Ticker

6/recent/ticker-posts

Ad Code

Responsive Advertisement

"ಕಲಾ ದರ್ಶಿನಿ-2022" ಸಾಂಸ್ಕೃತಿಕ ಕಾರ್ಯಕ್ರಮ

ನೃತ್ಯ ದಿಶಾ ಟ್ರಸ್ಟ್ (ರಿ.) ವತಿಯಿಂದ  ಡಿಸೆಂಬರ್ ಡಿಸೆಂಬರ್ 20, ಮಂಗಳವಾರ ಸಂಜೆ 5-30ಕ್ಕೆ, ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿರುವ ಸಮುಚ್ಚಯ ರಂಗಮಂದಿರದಲ್ಲಿ "ಕಲಾ ದರ್ಶಿನಿ-2022" ಎಂಬ ಶೀರ್ಷಿಕೆಯಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು ಅವುಗಳ ವಿವರಗಳು ಈ ರೀತಿ ಇವೆ :

 ಉದ್ಘಾಟನೆ : ಶ್ರೀ ಆರ್. ಚಂದ್ರಶೇಖರ್ (ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ), ಶ್ರೀ ಜೋಗಿಲ ಸಿದ್ಧರಾಜು (ಅಧ್ಯಕ್ಷರು, ಅಖಿಲ ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟ), ಮುಖ್ಯ ಅತಿಥಿಗಳು : ವಿ|| ಶ್ರೀಮತಿ ಉಷಾ ಬಸಪ್ಪ (ವಿ|| ಕಾರ್ಯದರ್ಶಿ, ಪದ್ಮಿನಿಪ್ರಿಯ ನೃತ್ಯ ಕಲಾ ಅಕಾಡೆಮಿ), ಮೇಖಲಾ ಅಗ್ನಿಹೋತ್ರಿ (ವಿಜಯ ವಿಠಲ ನೃತ್ಯ ಕಲಾ ನಿಕೇತನ).

ಸಾಂಸ್ಕೃತಿಕ ಕಾರ್ಯಕ್ರಮಗಳು : ಶ್ರೀಮತಿ ಮೇಖಲಾ ಅಗ್ನಿಹೋತ್ರಿ ತಂಡದವರಿಂದ "ಸಂಗೀತ ಕಾರ್ಯಕ್ರಮ", ಪದ್ಮಿನಿಪ್ರಿಯ ನೃತ್ಯ ಕಲಾ ಅಕಾಡೆಮಿಯ ವಿದ್ಯಾರ್ಥಿಗಳಿಂದ "ಜಾನಪದ ನೃತ್ಯ", ನಾಟ್ಯ ಸನ್ನಿಧಿ ಕಲಾಶಾಲೆಯ ವಿದ್ಯಾರ್ಥಿಗಳಿಂದ "ವಚನನೃತ್ಯ", ಕು|| ಸಹನಾ ಮತ್ತು ಸಂಗಡಿಗರಿಂದ "ಭರತನಾಟ್ಯ", ಕು|| ದೇಶಿಕಾ ಶ್ರೀವಾತ್ಸವ್ ತಂಡದವರಿಂದ "ಜಾನಪದ ನೃತ್ಯ"ಗಳನ್ನು ಏರ್ಪಡಿಸಿದ್ದು, ಕಲಾ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಟ್ರಸ್ಟ್ ನ ಸಂಸ್ಥಾಪಕ ನಿರ್ದೇಶಕಿ ಶ್ರೀಮತಿ ದರ್ಶಿನಿ ಮಂಜುನಾಥ್ ಅವರು ವಿನಂತಿಸಿದ್ದಾರೆ.

Post a Comment

0 Comments

Ad Code

Responsive Advertisement