Ticker

6/recent/ticker-posts

Ad Code

Responsive Advertisement

ಕೋಲಾರ ಬಂದ್ ಗೆ ಪ್ರಗತಿಪರ ಸಂಘಟನೆಗಳ ಕರೆ

*ನಗರದಲ್ಲಿನ ಹದಗೆಟ್ಟ ರಸ್ತೆಗಳ ವಿರುದ್ಧ ಸಿಡಿದಿದ್ದ ಸಂಘಟನೆಗಳು*

ಕಣ್ ಮುಚ್ಚಿ ಕುಳಿತಿರುವ ಜಿಲ್ಲಾಡಳಿತಕ್ಕೆ ಬಿಸಿ ಮುಟ್ಟಿಸಲೆಂದೇ ಬಂದ್ ಕರೆ ಎಂದ ಸಂಘಟನೆಗಳು*


ಕೋಲಾರ. ನಗರದಲ್ಲಿನ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು ಇದನ್ನ ಸರಿಪಡಿಸುವಲ್ಲಿ ನಗರ ಸಭೆ ಹಾಗೂ ಜಿಲ್ಲಾಡಳಿತ ನಿರ್ವಕ್ಷ್ಯ ತೋರುತ್ತಿದೆಯೆಂದು ಪ್ರಗತಿ ಪರ ಸಂಘಟನೆಗಳು ತಮ್ಮ ಆಕ್ರೋಶ ಹೊರ ಹಾಕಿದೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಸಂಘಟನೆಗಳ ಮುಖಂಡರುಗಳು ಇದೇ 16 ರಂದು ಕೋಲಾರ ಬಂದ್ ಗೆ ಕರೆ ನೀಡಿದ್ದು ಸಾರ್ವಜನಿಕರು ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿ ಪ್ರತಿಭಟನೆಗೆ ಸಹಕರಿಸಬೇಕೆಂದು ಕೋರಿದೆ.

ಅಲ್ಲದೇ ಈ ಬಗ್ಗೆ ಈಗಾಗಲೇ ಸಾಕಷ್ಟು ಬಾರಿ ಮನವಿಗಳ ಮನವಿಗಳನ್ನು ನೀಡಿದ್ದರೂ ಪ್ರಯೋಜನವಾಗಿಲ್ಲವೆಂದಿರುವ ಸಂಘಟಕರು ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರೂ ಸಹ ಓಡಾಟಕ್ಕೆ ಆಗದಂತಾ ಪರಿಸ್ಠಿತಿ ನಿರ್ಮಾಣವಾಗಿದೆ. ಅಲ್ಲದೇ ಜಿಲ್ಲಾ ಕೇಂದ್ರವಾಗಿರುವ ಕೋಲಾರದಲ್ಲಿನ ಪ್ರಮುಖ ರಸ್ತೆಗಳಲ್ಲೇ ವಿದ್ಯುತ್ ದೀಪಗಳಿಲ್ಲದಂತಹ ದುಸ್ಥಿತಿಬಂದೊದಗಿದೆಯೆಂದು ತಮ್ಮ ಆಕ್ರೋಶವನ್ನು ಹೊರಹಾಕಿದೆ.

ಗೋಷ್ಠಿಯಲ್ಲಿ ಹೊಳಲಿ ಪ್ರಕಾಶ್ ˌ ಕುರುಬರಪೇಟೆ ವೆಂಕಟೇಶ್ ಜಿಲ್ಲಾ ರಕ್ಷಣಾವೇದಿಕೆಯ ಅಧ್ಯಕ್ಷ ರಾಘವೇಂದ್ರ ಮತ್ತಿತರರಿದ್ದರು.

Post a Comment

0 Comments

Ad Code

Responsive Advertisement