Ticker

6/recent/ticker-posts

Ad Code

Responsive Advertisement

`40 % ಕಮಿಷನ್' - `ಕಳಪೆ ಕಾಮಗಾರಿ' ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ

ಬೆಂಗಳೂರು : ನಗರದಲ್ಲಿ ಬಿಬಿಎಂಪಿಯ ಕಳಪೆ  ಕಾಮಗಾರಿಗಳಿಂದ ಹೆಚ್ಚುತ್ತಿರುವ ರಸ್ತೆ ಗುಂಡಿಗಳಿಂದಾಗಿ ವಾಹನ ಸವಾರರಿಗೆ ತೀವ್ರ ತೊಂದರೆ ಉಂಟಾಗುತ್ತಿದ್ದು, ಕೆಲವು ವಾಹನ ಸವಾರರು ಗುಂಡಿಯ ಕಾರಣದಿಂದಾಗಿಯೇ ಸಂಭವಿಸಿದ ಅಪಘಾತಗಳ ಕಾರಣದಿಂದಾಗಿ  ಮೃತಪಟ್ಟಿದ್ದಾರೆ.




ಇದರ ಬಗ್ಗೆ ಸಾರ್ವಜನಿಕರಲ್ಲಿ ಹಾಗೂ ವಾಹನ ಸವಾರರಲ್ಲಿ ಜಾಗೃತಿ ಮೂಡಿಸಲು ಹಾಗೂ ತುರ್ತಾಗಿ ಬಿದ್ದಿರುವ ಗುಂಡಿಗಳನ್ನು ಮುಚ್ಚಲು... ಗುಂಡಿ ಮುಚ್ಚಿ   ಅಭಿಯಾನವನ್ನು ರಾಜಾಜಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿತ್ತು, ಪ್ರತಿ ರಸ್ತೆಯಲ್ಲಿ ಕನಿಷ್ಠ ನಾಲ್ಕೈದು ಗುಂಡಿಗಳು ಬಿದ್ದಿದ್ದು, ಆ ಗುಂಡಿಗಳಲ್ಲಿ ಎಚ್ಚರಿಕೆಯಿಂದ ವಾಹನಗಳನ್ನು ಚಾಲನೆ ಮಾಡಬೇಕೆಂಬ ಬಿತ್ತಿ ಪತ್ರಗಳನ್ನು ಹಾಗೂ ಬಿಬಿಎಂಪಿ ಹಾಗೂ ಸರ್ಕಾರ ಕೈಗೊಂಡಿರುವ ಕಳಪೆ ಕಾಮಗಾರಿಗಳು ಹಾಗೂ 40% ಭ್ರಷ್ಟಾಚಾರವನ್ನು ವಿರೋಧಿಸಿ ಬರೆಯಲಾಗಿದ್ದ ಬಿತ್ತಿ ಪತ್ರಗಳನ್ನು ಹಿಡಿದು  ಅಭಿಯಾನವನ್ನು ನಡೆಸಲಾಯಿತು.  ಈ ಸಂದರ್ಭದಲ್ಲಿ ಸಾರ್ವಜನಿಕರು ಸಹ ಭಾಗವಹಿಸಿದ್ದರು.

ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ತುರ್ತಾಗಿ ಮುಚ್ಚಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು  ತೀವ್ರ ಆಕ್ರೋಶವನ್ನು ಬಿಜೆಪಿ ಸರ್ಕಾರದ ವಿರುದ್ಧ ವ್ಯಕ್ತಪಡಿಸಿದರು. ಈ ಅಭಿಯಾನದಲ್ಲಿ  ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್. ಮನೋಹರ್ ರವರ ನೇತೃತ್ವದಲ್ಲಿ  ಮುಖಂಡರುಗಳಾದ ಪ್ರಕಾಶ್, ಮಂಜುನಾಥ್, ಚೇತನ್, ರವಿಶೇಖರ್, ಪ್ರಶಾಂತ್,  ಪುಟ್ಟರಾಜು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಈ ವೇಳೆ  ಭಾಗವಹಿಸಿದ್ದರು.

Post a Comment

0 Comments

Ad Code

Responsive Advertisement