Ticker

6/recent/ticker-posts

Ad Code

Responsive Advertisement

ಕ್ವಾರಿ,ಕ್ಷಷರ್ ಮಾಲೀಕರು,ಸಿಬ್ಬಂದಿಗಳು, ಕೂಲಿಕಾರ್ಮಿರಿಂದ ಸುವರ್ಣಸೌದ ಎದುರು ಬೃಹತ್ ಪ್ರತಿಭಟನೆ

*ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ ಅಸೋಸಿಯೇಷನ್ ವತಿಯಿಂದ ಕರ್ನಾಟಕ ರಾಜ್ಯಾದ್ಯಂತ ಎಲ್ಲಾ ಕ್ವಾರಿ ಘಟಕಗಳು, ಕ್ರಷರ್ ಘಟಕಗಳು, ಲಾರಿಗಳು, ಟ್ರಾಕ್ಟರ್‌ಗಳು, ಆರ್.ಎಂ.ಸಿ ಕಾಂಕ್ರೀಟ್ ಘಟಕಗಳು, ಟಾರ್ ಘಟಕಗಳು, ಹಾಲೋ ಬ್ಲಾಕ್ -ಮೋನೋ ಬ್ಲಾಕ್ ಘಟಕಗಳು ಎಲ್ಲವೂ ಬಂದ್ ಮಾಡಿಬೆಳಗಾವಿಯ ಸುವರ್ಣಸೌಧದ 'ಬಸ್ತವಾಡ ಟೆಂಟ ನಂ.9 ರಲ್ಲಿ *ಬೃಹತ್ ಪ್ರತಿಭಟನೆ*

ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಫೋನ್ ಕ್ರಷರ್ ಆಸೋಸಿಯೇಷನ್ ವತಿಯಿಂದ ಸಮಸ್ಯೆ ನಿವಾರಣೆಗೆ 3 ಬೇಡಿಕೆಗಳನ್ನು ಪೂರೈಸಲು ಆಗ್ರಹಿಸಿ ಸರ್ಕಾರದ ಗಮನ ಸೆಳೆಯಲು ಬೆಳಗಾವಿ ಸುವರ್ಣಸೌಧ ಎದುರು ಅಧ್ಯಕ್ಷರಾದ ರವೀಂದ್ರ ಶೆಟ್ಟಿರವರು ಪ್ರಧಾನ ಕಾರ್ಯದರ್ಶಿಯವರಾದ ಪುರುಷೋತ್ತಮ್‌ರವರು ಗೌರವಾಧ್ಯಕ್ಷರಾದ ಡಿ.ಸಿದ್ದರಾಜುರವರು ಉಪಾಧ್ಯಕ್ಷರಾದ ಕಿರಣ್ ರಾಜ್ ಬಿ. ಆರ್. ರವಿ ಬಿ. ಎನ್ ಶ್ರೀನಿವಾಸ್‌ರವರು ಉಪಾಧ್ಯಕ್ಷರಾದ ಸಿ.ಎಸ್ ಭಾಸ್ಕರ್ ರವರು, ಚಿಕ್ಕಬಳ್ಳಾಪುರ ಅಧ್ಯಕ್ಷರಾದ ಶ್ರೀ ನಾಗರಾಜುರವರು, ಉಪಾಧ್ಯಕ್ಷರಾದ ಮಧುಕುಮಾರ್‌ರವರು 15ಸಾವಿರ ಮಾಲೀಕರು,ಸಿಬ್ಬಂದಿಗಳು, ಕೂಲಿಕಾರ್ಮಿಕರ ಜೊತೆಯಲ್ಲಿ ಪ್ರತಿಭಟನೆ ಮಾಡಿದರು.

ಮುಖ್ಯಮಂತ್ರಿಗಳು, ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವರು ಹಾಗೂ ಸಂಬಂಧಿಸಿದ ಎಲ್ಲಾ ಸಚಿವರು ನಮ್ಮ ಸಮಸ್ಯೆಗಳನ್ನು ನಿವಾರಣೆ ಮಾಡಬೇಕು. ಸಮಸ್ಯೆ ನಿವಾರಣೆಯಾಗದೇ ಹೋದರೆ ಅನಿರ್ಧಿಷ್ಟಾವಧಿ ಗಣಿಗಾರಿಕೆ ಸ್ವಗಿತಗೊಳಿಸಿ, ಉಗ್ರ ಪ್ರತಿಭಟನೆ ಮಾಡಲಾಗುವುದು .   ಆದ್ದರಿಂದ ಎಲ್ಲರೂ ನಮ್ಮ ಕ್ರಷರ್ ಮತ್ತು ಕ್ವಾರಿ ಘಟಕಗಳನ್ನು ಬಂದ್‌ ಮಾಡಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದೇವೆ.

ಸರ್ಕಾರಕ್ಕೆ ಈಗಾಗಲೇ ರಾಜಧನ ಸಂದಾಯವಾಗಿರುವುದರಿಂದ ಮತ್ತೆ ಗಣಿ ಗುತ್ತಿಗೆದಾರರಿಂದ ವಸೂಲಿ ಮಾಡಲು ಹೊರಟಿರುವುದು ಸರಿಯಲ್ಲ. ಇದನ್ನು ಮಾಡಬಾರದು. ಸರ್ಕಾರ ಕಳೆದ 40 ವರ್ಷಗಳಿಂದ ತ್ವರಿತವಾಗಿ ಕಾಮಗಾರಿ ನಿರ್ವಹಿಸುವ ದೃಷ್ಠಿಯಿಂದ ಕಾಮಗಾರಿ ನಿರ್ವಹಣಾ ಇಲಾಖೆಗಳಲ್ಲಿ ರಾಜಧನವನ್ನು ಪಾವತಿಸಿಕೊಂಡು ಬಂದಿರುತ್ತಾರೆ. ಸರ್ಕಾರಕ್ಕೆ ಸಂದಾಯವಾಗತಕ್ಕ ರಾಜಧನ ಈಗಾಗಲೇ ಸಂದಾಯವಾಗಿರುತ್ತದೆ. ಆದ್ದರಿಂದ ಮತ್ತೆ ಗಣಿಗುತ್ತಿಗೆದಾರಿಂದ ವಸೂಲಿ ಮಾಡಬಾರದು

ಬೆಳಗಾವಿ ಸುವರ್ಣಸೌಧ ಮುಂಭಾಗದಲ್ಲಿ ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ ಆಸೋಸಿಯೇಷನ್ ಪ್ರತಿಭಟನಾ ಸ್ಥಳಕ್ಕೆ ಗಣಿ ಮತ್ತು ಭೂವಿಜ್ಞಾನ ಸಚಿವರಾದ ಹಾಲಪ್ಪ ಅಚಾರ್ ಮತ್ತು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪರವರು ಭೇಟಿ ನೀಡಿ ಪ್ರತಿಭಟನಾ ನಿರತರಿಂದ ಮನವಿ ಸ್ವೀಕರಿಸಿದರು.  ಸಚಿವರಾದ ಹಾಲಪ್ಪ ಅಚಾರ್ ರವರು ಮಾತನಾಡಿ ಸಂಘದ ಬೇಡಿಕೆಗಳನ್ನು ಹಲವಾರು ಸಭೆಗಳನ್ನು ಕಳೆದ 6ತಿಂಗಳಿಂದ ಮಾಡಲಾಗಿದೆ ಬೇಡಿಕೆಗಳನ್ನು ಈಡೇರಿಸಲು ಕ್ಯಾಬಿನೆಟ್ ಉಪಸಮಿತಿ ರಚಿಸಲಾಗಿದೆ.  ಸಚಿವರುಗಳಾದ ಆರ್.ಅಶೋಕ್, ಸಿ.ಸಿ.ಪಾಟೀಲ್ ಮಾಧುಸ್ವಾಮಿ ಅವರ ಜೊತೆಯಲ್ಲಿ ಸಭೆಗಳನ್ನು ಮಾಡಲಾಗಿದೆ.  ಉಪಸಮಿತಿಯಿಂದ ಕರಡುಪ್ರತಿ ಕ್ಯಾಬಿನೆಟ್ ಆನುಮೋದನೆಗೆ ಕಳುಹಿಸಲಾಗಿದೆ.  ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ.  ಕ್ವಾರಿ,ಕ್ರಷರ್ ಮಾಲೀಕರು ಮತ್ತು ಸರ್ಕಾರಕ್ಕೆ ಒಳ್ಳೆಯ ಹೆಸರು ತರುವಂತೆ ನಿಯಮ ತರಲಾಗುವುದು.  ಸಾರ್ವಜನಿಕರು ಮತ್ತು ಸರ್ಕಾರಕ್ಕೆ ಬಂದ್ ಮಾಡಿರುವುದರಿಂದ ತೊಂದರೆಯಾಗಿದೆ. ಬಂದ್ ಹಿಂಪಡೆದು ಕ್ವಾರಿ, ಕ್ರಷರ್ ಮರು ಚಾಲನೆ ನೀಡಿ ಎಂದು ಮನವಿ ಮಾಡಿದರು.  ಕೆ.ಎಸ್.ಈಶ್ವರಪ್ಪರವರು ಮಾತನಾಡಿ ಕ್ವಾರಿ, ಕ್ರಷರ್ ಉದ್ಯಮ ಇರುವುದರಿಂದ ಮೇಲು ಸೇತುವೆ, ರಸ್ತೆ ಮತ್ತು ಕಟ್ಟಡ ನಿರ್ಮಾಣಕ್ಕೆ ಅನುಕೂಲವಾಗಿ ಸರ್ಕಾರಕ್ಕೆ ಒಳ್ಳೆಯ ಹೆಸರು ಸರ್ಕಾರಕ್ಕೆ ಬಂದಿದೆ.  ನಿಮ್ಮ ಸಮಸ್ಯೆ ನಿವಾರಣೆಗಾಗಿ ಕ್ಯಾಬಿನೆಟ್ ಉಪಸಮಿತಿ ರಚಿಸಲಾಗಿದೆ ಈ ಉಪಸಮಿತಿ ನಿರ್ಣಯವನ್ನು ಕ್ಯಾಬಿನೆಟ್ ನಿರ್ಣಯ ಮಾಡಲಾಗುವುದು.  ಕ್ವಾರಿ ಮತ್ತು ಕ್ರಷರ್ ಮಾಲೀಕರಿಗೆ ಅನುಕೂಲವಾಗುವ ನಿರ್ಣಯ ಸರ್ಕಾರ ತೆಗೆದುಕೊಳ್ಳಲಾಗಿದೆ.

ಕಾನೂನುಬದ್ಧವಾಗಿ ಗಣಿಗಾರಿಕೆ ನಡೆಸುವುದಕ್ಕೆ ಪೂರಕವಾಗಿ ನಿಯಮಗಳು ಸಮರ್ಪಕವಾಗಿರುವುದಿಲ್ಲ. ಆದ್ದರಿಂದ ನಿಯಮಗಳ ಸಮಗ್ರ ತಿದ್ದುಪಡಿಯ ಅಗತ್ಯವಿರುತ್ತದೆ.

 Karnataka State Remote Sensing Applications Centre (KSRSAC) dad Jeda (KSRSAC/125/DMG- DroneSurvey quarry/2022, Date:28.10.2022) desa 8.0.0.3.0-1994 ನಿಯಮಗಳಿಗೆ ತಿದ್ದುಪಡಿ ಆದ ನಂತರ ಅನುಷ್ಠಾನಗೊಳಿಸುವುದು ಅಗತ್ಯವಿರುತ್ತದೆ:-ನಿಯಮಗಳ Jars 3 ride Karnataka State Remote Sensing Applications Centre (KSRSAC) Weigh Bridge ILMS Integration, Geo Fencing onva ಕೈಗೊಂಡರೆ ಉದ್ಯಮವನ್ನು ನಡೆಸುವುದು ಅಸಾಧ್ಯವಾಗುತ್ತದೆ. ಮಾತ್ರವಲ್ಲದೇ ಅಭಿವೃದ್ಧಿ ಕೆಲಸಗಳಿಗೂ ಅಡಚಣೆಯಾಗುತ್ತದೆ ಎಂದು ತಿಳಿಸಿದರು


Post a Comment

0 Comments

Ad Code

Responsive Advertisement