ಬೆಂಗಳೂರು : ನಗರದ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನಾಳೆ ನಡೆಯಲಿರುವ, ಬಿಜೆಪಿ ಕರ್ನಾಟಕದ ವತಿಯಿಂದ ಆಯೋಜಿಸಲಾಗಿರುವ ಕ್ರಿಯಾಶೀಲ ಕಾರ್ಯಕರ್ತರ ಪ್ರಕೋಷ್ಠಗಳ ರಾಜ್ಯ ಸಮಾವೇಶ ಶಕ್ತಿ ಸಂಗಮ ದ ಪೂರ್ವ ಸಿದ್ಧತೆಗಳನ್ನು ಶನಿವಾರ ಮಧ್ಯಾಹ್ನ ರಾಜ್ಯ ತೋಟಗಾರಿಕೆ ಸಚಿವ ಮುನಿರತ್ನರವರು ಖುದ್ದಾಗಿ ಸಮಾವೇಶ ನಡೆಯಲಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಈ ಕಾರ್ಯಕ್ರಮ ನಿರ್ವಹಣೆಯ, ಸಂಪೂರ್ಣ ಹೊಣೆಗಾರಿಕೆಯ ಜವಾಬ್ದಾರಿಯನ್ನು ಹೊತ್ತು ಹಗಲಿರುಳೆನ್ನದೆ ಸಮರ್ಥವಾಗಿ ನಿರ್ವಹಿಸುತ್ತಿರುವ ಬೆಂಗಳೂರು ಕೇಂದ್ರ ಜಿಲ್ಲೆಯ ಬಿಜೆಪಿ ಜಿಲ್ಲಾ ಅಧ್ಯಕ್ಷ ಜಿ.ಮಂಜುನಾಥ್ ನೇತೃತ್ವದಲ್ಲಿ ಶ್ರಮಿಸುತ್ತಿರುವ ತಂಡದ ಸೇವೆಯನ್ನು ಪ್ರಶಂಸಿಸಿ, ಸಣ್ಣಪುಟ್ಟ ಸಲಹೆ ಸೂಚನೆಗಳನ್ನು ನೀಡಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ ಸಚಿವರು ನಂತರ ಪ್ರಕೋಷ್ಠ ಸಂಯೋಜಕ ಎಂ.ಬಿ.ಭಾನುಪ್ರಕಾಶ್, ಪ್ರಕೋಷ್ಠ ಸಹ-ಸಂಯೋಜಕರುಗಳಾದ ಡಾ.ಎ.ಹೆಚ್. ಶಿವಯೋಗಿ ಸ್ವಾಮಿ, ಜಯತೀರ್ಥ ಕಟ್ಟಿ ಮುಂತಾದ ಪ್ರಮುಖರ ಉಪಸ್ಥಿತಿಯಲ್ಲಿ ಈ ಸಂಬಂಧ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ,
ಭಾರತೀಯ ರಾಜಕಾರಣದಲ್ಲಿ ಅತ್ಯಂತ ವಿಶಿಷ್ಟವಾದ ಕಾರ್ಯಪದ್ಧತಿಯನ್ನು ಅಳವಡಿಸಿಕೊಂಡಿರುವ ಬಿಜೆಪಿ ಪಕ್ಷಕ್ಕೆ, ದೇಶ ಮೊದಲು ಎಂಬುದು ಧ್ಯೇಯಪಥವಾದರೆ, ಸೇವೆಯೇ ಸಂಘಟನೆ ಎಂಬುದು ಅದರ ಕಾರ್ಯಪಥ. ಬಿಜೆಪಿ ಯಲ್ಲಿ ಪ್ರಕೋಷ್ಠಗಳೆಂಬ ಪರಿಕಲ್ಪನೆಯಡಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿನ ಸಮಾಜಮುಖಿ ಚಿಂತಕರಿಗೆ ವೇದಿಕೆಯನ್ನು ಒದಗಿಸುವ ಕಾರ್ಯಪದ್ಧತಿಯನ್ನು ಪಕ್ಷವು ಅಳವಡಿಸಿಕೊಂಡು ದೇಶ ಕಟ್ಟುವ ಕಾಯಕದಲ್ಲಿ ಎಲ್ಲರನ್ನೂ ಒಗ್ಗೂಡಿಸಿ ಜೊತೆಯಲ್ಲಿ ಕೊಂಡೊಯ್ಯುವ ದೆಸೆಯಿಂದಾಗಿ ರಾಜ್ಯದಲ್ಲಿ 24 ಪ್ರಕೋಷ್ಠಗಳು ಕಾರ್ಯ ನಿರ್ವಹಿಸುತ್ತಿದ್ದು, ವೈದ್ಯರು, ವಕೀಲರು, ಕಲಾವಿದರು ಹಾಗೂ ಇನ್ನೂ ಹತ್ತಾರು ವಿವಿಧ ವೃತ್ತಿ ಆಧಾರಿತ ವ್ಯಕ್ತಿ ಗಳೂ ಸೇರಿದಂತೆ, ಸಮಾಜದಲ್ಲಿನ ಪ್ರಭಾವಿಗಳನ್ನು, ಪ್ರತಿಷ್ಠಿತರನ್ನೂ ಹಾಗೂ ಇನ್ನಿತರೆ ಸಮಾಜಮುಖಿ ವ್ಯಕ್ತಿಗಳನ್ನು ಅನ್ವೇಷಿಸುವ ಹಾಗೂ ಅವರೆಲ್ಲರನ್ನೂ ಪ್ರಕೋಷ್ಠಗಳ ಮೂಲಕ ಸಾಮಾಜಿಕ ಕಾರ್ಯಗಳಿಗೆ ಜೋಡಿಸುವ ಉದ್ದೇಶ ಪಕ್ಷದ್ದು. ಇವರೆಲ್ಲರಿಗೂ ಪಕ್ಷದ ಮೂಲಕ ಸಮಾಜ ಸೇವೆಗೆ ಒಂದು ವೇದಿಕೆಯನ್ನು ಒದಗಿಸುವ ಕಾರ್ಯ ಈ ಪ್ರಕೋಷ್ಠದ ಮೂಲಕ ಆಗುತ್ತಿದೆ ಎಂದು ಮಾಹಿತಿಯನ್ನು ನೀಡಿ, ನಾಳಿನ ಕಾರ್ಯಕ್ರಮದ ಉದ್ಘಾಟನೆಯನ್ನು ಕೇಂದ್ರ ರೈಲ್ವೆ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಅಶ್ವಿನಿ ವೈಷ್ಣವ್ ರವರು ನೆರವೇರಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಹಿಸಿರುವ ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೊಂದಿಗೆ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಲ್.ಸಂತೋಷ ಮುಂತಾದ ಗಣ್ಯರು ಭಾಗವಹಿಸಲಿರುವ ನಾಳಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬೀದರ್, ಗುಲ್ಬರ್ಗಾ, ಯಾದಗಿರಿ ಮುಂತಾದ ಭಾಗಗಳಿಂದ ಸುಮಾರು 1400 ಮಂದಿ ಪದಾಧಿಕಾರಿಗಳು ಬೀದರನಿಂದ ವ್ಯವಸ್ಥೆ ಮಾಡಲಾಗಿರುವ 18 ಬೋಗಿಗಳ ವಿಶೇಷ ರೈಲು ಇಂದು ಮಧ್ಯಾಹ್ನ ಅಲ್ಲಿಂದ ಹೊರಟಿದ್ದು, ನಾಳೆ ಮುಂಜಾನೆ ನಗರವನ್ನು ತಲುಪಲಿರುವುದಾಗಿ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮಕ್ಕೆ ಸುಮಾರು 15 ಸಾವಿರ ಪದಾಧಿಕಾರಿಗಳು ಭಾಗವಹಿಸುವ ನಿರೀಕ್ಷೆ ಹೊಂದಿದ್ದು, ಇಲ್ಲಿ 60x40 ವೇದಿಕೆಯನ್ನು ಸಿದ್ಧ ಪಡಿಸಿ, 14 ಸಾವಿರ ಆಸನಗಳ ವ್ಯವಸ್ಥೆಯೊಂದಿಗೆ, ಬೆಳಿಗ್ಗೆ ಸುಮಾರು 5 ಸಾವಿರ ಮಂದಿಗೆ ತಿಂಡಿ, ಮಧ್ಯಾಹ್ನ ಸುಮಾರು 15 ಸಾವಿರ ಜನರಿಗೆ ಇಲ್ಲಿ ಊಟಕ್ಕೆ ಸಿದ್ದತೆ ನಡೆದಿದೆ. ಬರುವ ಪದಾಧಿಕಾರಿಗಳ ಅನುಕೂಲಕ್ಕಾಗಿ ತುರ್ತು ಸಂದರ್ಭದಲ್ಲಿ ಅಗತ್ಯವಾದ ವೈದ್ಯಕೀಯ ಸೌಲಭ್ಯಕ್ಕೂ ಇಲ್ಲಿ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದ್ದು, ಸುರಕ್ಷತೆಯ ದೃಷ್ಟಿಯಿಂದ ಬರುವ ಪದಾಧಿಕಾರಿಗಳಿಗೆ ಭಾಗವಹಿಸಲು ಅಧಿಕೃತವಾಗಿ ಗುರುತಿನ ಚೀಟಿಯನ್ನು ಸಹ ನೀಡುವ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಆಯೋಜಕರು ತಿಳಿಸಿದರು.
ರಾಜ್ಯ ಮಟ್ಟದ ಈ ಸಮ್ಮೇಳನದ ಯಶಸ್ಸಿಗಾಗಿ ಬೆಂಗಳೂರು ಕೇಂದ್ರ ಜಿಲ್ಲೆಯ ಬಿಜೆಪಿ ಜಿಲ್ಲಾ ಅಧ್ಯಕ್ಷ ಜಿ.ಮಂಜುನಾಥ್ ನೇತೃತ್ವದಲ್ಲಿ ಶ್ರಮಿಸುತ್ತಿರುವ ತಂಡದ ಪ್ರಮುಖರಲ್ಲಿ ರಾಜ್ಯ ಮಾಧ್ಯಮ ವಕ್ತಾರರು ಹಾಗೂ ಹಾಲು ಉತ್ಪಾದಕರ ಪ್ರಕೋಷ್ಠ ರಾಜ್ಯ ಸಂಚಾಲಕರಾದ ಡಾ. ಎಂ.ಆರ್.ವೆಂಕಟೇಶ್, ಬೆಂಗಳೂರು ಉತ್ತರ ಜಿಲ್ಲೆಯ ಸಾಂಸ್ಕೃತಿಕ ಪ್ರಕೋಷ್ಠ ಸಂಚಾಲಕರಾದ ಕೆ.ಗಣೇಶ್ ರಾವ್ ಕೇಸರ್ಕರ್, ಬೆಂಗಳೂರು ಉತ್ತರ ಜಿಲ್ಲೆಯ ಓಬಿಸಿ ಅಧ್ಯಕ್ಷ ಬಿ.ಎಂ.ಶ್ರೀನಿವಾಸ್, ಮುಖಂಡರುಗಳಾದ ಶ್ರೀನಾಥ್, ಡಿ.ಬಿ.ಬಾಲಚಂದ್ರ, ಅಜಿತ್ ಶೆಟ್ಟಿ ಹೆರಾಂಜೆ, ಆಶಾ ಕಣಕೇರಿ, ಜ್ಯೋತಿ ಕುಲಕರ್ಣಿ, ಪಿಳ್ಳಮರಿಯಪ್ಪ, ಮುನಿರಾಜು, ಬೆಂಗಳೂರು ಉತ್ತರ ಜಿಲ್ಲೆಯ ಅಸಂಘಟಿತ ಕಾರ್ಮಿಕರ ಪ್ರಕೋಷ್ಠ ಸಂಚಾಲಕ ದೇವೇಂದ್ರ ಎಂ. ವಿಶ್ವಕರ್ಮ ಹಾಗೂ ಇನ್ನೂ ಮುಂತಾದವರ ಸೇವೆ ಪ್ರಶಂಸನೀಯ.







0 Comments