ್ಕೆ ಗುದ್ದಲಿ ಪೂಜೆಯನ್ನು ಮಾಡಲಾಗಿದೆ,
ಹಿತ್ತಲದೊಡ್ಡಿ ಗ್ರಾಮದ ಹೆಬ್ಬಳ್ಳದ ಸೇತುವೆ ನಿರ್ಮಾಣದ ಬೇಡಿಕೆ ಸುಮಾರು 20 ವರ್ಷಗಳಿಂದಿನದು ಆವಾಗಿನಿಂದ ಇಲ್ಲಿನ ಜನರು ನನಗೆ ಬೇಡಿಕೆ ಇಟ್ಟಿದ್ಸರು, ಇವಾಗ ನಾನು ಶಾಸಕನಾಗಿ ಇವರ ಬೇಡಿಕೆಯನ್ನು ಹಿಡೇರಿಸಿದ್ದೇನೆ , ಜೊತೆಗೆ ಕೊಳ್ಳೇಗಾಲದಿಂದ ಅರೆಪಾಳ್ಯ ಮಾರ್ಗವಾಗಿ ಸೂರಪುರ ಹೋಗುವ ತಿಮ್ಮರಾಜಿಪುರ ರಸ್ತೆ ಯಲ್ಲಿರುವ ಚಾನಲ್ ನಲ್ಲಿ ಸುಮಾರು 1 ಕೋಟಿ 50 ಲಕ್ಷ ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೂ ಗುದ್ದಲಿ ಪೂಜೆಯನ್ನು ಮಾಡಲಾಗಿದೆ ಕಾಮಗಾರಿಯನ್ನ ಮಾರ್ಚ್ ತಿಂಗಳ ಒಳಗೆ ಮುಗಿಸಿಕೊಡುವಂತೆ ಗುತ್ತಿಗೆದಾರರು ಮತ್ತು ಇಂಜಿನಿಯರ್ ಗಳಿಗೆ ಆದೇಶ ನೀಡಲಾಗಿದೆ ಆದ್ದರಿಂದ ಗ್ರಾಮಸ್ಥರು ಎಲ್ಲರು ಅಧಿಕಾರಿಗಳು ಮತ್ತು ಗುತ್ತಿಗೆದಾರರ ಜೊತೆ ಸಹಕರಿಸಿ ಗುಣಮಟ್ಟದ ಕಾಮಗಾರಿ ಮಾಡಿಸಿಕೊಳ್ಳಬೇಕು ಎಂದರು,
ಈ ಸಂದರ್ಭದಲ್ಲಿ ತಿಮ್ಮರಾಜಿಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಸತೀಶ್, ನಿಂಗರಾಜು, ಮರಿಸ್ವಾಮಿ,
ಗುತ್ತಿಗೆದರರಾದ ಶಾಂತಪ್ಪ, ಮಾಸ್ತಿಗೌಡ, ಹಾಗೂ ಇನ್ನಿತರರು ಇದ್ದರು,


0 Comments