Ticker

6/recent/ticker-posts

Ad Code

Responsive Advertisement

ಮನೆ ಕಟ್ಟಡ ಹೊಡೆದು ಹಾಕುವಂತೆ ಬಡ ರೈತನಿಗೆ ಪಿಡಿಒ ರಂಗರಾಜುನಿಂದ ಬೆದರಿಕೆ,

 ಕೊಳ್ಳೇಗಾಲ ಸುದ್ದಿ : ತಾಲ್ಲೂಕಿನ ಗುಂಡೇಗಾಲ ಗ್ರಾಮದ ಪುಟ್ಟಸ್ವಾಮಿ ಎಂಬುವರಿಗೆ ಮನೆ ಗೋಡೆ ಹೊಡೆದು ಹಾಕುವಂತೆ ಧನಗೆರೆ ಪಿಡಿಒ ರಂಗರಾಜು ಬೆದರಿಕೆ ಹಾಕಿದ್ದಾರೆ ಎಂಬಾ ಮಾಹಿತಿ ಲಭ್ಯವಾಗಿದೆ,

ಗ್ರಾಮದ ಹೊಸ ಬಡಾವಣೆಯ ಬೀದಿಯಲ್ಲಿ  ರಸ್ತೆ ವಿಚಾರವಾಗಿ ತಕರಾರು ಉಂಟಾಗಿದ್ದು ಗ್ರಾಮದ ಶಿವಣ್ಣ ಎಂಬುವರು ಅವರ ಖಾಲಿ ನಿವೇಶದಿಂದ  ನಾಲ್ಕು ಅಡಿ ಮುಂದಕ್ಕೆ  ರಸ್ತೆಗೆ ಕಲ್ಲು ಕಂಬಗಳನ್ನು ನೆಟ್ಟು ರಸ್ತೆಯನ್ನು ಅಕ್ರಮಿಸಿಕೊಂಡಿರುತ್ತಾರೆ,


ಪಿಡಿಒ ರಂಗರಾಜುನ ದೌರ್ಜನ್ಯದಿಂದ ನೊಂದ ಪುಟ್ಟಸ್ವಾಮಿಯವರು ಮಾತನಾಡಿ, ನಾನು ನನ್ನ ಸೈಟ್ ಎಷ್ಟಿತ್ತೋ ಅಷ್ಟಕ್ಕೇ ಮನೆ ಕಟ್ಟಿಸಿದ್ದೇನೆ, ಇದೆ ಬೀದಿಯಲ್ಲಿ ಕೆಲವರು 5 ರಿಂದ 6 ಅಡಿ ಮುಂದಕ್ಕೆ ರಸ್ತೆಯನ್ನು ಅಕ್ರಮಿಸಿಕೊಂಡು ಮನೆಗಳನ್ನು ಕಟ್ಟಿಕೊಂಡಿದ್ದಾರೆ ಪಿಡಿಒ ರವರು ಅವರನ್ಯಾರನ್ನು ಕೇಳುತ್ತಿಲ್ಲ , ಶಿವಣ್ಣ ಎಂಬುವರು ರಸ್ತೆಗೆ ಕಲ್ಲು ನೆಟ್ಟುಕೊಂಡಿದ್ದಾರೆ, ಅವರನ್ನೆಲ್ಲ ಬಿಟ್ಟು ಪಿಡಿಒ ರಂಗರಾಜು ಮನೆ ಗೋಡೆ ಹೊಡೆದು ಹಾಕು ಎಂದು ನನ್ನನ್ನು ಬೆದರಿಸುತ್ತಿದ್ದಾರೆ  


ರಸ್ತೆ ನಿರ್ಮಾಣಕ್ಕೆ ಅವಕಾಶ ಕೊಡದೆ ಇದೆ ಗ್ರಾಮದ  ಪುಟ್ಟಸ್ವಾಮಿಯವರ ಮನೆ ನಿರ್ಮಾಣ ಹಂತದಲ್ಲಿದ್ದು ರಸ್ತೆಗೂ ಮನೆಗೂ ಸಂಬಂಧವಿರುವುದಿಲ್ಲ  ರಸ್ತೆ ನಿರ್ಮಾಣಕ್ಕೆ ಅಡ್ಡಿ ಇರುವುದಿಲ್ಲ ಆದರೂ ಸಹ ಧನಗೆರೆ ಗ್ರಾಮ ಪಂಚಾಯಿತಿ ಪಿಡಿಒ ರಂಗರಾಜುರವರು ಮನೆ ಗೋಡೆ ಹೊಡೆದು ಹಾಕು ಇಲ್ಲದಿದ್ದರೆ ನಾನೆ ಜೆಸಿಬಿ ಕರೆಸಿ ಹೊಡೆದು ಹಾಕುತ್ತೇನೆ ಎಂದು ನಿವಾಸಿ ಪುಟ್ಟಸ್ವಾಮಿಯವರಿಗೆ ಬೆದರಿಕೆ ಹಾಕಿದ್ದಾರೆ ಘಟನೆ ನಡೆದಿದೆ.

ಅಲ್ಲದೆ ಪಕ್ಕದ ಸೈಟ್ ನ ಶಿವಣ್ಣ ಎಂಬುವರು ಮನೆ ಗೋಡೆ ಹೊಡೆಯದಿದ್ದರೆ ನನ್ನ ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ, ಐದರಿಂದ ನನಗೆ ತುಂಬಾ ತೊಂದರೆಯಾಗುತ್ತಿದೆ ನಾನು ಸಾಲ ಮಾಡಿ ಮನೆ  ಕಟ್ಟಿಸಿದ್ದೇನೆ, ಆದರೆ ಪಿಡಿಒ ರಂಗರಾಜು ಮತ್ತು ಶಿವಣ್ಣ, ಮಹೇಶ್ ಎಂಬುವರು ನನ್ನ ಬೆದರಿಸುತ್ತಿದ್ದಾರೆ ನನಗೆ ತುಂಬಾ ತೊಂದ್ರೆ ಕೊಡುತ್ತಿದ್ದಾರೆ ಇದು ಹೀಗೆ ಮುಂದುವರಿದರೆ ನನಗೆ ನ್ಯಾಯ ಸಿಗದೇ ಹೋದರೆ, ಇವರ ಹೆಸರುಗಳನ್ನು ಬರೆದಿಟ್ಟು ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ,

ಸಂಬಂಧಪಟ್ಟ ಅಧಿಕಾರಿಗಳು ಈ ಬಡ ಪುಟ್ಟಸ್ವಾಮಿಯವರು ಸಮಸ್ಯೆಯನ್ನು ಬಗೆ ಹರಿಸಿ ನ್ಯಾಯ ದೊರಕಿಸಿ ಕೊಡಬೇಕಾಗಿದೆ,

Post a Comment

0 Comments

Ad Code

Responsive Advertisement