ಬೆಂಗಳೂರು : ಮಲ್ಲೇಶ್ವರಂ ವಿಧಾನ ಸಭಾ ಕ್ಷೇತ್ರದ ಸಮಾಜ ಸೇವಕರು, ಬಿಜೆಪಿ ಬೆಂಗಳೂರು ಉತ್ತರ ಕಾರ್ಯಕಾರಿ
ಣಿ ಸದಸ್ಯ ಡಾ. ಜಿ.ಎಸ್.ಚೌಧರಿರವರನ್ನು ಅಭಿನಂದಿಸಿ ಆಶೀರ್ವದಿಸಿ ಶುಭ ಕೋರಿದ ಖ್ಯಾತ ಚಿತ್ರ ನಿರ್ಮಾಪಕರು ಹಾಗೂ ಸಮಾಜ ಸೇವಕ ಡಿ.ಸುರೇಶ್ ಗೌಡರು. ಇದೇ ಸಂದರ್ಭದಲ್ಲಿ ಅಭಿಮಾನಿಗಳ ಬಳಗದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ನಡುರಾತ್ರಿಯೇ ಡಾ.ಜಿ.ಎಸ್.ಚೌಧರಿರವರ 49 ನೇ ಹುಟ್ಟು ಹಬ್ಬವನ್ನು ಅವರ ನಿವಾಸದಲ್ಲಿ ಹೂವಿನ ಹಾರಗಳನ್ನು ಹಾಕಿ, ಶಾಲು ಹೊದಿಸಿ ತಮ್ಮ ನೆಚ್ವಿನ ನಾಯಕನಿಗೆ ಗೌರವ ಹಾಗೂ ಪ್ರೀತಿಯನ್ನು ವ್ಯಕ್ತಪಡಿಸಿ ಕೇಕ್ ಕತ್ತರಿಸಿಸುವ ಮೂಲಕ ಸಂಭ್ರಮ ಆಚರಿಸಿದರು.
ಈ ಸಂದರ್ಭದಲ್ಲಿ ಚೌಧರಿರವರ ಪೂಜ್ಯ ತಂದೆ ತಾಯಿಯವರಾದ ಶ್ರೀ ಜಿ.ಎನ್.ಶ್ರೀರಾಮುಲು ಹಾಗೂ ಶ್ರೀಮತಿ ಜಿ.ಎಸ್.ಶಾಂತಮ್ಮ ತಮ್ಮ ಮಗನಿಗೆ ಸಿಹಿ ತಿನಿಸಿ ಅಭಿನಂದಿಸಿ ಆಶೀರ್ವದಿಸಿದರು.
ಈ ವೇಳೆ ಲಯನ್ ಮಂಜನಾಥ್, ಕಿಶನ್ ನಾಯಕ್, ಬಾಲಾಜಿ ಮುಂತಾದವರು ಸಂಭ್ರಮಾಚರಣೆಯ ವೇಳೆ ಉಪಸ್ಥಿತರಿದ್ದರು.




0 Comments